ನೀವು ಖರೀದಿಸುವ ವಸ್ತುಗಳ ಗುಣಮಟ್ಟ ಖಾತ್ರಿಪಡಿಸಿಕೊಳ್ಳುವುದು ಹೇಗೆ?


Team Udayavani, Feb 13, 2017, 3:45 AM IST

quality-004.jpg

ಗ್ರಾಹಕರ ರಕ್ಷಣೆಗೆ ಇರುವ ಸಾಧನಗಳಲ್ಲಿ ಗುಣಮಟ್ಟ ಸೂಚಿಸುವ ಚಿಹ್ನೆಗಳು ಅಥವಾ ಗುರುತುಗಳು ಸಹಕಾರಿಯಾಗಬಲ್ಲದು. ಆದರೆ ಅದೇಕೋ ಬಳಕೆದಾರರು ಇದರತ್ತ ಗಮನ ಹರಿಸುತ್ತಿಲ್ಲ. ಆಹಾರ ಪದಾರ್ಥಗಳಿಂದ ದೀರ್ಘ‌ಬಾಳಿಕೆಯ ವಸ್ತುಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರ ಅನೇಕ ಮಾನಕಗಳನ್ನು ಗೊತ್ತುಪಡಿಸಿದೆ. ಅವುಗಳಲ್ಲಿ ಕೆಲವು ಕಡ್ಡಾಯವಾಗಿದ್ದು, ಬಹುತೇಕ ಚಿಹ್ನೆಗಳು ಸ್ವಯಂಪ್ರೇರಿತ. ಅದೇನೆ ಇರಲಿ, ಜಾಣ ಗ್ರಾಹಕರಾದ ನೀವು ಚಿಹ್ನೆಗಳಿರುವ ಸರಕುಗಳನ್ನು ಖರೀದಿಸುವುದು ಸೂಕ್ತ. ಬಹುಮಖ್ಯ ಗುಣಮಟ್ಟ ಸೂಚಕಗಳ ಬಗ್ಗೆ ಬೆಳಕು ಚೆಲ್ಲುವುದು ಮುಖ್ಯ.
 
ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್‌xಸ್‌ ಬಿಐಎಸ್‌
ವಿದ್ಯುತ್‌ ಉಪಕರಣಗಳು, ಸಿಮೆಂಟ್‌, ಬಾಟಲ್‌ ನೀರು, ಕಾಗದ, ಪೇಂಟ್‌,ಶಿಶು ಆಹಾರ ಹಾಲಿನ ಪುಡಿ, ಅಡುಗೆ ಅನಿಲ, ಇತ್ಯಾದಿ ಖರೀದಿಸುವ ಮುನ್ನ, ಅದಕ್ಕೆ ಐಎಸ್‌ಐ ಗುರುತು ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಈ ಚಿಹ್ನೆ ಇರುವ ವಸ್ತುಗಳನ್ನು ಖರೀದಿಸಿದಾಗ  ಗುಣಮಟ್ಟದ ಖಾತರಿ ಇರುತ್ತದೆ. ಈ ಚಿಹ್ನೆಯನ್ನು ಭಾರತೀಯ ಮಾನಕ
ಬ್ಯೂರೋ  ಬಿಐಎಸ್‌ ನೀಡುತ್ತದೆ. ಇದನ್ನು ಹಿಂದೆ ಇಂಡಿಯನ್‌ ಸ್ಟಾಂಡರ್ಡ್ಸ್‌ ಇನ್‌ಸ್ಟಿಟ್ಯೂಟ್‌ ಎಂದು ಕರೆಯಲಾಗಿತ್ತು. ಆದ್ದರಿಂದ ಐಎಸ್‌ಐ  ಚಿಹ್ನೆಯನ್ನು ಉಳಿಸಿಕೊಳ್ಳಲಾಗಿದೆ. ಐಎಸ್‌ಐ ಚಿಹ್ನೆ ಇರುವ ವಸ್ತುವಿನ ಗುಣಮಟ್ಟದಲ್ಲಿ ಏರುಪೇರಿದ್ದರೆ ನೇರವಾಗಿ ಕೆಲವೊಂದು ನಿಬಂಧನೆಗೆ ಒಳಪಟ್ಟು ಐಎಸ್‌ಐನಿಂದ ಪರಿಹಾರ ಪಡೆಯುವ ಸಾಧ್ಯತೆ ಇದೆ. ಬಳಕೆದಾರರು ಖರೀದಿಸುವ ಸರಕುಗಳು ಮತ್ತು ಸೇವೆಗಳಿಗೆ ಅಂತರರಾಷ್ಟ್ರೀಯ ಮಾನಕ ನೀಡುವ ಸಲುವಾಗಿ ಇಂಟರ್‌ನ್ಯಾಷನಲ್‌  ಆರ್ಗನೈಸೇಷನ್‌   ಫಾರ್‌ ಸ್ಟಾಂಡಡೈìಸೇಷನ್‌ ಐಎಸ್‌ಒ ಸ್ಥಾಪನೆಗೊಂಡಿದೆ. 

ಆಹಾರ ಪದಾರ್ಥಗಳು
ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಕನಕದಾಸರ ಪದವನ್ನು ನೀವು ಕೇಳಿರಬಹುದು. ಶುದ್ಧ ಹಾಗೂ ಸುರಕ್ಷಿತ ಆಹಾರ ನಮ್ಮೆಲ್ಲರ ಹಕ್ಕು. ಆದ್ದರಿಂದ ಆಹಾರ ಪದಾರ್ಥವನ್ನು ಖರೀದಿಸುವಾಗ ಅಥವಾ ಅದನ್ನು ಸೇವಿಸುವಾಗ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ನಮ್ಮೆಲ್ಲರ ಆರೋಗ್ಯ ನಾವು ಸೇವಿಸುವ ಆಹಾರ ಪದಾರ್ಥದ
ಗುಣಮಟ್ಟವನ್ನು ಅವಲಂಬಿಸಿದೆ. ಸರ್ಕಾರವು ಆಹಾರದ ಗುಣಮಟ್ಟವನ್ನು ಸೂಚಿಸುವ ಕೆಲವೊಂದು ಗುರುತು ಜಾರಿಗೊಳಿಸಿದೆ. ಜೊತೆಗೆ ಆಹಾರದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಮಾರಾಟಗಾರರಿಗೆ ವಹಿಸಿದೆ. ನೀವು ಆಹಾರ ಪದಾರ್ಥ ಖರೀದಿಸುವಾಗ ಚಿಹ್ನೆಗೆ ಆದ್ಯತೆ ನೀಡಿ.

ಫ‌ೂ›ಟ್‌ ಪ್ರಾಡಕ್ಟ್$Õ ಆರ್ಡ್‌ರ್‌ ಎಫ್ಪಿಓ
ಹಣ್ಣುಗಳನ್ನು ಬಳಸಿ ತಯಾರಾದ ಪದಾರ್ಥಗಳನ್ನು ನೀವು ಬಳಸುತ್ತಿರಬಹುದು. ಉದಾಹರಣೆಗೆ ಜಾಮ್‌, ಜೆಲ್ಲಿ, ಉಪ್ಪಿನಕಾಯಿ, ಹಣ್ಣಿನ ಜ್ಯೂಸ್‌, ಸಾಫ್ಟ್ ಡ್ರಿಂಕ್ಸ್‌ ಇತ್ಯಾದಿ. ಈ ಪದಾರ್ಥಗಳ ಪೊಟ್ಟಣ ಅಥವಾ ಬಾಟಲ್‌ ಮೇಲೆ ಎಫ್ಪಿಓ ಚಿಹ್ನೆ ಇರುವುದನ್ನು ನೀವು ಗಮನಿಸಬೇಕು. ಈ ರೀತಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವವರೆಲ್ಲರೂ 
ಭಾರತ ಸರ್ಕಾರ ನೀಡುವ ಪರವಾನಗಿ ಪಡೆದಿರಬೇಕು. ಹಾಗೆ ಪರವಾನಗಿ ಪಡೆದು ತಯಾರಾದ ಪದಾರ್ಥಗಳಿಗೆ ಈ ಗುರುತು ನೀಡಲಾಗುವುದು. ಇನ್ನು ಮುಂದೆ ನೀವು ಜಾಮ್‌, ಜೆಲ್ಲಿ, ಉಪ್ಪಿನಕಾಯಿ, ಹಣ್ಣಿನ ಜ್ಯೂಸ್‌ ಇತ್ಯಾದಿ ಖರೀದಿಸುವಾಗ ಎಫ್ಪಿಓಗುರುತು ಇರುವ ಬ್ರಾಂಡ್‌ ಖರೀದಿಸಿ.

ಆಗ್‌ಮಾರ್ಕ್‌
ಭಾರತ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯು ನೀಡುವ ಈ ಆಗ್‌ಮಾರ್ಕ್‌ ಚಿಹ್ನೆಯನ್ನು ಕೃಷಿ, ತೋಟಗಾರಿಕೆ ಇತ್ಯಾದಿ ಉತ್ಪನ್ನಗಳಿಗೆ ಉಪಯೋಗಿಸಲಾಗುತ್ತದೆ. ಉದಾಹರಣೆಗೆ ಖಾದ್ಯ ತೈಲ, ಜೇನುತುಪ್ಪ, ಬೇಳೆ ಇತ್ಯಾದಿಗೆ ನೀಡಲಾಗಿದೆ. ಈ ಚಿಹ್ನೆ ಇದ್ದ ಪದಾರ್ಥ ಗುಣಮಟ್ಟ ಹೊಂದಿದ್ದು ಸೇವನೆಗೆ ಅರ್ಹ ಎಂದು ಸೂಚಿಸುತ್ತದೆ.
ನಾವು ಸೇವಿಸುವ ಆಹಾರ ಶಾಖಾಹಾರಿಯೋ ಅಥವಾ ಮಾಂಸಾಹಾರಿಯೋ ಎಂಬ ಅನುಮಾನ ಬರುವುದು ಸಹಜ. ಕಾರಣ ಅದರಲ್ಲಿ ಬಳಸಿರುವ ಪದಾರ್ಥಗಳು ಯಾವುದು ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಉದಾಹರಣೆಗೆ ಐಸ್‌ಕ್ರೀಂ. ಇದು ಶಾಖಾಹಾರಿಯೋ ಅಥವಾ ಮಾಂಸಾಹಾರಿಯೋ. ಅದರಲ್ಲಿ ಮೊಟ್ಟೆ ಬಳಸಲಾಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಕಾರಣ ಇದಕ್ಕೊಂದು ಚಿಹ್ನೆ ಕಡ್ಡಾಯಗೊಳಿಸಲಾಗಿದೆ. ಪದಾರ್ಥದ ಪ್ಯಾಕೆಟ್‌ ಮೇಲೆ ಹಸಿರು ಬಣ್ಣದ ವೃತ್ತವಿದ್ದರೆ ಅದು ಶಾಖಾಹಾರಿ ಹಾಗೂ ಕೆಂಪು ಬಣ್ಣದ ವೃತ್ತವಿದ್ದರೆ ಅದು ಮಾಂಸಾಹಾರಿ.
 
ಬಟ್ಟೆ ಹಾಗೂ ವಸ್ತ್ರಗಳು
ಆಹಾರದ ನಂತರ ಮಾನವರಿಗೆ ಅಗತ್ಯವಾದ ವಸ್ತು ಬಟ್ಟೆ ಮತ್ತು ಸಿದ್ಧಪಡಿಸಿದ ಉಡುಪುಗಳು. ಇವುಗಳನ್ನು ಖರೀದಿಸುವಾಗಲೂ ಬಳಕೆದಾರರು ಜಾಗರೂಕರಾಗಿರಬೇಕು. ಕೇಂದ್ರ ಸರ್ಕಾರದ ಜವಳಿ ಇಲಾಖೆ ಬಳಕೆದಾರರ ರಕ್ಷಣೆಗೆಂದೇ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಮುಖ್ಯವಾದವು ಹ್ಯಾಂಡ್‌ಲೂಮ್‌ – ಕೈಮಗ್ಗದ ಉಡುಪುಗಳು. ಇತ್ತೀಚಿನ ದಿನಗಳಲ್ಲಿ ಕೈಮಗ್ಗದ ಬಟ್ಟೆಮತ್ತು ಉಡುಪುಗಳಿಗೆ ಬೇಡಿಕೆ ಇದೆ. ಇದನ್ನು ದುರುಪಯೋಗಿಸಿಕೊಳ್ಳುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಕೈಮಗ್ಗದಿಂದ 
ತಯಾರಿಸಿದ್ದು ಎಂದು ಸುಳ್ಳು ಹೇಳಿ ಇನ್ಯಾವುದೋ ವಸ್ತ್ರವನ್ನು ಮಾರಾಟಮಾಡುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಮನಕ ಗೊತ್ತುಪಡಿಸಿದೆ. ಹೆಚ್ಚಿನ ವಿವರಗಳಿಗೆ ಡಿಡಿಡಿ.ಜಚnಛlಟಟಞs.nಜಿc.ಜಿn ನೋಡಬಹುದು.
ರೇಷ್ಮೆ ಸೀರೆ, ಪಂಚೆ ಮತ್ತು ವಸ್ತ್ರಗಳೆಂದರೆ ಭಾರತೀಯ ಬಳಕೆದಾರರಿಗೆ ಎಲ್ಲಿಲ್ಲದ ಮೋಹ. ಮಾರುಕಟ್ಟೆಯಲ್ಲಿ ಅನೇಕ ಮಾದರಿ ಸಿಲ್ಕ್ ವಸ್ತ್ರಗಳು ದೊರೆಯುತ್ತಿದೆ. ಆದರೆ ಅವೆಲ್ಲವೂ ನಿಜವಾದ ಸಿಲ್ಕ್ ಎಂದು ಹೇಳಲು ಸಾಧ್ಯವಿಲ್ಲ. ಅನೇಕ ಬಳಕೆದಾರರು, ವಿಶೇಷವಾಗಿ ಮಹಿಳೆಯರು ರೇಷ್ಮೆ ಎಂದು ಭಾವಿಸಿ ಇನ್ಯಾವುದೋ ಕಳಪೆ ಗುಣಮಟ್ಟದ ವಸ್ತ್ರ ಖರೀದಿಸಿ ವಂಚನೆಗೆ ಒಳಗಾಗಿರುವುದು ಕಂಡುಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಿಲ್ಕ್ಮಾರ್ಕ್‌ ಚಿಹ್ನೆ ಜಾರಿಗೊಳಿಸಿದೆ. ವಸ್ತ್ರ ಖರೀದಿಸುವಾಗ ಈ ಚಿಹ್ನೆ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಸಿಲ್ಕ್ಮಾರ್ಕ್‌ ಇರುವ ವಸ್ತ್ರ ಪರಿಶುದ್ಧ ಎಂಬುದನ್ನು ಮಂಡಳಿ ಆಶ್ವಾಸನೆ ಕೊಡುತ್ತದೆ.
ರೇಷ್ಮೆ ವ‌ಸ್ತ್ರಗಳಲ್ಲಿ ಆಗುತ್ತಿರುವಂತೆ ಉಣ್ಣೆ ಅಥವಾ ವುಲ್‌ ವಸ್ತ್ರಗಳ ಮಾರಾಟದಲ್ಲೂ ವಂಚನೆ ನಡೆಯುತ್ತಿದೆ. ಅದನ್ನು ತಪ್ಪಿಸಲು ಅಂತರರಾಷ್ಟ್ರೀಯ ವುಲ್‌ ಸಚಿವಾಲಯ ಈ ಚಿಹ್ನೆಯನ್ನು ಜಾರಿಗೊಳಿಸಿದೆ. ಉಣ್ಣೆ ವಸ್ತ್ರಗಳನ್ನು ಖರೀದಿಸುವ ಮುನ್ನ ಆ ವಸ್ತ್ರಕ್ಕೆ ವುಲ್‌ಮಾರ್ಕ್‌ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಹೊಳೆಯುವುದೆಲ್ಲಾ ಬಂಗಾರವಲ್ಲ
ಭಾರತೀಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ಮೋಹ. ನಾವು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಿನ್ನ ಖರೀದಿ ಹಾಗೂ ಬಳಕೆದಾರರು. ಆದ್ದರಿಂದ ಅತ್ಯಂತ ಹೆಚ್ಚು ವಂಚನೆಗೆ ಒಳಗಾಗುವವರೂ ನಾವುಗಳೇ. ಬಳಕೆದಾರರು 22 ಕ್ಯಾರೆಟ್‌ ಚಿನ್ನ ಖರೀದಿಸಿದ್ದೇವೆಂದು ನಂಬಿದ್ದರೂ ಅದು 18 ಕ್ಯಾರೆಟ್‌ ಗುಣಮಟ್ಟದ್ದಾಗಿರುತ್ತದೆ. ಅದು ಬೆಳಕಿಗೆ ಬರುವುದು ಚಿನ್ನದ ಆಭರಣವನ್ನು ಮರುಮಾರಾಟ ಮಾಡುವಾಗ ಇಲ್ಲವೇ ಅದನ್ನು ಬದಲಿಸುವಾಗ.  ಚಿನ್ನಾಭರಣದ ಪರಿಶುದ್ಧತೆಯನ್ನು ಖಾತ್ರಿಪಡಿಸಿಕೊಂಡು ಅನಂತರ ಅದನ್ನು ಖರೀದಿಸಿ. ಆದರೆ ಪರಿಶುದ್ಧತೆಯನ್ನು ಹೇಗೆ ಪತ್ತೆಹಚ್ಚುವುದು? ಚಿನ್ನಾಭರಣವನ್ನು ಕರಗಿಸಬೇಕಿಲ್ಲ. ಭಾರತೀಯ ಮಾನಕ ಬ್ಯೂರೊ ಹಾಲ್‌ಮಾರ್ಕ್‌ ಚಿಹ್ನೆಯನ್ನು ಜಾರಿಗೊಳಿಸಿದೆ. ಮಾರಾಟಗಾರರನ್ನು ಕೇಳಿ ಆಭರಣಕ್ಕೆ ಹಾಲ್‌ಮಾರ್ಕ್‌ ಚಿಹ್ನೆ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಹೆಚ್ಚಿನ ವಿವರಗಳಿಗೆ ಭಾರತೀಯ ಮಾನಕ ಬ್ಯೂರೋ ಕಚೇರಿಯನ್ನು ಸಂಪರ್ಕಿಸಿ ಅಥವಾ ವೆಬ್‌ಸೈಟ್‌ ನೋಡಿ. 
 
ವೈ.ಜಿ.ಮುರಳೀಧರನ್‌
 

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.