ಮೂರ್ಖರ ದಿನ ಹುಟ್ಟಿದ್ದು ಹೀಗೆ…
Team Udayavani, Mar 30, 2021, 7:33 PM IST
ಪ್ರತಿ ವರ್ಷದ ಏಪ್ರಿಲ್ ಒಂದರಂದು ಬೇರೆಯವರನ್ನು ಮೂರ್ಖರನ್ನಾಗಿಮಾಡುವ ಮೂಲಕ ನಾವು ಏಪ್ರಿಲ್ ಫೂಲ್‌ದಿನವನ್ನು ಆಚರಿಸುತ್ತೇವೆ. ಈ ಆಚರಣೆಹುಟ್ಟಿದ್ದು ಹೇಗೆ? ಏಪ್ರಿಲ್ ಒಂದರಂದು ಯಾವ ಕಾರಣಕ್ಕೆಮೂರ್ಖರ ದಿನವನ್ನುಆಚರಿಸುತ್ತಾರೆ ಎಂದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ.
ವಿದೇಶದಲ್ಲಿ ಹುಟ್ಟಿಕೊಂಡ ಈ ಆಚರಣೆಗೆಸಂಬಂಧಿಸಿದಂತೆಹಲವಾರು ಸಂಗತಿಗಳಿದೆ. 1700ರ ಸಂದರ್ಭದಲ್ಲಿಬ್ರಿಟಿಷರು ಏಪ್ರಿಲ್‌ಒಂದನ್ನು ಪರಸ್ಪರರನ್ನುಹಾಸ್ಯ ಮಾಡುವ ದಿನವಾಗಿಆಚರಿಸುತ್ತಿದ್ದರು. ಈ ದಿನಹೇಗೆ ಪ್ರಾರಂಭವಾಯಿತು ಎಂಬಕುರಿತು ಯಾರಿಗೂ ಖಚಿತವಾಗಿಗೊತ್ತಿದ್ದಂತಿಲ್ಲ. ಮೊದಲು ಏಪ್ರಿಲ್‌ಒಂದನ್ನು ಹೊಸ ವರ್ಷದ ಮೊದಲದಿನವೆಂದು ಆಚರಿಸಲಾಗುತ್ತಿತ್ತು. ಮುಂದೆ ಗ್ರೇಗೊರಿಯನ್ ಕ್ಯಾಲೆಂಡರ್ ಜಾರಿಗೆ ಬಂದಾಗ ಜನವರಿ ಒಂದನ್ನು ಹೊಸ ವರ್ಷದ ಮೊದಲ ದಿನ ಎಂದು ಘೋಷಿಸಲಾಯಿತು. ಆನಂತರವೂ ಕೆಲವರು ಈ ಸಂಗತಿ ತಿಳಿಯದೆ ಮಾರ್ಚ್ 31ರ ಮಧ್ಯರಾತ್ರಿಯಿಂದಲೇ ಹೊಸವರ್ಷ ಆಚರಿಸುತ್ತಿದ್ದರು. ಅವರನ್ನುಕಂಡು ಉಳಿದವರು ಹಾಸ್ಯ ಮಾಡಲು ಪ್ರಾರಂಭಿಸಿದರು.
ಹೀಗೆ, ಏಪ್ರಿಲ್ ಒಂದು ಮೂರ್ಖರ ದಿನವಾಯಿತೆಂದು ಕೆಲವರ ವಾದ. ಇನ್ನು ಕೆಲಇತಿಹಾಸಕಾರರು, ಬಹಳ ಹಿಂದೆ ರೋಮ್ ನಲ್ಲಿ ನಡೆಯುತ್ತಿದ್ದ ಹಿಲಾರಿಯ ಎಂಬ ಮಾರ್ಚ್ ಅಂತ್ಯದಲ್ಲಿ ಆಚರಿಸುತ್ತಿದ್ದ ಹಬ್ಬಕ್ಕೆ ಏಪ್ರಿಲ್ ಫೂಲ್ ದಿನವನ್ನು ತಳುಕುಹಾಕಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿಅಲ್ಲಿನ ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿ ಜನರನ್ನು ಮೂರ್ಖರನ್ನಾಗಿಸುತ್ತದೆ. ಹಾಗಾಗಿ ಎಲ್ಲರೂಮೂರ್ಖರಾಗುವ ದಿನಎಂದು ಏಪ್ರಿಲ್ ಒಂದನ್ನುಆಚರಿಸುತ್ತಿದ್ದರು ಎಂಬಮಾತುಗಳೂ ಇವೆ.
ವಿದ್ಯುನ್ಮಾನ ಮಾಧ್ಯಮಬೆಳೆದ ಮೇಲೆ ಏಪ್ರಿಲ್‌ಒಂದರಂದು ಜನರನ್ನುಮೂರ್ಖರನ್ನಾಗಿ ಮಾಡುವವಿಧಾನ ಬದಲಾಯಿತು.ಪತ್ರಿಕೆಗಳು ಕೆಲವೊಂದು ರೋಚಕ ಸುದ್ದಿಗಳನ್ನುಮುಖಪುಟದಲ್ಲಿ ಪ್ರಕಟಿಸುವ ಮೂಲಕ ಅದನ್ನು ಆಸಕ್ತಿಯಿಂದಓದುವಂತೆ ಮಾಡಿ, ಕಡೆಯಲ್ಲಿ ತಲೆಕೆಳಕಾಗಿಇಂದು ಮೂರ್ಖರ ದಿನ ಎಂದುಹಾಕುವ ಮೂಲಕ ಓದುಗರನ್ನುಮೂರ್ಖರನ್ನಾಗಿ ಮಾಡುತ್ತಿದ್ದವು. ಮೂರ್ಖರಿಗೂ ಒಂದು ದಿನವಿದೆಯಲ್ಲ ಎಂಬುದೇ ಖುಷಿ ಅಲ್ಲವೇ?
–ಪ್ರಕಾಶ್ ಕೆ. ನಾಡಿಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್ ತಯಾರಿ
Bengaluru: ಉದ್ಯಮಿಗೆ ಹನಿಟ್ರ್ಯಾಪ್ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್
Bengaluru: ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಸಿಬ್ಬಂದಿಗೆ ಗಾಯ
Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!
Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.