ಫೇಸ್‌ಬುಕ್ಕಿನ ಬೆಕ್ಕು


Team Udayavani, Oct 30, 2018, 6:00 AM IST

v-4.jpg

ಸೋಷಿಯಲ್‌ ಮೀಡಿಯಾ ಎನ್ನುವ ಇನ್ನೊಂದು ಜೀವಲೋಕದಲ್ಲಿ ಬರೀ ಮನುಷ್ಯರೇ ಇದ್ದಾರೆ ಎನ್ನುವುದು ಸುಳ್ಳು. ಅಲ್ಲಿ ಬೆಕ್ಕಿನ ಪ್ರಪಂಚವೂ ಒಂದಿದೆ. “ಐ ಲವ್‌ ಕ್ಯಾಟ್ಸ್‌’  ಎಂಬ ಪುಟವನ್ನು ನೀವು ಹೊಕ್ಕುಬಿಟ್ಟರೆ, ಅಲ್ಲಿ ನಿಮ್ಮ ಗೆಳೆಯರು ಬರೀ ಬೆಕ್ಕುಗಳೇ! ಆ ಬಿಲ್ಲಿಗಳೇ ನಿಮ್ಮೊಂದಿಗೆ ಚಾಟ್‌ ಮಾಡುತ್ತವೆ! ಅದೊಂದು ಬೆಕ್ಕಸ ಬೆರಗಿನ ಪ್ರಪಂಚ…

ಸುಮ್ಮನೆ ಕುಳಿತು ಮೊಬೈಲ್‌ನಲ್ಲಿ ಫೇಸ್‌ಬುಕ್‌ ನೋಡುತ್ತಿದ್ದೆ. ಒಂದಿಷ್ಟು ಗ್ರೂಪ್‌ಗ್ಳು ತಮ್ಮ ಪುಟವನ್ನು ಲೈಕ್‌ ಮಾಡಲು ಸಾಲು ಸಾಲಾಗಿ ಕಾದಿದ್ದವು. “ಸೌಂದರ್ಯ ಲಹರಿ - ಮಹಿಳೆಯರಿಗೆ ಮಾತ್ರ’ ಎಂಬ ಟೈಟಲ್‌ ಕಣ್ಣಿಗೆ ಬಿತ್ತು. ಸಣ್ಣಗಾಗಲು ಟಿಪ್ಸ್‌ ಇದೆಯಾ? ನೋಡಿದೆ. ಹೊಸತೇನೂ ಕಾಣಿಸಲಿಲ್ಲ. “ನಮ್ಮ ಮನೆ ಕೈ ತೋಟ’ ಎಂಬ ಪುಟದಲ್ಲಿ ಸುಂದರ ಹೂಗಳು ಅರಳಿ ನಿಂತಿದ್ದವು. “ಅಡುಗೆ ಅರಮನೆ’ಯಲ್ಲಿ ಥರ ಥರದ ರೆಸಿಪಿಗಳ ದರ್ಬಾರ್‌ ಇತ್ತು. ಅವನ್ನೆಲ್ಲ ಪ್ರಯೋಗಿಸಿಬಿಟ್ಟಿದ್ದೆ. ಇವೆಲ್ಲದರ ನಡುವೆ ಅಲ್ಲೊಂದು ಗ್ರೂಪ್‌ ವಿಶಿಷ್ಟ ಅಂತನ್ನಿಸಿತು. ಅದು “I love cats’!ಹಿಂದೆಮುಂದೆ ನೋಡದೇ ಲೈಕ್‌ ಒತ್ತಿ, ಸದಸ್ಯಳಾಗಿಬಿಟ್ಟೆ.

  ಆ ಪುಟದಲ್ಲೊಂದು ಬೆಕ್ಕಿನ ಫೋಟೋವಿದ್ದ ಪೋಸ್ಟ್‌ನಲ್ಲಿ “ಜನರೇಕೆ ನನ್ನನ್ನು ಅಪಶಕುನ ಅಂತಾರೆ?’ ಅಂತ ಬೇಸರದ ಪ್ರಶ್ನೆಯಿತ್ತು. ಅದಕ್ಕೆ ಸಾಕಷ್ಟು ಕಾಮೆಂಟುಗಳು ಬಂದಿದ್ದವು. ನನ್ನದೂ ಒಂದು ಪೋಸ್ಟ್‌ ಇರಲಿಯೆಂದು, ಪಕ್ಕದ ಮನೆಯ ಬೆಕ್ಕಿನ ಫೋಟೋವನ್ನು ಹಾಕಿದ್ದೆ. ಅವಕ್ಕೂ ನೂರಾರು ಲೈಕ್ಸ್‌, “ಬ್ಯೂಟಿಫ‌ುಲ್‌’ ಎಂಬ ಕಾಮೆಂಟುಗಳು ಬಿದ್ದವು. ಜನರು ಹೀಗೆಲ್ಲ ಮೆಚ್ಚಿದ್ದು, ಪಕ್ಕದ ಮನೆಯ ಬೆಕ್ಕಿಗೆ ಗೊತ್ತಾಗಿತ್ತೇನೋ, ಅವತ್ತಿನ ಅದರ ಕ್ಯಾಟ್‌ವಾಕ್‌ ತುಂಬಾ ವಿಭಿನ್ನವಾಗಿತ್ತು.

  ಇನ್ನೊಂದು ದಿನ. “ನಿಮ್ಮ ಬೆಕ್ಕಿನ ಹೆಸರೇನು?’ ಎಂದು ಪೋಸ್ಟ್‌ ಇತ್ತು. “ಪಿಂಕಿ’ ಅಂದಿದ್ದೆ. “ನಿಮ್ಮ ಬೆಕ್ಕಿನ ನಿಕ್‌ನೇಮ್‌ ಏನು?’, ಯಾರಧ್ದೋ ಪ್ರಶ್ನೆ. “ಪಿಂಕಿ’ ಎಂಬ ಎರಡಕ್ಷರದಲ್ಲಿ ನಿಕ್‌ ನೇಮ್‌ ಹೇಗೆ ಹುಡುಕೋದು ಅಂತ ತಲೆ ಕೆರೆದುಕೊಂಡೆ. ಜಗತ್ತಿನ ಬಹುತೇಕ ಬೆಕ್ಕುಗಳು ನಿಕ್‌ನೇಮ್‌ ಹೆಸರುಗಳನ್ನೇ ಇಟ್ಟುಕೊಂಡಿರುತ್ತವೆ ಅನ್ನೋದು ಆಮೇಲೆ ಗೊತ್ತಾಯಿತು.

  ‘CATS LEAVE PAW PRINTS ON YOUR HEART… FOR EVER AND ALWAYS… TRUE?’ ಎಂದು ಒಬ್ಬ ತಿಳಿಸಿದ್ದ. ಮನುಷ್ಯರು ನಮ್ಮ ಮನದಲ್ಲಿ ನೆನಪುಗಳನ್ನು ಬಿಟ್ಟು ನಡೆಯುವಂತೆ ಬೆಕ್ಕುಗಳು ಪಂಜಿನ ಅಚ್ಚು ಬಿಟ್ಟು ಹೋಗುತ್ತವೆ ಎಂದು ತಿಳಿದು ಸಪ್ಪಗಾದೆ.

  “ನಿಮ್ಮ ಬೆಕ್ಕಿನ ಇಷ್ಟದ ಊಟವೇನು? ಆಟಿಕೆಗಳು ಯಾವುವು?’ ಎಂದು ಮರುದಿನ ಯಾರೋ ಕೇಳಿದ್ದರು. “ಕೌ ಮಿಲ್ಕ್’ ಎಂದೆ. ಅದಕ್ಕೆ ಬಿದ್ದಿದ್ದು ಒಂದೇ ಲೈಕು. ಅದರ ಮೇಲಿನ ಕಾಮೆಂಟ್‌ಗಳನ್ನು ಓದಿದೆ. ಫಿಶ್‌ ಫ್ರೈ, ಬರ್ಗರ್‌, ಪಿಜ್ಜಾ, ಇನ್ನೂ ಕಂಡು ಕೇಳರಿಯದ ವಿದೇಶಗಳ ವಿಧವಿಧ ತಿನಿಸುಗಳ ಹೆಸರಿದ್ದವು. ಬೆಕ್ಕಿನ ಅಭಿಮಾನಿಗಳೆಲ್ಲ ಅದಕ್ಕೆ ಮುಗಿಬಿದ್ದು ಲೈಕ್‌ ಮಾಡಿದ್ದರು. ಬೆಕ್ಕುಗಳು ನನ್ನಂತೆ ನಾರ್ಮಲ್‌ ಅಲ್ಲ, ಸಖತ್‌ ಪಾಶ್‌ ಅಂತ ಆಗಲೇ ನನಗೆ ಅನ್ನಿಸಿದ್ದು. ಮಕ್ಕಳಿಗೆ ನೆಟ್ಟಗೆ ಬೇಕಾದ ಅಡುಗೆ ಮಾಡಲು ಟೈಮ್‌ ಇಲ್ಲ. ಇನ್ನು ಬೆಕ್ಕಿಗೆ ಏನ್‌ ಸ್ಪೆಷಲ್‌ ಮಾಡೋದು ಅಂತಂದುಕೊಂಡೆ. “ಅವಕ್ಕೂ ಆಟಿಕೆ ಕೊಡಿಸಬೇಕಾ?’ ಅಂತ ಮತ್ತೆ ಮೂಗಿನ ಮೇಲೆ ಬೆರಳಿಟ್ಟೆ.

  ಇನ್ನೊಂದು ಕಡೆ, “ನನ್ನ ಬೆಕ್ಕು ನಿಧನವಾಯಿತೆಂದು ತಿಳಿಸಲು ವಿಷಾದಿಸುತ್ತೇನೆ’ ಎಂಬ ಅಳುವ ಎಮೋಜಿ ಹಾಕಿದ್ದರು ಒಬ್ಬರು. “ಸೋ ಸ್ಯಾಡ್‌’, “Rip’ ಎಂದು ಎಲ್ಲಾ ಶೋಕಾಚಾರಣೆ ನಡೆಸಿದ್ದರು. “ನಿನ್ನ ದುಃಖದಲ್ಲಿ ನಾವೂ ಜೊತೆಗಿದ್ದೇವೆ’ ಎಂದು ಸಂತೈಸಿದರು. ಹಾಗೆ ಪೋಸ್ಟರ್‌ ಹಾಕಿದಾಕೆ, ಒಂದು ದಿನ ಊಟ ಬಿಟ್ಟು, ಶೋಕ ಆಚರಿಸಿದ್ದಳು.

  “ನಾನು ನನ್ನ ಎರಡು ಕಿಟ್ಟನ್‌ ಪ್ರವಾಹದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗಾಗಿ ದೇವರಲ್ಲಿ ಪ್ರಾರ್ಥಿಸಿ’ ಎಂದು ಇನ್ನಾರೋ ಹಾಕಿದ್ದರು. “ಗಾಡ್‌ ಬ್ಲೆಸ್‌ ಯು ಆಲ್‌’, “ಹುಷಾರು’ ಎಂದು ಸಮಾಧಾನದ ಕಾಮೆಂಟುಗಳ ಪ್ರವಾಹ ಆಕೆಯತ್ತ ಹರಿದಿದ್ದವು.

  ಮತ್ತೂಬ್ಬಳಂತೂ, ಮೊಬೈಲ್‌ ಮೇಲೆ ಕಕ್ಕ ಮಾಡಿದ ಬೆಕ್ಕಿನ ಫೋಟೋ ಹಾಕಿ, “ಇಂಥ ಚೇಷ್ಟೆ ಮಾಡೋ ನನ್ನ ಪ್ರೀತಿಯ ಬೆಕ್ಕು’ ಎಂದು ಬರೆದಿದ್ದಳು. ಅದನ್ನು ನೋಡಿ ಹೇಸಿಗೆಯಿಂದ ನನಗೆ ಎರಡು ದಿನ ಊಟವೇ ಸೇರಲಿಲ್ಲ. ಆ ಚಿತ್ರ ಕಣ್ಣ ಮುಂದೆ ಸುಳಿದಾಗಲೆಲ್ಲ ಒಂಥರಾ ಅನ್ನಿಸುತ್ತಿತ್ತು. ನಮ್ಮನೆ ಬೆಕ್ಕು ಎಲ್ಲಿ ಇದನ್ನೆಲ್ಲಾ ನೋಡಿ ಕಲಿತುಬಿಟ್ಟರೆ ಅಂತ ಆತಂಕ ಹುಟ್ಟಿ, ಬೆಕ್ಕು ಬಂದಾಗಲೆಲ್ಲ ಮೊಬೈಲನ್ನು ಬಚ್ಚಿಟ್ಟುಕೊಳ್ಳುತ್ತಿದ್ದೆ. 

   “ಬೆಕ್ಕಿನಿಂದ ಬೆಕ್ಕಿಗಾಗಿ ಬೆಕ್ಕಿಗೋಸ್ಕರ ಇರುವ ಈ ಗ್ರೂಪ್‌ನಲ್ಲಿ ನಿಮ್ಮ ಬಳಿ ಇರುವ ಬೆಕ್ಕಿನ ಸಂಖ್ಯೆ ಎಷ್ಟು?’ ಎಂದು ಯಾರೋ ಪ್ರಶ್ನಿಸಿದ್ದರು. “ಎರಡು’ ಎಂದೆ. ಕೆಲವರು ಊಟದ ಸಮಯದಲ್ಲಿ ಮಾತ್ರ ಬರುವ ಬೆಕ್ಕುಗಳ ಲೆಕ್ಕವನ್ನು ಒಪ್ಪಿಸಿದ್ದರು. ಯಾವನೋ ಒಬ್ಬ “ನೋ ಒನ್‌’ ಅಂದ. ತಕ್ಷಣವೇ ಅವನನ್ನು ಬ್ಲಾಕ್‌ ಮಾಡಲಾಯಿತು.

  “ನಮ್ಮನೆಯ ರೀಟಾ ಮರಿ ಹಾಕಿದ್ದಾಳೆ. ಆ ಮುದ್ದಿನ ಮರಿಗಳಿಗೆ ಚೆಂದದ ಹೆಸರಿಡಿ’ ಅಂತ ಒಬ್ಬ ಬೆಳಗ್ಗೆ ಮುಂಚೆಯೇ ಪೋಸ್ಟ್‌ ಹಾಕಿದ್ದ. ಕ್ಷಣಮಾತ್ರದಲ್ಲಿ ಬಹಳ ಆಕರ್ಷಕ, ಚಿತ್ರ- ವಿಚಿತ್ರ ಹೆಸರುಗಳೆಲ್ಲ ಪೋಸ್ಟ್‌ ಆದವು. ಸಂಜೆ ವೇಳೆಗೆ ಅದರ ನಾಮಕರಣವೇ ಮುಗಿದಿತ್ತು!

  ಇದ್ದಕ್ಕಿದ್ದಂತೆ ಒಂದು ದಿನ, ಸದಸ್ಯರೆಲ್ಲ ದಂಗೆ ಎದ್ದಿದ್ದರು. ಏಕೆಂದು ನೋಡಿದರೆ, ಯಾರೋ ಒಬ್ಬ ಕಿಡಿಗೇಡಿ ಐ ಜಚಠಿಛಿ cಚಠಿs ಎಂದು ಪೋಸ್ಟ್‌ ಹಾಕಿದ್ದ. “ಅಡ್ಮಿನ್‌ ವೇರ್‌ ಆರ್‌ ಯು?’, “ದಯವಿಟ್ಟು ಇಂಥವರನ್ನು ಬ್ಲಾಕ್‌ ಮಾಡಿ’ ಎಂದು ಬೆಕ್ಕಿನ ಅಭಿಮಾನಿಗಳು ಅರಚುತ್ತಿದ್ದರು. ಎಲ್ಲಾ ಸದಸ್ಯರು ಚುರುಕಾಗಿ ಬೆಕ್ಕುಗಳ ದ್ವೇಷಿಗಳನ್ನು ಹುಡುಕಿ ಹುಡುಕಿ ಬ್ಲಾಕ್‌ ಮಾಡಿದರು.

 “ಬೆಕ್ಕು ಅಡ್ಡ ಬಂದರೆ ಅಪಶಕುನ ಅಲ್ಲ. ಮನುಷ್ಯ ಅಡ್ಡ ಬಂದರೆ ಬೆಕ್ಕಿಗೆ ಅಪಶಕುನ. ಬೆಕ್ಕೊಂದು ಮುಗ್ಧ ಪ್ರಾಣಿ. ಬೆಕ್ಕಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ನಮ್ಮ ಗುರಿ’ ಎಂಬ ಹೋರಾಟದ ಕೂಗು ಅಲ್ಲಿ ಕೇಳಿಬಂತು. 98 ಸಾವಿರ ಸದಸ್ಯರಿರುವ ಈ ಗುಂಪಿನ ಮುಖ್ಯ ಗುರಿ, ಮುಂದಿನ ದಿನಗಳಲ್ಲಿ ಬೆಕ್ಕನ್ನು “ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವುದಂತೆ.

  ಮೊನ್ನೆಯೊಂದು ಇಲಿ ಬಂದು ಮಕ್ಕಳು ಓದುವ ಕೋಣೆಯನ್ನು ಸೇರಿತ್ತು. ಬೆಕ್ಕನ್ನು ಕರೆದು ಹೇಳಿದೆ. “ಹೋಗಿ, ಆ ಇಲಿ ಹಿಡಿ’ ಅಂತ. “ಈಗಾಗಲೇ ಹೊಟ್ಟೆ ತುಂಬಿದೆ. ಜಾಸ್ತಿ ಫೋರ್ಸ್‌ ಮಾಡಿದ್ರೆ, ಗ್ರೂಪ್‌ನಲ್ಲಿ ಕಂಪ್ಲೇಂಟ್‌ ಮಾಡ್ತೀನಿ’ ಅಂತ ಹೆದರಿಸಿತು. ಇದು ಬೆಕ್ಕಿನ ಕಾಲವೆಂದು ತಿಳಿದು ಸುಮ್ಮನಾದೆ.

ನೀವು ಬೆಕ್ಕು ಪ್ರಿಯರೇ?
ಬೆಕ್ಕು ಪ್ರಿಯರು i love cats ಗ್ರೂಪ್‌ಗೆ ಒಂದು ಲೈಕ್‌ ಹಾಕಿ ಸೇರಬಹುದು. ನಿಮ್ಮ ನಿಮ್ಮ ಬೆಕ್ಕುಗಳ ಫೋಟೋ, ಆಹಾರ ಪದ್ಧತಿ, ಇಷ್ಟದ ಆಟಿಕೆ, ಹೆಸರುಗಳು ಹಾಗೂ ಇತರ ಸಾಹಸ ಯಶೋಗಾಥೆ ಹಂಚಿಕೊಳ್ಳಲು ಇದು ಒಂದು ಉತ್ತಮ ವೇದಿಕೆ. ಬೆಕ್ಕೂ ಒಂದು ಜೀವಿ. ಅದರ ರಕ್ಷಣೆಗೂ ಜನರ ದೊಡ್ಡ ಪಡೆಯಿದೆ ಎಂಬುದೆಲ್ಲ ಅಲ್ಲಿ ತಿಳಿಯುತ್ತಾ ಹೋಗುತ್ತೆ.

ಅಂಜನಾ ಗಾಂವ್ಕರ್‌, ದಬ್ಬೆಸಾಲ್‌

ಟಾಪ್ ನ್ಯೂಸ್

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

Doha; ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Doha; ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

hejjaru movie releasing on July 19th

Hejjaru; ಪ್ಯಾರಲಲ್‌ ಲೈಫ್ ಸಿನಿಮಾ; ಜುಲೈ 19ಕ್ಕೆ ‘ಹೆಜ್ಜಾರು’ ರಿಲೀಸ್‌

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

20-uv-fusion

UV Fusion: ಪ್ರಕೃತಿ ಶಾಶ್ವತ ಮನುಷ್ಯನ ಕೊಡುಗೆ ನಿಮಿತ್ತ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.