ನೀನೆಷ್ಟು ಹುಡುಕಿದರೂ ನಾನು ಸಿಗುವುದಿಲ್ಲ…

Team Udayavani, May 14, 2019, 6:00 AM IST

ಒಂದು ತಿಳಿಸಂಜೆ ಪಾರಿಜಾತದಂತೆ ಆಕಸ್ಮಿಕವಾಗಿ ಕಂಡವಳು ನೀನು. ಮೊದಲ ನೋಟದಲ್ಲೇ ನನ್ನ ಮನದಲ್ಲಿ ಪ್ರೀತಿಯ ಅಮೃತಧಾರೆಯನ್ನು ಹರಿಸಿಬಿಟ್ಟೆ. ಮೊದಲೊಂದು ಸಲ ನಿನ್ನನ್ನು ಎಲ್ಲೋ ನೋಡಿದ್ದೆನಾದರೂ, ನೀನು ನನ್ನ ಜೂನಿಯರ್‌ ಅಂತ ಗೊತ್ತಾಗಿದ್ದು ಮಾತ್ರ ಕಾಲೇಜು ಮುಗಿಯಲು ಇನ್ನೇನು ಮೂವತ್ತು ದಿನ ಇದೆ ಅನ್ನುವಾಗ.

ಕೊನೆಯ ಆ ಒಂದು ತಿಂಗಳು ಹೇಗಿತ್ತು ಗೊತ್ತಾ? ಆಗಷ್ಟೇ ನನ್ನ ಮನದಲ್ಲಿ ಪ್ರೀತಿಯನ್ನು ಚಿಗುರೊಡೆಸಿದ್ದೆ ನೀನು. ಕುಂತರೂ- ನಿಂತರೂ ನಿನ್ನದೇ ಧ್ಯಾನ. ಮನೆಯಲ್ಲಿ ಜಾತಿ-ಗೋತ್ರದ ಕಟ್ಟುಪಾಡು ಇದೆ ಅಂತ ಗೊತ್ತಿದ್ದರೂ, ನಿನ್ನ ಸ್ನೇಹ ಪಡೆದು, ನಿನ್ನವನಾಗಲೇ ಬೇಕು ಅಂತ ಹಠಕ್ಕೆ ಬಿದ್ದಿದ್ದೆ. ಆದರೆ, ನಿನ್ನನ್ನು ಮಾತನಾಡಿಸುವ ಧೈರ್ಯ ಮಾತ್ರ ಇರಲಿಲ್ಲ.

ಈ ಚಡಪಡಿಕೆಯಲ್ಲೇ ದಿನಗಳು ಕಳೆದವು. ಪರೀಕ್ಷೆಗಳೂ ಮುಗಿದವು. “ಹೇಡಿ ನೀನು’ ಅಂತ ನನಗೆ ನಾನೇ ಬೈದುಕೊಂಡು ಸುಮ್ಮನಾಗಿದ್ದೆ. ಅದೊಂದು ದಿನ, ಕಾಲೇಜಿಗೆ ಸಂಬಂಧಪಟ್ಟ ಯಾವುದೋ ಪಿಡಿಎಫ್ ನೋಡುವಾಗ ಅದರಲ್ಲಿ ನಿನ್ನ ಹೆಸರು ಕಾಣಿಸಿತು. ಅದರ ಮುಂದೆಯೇ ನಿನ್ನ ಅಡ್ರೆಸ್‌ ಮತ್ತು ಫೋನ್‌ ನಂಬರ್‌! ಮರುಭೂಮಿಯಲ್ಲಿ ಗಂಗಾಜಲ ಸಿಕ್ಕಷ್ಟು ಖುಷಿಯಾಯ್ತು. ತಕ್ಷಣವೇ ನಿನಗೊಂದು ಮೆಸೇಜ್‌ ಮಾಡಿದೆ. ಪರಸ್ಪರ ಪರಿಚಯವಿರದ ಕಾರಣ, ಗೆಳೆತನ ಮೂಡಲು ಸ್ವಲ್ಪ ದಿನವೇ ಬೇಕಾಯ್ತು.

ಒಂದು ದಿನ ನೀನು- “ಹೇ, ನೀನು ಕೊಂಕಣಿಯಲ್ವಾ? ನಾನೂ ಕೊಂಕಣಿ ಕಲೀಬೇಕು. ಹೇಳಿ ಕೊಡೋ’ ಅಂದಾಗ ಅದೆಷ್ಟು ಖುಷಿಪಟ್ಟಿದ್ದೆ ಗೊತ್ತಾ?

ಕೊಂಕಣಿಯಲ್ಲಿ ನಾನು ಹೇಳಿದ್ದನ್ನು ನೀನು ಅದಿನ್ನೇನೋ ಅರ್ಥ ಮಾಡಿಕೊಂಡು, ಏನೇನೋ ವಾಕ್ಯ ಮಾಡ್ತಿದ್ದೆ. ಆದರೂ, ಪ್ರತಿ ರಾತ್ರಿ ಮುದ್ದು ಮುದ್ದಾಗಿ “ಜಾವಣ ಜಾಲೆ?’ (ಊಟಾ ಆಯ್ತಾ?) ಅಂತ ಕೇಳ್ತಿದ್ದೆ ನೋಡು, ಅಷ್ಟೇ ಸಾಕಾಗಿತ್ತು ನನಗೆ.

ನಿಜ ಹೇಳ್ತೀನಿ, ನಿನ್ನನ್ನು ಹೃದಯದ ಗುಡಿಯಲ್ಲಿ ದೇವರಂತೆ ಆರಾಧಿಸಿದ್ದೆ. ನಿನ್ನನ್ನು ಪ್ರೀತಿಸುತ್ತಿರೋ ವಿಷಯವನ್ನು ಕೆಲವೇ ದಿನಗಳಲ್ಲಿ ಹೇಳುವವನಿದ್ದೆ. ಆದ್ರೆ, ಆ ರಾತ್ರಿ ನೀನು ಕಳುಹಿಸಿದ ಮೆಸೇಜ್‌ ನನ್ನ ಕನಸಿನ ಕೋಟೆಯನ್ನು ಹೊತ್ತಿ ಉರಿಸಿಬಿಟ್ಟಿತು. ಅವತ್ತು ನೀ ಕಳಿಸಿದ್ದೆ- “ನನ್ನ ಡಿಗ್ರಿ ಮುಗಿತಾ ಬಂತು. ಎಂಗೆ ಮದವೆ ಫಿಕ್ಸ್ ಆಗಿದ್ದು, ಮಾಣಿ ಸಿ.ಎ ಮಾಡ್ತಿದ್ದ’. ಅದನ್ನೋದಿದ ಮೇಲೆ ನಿನಗೆ ಮೆಸೇಜ್‌ ಮಾಡುವ ಧೈರ್ಯ ಬರಲಿಲ್ಲ ನನಗೆ. ಪ್ರೀತಿಯನ್ನು ಹೇಳದೆಯೂ ಉಳಿಯಾಗಲಿಲ್ಲ. ಆದರೆ, ವಿಷಯ ಗೊತ್ತಾದ ಮೇಲೆ ನೀನು ನನ್ನ ನಂಬರ್‌ ಅನ್ನು ಬ್ಲಾಕ್‌ ಮಾಡಿ ದೂರ ಹೋದೆ.

ಹೋಗು… ಏನೂ ಬೇಜಾರಿಲ್ಲ ನನಗೆ. ನನ್ನ ಪ್ರೀತಿ ಶಾಂತ ಸರೋವರ ಅಂದುಕೊಂಡಿದ್ದೆ. ಆದರೆ ಅದು ಹುಚ್ಚು ಹೊಳೆ. ಆ ಹೊಳೆಯ ಸುಳಿಯಲ್ಲಿ ಕೊಚ್ಚಿ ಹೋಗಿರುವೆ ನಾನು. ನೀನಾಗಿಯೇ ಹುಡುಕಿದರೂ ನಾನು ಸಿಗುವುದಿಲ್ಲ.

– ಎಂ. ನಾಗಪ್ಪ ಪ್ರಭು, ಅಂಕೋಲಾ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • "ಆಲೂಗಡ್ಡೆ ಎಲ್ಲಿ ಬೆಳೆಯುತ್ತದೆ ? "ಮರದ ಮೇಲೆ ಸಾರ್‌', " ಹಾಲಿನ ಮೂಲ ಎಲ್ಲಿದೆ ?' " ಅಂಗಡಿಯಲ್ಲಿ ಸಾರ್‌' ಎಂದು ಉತ್ತರಿಸುವ ಮಕ್ಕಳು ಇರುವ ಈ ಕಾಲದಲ್ಲಿ. ಶಿರಸಿಯ ಒಂದಷ್ಟು...

  • ಬಹಳ ಹಿಂದೆ, ನನ್ನ ತಂದೆಯವರ ಬಳಿ ಕೆ.ಜಿ ತೂಕದ ಆಗ್ಭಾ ಬೆಲ್ಲೋಸ್‌ಫಿಲಂ ರೋಲ್‌ ಕ್ಯಾಮೆರಾ ಇತ್ತು. 100 ಮಿ.ಮೀ ಅಳತೆಯ ಒಂದೊಂದು ಪ್ರೇಂನಲ್ಲಿ ಚೌಕಾಶಿ ಮಾಡಿ ಒಟ್ಟು...

  • ಪರೀಕ್ಷೆ ಸಂದರ್ಭದಲ್ಲಿ ಸಮಯವೇ ದೇವರು. ಅದನ್ನು ಒಲಿಸಿಕೊಳ್ಳುವುದೂ ಕಲೆ. ಕಷ್ಟದ ಸಬೆjಕ್ಟ್ಗಳು, ಸುಲಭದ ವಿಷಯಗಳಿಗೆ ಇದನ್ನು ಹಂಚುವುದು ನಿಜಕ್ಕೂ ಪ್ರತಿಭೆಯೇ....

  • ಸೇವೆ ಅಂದರೆ ಊಟ, ಬಟ್ಟೆ ಕೊಡೋದು, ಕಷ್ಟದಲ್ಲಿರುವವರಿಗೆ ಹಣ ಸಹಾಯ ಮಾಡೋದು ಮಾತ್ರವಲ್ಲ. ಹೀಗೂ ಮಾಡಬಹುದು ಅಂತ ಕೊಟ್ಟೂರಿನ ಯುವಕರು ತೋರಿಸುತ್ತಿದ್ದಾರೆ. ಅವರು...

  • ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್‌ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ...

ಹೊಸ ಸೇರ್ಪಡೆ