Udayavni Special

ಬಾಂಬರ್‌ ಬಾವಲಿ!


Team Udayavani, Mar 30, 2021, 6:16 PM IST

Untitled-1

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಿಂದ ಅಮೆರಿಕೆಗೆ ಹಾರಿಹೋದ ಹಲವು ಯಹೂದಿ ವಿಜ್ಞಾನಿಗಳಲ್ಲಿ ಲೂಯಿ ಫೀಝರ್‌ ಕೂಡ ಒಬ್ಬ. ಈತ ಮೂಲತಃರಸಾಯನ ವಿಜ್ಞಾನಿ. ಪ್ರಕಾಂಡ ಪಂಡಿತ. ಅಮೆರಿಕದ ಸೇನೆಗಾಗಿ ಹಲವು ಸಂಶೋಧನೆಗಳಲ್ಲಿ ಭಾಗಿಯಾದ; ಹಲವು ಯುದೊœà ಪಕರಣಗಳನ್ನು ಮಾಡಿಕೊಟ್ಟ. ಜಪಾನಿನ ಮೇಲೆ ಯಾವೆಲ್ಲ ಬಗೆಯಲ್ಲಿ ದಾಳಿ ಮಾಡಬಹುದುಎಂಬ ವಿಚಾರದಲ್ಲಿ ಫೀಝರ್‌ನೂರಾರು ಉಪಯುಕ್ತಸಲಹೆಗಳನ್ನು ಅಮೆರಿಕನ್‌ ಸೇನೆಗೆ ನೀಡಿದ್ದ.

ಯಾವುದೋ ಸಂಶೋಧನೆಮಾಡುತ್ತಿದ್ದ ಸಮಯದಲ್ಲಿ ಒಂದುಅಂಶ ಅವನ ಗಮನಕ್ಕೆ ಬಂತು. ಅದೇನೆಂದರೆ ಕಡಿಮೆ ವಾಯುಸಾಂದ್ರತೆ ಇದ್ದಾಗ(ಅಂದರೆ ಗಾಳಿಯಲ್ಲಿ ಪ್ರಾಣವಾಯು ಅತಿ ವಿರಳವಾಗಿರುವ ಸಂದರ್ಭ) ಮತ್ತು ಅತಿ ಶೈತ್ಯದ ಸ್ಥಳದಲ್ಲಿ ಬಾವಲಿ ಸ್ತಬ್ಧಸ್ಥಿತಿಗೆ (ಡಾರ್ಮೆಂಟ್‌ ಸ್ಟೇಟ್‌) ಹೋಗುತ್ತದೆ. ಅಂದರೆ ಅದರ ಮೈ ನಿಶ್ಚಲವಾಗುತ್ತದೆ. ಉಸಿರಾಟ ಅತಿ ನಿಧಾನವಾಗುತ್ತದೆ. ರಕ್ತ ಪರಿಚಲನೆ ಇಲ್ಲವೇ ಇಲ್ಲವೇನೋ ಎಂಬಷ್ಟು ನಿಧಾನವಾಗುತ್ತದೆ. ಬಾಹ್ಯಚಟುವಟಿಕೆ ಗಳೆಲ್ಲವೂ ನಿಂತು ಹೋಗುತ್ತವೆ. ಇದು ಶಕ್ತಿ ವ್ಯಯವನ್ನು ತಡೆಯುವುದಕ್ಕಾಗಿ ಬಾವಲಿಯ ದೇಹವೇ ಮಾಡಿಕೊಳ್ಳುವ ಒಂದು ಸ್ವರಕ್ಷಣಾವ್ಯವಸ್ಥೆ. ಆಕ್ಸಿಜನ್‌ನ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗುತ್ತ ಬಂದಂತೆಲ್ಲ ಮತ್ತು ವಾತಾವರಣದ ಉಷ್ಣತೆಯು ಸಹಜ ಸ್ಥಿತಿಗೆ ಮರಳಿದಂತೆಲ್ಲ ಬಾವಲಿಗಳು ತಮ್ಮ ನಿಶ್ಚಲ ಸ್ಥಿತಿಯಿಂದ ಮತ್ತೆ ಸಹಜ ಸ್ಥಿತಿಗೆ ಮರಳುತ್ತವೆ.

ಫೀಝರ್‌ನ ಮಿದುಳು, ಬಾವಲಿಯ ಈ ದೇಹಗುಣವನ್ನು ಯುದ್ಧದಲ್ಲಿ ಏಕೆ ಬಳಸಬಾರದುಎಂದು ಯೋಚಿಸಿತು! ಅದೇನೆಂದರೆ ಬಾವಲಿಗಳನ್ನುಸಮುದ್ರಮಟ್ಟದಿಂದ ಅತಿ ಎತ್ತರಕ್ಕೆ ತೆಗೆದುಕೊಂಡುಹೋಗುವುದು. ಅವು ಸ್ತಬ್ಧಸ್ಥಿತಿಗೆ ಜಾರಿದ ಮೇಲೆ ಅವುಗಳ ದೇಹಕ್ಕೆ ಬಾಂಬ್‌ಗಳನ್ನು ಅಳವಡಿಸುವುದು. ಅವನ್ನು ತೆಗೆದುಕೊಂಡು ಹೋಗಿ ಜಪಾನಿನವಾಯುಮಂಡಲದಲ್ಲಿ ಉದುರಿಸುವುದು! ಗಾಳಿಯಲ್ಲಿಹಾರುತ್ತ ಹಾರುತ್ತ, ಕೆಳಕೆಳಗೆ ಬಂದಂತೆಲ್ಲ ಅವುಸ್ತಬ್ಧಸ್ಥಿತಿಯಿಂದ ಹೊರಕ್ಕೆ,ಸಹಜಸ್ಥಿತಿಗೆ ಬರುತ್ತವೆ. ಅವು ರೆಕ್ಕೆಗಳನ್ನು ಬೀಸಿಕೊಂಡುಹಾರತೊಡಗಿದ ಕೂಡಲೇ ಬಾಂಬ್‌ಗಳ ಪಿನ್‌ತೆರೆಯಲ್ಪಟ್ಟು, ಬಾಂಬ್‌ಸಿಡಿಯುತ್ತದೆ. ಹೀಗೆ ಮಾಡಿಜಪಾನಿನ ಹಲವುನಗರಗಳಲ್ಲಿ ಧ್ವಂಸ ಕಾರ್ಯ ನಡೆಸಬಹುದು ಎಂಬುದು ಫೀಝರ್‌ನ ತಂತ್ರವಾಗಿತ್ತು.

ಸರಿ, ಪ್ರಯೋಗಕ್ಕೆಸಿದ್ಧವಾಯಿತು ಅಮೆರಿಕದಸೇನೆ. ಬಾವಲಿಗಳನ್ನುದೊಡ್ಡ ಮಟ್ಟದಲ್ಲಿ ಹಿಡಿದು ತರಲಾಯಿತು. ಅವನ್ನುವಿಮಾನಗಳಲ್ಲಿ ಅತಿ ಎತ್ತರಕ್ಕೆಕೊಂಡೊಯ್ಯಲಾಯಿತು.ನಿಶ್ಚಲಗೊಂಡ ಅವುಗಳ ರೆಕ್ಕೆ,ಹೊಟ್ಟೆಗಳಿಗೆಲ್ಲ ಬಾಂಬ್‌ ಕಟ್ಟಲಾಯಿತು. ಅವು ರೆಕ್ಕೆಬಡಿಯುತ್ತ ಹಾರತೊಡಗಿದೊಡನೆ ಬಾಂಬುಗಳುಸಿಡಿಯುವಂತೆ ವ್ಯವಸ್ಥೆ ಮಾಡಲಾಯಿತು. ನ್ಯೂಮೆಕ್ಸಿಕೋದ ಮರುಭೂಮಿಯಲ್ಲಿ ಈ ಪ್ರಥಮಪ್ರಯೋಗ ನಡೆಯಿತು. ಮರುಭೂಮಿಯಲ್ಲಿ ಮಾಡಿದಪ್ರಯೋಗ ಬಹುತೇಕ ಯಶಸ್ವಿ ಏನೋ ಆಯಿತು. ಆದರೆ,ಸ್ತಬ್ಧಸ್ಥಿತಿಯಿಂದ ಸಹಜಸ್ಥಿತಿಗೆ ಮರಳಿದ ಬಾವಲಿಗಳುನೇರ, ಅಮೆರಿಕದ ಮಿಲಿಟರಿ ನೆಲೆಯತ್ತಲೇ ಹಾರಾಡಿ, ಆನೆಲೆಯನ್ನು ಪೂರ್ತಿ ಧ್ವಂಸ ಮಾಡಿ, ಇಡೀ ಯೋಜನೆಗೇಒಂದು ದೊಡ್ಡ (ಅ)ಶುಭಂ ಬರೆದವು! ಈದುರಂತಪ್ರಯೋಗದ ನೆನಪಿಗಾಗಿ ಫೀಝರ್‌, ತನ್ನಆಫೀಸಿನಲ್ಲಿ ಒಂದು ಬೈಹುಲ್ಲು ತುಂಬಿಸಿಟ್ಟ ಬಾವಲಿಯಪ್ರತಿಕೃತಿಯನ್ನು ಗೋಡೆಗೆ ನೇತು ಹಾಕಿದ್ದ. ಇದೇನು?ಎಂದು ಕೇಳಿದವರಿಗೆಲ್ಲ ಅದೊಂದು ದೊಡ್ಡ ಕಥೆ ಎಂದು ನಗುತ್ತ ತನ್ನ ಅನುಭವ ಕಥನ ಶುರು ಮಾಡುತ್ತಿದ್ದ.­

 

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಹರಿದ್ವಾರ ಕುಂಭಮೇಳ; ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಪ್ರಕರಣ ಪತ್ತೆ

ಹರಿದ್ವಾರ ಕುಂಭಮೇಳ; ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಪ್ರಕರಣ ಪತ್ತೆ

ಹತಗದ್ದಗಹ

ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ

gnddsfgd

ಕೋವಿಡ್ ಭೀತಿ : ಹರಿಯಾಣದಲ್ಲೂ 10ನೇ ತರಗತಿ ಪರೀಕ್ಷೆ ರದ್ದು

virat kohli

ವಿರಾಟ್ ಕೊಹ್ಲಿಗೆ ವಿಸ್ಡನ್ ದಶಕದ ಏಕದಿನ ಆಟಗಾರ ಗೌರವ

xdfbsfs

‘ಹೆಲಿ ಟೂರಿಸಂ’ಗೆ ದುನಿಯಾ ವಿಜಯ್ ವಿರೋಧ: ‘ಸೇವ್ ಮೈಸೂರು ಕ್ಯಾಂಪೈನ್‌’ಗೆ ಮಾಸ್ತಿಗುಡಿ ಬೆಂಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

22dhlp1_2203bg_2

ಓಪನ್‌ ಸ್ಕೂಲಲ್ಲಿ ಓದಿ ರ್‍ಯಾಂಕ್‌ ಬಂದ!

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ…

MUST WATCH

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

udayavani youtube

ಹೊಟ್ಟೆ ತುಂಬಾ ಊಟ ಮಾಡಿದ ಕೂಡಲೇ ಮಲಗಬಾರದು ಏಕೆ?

udayavani youtube

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪುತ್ತೂರು ಮಹಾಲಿಂಗೇಶ್ವರ ಮತ್ತು ವೆಂಕಟರಮಣ ದೇವರ ಮುಖಾಮುಖಿ.!

ಹೊಸ ಸೇರ್ಪಡೆ

AS-Nada

ಅಂಬೇಡ್ಕರ್‌ ತುಳಿತಕ್ಕೊಳಗಾದವರ ದೇವರು:ಎ.ಎಸ್‌. ಪಾಟೀಲ

Amedkar

ಅಂಬೇಡ್ಕರ್‌ ಪಂಚಲೋಹದ ಪ್ರತಿಮೆ ಅನಾವರಣ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

Ambedkar Day at Yelandur

ಯಳಂದೂರು ವಿವಿದೆಡೆ ಅಂಬೇಡ್ಕರ್‌ ದಿನ

BJP

ಬಿಜೆಪಿ ಲೀಡರ್ ಎಕ್ಸಿಟ್‌: ಕಾಂಗ್ರೆಸ್‌ ರೀ ಎಂಟ್ರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.