Udayavni Special

ಲವ್‌ ಲೆಟರ್‌ ಮತ್ತು ಗ್ರಾಮರ್‌


Team Udayavani, May 22, 2018, 6:00 AM IST

5.jpg

ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜಿಗೆ ಕಾಲಿಟ್ಟಾಗ ಅದೊಂದು ಹೊಸ ಅನುಭವ. ದಿನಾ ಹಾಕುತ್ತಿದ್ದ ಯೂನಿಫಾರ್ಮ್ನಿಂದ ಬಣ್ಣಬಣ್ಣದ ಡ್ರೆಸ್‌ಗೆ ಉಡುಪು ಬದಲಾದಂತೆ ಮನಸ್ಸಿನಲ್ಲೂ ಭಾವನೆಗಳಿಗೆ ಹೊಸ ಹೊಸ ಬಣ್ಣ ಗಳು. ಭಾರದ ಚೀಲ ಬಿಟ್ಟು ಒಂದೆರಡು ನೋಟ್‌ ಬುಕ್ಕು ಹಿಡಿದು ಓಡಾಡುವಾಗ  ಕಾಲೇಜು ಸ್ಟೂಡೆಂಟ್‌ ಆದ ಪುಳಕ. ಕಾಲೇಜೆಂದರೆ ಹೊಸಲೋಕದ ಜತೆ ಪ್ರೇಮಲೋಕವೇ. ಹರೆಯದ ಪ್ರಭಾವದಿಂದಲೋ ಏನೋ ಕಣ್ಣಿಗೆ ಕಂಡವರೆಲ್ಲಾ ಹೀರೋ-ಹೀರೋಯಿನ್‌! ತಮಗಿಷ್ಟವಾದವರ ಮಾತು, ನಗು, ಕಣ್ಣ ಹೊರಳು ಎಲ್ಲವೂ ಚೆಂದ! ತಲೆತಗ್ಗಿಸಿ ಸರಸರ ನಡೆವ ಹುಡುಗಿಯರನ್ನು ಕಂಡೊಡನೆ ಚಲನಚಿತ್ರ ಗೀತೆಗಳ ಸುರಿಮಳೆ. ಮತ್ತೂ ಕೆಲವು ಬುದ್ಧಿವಂತರಿಂದ ಆಶುಕವಿತ್ವದ ವಾಚನವೂ ನಡೆಯುತ್ತಿತ್ತು. ಹೊರಗೆ ಹೆದರಿದರೂ ಹುಡುಗಿಯರಿಗೆ ಒಳಗೊಳಗೇ ನಗು ಮತ್ತು ಹೆಮ್ಮೆ. ನಿಜಕ್ಕೂ ಅದೊಂದು ರಮ್ಯ ಚೈತ್ರ ಕಾಲ.

 ಆಗಲೂ ಕಾಲೇಜು ಕಲಿಕೆ ಕಷ್ಟವೇ. ಆದರೆ  ಈಗಿನಂತೆ ಮೊದಲನೆಯ ಪಿಯುಸಿಯಿಂದಲೇ ಹಗಲು-ರಾತ್ರಿ ನಿದ್ದೆಗೆಟ್ಟು ಓದುವ ಪರಿಪಾಠವಿರಲಿಲ್ಲ. ಮೊದಲ ವರ್ಷ ಎಲ್ಲರೂ ಸಿನಿಮಾ ಟಾಕೀಸಿಗೆ ಸುತ್ತಿ, ಪಾನಿಪೂರಿ ತಿಂದು, ಕಾಲೇಜಿಗೆ ಆಗಾಗ್ಗೆ ಚಕ್ಕರ್‌ ಹೊಡೆದು ಅಲ್ಪ ಸ್ವಲ್ಪ ಓದಿಕೊಂಡು  ಹಾಯಾಗಿರುತ್ತಿದ್ದರು. ಕಾಲೇಜಿನ ಲೆಕ್ಚರರ್ ಕೂಡಾ, ಪಾಪ, ಆಮೇಲೆ ಕಷ್ಟ ಪಡುವುದು ಇದ್ದೇ ಇದೆ. ಈ ವರ್ಷ ಹಾಯಾಗಿರಲಿ ಎಂದೇ ಕನಿಕರ ತೋರಿಸುವಷ್ಟು ಉದಾರಿಗಳಾಗಿದ್ದರು! ಹೀಗಾಗಿ ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತ ಸಂತಸದ ಸಮಯ ಅದಾಗಿತ್ತು.

 ಕಾಲೇಜಿಗೆ ಬಂದರೂ ಭಾಷಾ ಕಲಿಕೆ ಕಡ್ಡಾಯವಾಗಿತ್ತು. ಹೀಗಿದ್ದೂ ಸೈನ್ಸ್‌  ವಿದ್ಯಾರ್ಥಿಗಳ ಪೂರ್ತಿ ಗಮನ ಮೆಡಿಕಲ್‌, ಎಂಜಿನಿಯರಿಂಗ್‌ ಸೀಟು ಗಳಿಸಲು ಸಹಾಯ ಮಾಡುವ ವಿಷಯಗಳತ್ತಲೇ! ಭಾಷಾಕಲಿಕೆ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎನ್ನುವ ಮನೋಭಾವ. ಕಾಲೇಜಿನ ಎರಡೂ ವರ್ಷಗಳಲ್ಲಿ ಕನ್ನಡವನ್ನು ಮನಸ್ಸಿಟ್ಟು ಕೇಳಿದವರು, ಕಲಿತವರು ಕಡಿಮೆಯೇ. ಕನ್ನಡ ಪೀರಿಯೆಡ್‌ ಇದ್ದಾಗ ಹುಡುಗಿಯರು ವಿಧಿ ಇಲ್ಲದೇ ಸುಮ್ಮನೆ ಅರೆತೆರೆದ ಕಣ್ಣುಗಳಿಂದ ಪಾಠ ಕೇಳಿದರೆ, ಹುಡುಗರಂತೂ ಹಿಂದಿನ ಬೆಂಚಿನಲ್ಲಿ ಕುಳಿತು ನಾನಾ ವಿಧದ ಕರಕುಶಲ ಕೆಲಸ ಮಾಡುತ್ತಿದ್ದರು. ಚೂಪಾದ ಬ್ಲೇಡಿನಲ್ಲಿ ಬೆಂಚಿನ ಮೇಲೆ ನಾನಾ ವಿನ್ಯಾಸ (ಹೃದಯ,ಬಾಣ,ಕಣ್ಣು, ಮರ..) ಕೆತ್ತುತ್ತಿದ್ದರು. ಸಾದಾ ಪೇಪರ್‌ನಿಂದ ರಾಕೆಟ್‌, ದೋಣಿ, ಹಕ್ಕಿ ಹೀಗೆ ಒರಿಗಾಮಿಯ ಪ್ರಯತ್ನವೂ ನಡೆಯುತ್ತಿತ್ತು. ಮತ್ತೆ ಕೆಲವರು ಉಗುರು ಕತ್ತರಿಸಿ, ಪೆನ್ನಿನಲ್ಲಿ ಕೈಮೇಲೆ ವಿವಿಧ ಹಚ್ಚೆ ಬರೆದುಕೊಂಡು ಸೌಂದರ್ಯ ವರ್ಧಿಸಿಕೊಳ್ಳುವ ಕ್ರಿಯೆಯಲ್ಲಿ ನಿರತರಾಗುತ್ತಿದ್ದರು. 

    ಅದೊಂದು ದಿನ, ಕನ್ನಡ ಕ್ಲಾಸಿಗೆ ಬಂದವರು ಹೊಸ ಯುವ ಲೆಕ್ಚರರ್‌. ಎಂದಿನಂತೆ ಹಿಂದಿನ ಬೆಂಚಿನಲ್ಲಿ ಎಲ್ಲಾ ರೀತಿಯ ಕೆಲಸ ಕಾರ್ಯ ನಡೆದಿತ್ತು. ಪ್ರತಿಯೊಬ್ಬರೂ ತಂತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು. ಲೆಕ್ಚರರ್‌ ಪಾಠ ಮಾಡುತ್ತಾ ಹಿಂದಿನ ಬೆಂಚಿನ ಬಳಿ ಸಾಗಿದರು. ಕೆಲವರು ಎಚ್ಚೆತ್ತು ಕೊರೆಯುವಿಕೆ, ಪೇಪರ್‌ ಮಡಚುವಿಕೆಯನ್ನು ನಿಲ್ಲಿಸಿದರು. ಆದರೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಮರಿಸಾಹಿತಿಗಳಿಗೆ ಹೊರ ಜಗತ್ತಿನ ಅರಿವೇ ಇಲ್ಲ. ಮನೋ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ಅವರು ಕಳೆದೇ ಹೋಗಿದ್ದರು. ನಮ್ಮ ಲೆಕ್ಚರರ್‌ ಯಾರಿಗೂ ಬೈಯ್ಯದೇ, ಅರ್ಧ ಬರೆದಿದ್ದ ನಾಲ್ಕೈದು ಪತ್ರಗಳನ್ನು ಕೈಗೆತ್ತಿಕೊಂಡರು. ಮನಸ್ಸಿನಲ್ಲೇ ಓದಿದರು.

 ನಂತರ ಹುಡುಗರನ್ನು ಉದ್ದೇಶಿಸಿ, “ಅಲಯ್ನಾ! ನಾನೂ ನಿಮ್ಮ ಹಾಗೆ ಪ್ರೇಮ ಪತ್ರ ಬರೆದವನೇ. ಈಗ ಬರೆಯದೇ ಇನ್ಯಾವಾಗ ಬರೆಯೋದು? ಆದರೆ ಬರೆದರೆ ಹೇಗಿರಬೇಕು ಗೊತ್ತಾ, ಓದಿದ ಹುಡುಗಿ ನಿಮ್ಮನ್ನು ಮೆಚ್ಚಲಿ ಬಿಡಲಿ, ತನಗೆ ಇಷ್ಟು ಚೆಂದದ ಪತ್ರ ಬರೆದಿದ್ದಾನಲ್ಲ ಅಂತ ನಿಮ್ಮನ್ನು ಸಾಯುವವರೆಗೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇದೆಂಥದ್ದು ನೀವು ಬರೆದಿರೋದು? ಹುಡುಗಿಯ ಹೆಸರನ್ನೇ ತಪ್ಪಾಗಿ ಬರೆದಿದ್ದೀರಿ. ಇದನ್ನು ಓದುತ್ತಿದ್ದಂತೆ ಸಿಟ್ಟೇರಿ, ಹುಡುಗಿ ಪತ್ರ ಬಿಸಾಡೋದು ಗ್ಯಾರಂಟಿ. ಲವ್‌ ಲೆಟರ್‌ಗೂ ಗ್ರಾಮರ್‌ ಬೇಕು. ಪ್ರೇಮ ಅಂದ್ರೆ ಮನದ ಮಾತು, ಬರೀ ನಿಮ್ಮ  ಮನಸ್ಸಿಗೆ ಅನ್ನಿಸಿದರೆ ಸಾಲಲ್ಲ. ಅದನ್ನು ತೋರಿಸೋಕೆ ಭಾಷೆ ಬೇಕು. ನಮ್ಮ ಕನ್ನಡದಲ್ಲಿ ಎಷ್ಟು ಚೆಂದದ ಪ್ರೇಮ ಕವನಗಳು, ಕವಿತೆಗಳು, ಪತ್ರಗಳು ಇವೆ ಗೊತ್ತಾ? ಅದನ್ನಾದ್ರೂ ಓದ್ರಿ, ಆಮೇಲೆ ಸರಿಯಾಗಿ ವಿತ್‌ ಗ್ರಾಮರ್‌, ಲವ್‌ ಲೆಟರ್‌ ಬರೀರಿ. ಈ ಥರಾ ಬರೆದ್ರೆ ನಿಮ್ಮ ಸೋ ಕಾಲ್ಡ್‌ ಲವ್ವು ಓಡೋಗೋದು ಗ್ಯಾರಂಟಿ’ ಎಂದರು. 

ಪಾಪ, ಹಿಂದಿನ ಬೆಂಚಿನ ಹುಡುಗರು ಈ ಅನಿರೀಕ್ಷಿತ ಮಾತಿನಿಂದ ಪೆಚ್ಚಾದರು. ಅಂತೂ ಆ ದಿನದ ಕ್ಲಾಸ್‌ ಮುಗಿಯಿತು. ಮರುದಿನ ನಮ್ಮ ಲೈಬ್ರೇರಿಯನ್‌, ಅದೇನು ಈ ಬ್ಯಾಚಿಗೆ ಇದ್ದಕ್ಕಿದ್ದಂತೆ ಕನ್ನಡ ಪುಸ್ತಕ ಅಂದ್ರೆ ಎಲ್ಲಿಲ್ಲದ ಆಸಕ್ತಿ. ಕೆ.ಎಸ್‌.ನ, ಕುವೆಂಪು, ಬೇಂದ್ರೆ ಹೀಗೆ ಕವನ ಸಂಕಲನ ಕೇಳ್ತಾರಪ್ಪ. ಒಟ್ಟಿನಲ್ಲಿ ಇವರಿಂದ ಕನ್ನಡ ಉಳಿಯುತ್ತೆ ಎಂದು ಖುಷಿಪಡುತ್ತಿದ್ದರು. ಹೊಸ ಲೆಕ್ಚರರ್‌ರ ಮಾತು ಪ್ರಭಾವ ಬೀರಿತ್ತು ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ? 

ಡಾ.ಕೆ.ಎಸ್‌.ಚೈತ್ರಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು

Camel-Double-Hump

LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಲ್ತ್‌ ಟಿಪ್ಸ್‌ : ಕಿತ್ತಳೆಯ ಉಪಯೋಗ

ಹೆಲ್ತ್‌ ಟಿಪ್ಸ್‌ : ಕಿತ್ತಳೆಯ ಉಪಯೋಗ

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

ಖುಷಿ ಪಡುವ ಕ್ಷಣಗಳು ಬೇಗ ಬರಲಿ..

ಖುಷಿ ಪಡುವ ಕ್ಷಣಗಳು ಬೇಗ ಬರಲಿ..

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು

Camel-Double-Hump

LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.