ಹಳೇ ನೆನಪುಗಳ ರಥೋತ್ಸವ

Team Udayavani, May 14, 2019, 6:00 AM IST

ಅಡ್ಮಿನ್‌ ಸ್ಟೇಷನ್ನಿನ ಕತೆಗಳು
ವಾಟ್ಸಾಪ್‌ ಗ್ರೂಪ್‌ : ಸಹಪಾಠಿಗಳು
ಗ್ರೂಪ್‌ ಅಡ್ಮಿನ್‌ : ಬೀರಪ್ಪ ಮತ್ತು ಇತರರು

ಹಳೇ ನೆನಪು ಅಂದ್ರೆ, ಬೆಣ್ಣೆ ಬಿಸ್ಕತ್ತು ಇದ್ದಂತೆ. ಸವಿದಷ್ಟೂ ಸವಿದು, ಸವಿದಾದ ಮೇಲೂ ಅದನ್ನು ಮೆಲುಕು ಹಾಕುವಂತೆ, ಈ ನೆನಪು ಕೂಡ. 2011ರಲ್ಲಿ ಹೈಸ್ಕೂಲ್‌ ಮುಗಿಸಿದ ನಾವೊಂದಿಷ್ಟು ಗೆಳೆಯರು ಸೇರಿಕೊಂಡು, “ಸಹಪಾಠಿಗಳು’ ಎಂಬ ಗ್ರೂಪ್‌ ತೆರೆದೆವು. ಇದರಲ್ಲಿ ಎಲ್ಲರೂ ಒಂದೊಂದು ಹುದ್ದೆಯಲ್ಲಿ ಇದ್ದಾರೆ. ಸೈನಿಕ, ಪೊಲೀಸ್‌, ರೈತ, ರಾಜಕಾರಣಿ… ಹೀಗೆ. ಈ ಗುಂಪಿನಲ್ಲಿ ಏನಿಲ್ಲ ಅಂದರೂ ದಿನಕ್ಕೆ 500- 600 ಸಂದೇಶಗಳು ರವಾನೆ ಆಗುತ್ತವೆ. ಹೈಸ್ಕೂಲಿನ ಕೀಟಲೆಗಳು, ಮೇಷ್ಟ್ರಿಂದ ಪೆಟ್ಟು ತಿಂದಿದ್ದು, ಹುಡುಗಿಯರನ್ನು ರೇಗಿಸಿದ್ದು, ಮೊದಲ ಕ್ರಶ್‌ನ ಮೆಲುಕು… ಇವನ್ನೆಲ್ಲ ಹಂಚಿಕೊಳ್ಳುವಾಗ ರಿವೈಂಡ್‌ ರಾಗ ನೆನಪಾಗುತ್ತದೆ. ಇಲ್ಲಿ ಅನೇಕರ ಬದುಕಿನ ರೂಪಗಳೇ ಬದಲಾಗಿವೆ. ಆಗ ಸೈಲೆಂಟ್‌ ಇದ್ದವನು, ಈಗ ಫ್ಲರ್ಟ್‌ನಂತೆ ಕಾಣಿಸುತ್ತಾನೆ. ಅವತ್ತು ತಂಟೆ ಮಾಡಿ, ಮೇಷ್ಟ್ರಿಂದ ಕಜ್ಜಾಯ ತಿಂದವ ಇಂದು ಗಂಭೀರ, ಒಳ್ಳೆಯ ಮೆಸೇಜುಗಳನ್ನು ಕಳಿಸುತ್ತಾನೆ. ಕೆಲಸದೊತ್ತಡವನ್ನು ಹಗುರ ಮಾಡಿಕೊಳ್ಳುವ ಪ್ರಯತ್ನಗಳು ಈ ಗುಂಪಿನಲ್ಲಾಗುತ್ತದೆ. ಎಲ್ಲರೂ ಮುಂದಿನ ದೀಪಾವಳಿಯ ಜಾತ್ರೆಯಲ್ಲಿ ಭೇಟಿಯಾಗಲು ನಿರ್ಧರಿಸಿದ್ದೇವೆ. ಅಲ್ಲಿಯ ತನಕ ಹಳೆಯ ನೆನಪುಗಳದ್ದೇ ರಥೋತ್ಸವ.

ಬೀರಪ್ಪ ಡಿ. ಡಂಬಳಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ