ಬದುಕು ಬದಲಿಸಿದ ತಂದೂರಿ ಚಹಾ!
ಹೊಸಪೇಟೆ ಯುವಕರ ಸಾಹಸ
Team Udayavani, Apr 27, 2021, 5:40 PM IST
ಆಫೀಸ್ ನಲ್ಲಿ ದಿನಪತ್ರಿಕೆ ಓದುತ್ತಿದ್ದ ಮಲ್ಲಿಕಾರ್ಜುನ ಹೊಸಪಾಳ್ಯ- ‘ ಹೊಸಪೇಟೆಯಲ್ಲಿ ತಂದೂರಿ ಚಾಯ್ ‘ ಎಂದು ಉದ್ಗರಿಸಿದರು. ತಂದೂರಿ ಚಿಕನ್, ತಂದೂರಿರೊಟ್ಟಿ ನಮಗೆ ಗೊತ್ತಿತ್ತು ‘ ಇದ್ಯಾವುದು ತಂದೂರಿಚಾಯ್’ ಎಂದು ಅವರತ್ತ ನೋಡಿದೆವು. ದಿನಪತ್ರಿಕೆಯ ಜತೆ ಬಂದಿದ್ದ ಜಾಹೀರಾತಿನ ಕರಪತ್ರಅವರ ಕೈಯಲ್ಲಿತ್ತು. ಸರಿ, ಸಂಜೆಯ ಟೀಗೆ ಇದೇಅಂಗಡಿಗೆ ಹೋಗುವುದೆಂದುನಿರ್ಧಾರವಾಯಿತು. ಇಳಿ ಸಂಜೆ ನಾಲ್ಕರ ಹೊತ್ತಿಗೆನಮ್ಮ ಆಫೀಸಿನ ದಂಡು “ಹಂಪಿ ಕೆಫೆ ‘ ಅಂಗಡಿಯಮುಂದಿತ್ತು. ಅರ್ಧ ತೆರೆದಿದ್ದ ಬಾಗಿಲಿನ ಒಳಗೆ, ನೆಲದ ಮೇಲೆ ಚಾಪೆ ಹಾಸಿಕೊಂಡು ವಿರಮಿಸುತ್ತಿದ್ದ ಯುವಕನೊಬ್ಬ ಗಡಿಬಿಡಿಯಿಂದ ಎದ್ದು- ‘ಬನ್ನಿ! 4.30ಕ್ಕೆ ಅಂಗಡಿ ತೆರೆಯೋದು’ ಎಂದು ಸ್ವಾಗತಿಸಿದ.
ಪಾಪ್ ಗಾಯಕನ ಥರ ಕಾಣುತ್ತಿದ್ದ ಇನ್ನೊಬ್ಬ ಯುವಕ ಮೈ, ಕೈ ಮಸಿ ಮಾಡಿಕೊಂಡು ಚೀಲದಿಂದಇದ್ದಿಲು ತೆಗೆಯಲು ಶುರುಮಾಡಿದ. ಅವರು ಟೀಮಾಡುವುದನ್ನು ನೋಡುತ್ತಾಕೂರುವ ಕಾಯಕ ನಮ್ಮದಾಯಿತು. ಮಸಾಲೆ ಟೀಯನ್ನು ಕೆಂಪಗೆಕಾದ ಮಣ್ಣಿನ ಕುಡಿಕೆಗೆ ಹಾಕಿ, ಬುರುಗು ತುಂಬಿದಚಹಾವನ್ನು ಇನ್ನೊಂದು ಮಣ್ಣಿನ ಲೋಟಕ್ಕೆ ಹಾಕಿ ಕೈಗಿತ್ತರು. ಅದರ ಮಣ್ಣಿನ ವಾಸನೆ , ಹೊಗೆಯ ಘಮಲು ನಮ್ಮನ್ನುಮಂತ್ರಮುಗ್ಧರನ್ನಾಗಿಸಿತು. ಇನ್ನೊಂದು ಟೀ ಹಾಕಿಸಿಕೊಳ್ಳಲು ಎಲ್ಲರೂ ಲೋಟ ಮುಂದು ಮಾಡಿದರು!
ಕೋವಿಡ್ ಕಲಿಸಿದ ಪಾಠ: ಹೊಸಪೇಟೆಗೆತಂದೂರಿ ಚಹಾ ಪರಿಚಯಿಸಿದ ಕೀರ್ತಿ, ಪೃಥ್ವಿಮತ್ತು ಕೀರ್ತನ್‌ರದು. ಈ ಚಹಾದಂಗಡಿಶುರುವಿಗೊಂದು ಆಸಕ್ತಿದಾಯಕ ಹಿನ್ನಲೆ ಇದೆ.ಪೃಥ್ವಿ ಮತ್ತು ಕೀರ್ತನ್ ಬಾಲ್ಯ ಸ್ನೇಹಿತರು. ವಿಜ್ಞಾನದಲ್ಲಿ ಪದವಿ ಪಡೆದ ಪೃಥ್ವಿ, ಬೆಂಗಳೂರಿನಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು.ಎಂಜಿನಿಯರಿಂಗ್ ಮುಗಿಸಿದ ಕೀರ್ತನ್‌ಮೈಸೂರಿನ ಎಲ್ ಅಂಡ್ ಟಿ ಸೇರಿದರು.ವಾರಪೂರ ದುಡಿತ, ವಾರಾಂತ್ಯ ಒಂದಷ್ಟು ಸುತ್ತಾಟ ಇದೇ ಅವರ ಬದುಕಾಗಿತ್ತು. ಬಾಳಬಂಡಿ ಏಕತಾನತೆಯಿಂದ ಸಾಗುತ್ತಿರುವ ಹೊತ್ತಲ್ಲೇಕೋವಿಡ್ ಬಂತು; ಲಾಕ್ ಡೌನ್‌ಘೋಷಣೆಯಾಯ್ತು. ಹೊಸಪೇಟೆಗೆವಾಪಸಾದ ಪೃಥ್ವಿ ಮತ್ತು ಕೀರ್ತನ್ ಮತ್ತೆಊರು ಬಿಟ್ಟು ಹೋಗುವುದು ಬೇಡ ಎಂದು ನಿರ್ಧರಿಸಿದರು.
ಸ್ಥಳೀಯವಾಗಿ ಏನೆಲ್ಲಾ ವ್ಯವಹಾರ ಮಾಡಬಹುದೆಂದು ಹುಡುಕಾಟಶುರುವಾಯ್ತು. ಪೃಥ್ವಿಯವರ ಕುಟುಂಬದ ಹಿರಿಯರು ಕರಾವಳಿ ಮೂಲದವರು. ಅವರ ತಂದೆಗೆಹೋಟೆಲ್ ನಡೆಸಿದ ಅನುಭವ ಇತ್ತು. ಸರಿ, ಹೋಟೆಲ್ ಉದ್ಯಮ ಶುರುಮಾಡುವುದು ಎಂದುಕೊಂಡರು. ಆದರೆ ಕೋವಿಡ್ ನಿಂದ ತತ್ತರಿಸಿದ್ದ ಹೋಟೆಲ್ ಉದ್ಯಮದಲ್ಲಿ ತುಂಬಾ ರಿಸ್ಕ್ ಇತ್ತು. ಕೀರ್ತನ್‌ಮೈಸೂರಿನಲ್ಲಿದ್ದಾಗ ತಂದೂರಿ ಚಹಾ ಅಂಗಡಿಗೆಸದಾ ಭೇಟಿ ಕೊಡುತ್ತಿದ್ದರು. ಅದರ ರುಚಿಗೆಮಾರು ಹೋಗಿದ್ದರು.ಅದನ್ನೇ ಮನಸಲ್ಲಿ ಇಟ್ಟು ಕೊಂಡು- “ತಂದೂರಿ ಚಹಾ’ದ ಅಂಗಡಿಶುರು ಮಾಡೋಣ. ಹಂಪಿಗೆ ಬರುವ ಪ್ರವಾಸಿಗರನ್ನೂ ಸೆಳೆಯಬಹುದು. ದೊಡ್ಡಬಂಡವಾಳ ಕೂಡ ಬೇಕಾಗಲ್ಲ. ನಮ್ಮಉಳಿತಾಯದ ಹಣದಲ್ಲೇ ವ್ಯಾಪಾರಆರಂಭಿಸಬಹುದು ಎಂದು ಪೃಥ್ವಿಗೆ ಹೇಳಿದೆ.ಅವನೂ ಒಪ್ಪಿದ’- ತಂದೂರಿ ಚಹಾ ಅಂಗಡಿಯಕಲ್ಪನೆ ಮೊಳಕೆಯೊಡೆದ ಬಗೆಯನ್ನು ಕೀರ್ತನ್ ನೆನಪಿಸಿಕೊಳ್ಳುತ್ತಾರೆ.
ತಂದೂರಿ ಚಹಾ ಸಿದ್ಧವಾದ ಬಗೆ: ತಂದೂರಿ ಚಹಾ ಅಂಗಡಿ ಶುರು ಮಾಡುವುದೆಂದುನಿರ್ಧಾರವೇನೋ ಆಯಿತು. ಆದರೆ ಅದಕ್ಕೆಬೇಕಾದ ಜ್ಞಾನ, ಪರಿಕರಯಾವುದೂ ಇರಲಿಲ್ಲ.ಅದಕ್ಕಾಗಿ ಹುಡುಕಾಟ ಶುರುವಾಯಿತು. ಕೋವಿಡ್ ಸಂಕಷ್ಟದ ಕಾಲವಾದ್ದದಿಂದ ಕೆಲಸ ಸುಲಭವಾಗಿರಲಿಲ್ಲ.ಪರಿಚಿತರ ನೆರವಿನಿಂದ ತಂದೂರಿ ಚಹಾ ಮಾಡಲುಬೇಕಾದ ಸಾಮಗ್ರಿ ಒಟ್ಟುಗೂಡಿಸಿದರು. ಚಹಾಮಾಡುವ ಬಗೆಯನ್ನು ಕಲಿತರು. ಹೊಸಪೇಟೆಯತಾಲೂಕು ಕಚೇರಿಯ ಮುಂಭಾಗದ ಗಲ್ಲಿಯ ಸಣ್ಣ ಅಂಗಡಿಯೊಂದನ್ನು ಬಾಡಿಗೆಗೆ ಪಡೆದರು.
ಅಂಗಡಿಗೆ ಬಣ್ಣ ಬಳಿವ, ಮಣ್ಣಿನ ಮಡಕೆಗಳಿಂದಶೃಂಗರಿಸುವ, ಅಂಗಡಿಯ ಲೋಗೊವಿನ್ಯಾಸಗೊಳಿಸುವ ಎಲ್ಲ ಕೆಲಸಗಳನ್ನು ಇವರಿಬ್ಬರೇ ಮಾಡಿದರು. ಫೆ.5 ರಂದು ಹಂಪಿ ಕೆಫೆ ಉದ್ಘಾಟನೆಗೊಂಡಿತು. ತಂದೂರಿ ಚಹಾ ಸವಿಯಲು ಸ್ಥಳೀಯರುಬರುತ್ತಿದ್ದಾರೆ. ಒಮ್ಮೆ ಇದರ ರುಚಿ ನೋಡಿದವರುಮತ್ತೂಮ್ಮೆ ಬರುವಾಗ ಮನೆಯವರನ್ನು, ಗೆಳೆಯರನ್ನು ಕರೆತರುತ್ತಿದ್ದಾರೆ. ದೊಡ್ಡ ಕುಡಿಕೆಯಪುಲ್ ಟೀ ಬೆಲೆ ರೂ. 25 ಅರ್ಧಕ್ಕೆ ರೂ.15. ಕೋವಿಡ್ ನಿಂದಾಗಿ ಪ್ರವಾಸಿಗರು ಹಂಪಿಗೆಬರುತ್ತಿಲ್ಲ. ಪ್ರವಾಸಿಗರು ಬರಲು ಶುರುವಾದರೆವ್ಯಾಪಾರ ಇನ್ನಷ್ಟು ವೃದ್ಧಿಸುತ್ತದೆ ಎನ್ನುವ ಆಶಯಈ ಯುವಕರದು. ಚಹಾದಂಗಡಿಯ ಎಲ್ಲಕೆಲಸಗಳನ್ನೂ ಇವರಿಬ್ಬರೇ ಮಾಡಿಕೊಳ್ಳುತ್ತಾರೆಎನ್ನುವುದು ಮತ್ತೂಂದು ವಿಶೇಷ.”ಲಾಕ್‌ಡೌನ್ ನಂತರ ಮಗನನ್ನು ಬೆಂಗಳೂರಿಗೆಕಳಿಸೋಕೆ ನಮಗೆ ಇಷ್ಟ ಇರಲಿಲ್ಲ. ಅವನು ಕೀರ್ತನ್‌ಜತೆ ಸೇರಿ ಚಹಾದಂಗಡಿ ಶುರು ಮಾಡಿದ್ದು ನಮಗೆಖುಷಿ ಕೊಡ್ತು’ ಎಂದು ಹೇಳುವಾಗ, ಪೃಥ್ವಿ ಯ ತಂದೆ ಲಕ್ಷ್ಮೀನಾರಾಯಣರ ಮೊಗದಲ್ಲಿ ಸಂತಸ ಅರಳುತ್ತದೆ.
ತಂದೂರಿ ಚಹಾದ ವಿಶೇಷತೆ :
ರೊಟ್ಟಿ ಸುಡುವ ತಂದೂರಿ ಥರದ ಒಲೆಯಲ್ಲಿ ಇದ್ದಿಲಿನಿಂದ ಬೆಂಕಿ ಮಾಡಲಾಗುತ್ತದೆ. ಅದರಲ್ಲಿ ಮಣ್ಣಿನ ಸಣ್ಣ ಕುಡಿಕೆಗಳನ್ನು ಕೆಂಪಗಾಗುವಂತೆಕಾಯಿಸುತ್ತಾರೆ. ವಿಶೇಷವಾಗಿ ತಯಾರಿಸಿದ ಮಸಾಲೆ ಚಹಾವನ್ನು ಕಾದ ಮಣ್ಣಿನಕುಡಿಕೆಗೆ ಸುರಿದರೆ, ಕೊತಕೊತ ಕುದಿದು ಬುರುಗು ಬರುತ್ತದೆ.ಅದನ್ನುಮತ್ತೂಂದು ಮಣ್ಣಿನ ಕುಡಿಕೆಗೆ ಹಾಕಿ ಗ್ರಾಹಕರಿಗೆ ನೀಡಲಾಗುತ್ತದೆ. ಚಹಾದಮಣ್ಣಿನ ಸ್ವಾದ ಎಂಥವರನ್ನೂ ಮರಳು ಮಾಡುತ್ತದೆ. ಮಧ್ಯ ಪ್ರಾಚ್ಯ ದೇಶಗಳಲ್ಲಿತಂದೂರಿ ಚಹಾ ಬಹು ಜನಪ್ರಿಯ. ಪ್ರಮೋದ್ ಬಣಕಾರ್ ಮತ್ತು ಅಮೋಲ್‌ರಾಜ್ ದಿಯಾ ಎಂಬ ಪೂನಾದ ಯುವಕರು ತಂದೂರಿ ಚಹಾವನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಕಂಡರು. ಇತ್ತೀಚಿನ ದಿನಗಳಲ್ಲಿ ಎಲ್ಲ ಪ್ರಮುಖ ನಗರಗಳಲ್ಲಿ ತಂದೂರಿ ಚಹಾದ ಅಂಗಡಿ ಕಾಣಸಿಗುತ್ತದೆ.
ಹಲವರಿಗೆ ಮಾದರಿ: ಕೋವಿಡ್ ಅವಾಂತರಕ್ಕೆ ಸಿಕ್ಕಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸಕಳೆದುಕೊಳ್ಳುವ, ಅರ್ಧ ಸಂಬಳದಲ್ಲಿ ಬದುಕುವಭಯದಲ್ಲೇ ದಿನ ದೂಡುತ್ತಿದ್ದಾರೆ. ಮಹಾನಗರಗಳಿಗೆ ವಲಸೆ ಹೋದ ಅಸಂಖ್ಯಾತಯುವಕ- ಯುವತಿಯರು ತಮ್ಮ ಊರುಗಳಿಗೆವಾಪಸಾಗಿದ್ದಾರೆ. ಮುಂದೇನು ಎಂಬ ಪ್ರಶ್ನೆಗೆಉತ್ತರ ಸಿಗದೆ ಕಂಗಾಲಾಗಿದ್ದಾರೆ. ಇಂಥಸಂದರ್ಭದಲ್ಲಿ, ಪೃಥ್ವಿ ಮತ್ತು ಕೀರ್ತನ್,ಹಳ್ಳಿಗಾಡಿನ ಮತ್ತು ಸಣ್ಣ ಪಟ್ಟಣಗಳ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾರೆ.ಕೋವಿಡ್ ತಂದ ಸಕಾರಾತ್ಮಕ ಬದಲಾವಣೆ ಇದು.ಮಾಹಿತಿಗಾಗಿ ಪೃಥ್ವಿ ( 9739052220)ಸಂಪರ್ಕಿಸಬಹುದು.
– ಚಿತ್ರ-ಲೇಖನ: ಜಿ. ಕೃಷ್ಣಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್’ ಜರ್ನಿ ಶುರು
ಮಣಿಪುರ: ಧಾರಾಕಾರ ಮಳೆಗೆ ಭಾರೀ ಭೂಕುಸಿತ-14 ಮಂದಿ ಸಾವು, 60 ಜನರು ಜೀವಂತ ಸಮಾಧಿ?
ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ
ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸಿದ್ದಾಪುರ (ಉ.ಕ.)