ರುಚಿತಾ ಕಾರಿಕೊಂಡ ಕತೆ…

ಅಡ್ಮಿನ್‌ ಸ್ಟೇಷನ್ನಿನ ಕತೆಗಳು

Team Udayavani, Apr 30, 2019, 6:20 AM IST

Josh-Admin

ನನ್ನ ತಂಗಿಯ ಮಗಳು ರುಚಿತಾ ಹರೆಯದ ಯುವತಿ. ಉತ್ಸಾಹದ ಬುಗ್ಗೆ. ಎಲ್ಲದರಲ್ಲಿಯೂ ಮುಂದೆ. ತನ್ನದೇ ವಾರಗೆಯ ಹುಡುಗಿಯರನ್ನು ಸೇರಿಸಿ ವಾಟ್ಸ್ಯಾಪ್‌ ಗ್ರೂಪ್‌ ಮಾಡಿದ್ದಳು. “ಯುವ ಅಡ್ಡಾ’ ಎಂದು ಆ ಗ್ರೂಪ್‌ಗೆ ಹೆಸರನ್ನೂ ಇಟ್ಟಿದ್ದಳು. ಈಕೆ ಅಪ್ಪಟ ಕನ್ನಡ ಪ್ರೇಮಿಯಾಗಿದ್ದರಿಂದ, ಆದಷ್ಟು ಕನ್ನಡದಲ್ಲಿಯೇ ಸಂದೇಶಗಳನ್ನು ಹಾಕಬೇಕೆಂದು ನಿಬಂಧನೆ ಹಾಕಿದ್ದಳು.

ಒಂದು ದಿನ ಬೆಳಗ್ಗೆ. ರುಚಿತಾ ತನ್ನ ಮೊಬೈಲನ್ನು ಕೈಗೆತ್ತಿಕೊಂಡು, ಯುವ ಅಡ್ಡಾದಲ್ಲಿನ ಮೆಸೇಜುಗಳ ಮೇಲೆ ಕಣ್ಣಾಡಿಸುತ್ತಿದ್ದಳು. ಎಲ್ಲವೂ ವಿಚಿತ್ರ ಮೆಸೇಜುಗಳೇ! “ರುಚಿತಾಗೆ ವಾಂತಿ ಆಯ್ತಂತೆ, ಹೌದೇನೇ?’, “ಏನೇ ರುಚಿ, ಕಾರಿಕೊಂಡೆಯಂತಲ್ಲ ಯಾಕೇ..?’, “ಆnಂ, ಒಂದೇ ಬಾರಿ ಆಗಿದ್ದೇನೇ? ಬಿಸಿ ನೀರಿಗೆ ನಿಂಬೆರಸ ಕಲಸಿ ಕುಡಿ, ಪಿತ್ತ ಆಗಿರಬೇಕು…’.

ರುಚಿತಾಗೆ ಭಯವಾಯಿತು. “ನನಗೇನೂ ಆಗಿಲ್ಲ… ಏನಿದರ ಅರ್ಥ?’ ಎಂದು ಮೆಸೇಜು ಕಳುಹಿಸಿ, ಮೇಲಿನಿಂದ ಕೆಳಕ್ಕೆ ಎಲ್ಲಾ ಸಂದೇಶಗಳನ್ನೂ ನೋಡುತ್ತಾ ಹೋದಳು. ಪಕ್ಕದ ಮನೆಯ ಶ್ರಾವಣಿ ಕಳಿಸಿದ ಸಂದೇಶ ಹೀಗಿತ್ತು…. “ನಿನ್ನೆ ಸಂಜೆ ರುಚಿತಾ ಕಾರಿಕೊಂಡಿದ್ದಾಳೆ’ ಅಂತ. ಅದಕ್ಕೇ ಇವರೆಲ್ಲರ ಪ್ರತಿಕ್ರಿಯೆ! ಆಗ ರುಚಿತಾಳಿಗೆ ಎಲ್ಲವೂ ಮನದಟ್ಟಾ­ಯಿತು…

“ಅಮ್ಮಾ ತಾಯಂದಿರಾ, ನಾನೇನೂ ಕಾರಿಕೊಂಡಿಲ್ಲ, ನಿನ್ನೆ ಸಂಜೆ ಹೊಸಾ ಫೋರ್ಡ್‌ ಕಾರು ಕೊಂಡಿದ್ದೇನೆ. ಈ ಮಹಾತಾಯಿ ಶ್ರಾವಣಿ ಕಾರ್‌, ಬದಲು ಕಾರಿ ಎಂದು ಟೈಪ್‌ ಮಾಡಿ ಸಂದೇಶ ಹಾಕಿದ್ದಾಳೆ’ ಎಂದು ಗ್ರೂಪ್‌ನಲ್ಲಿ ಗೀಚಿದಳು. ಮತ್ತರ್ಧ ಗಂಟೆಯಲ್ಲಿ ನಗುವ, ಹಂಗಿಸುವ ಇಮೇಜುಗಳಿಂದ ಅಡ್ಡಾ ಹೌಸ್‌ಫ‌ುಲ್‌ ಆಗಿತ್ತು!

ವಾಟ್ಸ್ಯಾಪ್‌ ಗ್ರೂಪ್‌ : ಎಸ್ಸೆಸ್ಸೆಲ್ಸಿ 2005 ಬ್ಯಾಚ್‌
ಗ್ರೂಪ್‌ ಅಡ್ಮಿನ್‌ : ಚಿದಾನಂದ

ನೀವು ವಾಟ್ಸ್ಯಾಪ್‌ ಗ್ರೂಪ್‌ನ ಅಡ್ಮಿನ್‌ ಆಗಿದ್ದರೆ, ನಿಮ್ಮ ಗುಂಪಿನಲ್ಲಿ ನಡೆದ ಪ್ರಸಂಗ, ನೀವು ಪಟ್ಟ ಫ‌ಜೀತಿಗಳನ್ನು ಸ್ವಾರಸ್ಯವಾಗಿ ನಮಗೆ ಬರೆದು ಕಳುಹಿಸಿ. ಪದಗಳ ಮಿತಿ 120-150 ಪದಗಳು.
ನಮ್ಮ ವಿಳಾಸ: [email protected]

– ಕೆ. ಲೀಲಾ ಶ್ರೀನಿವಾಸ, ಹರಪನಹಳ್ಳಿ

Ad

ಟಾಪ್ ನ್ಯೂಸ್

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಪ್ರೇಮಶೇಖರ್‌, ವಿಕಾಸ ಹೊಸಮನಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಪ್ರೇಮಶೇಖರ್‌, ವಿಕಾಸ ಹೊಸಮನಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

Train; ವಿಜಯಪುರ-ಮಂಗಳೂರು ರೈಲು ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ಅಕ್ಕಿ ಕೇಂದ್ರ ನೀಡಿದರೂ, ಸಾಗಾಟದ ಹಣ ನೀಡದ ರಾಜ್ಯ ಸರಕಾರ: ಸತೀಶ್‌ ಕುಂಪಲ ಆರೋಪ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಪರಮೇಶ್ವರ್‌

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.