ಬೌಂಡರಿ ಇಲ್ಲದ ಯವ್ವನ: ಹುಚ್ಚು ಯೌವ್ವನದ ಹತ್ತು ಮುಖಗಳು


Team Udayavani, Apr 11, 2017, 3:50 AM IST

10-josh-3.jpg

ಹದಿನಾರರ ವಯಸ್ಸು ಹುಚ್ಚು ಕೋಡಿ ಮನಸ್ಸು ಎಂದು ಕವನ ಬರೆದ ಕವಿಯ ಬಗೆಗೆ ನನಗೆ ತುಂಬಾ ಗೌರವ ಮೂಡುತ್ತಿದೆ. ಹದಿನಾರು! ಆಗ ತಾನೆ ಯವ್ವನದ ಕಟ್ಟೆ ಒಡೆದ ದಿನಗಳವು. ಒಡೆದು ಹರಿಯುವ ರಭಸ, ಆರ್ಭಟ ಮತ್ತು ಆಕ್ರಮಣ ಸ್ವರೂಪ ಜೀವಿತನದ ಇನ್ಯಾವ ಅವಧಿಯಲ್ಲೂ ಕಂಡುಬರಲು ಸಾಧ್ಯವೇ ಇಲ್ಲ. ಅದು ಎಲ್ಲದಕ್ಕೂ ಸೈ ಅನ್ನುವ ಕಾಲ. ಅವರ ಆ ಯವ್ವನದ ಹುಚ್ಚುತನವನ್ನು ಲೆಕ್ಕ ಹಾಕಿದವರು ಯಾರು? ಹಾಕದವರು ಯಾರು? ಏನೋ ಅಲ್ಲಿ ಇಲ್ಲಿ ನೋಡಿ, ತಿಳಿದು ತಿಣುಕಿ ಹುಚ್ಚುತನದ ಹತ್ತು ಮುಖಗಳನ್ನು ತಂದಿಟ್ಟಿದೀನಿ ನೋಡಿ. 

ಲವ್‌: ಪ್ರೀತಿಯನ್ನು ಯವ್ವನದ ಅಜನ್ಮ ಸಿದ್ಧ ಹಕ್ಕು ಎಂಬಂತೆ ಭಾವಿಸಿರುತ್ತಾರೆ. ತಾರುಣ್ಯದಲ್ಲಿ ಕತ್ತೆಯೂ ಸುಂದರವಾಗಿ ಕಾಣುತ್ತಂತೆ! ವಯಸ್ಸು ಮತ್ತು ಹಾರ್ಮೋನ್‌ಗಳ ಕಾಟದಿಂದ ಅವನು ಅವಳ ಕಡೆ, ಅವಳು ಇವನು ಕಡೆ ಬಂದು ಬೀಳುತ್ತಾರೆ. ಲವೊÌà ಮತ್ತೂಂದೋ ಗೊತ್ತಿಲ್ಲ, ಹುಡುಗ ಹುಡುಗಿಗೆ ಅವರ ಮೇಲೆ ಕಂಟ್ರೋಲೇ ಇರೋದಿಲ್ಲ. ಲವ್‌ನ ಅಮಲು ಯಾವ ಪರಿ ಏರಿರುತ್ತದೆಂದರೆ ಪ್ರಾಣ ಕೊಡಲೂ ಮರು ಮಾತಿಲ್ಲದೆ ರೆಡಿಯಾಗಿ ಬಿಡುತ್ತಾರೆ. ಪ್ರೀತಿಯು ಯವ್ವನದ ಬಲವೂ ಹೌದು, ದೌರ್ಬಲ್ಯವೂ ಹೌದು. 

ಕಾಲೇಜು: ಹತ್ತನೇ ತರಗತಿ ಪಾಸ್‌ ಮಾಡಿ, ಕಾಲೇಜಿನ ಮೆಟ್ಟಿಲು ಹತ್ತಿ ಬಿಡುತ್ತಾರೆ. ಶಿಕ್ಷಕರ ಬೆತ್ತದ ಆಚೆ ಈಚೆಯೇ ದಿನ ಕಳೆದಿದ್ದ ಇವರಿಗೆ ಅದು ಸ್ವತಂತ್ರ ಲೋಕ. ತಾವು ದೊಡ್ಡವರಾಗಿದ್ದೇವೆ ಎಂಬ ಭಾವ. ಅವು ಅವರ ಬದುಕಿನ ಅಮೃತಕ್ಷಣಗಳು. ಓದುವವರು, ಓದದೇ ಇರುವವರು, ಅನೇಕ ಪ್ರಯೋಗಗಳಿಗೆ ಒಡ್ಡಿಕೊಳ್ಳುವವರು, ತರೆಲ ಮಾಡುವವರು, ಲಾಸ್ಟ್‌ ಬೆಂಚಿನವರು, ಹುಡುಗಿಯರ ಹಿಂದೆ ಸುತ್ತುವವರು, ಟೈಂಪಾಸ್‌ನವರು ಎಲ್ಲರನ್ನೂ ತಾಯಿಯಂತೆ ಸಾಕುತ್ತದೆ ಈ ಕಾಲೇಜು. 

ಜೋಶ್‌: ನೋ ಫೀಲಿಂಗ್‌, ನೋ ಟಿಯರ್‌! ಬರೀ ಜೋಶ್‌. ಇದು ಯವ್ವನದ ಹೆಗ್ಗುರುತು. ಕನಸುಗಳ ಮೂಟೆ ಇವರು. ಓದಿದ್ದಕ್ಕಿಂತ ಎಂಜಾಯ್‌ಮೆಂಟ್‌ಗೆ ಪ್ರಥಮ ಸ್ಥಾನ ಈ ಏಜ್‌ನಲ್ಲಿ. ಓದು ಏನಿದ್ದರೂ ಎರಡನೇ ಸ್ಥಾನ. ಪ್ರತಿಯೊಂದರಲ್ಲೂ ಮಜಾ ಹುಡುಕುವ ಪ್ರಯತ್ನ. ಟ್ರಿಪ್‌, ಟ್ರೆಕಿಂಗ್‌, ಲಾಂಗ್‌ಡ್ರೆ„ವ್‌, ಡೇಟಿಂಗ್‌, ಚಾಟಿಂಗ್‌, ರ್ಯಾಗಿಂಗ್‌, ಲೈನಿಂಗ್‌ ಇವರ ಮೂಲಭೂತ ಕರ್ತವ್ಯಗಳು. ಅದರಲ್ಲಿ ಬದುಕಿನ ಸಂತಸವನ್ನು ಉರಿದು ಮುಕ್ಕಿಬಿಡುತ್ತಾರೆ. ಜೋಶ್‌ ಯವ್ವನದ ಒಂದು ಸಿಂಬಲ್‌. 

ಫೇಲ್‌ ಆ್ಯಂಡ್‌ ಲಾಸ್ಟ್‌ಬೆಂಚ್‌: ಇವು ಯವ್ವನದ ಎರಡು ದೊಡ್ಡ ಐಕಾನ್‌ಗಳು. 98 ಅಂಕ ತೆಗೆಯುವವನನ್ನು ವೇಸ್ಟ್‌ ಬಾಡಿ ಅಂತ ಕರೆಯುವುದು ಅಲ್ಲಿ ಸಾಮಾನ್ಯ. ಲಾಸ್ಟ್‌ ಬೆಂಚೇ ಅವರ ಬದುಕಿನ ಅಡ್ಡಾ. ಫೇಲ್‌ ಅವರ ಟ್ರಂಪ್‌ ಕಾರ್ಡ್‌. ಸದಾ ಒಂದೆರಡು ಸಬೆjಕ್ಟ್ ಬಾಕಿ ಉಳಿಸಿಕೊಳ್ಳುವುದೇ ಒಂದು ಲಕ್ಷಣ ಅವರಿಗೆ. ಐದಾರೂ ವರ್ಷದ ಕಾಲೇಜ್‌ ಲೈಫ್ ಅನ್ನು ಖುಷಿಯಾಗಿ ಏನೂ ಕಳೆದುಕೊಂಡಿಲ್ಲವೇನೋ ಎನ್ನುವಂತೆ ಹ್ಯಾಪಿಯಾಗಿ ಮುಗಿಸಿಬಿಡುತ್ತಾರೆ. 

ಸೋಮಾರಿತನವೆಂಬ ದಿವ್ಯ ಮಂತ್ರ: ಹೌದು ಇವರು ಪಕ್ಕಾ ಸೋಮಾರಿಗಳು. ಒಂದಿಷ್ಟು ಡ್ರೆಸ್‌ ಸೆನ್ಸ್‌ ರೂಢಿಸಿಕೊಂಡಿರುತ್ತಾರಾದರೂ ಕೆಲವೊಂದಕ್ಕೆ ಮಾತ್ರ ಸಕ್ರಿಯವಾಗಿ ಉಳಿದಿದ್ದಕ್ಕೆಲ್ಲಾ ಉದಾಸೀನ. ಅವರ ಖಾಸಗಿ ರೂವåನ್ನು ಒಮ್ಮೆ ಹೋಗಿ ನೋಡಿ. ಅಲ್ಲಿರುವ ಅಸ್ತವ್ಯಸ್ತತೆ ಅವರ ಸೋಮಾರಿತನವನ್ನು ತೆರೆದಿಡುತ್ತದೆ. ಕೂತು ಗಂಟೆಗಟ್ಟಲೇ ಓದುವುದು ಒಂದು ಅಪರಾಧ ಎಂಬ ಭಾವನೆ ಅವರದು. ಯವ್ವನದ ಸರ್ವಶಕ್ತಿಯನ್ನು ಒಂದೆರಡು ಕ್ಷೇತ್ರಕ್ಕೆ ಧಾರೆಯೆರೆದು ಉಳಿದ ಕಡೆ ತಿರುಗಿಯೂ ನೋಡುವುದಿಲ್ಲ. 

ಚಟ ಪಾಠಗಳು: ಕ್ಷಮಿಸಿ ಹವ್ಯಾಸಗಳ ಬಗ್ಗೆ ಹೇಳುತ್ತಿಲ್ಲ, ಅವರ ಚಟಗಳ ಬಗ್ಗೆ ಹೇಳುತ್ತಿದ್ದೇನೆ. ತಾವು ದೊಡ್ಡವರಾಗಿದ್ದೇವೆ ಎಂದು ತೋರಿಸಿಕೊಳ್ಳಲು ಏನೋ ಅಡ್ಡ ಚಟಗಳಿಗೆ ಮುಖ ತೋರಿಸಲು ಆರಂಭಿಸುತ್ತಾರೆ. ಕದ್ದು ಸಿಗರೇಟ್‌ ಸೇದುವುದು, ಮರೆಮಾಡಿ ಕುಡಿಯಲು ಆರಂಭಿಸುವುದು, ಇವೆರಡೇ ಅಲ್ಲವೆನ್ನುವಂತೆ ಹೊಸ ಚಟಗಳಿಗೆ ಯತ್ನಿಸುವುದು ಕೆಟ್ಟ ಚಾಳಿ.  

ಹೈಲು, ಮೊಬೈಲ್‌: ಗರ್ಲ್ಫ್ರೆಂಡ್‌, ಬಾಯ್‌ಫ್ರೆಂಡ್‌ ಇಲ್ಲದ ಹುಡುಗ ಹುಡುಗಿಯರು ಬೇಕಾದರೆ ಕಾಣಸಿಗುತ್ತಾರೆ. ಆದರೆ ಮೊಬೈಲ್‌ ಇಲ್ಲದ ಯುವಕರು ಇಲ್ಲವೇ ಇಲ್ಲವೇನೊ!? ಇಲ್ಲಿ ಮೊಬೈಲ್‌ ಬಳಸುವುದನ್ನು ನಿಷೇಧಿಸಲಾಗಿದೆ ಎಂಬ ಬೋರ್ಡ್‌ನ ಕೆಳಗೆ ಬೇಕು ಅಂತಲೇ ಹಲೋ ಅಂತ ಮೊಬೈಲ್‌ನಲ್ಲಿ ಮಾತಾಡೋಕೆ ಆರಂಭಿಸುತ್ತಾರೆ. ತಮ್ಮ ಟೆಕ್ಸ್ಟ್ಬುಕ್‌ಗಿಂತ ಫೇಸ್‌ಬುಕ್‌ ಅನ್ನು ಜಾಸ್ತಿ ಓದುತ್ತಾರೆ. ಆ ಚಾಟ್‌, ವಿ ಚಾಟ್‌ ಅಂತ 24 ಗಂಟೆಯೂ ಅದರಲ್ಲೇ ಮುಳುಗಿರುತ್ತಾರೆ. 

ಸಿನಿಮಾ, ಹಿರೋಯಿಸಂ: ಯುವಕರಿಗೆ ಸಿನಿಮಾ ರಸಗವಳ. ಅದೊಂದು ಅವರಿಗೆ ಭಗವದ್ಗೀತೆ. ನೆಚ್ಚಿನ ನಾಯಕ ಚಿತ್ರಬಿಡುಗಡೆ ದಿನ. ಕಾಲೇಜಿಗಿಂತ ಥಿಯೇಟರ್‌ ಬಳಿ ಪೂರ್ತಿ ಹಾಜರಾತಿ ಲಭ್ಯವಾಗುತ್ತದೆ. ಹೀರೋ ಹಿರೋಯಿನ್‌ಗಳ ಅನುಕರಣೆ, ಅವರಂತೆ ಡ್ರೆಸ್‌, ಡೈಲಾಗ್ಸ್‌ ಅವರ ನೆಚ್ಚಿನ ಕಲಿಕೆ. ನಾಯಕನಂತೆ ವರ್ತನೆ, ಹಿಂದೆ ನಾಲ್ಕೈದು ಮಂದಿ ಹುಡುಗರನ್ನು ಕಟ್ಟಿಕೊಂಡು ಸಿನಿಮೀಯ ಮಾದರಿಯಲ್ಲಿ ಹೀರೋನಂತೆ ಆಡುತ್ತಾರೆ. ಸಿನಿಮಾ ನೋಡಿಯೇ ಪ್ರೀತಿಯ ವೇಗ ಇನ್ನಷ್ಟು ಚುರುಕುಗೊಳ್ಳುತ್ತದೆ. ತರಗತಿಗಳಿಗಿಂತ ಥಿಯೇಟರ್‌ಗಳೇ ಅವರಿಗೆ ಆಪ್ತ. 

ಹೈ ರಿಸ್ಕ್: ವಯಸ್ಸೇ ಹಾಗೆ! “ನಾನೂ ಏನಾದರೂ ಮಾಡಬಲ್ಲೆ’ ಎಂಬ ಹಠಮಾರಿತನ. ತಂದೆ ತಾಯಿಯರ ಮಾತುಗಳೂ ಅಪಥ್ಯವೆನಿಸುತ್ತವೆ ಅವರಿಗೆ. ಕಷ್ಟವೆನಿಸುವ ಕೆಲಸಗಳನ್ನೇ ಆರಿಸಿಕೊಳ್ಳುತ್ತಾರೆ. ತಮಗೆ ಬೇಕಾದ ವಿಷಯಕ್ಕೆ ರಿಸ್ಕ್ ತೆಗೆದುಕೊಳ್ಳಲು ಸದಾ ಸಿದ್ಧ. ಇದು ಅವರೊಳಗಿನ ತುಡಿತ ಮತ್ತು ಅವರ ಶಕ್ತಿಯ ಮೇಲಿರುವ ನಂಬಿಕೆಗಿಂತ ಅವನೊಳಗೆ ಉಕ್ಕುವ ಭಾವನೆಗಳು ಅಂಥದೊಂದು ಶಕ್ತಿಯನ್ನು ತುಂಬುತ್ತವೆ. 

ಹಗಲುಗನಸು: ಇವರಲ್ಲಿ ಕನಸುಗಳಿಗೆ ಅಭಾವವಿಲ್ಲ. ನಿದ್ದೆಯಲ್ಲಿ ಕನಸುಗಳು ಸಾಮಾನ್ಯವಾದರೂ, ಸದಾ ತಮ್ಮಿಷ್ಟದ ಒಂದು ಸಂಗತಿಯೊಂದಿಗೆ ಪ್ಯಾಂಟಸಿಯ ಗುಂಗಿನಲ್ಲಿರುತ್ತಾರೆ. ತಾವೇ ಅದಾದಂತೆ, ಇದಾದಂತೆ, ಅವಳು ಸಿಕ್ಕಂತೆ, ಮತ್ತೂಂದೇನನ್ನೋ ಸಾಧಿಸಿದಂತೆ- ಎಲ್ಲೆ ಇಲ್ಲದ ಕನಸಿನ ಸರಣಿ ಅವರದು. 

ಆದರೆ, ವಿಷಯ ಈ ಹತ್ತು ಮುಖಗಳದ್ದು ಅಲ್ಲ. ಈ ಹತ್ತು ಮುಖಗಳಲ್ಲಿ ಮತ್ತೆ ಅದರೊಳಗೆ ಅಡಗಿರುವ ನೂರಾರು ಮುಖಗಳು, ನೂರಾರು ರೂಪ ಪಡೆದಿರುತ್ತವೆ. ಯವ್ವನಕ್ಕೆ ಅವು ತಂದು ಕೊಡುವ ಖುಷಿ, ಅದಕ್ಕೆಂದೇ ಸದಾ ತೆರೆದುಕೊಂಡೇ ಬದುಕುವ ಯುವ ಸಮುದಾಯ ಯಡವಟ್ಟುಗಳನ್ನು ಮಾಡಿಕೊಳ್ಳುತ್ತದೆ. ಯವ್ವನ ಇರೋದು ಕೇವಲ ಎಂಜಾಯ್‌ಗೆ ಅನ್ನೋದು ಬಹುಶಃ ಅವರ ಸಿದ್ಧಸೂತ್ರ ಇರಬಹುದು. ಆದರೆ ಅದೊಂದೇ ಯವ್ವನದ ಅಜೆಂಡಾ ಅಲ್ಲ. ಪ್ರತಿ ಮುಖವೂ ಕಲಿಸುವ ಸಾವಿರಾರು ಪಾಠಗಳನ್ನು ಕಲಿಯಬೇಕಾಗಿರುವುದು ಇಂದಿನ ಯುವಕರ ತುರ್ತು. ಅದಕ್ಕೆಂದೇ “ಹುಚ್ಚು ಯವ್ವನ’ ಎಂದು ಕರೆದಿದ್ದೇನೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಯದೆ, ಹೊರಟು ಬಿಡುವ ಅವರ ಗುಣವನ್ನು ಒಳ್ಳೆಯದಕ್ಕೆ ತಿರುಗಿಸುವ ಅವಶ್ಯಕತೆ ಇದೆ.

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

No court relief, Arvind Kejriwal to remain in jail till July 3

Delhi Liquor Case: ಸಿಎಂ ಅರವಿಂದ್‌ ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಜು.3ವರೆಗೆ ವಿಸ್ತರಣೆ

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ವರ್ತುಲ ಕಾಮನಬಿಲ್ಲಿನಲ್ಲಿ ಸೆರೆಯಾದ ಆದಿತ್ಯ… ವಿಜಯಪುರದಲ್ಲಿ ಖಗೋಳ ಅಚ್ಚರಿ

Miracle: ವರ್ತುಲ ಕಾಮನಬಿಲ್ಲಿನಲ್ಲಿ ಸೆರೆಯಾದ ಆದಿತ್ಯ… ವಿಜಯಪುರದಲ್ಲಿ ಖಗೋಳ ಅಚ್ಚರಿ

Sandalwood: ಸ್ವಾತಂತ್ರ್ಯ ದಿನಕ್ಕೆ ದುನಿಯಾ ವಿಜಿ ನಿರ್ದೇಶನದ ʼಭೀಮʼ ರಿಲೀಸ್?‌

Sandalwood: ಸ್ವಾತಂತ್ರ್ಯ ದಿನಕ್ಕೆ ದುನಿಯಾ ವಿಜಿ ನಿರ್ದೇಶನದ ʼಭೀಮʼ ರಿಲೀಸ್?‌

ರೇಣುಕಾಸ್ವಾಮಿ ಪ್ರಕರಣ: ಎಷ್ಟೇ ಪ್ರಬಲ ವ್ಯಕ್ತಿಯಾಗಿದ್ದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ…

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎಷ್ಟೇ ಪ್ರಬಲ ವ್ಯಕ್ತಿಯಾಗಿದ್ದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Tomato-Price

Kolara: ಗಗನಕ್ಕೇರುತ್ತಿರುವ ಟೊಮೆಟೋ ಬೆಲೆ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

No court relief, Arvind Kejriwal to remain in jail till July 3

Delhi Liquor Case: ಸಿಎಂ ಅರವಿಂದ್‌ ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಜು.3ವರೆಗೆ ವಿಸ್ತರಣೆ

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.