ನೆನಪಿನ ರಾಶಿಯ ತುಂಬಾ ನೀನೇ!


Team Udayavani, May 21, 2019, 6:00 AM IST

letter–lakshmikant-210-copy-copy

ಮುಸ್ಸಂಜೇಲಿ ಕಡಲಂಚಿನ ಕಲ್ಲು ಬೆಂಚಿಗೊರಗಿ ಒಂಟಿಯಾಗಿ ಅದೇನೋ ಯೋಚನೆಯಲ್ಲಿದ್ದೇನೆ. ನೆನಪಿನ ಲೋಕದ ಕದ ತೆರೆದರೆ, ಯಾರೊಂದಿಗೂ ಹಂಚಿಕೊಳ್ಳಲಾಗದ ಸಾವಿರ ನೆನಪುಗಳಿವೆ ಅಲ್ಲಿ. ಆ ನೆನಪುಗಳ ರಾಶಿಯ ತುಂಬೆಲ್ಲಾ ನೀನೇ ತುಂಬಿಕೊಂಡಿದ್ದೀಯ. ಬರೀ ನೀನು…

ಕಡಲ ರಾಶಿಯಿಂದ ಎದ್ದು ನನ್ನೆಡೆಗೆ ಬರುತ್ತಿರುವ ಅಲೆಗಳು, ಎದೆಯೊಳಗಿನ ಭಾವನೆಗಳ ಹೊಯ್ದಾಟಕ್ಕೆ ಹೆಚ್ಚುತ್ತಿರುವ ಹೃದಯ ಬಡಿತ… ಎರಡರ ಅಬ್ಬರವೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮನಸ್ಸು ಮತ್ತೆ ಕಾಲೇಜು ದಿನಗಳತ್ತ ಓಡುತ್ತಲಿದೆ…

ಅನಿಯಂತ್ರಿತವಾಗಿ ಬಿರಿಯುತ್ತಿದ್ದ ಒಲವ ಗುಲಾಬಿಯನ್ನು ಬಿರಿಯಗೊಡದೆ ನಾನು ಅನುಭವಿಸಿದ ನೋವು, ನನ್ನ ಪರಿಸ್ಥಿತಿ ನೋಡಿ ಗಾಬರಿಯಾದ ಗೆಳೆಯರು ಹುಡುಗಿ ಯಾರೆಂದು ಹರಸಾಹಸ ಪಟ್ಟಿದ್ದು, ನಿನ್ನ ಕಣ್ತಪ್ಪಿಸಲು ದಿನವೂ ಕಷ್ಟಪಡುತ್ತಿದ್ದ ನಾನು… ಏನೇನೆಲ್ಲಾ ಇವೆ ನೆನಪ ಬುಟ್ಟಿಯೊಳಗೆ.

ನಿನ್ನನ್ನು ನೇರವಾಗಿ ದಿಟ್ಟಿಸುವ ಧೈರ್ಯವಿಲ್ಲದೇ ಕಣ್ಣಕೊನೆಯಲ್ಲೇ ದಿನವೂ ನಿನ್ನನ್ನು ಗಮನಿಸುತ್ತಿದ್ದೆ. ಅಚಾನಕ್ಕಾಗಿ ನೀನು ನನ್ನೆಡೆಗೆ ನೋಡಿದಾಗ, ಮುಖ ತಿರುಗಿಸಿಬಿಡುತ್ತಿದ್ದೆ. ಉಹೂಂ, ಕಣ್ಣಲ್ಲಿ ಕಣ್ಣಿಡುವಷ್ಟು ಎದೆಗಾರಿಕೆ ಇರಲಿಲ್ಲ. ನಿನ್ನ ನೋಟದ ತೀಕ್ಷ್ಣತೆಗೆ ಮೂಛೆì ಹೋದೇನೆಂಬ ಭಯ! ಹೃದಯದಾಳದ ನವಿರಾದ ಭಾವತಂತುಗಳ ಮೀಟುವಿಕೆ ನಿನಗೆ ಕೇಳಿಸಿಬಿಟ್ಟರೆ? ಹಾಗಾಗಿಯೇ, ಅದುಮಿಟ್ಟ ಭಾವಗಳನ್ನು ಮರೆಮಾಚಲು ನಿನ್ನಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೆ.

ಯಾಕಂದ್ರೆ, ಈ ಪ್ರೀತಿಯ ಸಸಿ ಮರವಾಗಿ ಬೆಳೆದು, ಫ‌ಲ ಕೊಡುವುದಿಲ್ಲ ಎಂಬ ಅರಿವು ನನಗಿತ್ತು. ಆದರೂ ಅದ್ಯಾಕೋ ನಿನ್ನ ಕಣ್ಣೋಟದಲ್ಲಿ, ಎದೆ ಮೀಟುವ ಉತ್ಕಟ ಒಲವಿನ ಸೆಳೆತವಿತ್ತು. ತರಗತಿಯೊಳಗೆ ಹೆಜ್ಜೆಯಿಟ್ಟ ಕೂಡಲೇ ನಿನ್ನ ಮುಖ ಕಂಡರೆ, ನಿನ್ನ ಧ್ವನಿ ಕಿವಿಗೆ ಬಿದ್ದರೆ ಮನಸ್ಸಿಗೆ ಅದೇನೋ ತೃಪ್ತಿ. ಮರುಕ್ಷಣವೇ, ಸಮಾಜದ ನೂರಾರು ಕಟ್ಟಳೆಗಳ ಅರಿವಿದ್ದ ಮನಸ್ಸು, ಬುದ್ಧಿ ಎಚ್ಚೆತ್ತುಕೊಳ್ಳುತ್ತಿತ್ತು. ಎಳೆ ಚಿಗುರನ್ನು ಹೆಮ್ಮರವಾಗುವ ಮೊದಲೇ ಚಿವುಟಬೇಕೆಂಬ ಅರಿವಾಗಿ, ಒಲವ ಹೂವು ಅರಳುವ ಮುನ್ನವೇ ಹೃದಯದ ಕದ ಮುಚ್ಚಿಬಿಡುತ್ತಿದ್ದೆ.

ಬೇಡ, ಈ ಸಲಿಗೆ ಬೇಡ. ಪ್ರೀತಿ-ಪ್ರೇಮದ ಹುಚ್ಚಾಟಕ್ಕೆ ನನ್ನೊಂದಿಗೆ ಇರುವ ಉಸಿರುಗಳ ಬಲಿ ಕೊಡಲಾರೆ ಅಂತ ಗಟ್ಟಿ ಮನಸ್ಸು ಮಾಡಿ, ನಿರ್ಭಾವುಕನಾಗಿ ಎದೆಯೊಳಗೆ ಹಾರುತ್ತಿದ್ದ ಪತಂಗದ ರೆಕ್ಕೆ ಕತ್ತರಿಸಿದ್ದೆ. ಒಡಲಾಳದಲಿ ಹುಟ್ಟಿದ ಭಾವಗಳನ್ನೆಲ್ಲಾ ಕೈಯಾರೆ ಉಸಿರುಗಟ್ಟಿಸಿ, ನಿರ್ಲಿಪ್ತನಾಗಿ ನಡೆದು ಬಂದಿದ್ದೆ.

ಇದೆಲ್ಲಾ ನಡೆದು ಎಷ್ಟೋ ವರ್ಷಗಳಾಗಿವೆ. ಆದರೂ, ನಿನ್ನನ್ನು ಮರೆಯುವುದು ಸಾಧ್ಯವಾಗಿಲ್ಲ. ಹಳೆಯ ನೆನಪುಗಳೆಲ್ಲ ಹಳೆಯ ಗಾಯಗಳಂತೆ, ಹಿತವಾದ ನೋವು ನೀಡುತ್ತಿವೆ. ಆ ನೋವಿನಲ್ಲೇ ಒಂಥರಾ ಸುಖವಿದೆ…

-ಲಕ್ಷ್ಮೀಕಾಂತ್‌ ಎಲ್‌.ವಿ.

Ad

ಟಾಪ್ ನ್ಯೂಸ್

2

Ravi Teja: ಟಾಲಿವುಡ್‌ ನಟ ರವಿತೇಜ ಕುಟುಂಬದಲ್ಲಿ ಶೋಕ; ತಂದೆ ರಾಜಗೋಪಾಲ್‌ ನಿಧನ  

1-aa-fouja

ಫೌಜಾ ಸಿಂಗ್ ಹಿಟ್ & ರನ್ ಕೇಸ್: ಎಸ್ ಯುವಿ ಚಾಲಕ ಅನಿವಾಸಿ ಭಾರತೀಯನ ಬಂಧನ

Kodimatha Swamij

Kodimatha Swamiji: ‘ಅರಸನ ಅರಮನೆಗೆ ಕಾರ್ಮೋಡ..’: ಕೋಡಿ ಮಠದ ಶ್ರೀಗಳ ಭವಿಷ್ಯ

1

Actor: ‘ಜೀವನ ತುಂಬಾನೇ ಸಣ್ಣದು..ʼ 34ರ ಯುವ ನಟನಿಗೆ ಹೃದಯಾಘಾತ

Feed stray dogs at home: Supreme Court

Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

2

Ravi Teja: ಟಾಲಿವುಡ್‌ ನಟ ರವಿತೇಜ ಕುಟುಂಬದಲ್ಲಿ ಶೋಕ; ತಂದೆ ರಾಜಗೋಪಾಲ್‌ ನಿಧನ  

1-aa-fouja

ಫೌಜಾ ಸಿಂಗ್ ಹಿಟ್ & ರನ್ ಕೇಸ್: ಎಸ್ ಯುವಿ ಚಾಲಕ ಅನಿವಾಸಿ ಭಾರತೀಯನ ಬಂಧನ

Kodimatha Swamij

Kodimatha Swamiji: ‘ಅರಸನ ಅರಮನೆಗೆ ಕಾರ್ಮೋಡ..’: ಕೋಡಿ ಮಠದ ಶ್ರೀಗಳ ಭವಿಷ್ಯ

1

Actor: ‘ಜೀವನ ತುಂಬಾನೇ ಸಣ್ಣದು..ʼ 34ರ ಯುವ ನಟನಿಗೆ ಹೃದಯಾಘಾತ

Feed stray dogs at home: Supreme Court

Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.