ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ …

ರೆಸ್ಯುಮೆ ಬರೆಯಲು ಕಲಿಯಿರಿ!

Team Udayavani, Oct 20, 2020, 7:56 PM IST

josh-tdy-1

ಸಾಂದರ್ಭಿಕ ಚಿತ್ರ

ಲಾಕ್‌ಡೌನ್‌ ಮುಗಿದ ನಂತರದಲ್ಲಿ ನೇಮಕಾತಿ ಪ್ರಕ್ರಿಯೆಗಳೂ ಹಲವೆಡೆ ಶುರುವಾಗಿವೆ. ವಿಪರ್ಯಾಸವೆಂದರೆ, ನೌಕರಿಗೆ ಅರ್ಜಿ ಹಾಕುವ ಎಷ್ಟೋ ಜನರಿಗೆ ರೆಸ್ಯುಮೆ ಬರೆಯುವ ರೀತಿಯೇ ಗೊತ್ತಿರುವುದಿಲ್ಲ. ರೆಸ್ಯುಮೆ ಎಂಬುದು ಹೇಗಿರಬೇಕು ಗೊತ್ತೇ?

ನಾನು ಆಗಾಗ ನಮ್ಮಕಂಪನಿಯಲ್ಲಿ ಅಥವಾ ಬೇರೆಡೆಗೊತ್ತಿರುವಲ್ಲಿ ಉದ್ಯೋಗಾವಕಾಶಗಳಿದ್ದಲ್ಲಿ ಆ ಮಾಹಿತಿ ಹಂಚಿಕೊಂಡು ಆಸಕ್ತರು ರೆಸ್ಯೂಮೆ ಕಳಿಸಲು ಹೇಳುತ್ತಿರುತ್ತೇನೆ. ನಮ್ಮಕರ್ನಾಟಕದ ಅಭ್ಯರ್ಥಿಗಳಿಗೆಪ್ರಯೋಜನವಾಗಲಿ ಮತ್ತು ಯೋಗ್ಯ ಅಭ್ಯರ್ಥಿಗಳು ಸಿಗಲಿ ಎಂಬುದು ಅದರ ಉದ್ದೇಶ. ಅದಕ್ಕೆ ಪ್ರತಿಯಾಗಿ ಬರುವ ಬರುವ ಬಹಳಷ್ಟು ಇ- ಮೇಲ್‌ಗ‌ಳು ನಿರಾಸೆಗೊಳಿಸಿಬಿಡುತ್ತದೆ. ಬಹುತೇಕರು ಯಾವುದೇ ವಿವರಗಳನ್ನೂ ನೀಡದೆ, ಯಾವ ಹುದ್ದೆಗೆ ಅರ್ಜಿ ಹಾಕುತ್ತಿದ್ದೇವೆ ಎಂದೂ ಬರೆಯದೆ, ಸುಮ್ಮನೇ ಒಂದು ಮೇಲ್‌ ಅನ್ನು ಫಾರ್ವರ್ಡ್‌ ಮಾಡಿರುತ್ತಾರೆ! ಹೀಗೆ ಬರುವ ರೆಸ್ಯುಮೆ ಗಳು ಸಹ ಉದ್ಯೋಗಕ್ಕೆ ತಕ್ಕ ಅನುಭವವನ್ನು, ಸ್ಕಿಲ್‌ಗ‌ಳನ್ನು ಹೊಂದಿರುವುದಿಲ್ಲ. ಎಷ್ಟೋ ರೆಸ್ಯುಮೆ ಗಳಲ್ಲಿ ನೀಟ್‌ನೆಸ್‌ ಅನ್ನುವುದೇ ಇರುವುದಿಲ್ಲ.ಕಾರ್ಪೋರೇಟ್‌ವಲಯದ ಹಲವಾರು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡವನಾಗಿ, ಸುಮಾರು ಹದಿನೈದು ವರ್ಷಗಳಅನುಭವದ ಮಾತಲ್ಲಿ ಹೇಳುವುದಾದರೆ, ನಮ್ಮಕರ್ನಾಟಕದ ಅಭ್ಯರ್ಥಿಗಳು, ಅದರಲ್ಲೂ ವಿಶೇಷವಾಗಿ ಹೊಸಬರಿಗೆತಮ್ಮ ಬಯೊಡೇಟಾ ಅಥವಾ ರೆಸ್ಯುಮೆ ಯನ್ನು ಸಿದ್ಧಪಡಿಸುವ ವಿಷಯದಲ್ಲಿ ತಿಳಿವಳಿಕೆಯಕೊರತೆ ಇದೆ ಅನಿಸುತ್ತದೆ.

ಕೋವಿಡ್ ನಂತರದ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದಂತೆ, ಈಗ ನೇಮಕಾತಿ ಪ್ರಕ್ರಿಯೆಗಳೂ ಹಲವೆಡೆ ಶುರುವಾಗಿವೆ. ಇಂತಹ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ರೆಸ್ಯುಮೆ ಯನ್ನು ಉತ್ತಮವಾಗಿತಯಾರುಮಾಡಿಕೊಂಡು ಸಲ್ಲಿಸುವುದು ಬಹಳ ಮುಖ್ಯ. ಒಂದು ಉದ್ಯೋಗಕ್ಕೆ ಅರ್ಜಿಸಲ್ಲಿಸುವಾಗ ರೆಸ್ಯೂಮೆಯಲ್ಲಿರುವ ಮಾಹಿತಿಗಳ ಆಧಾರದಲ್ಲಿ, ನಿಮ್ಮನ್ನು ಸಂದರ್ಶನಕ್ಕೆ ಪರಿಗಣಿಸಬೇಡವೋ ಇಲ್ಲವೋ ಎಂಬ ತೀರ್ಮಾನವಾಗುತ್ತದೆ. ರೆಸ್ಯುಮೆ ಯನ್ನುನೋಡುವವರಿಗೆ ನೀವೊಬ್ಬ ಅಪರಿಚಿತ ವ್ಯಕ್ತಿಯಾಗಿದ್ದು ನಿಮ್ಮ ಮೊದಲ ಇಂಪ್ರಶನ್‌ ತಲುಪುವುದು ಆ ರೆಸ್ಯುಮೆ ಮೂಲಕ ಮಾತ್ರ.

ಹೇಗಿರಬೇಕು ರೆಸ್ಯುಮೆ? :  ರೆಸ್ಯುಮೆ ಅನ್ನುವುದು, ನಮ್ಮನ್ನು ನಾವು ಪರಿಚಯಿಸಿಕೊಳ್ಳುವ ಮತ್ತು ನಮ್ಮ ಕಲಿಕೆಯನ್ನು, ಸಾಮರ್ಥ್ಯವನ್ನು,ಅನುಭವವನ್ನುಕ್ಲುಪ್ತವಾಗಿವಿವರಿಸಿಕೊಳ್ಳುವ ಒಂದು ವಿಧಾನ. ವಿವಿಧಕ್ಷೇತ್ರಗಳಲ್ಲಿ, ಹಂತಗಳಲ್ಲಿ, ಅನುಭವದ ಮಟ್ಟದಲ್ಲಿ ರೆಸ್ಯುಮೆಮೆಗಳನ್ನುವಿವಿಧ ರೀತಿ ತಯಾರು ಮಾಡಬೇಕಾಗುತ್ತದಾದರೂ, ಅದರ ಮೂಲಭೂತ ರಚನೆ ಬಹುತೇಕ ಒಂದೇ ರೀತಿ ಇರುತ್ತದೆ. ರೆಸ್ಯುಮೆ ಒಂದು ಸುದೀರ್ಘ‌ ಕಡತದಂತಿರದೇ ಚಿಕ್ಕ-ಚೊಕ್ಕದಾಗಿ ಇರುವುದು ಅಗತ್ಯ. ಕೆಲವೇ ನಿಮಿಷಗಳಲ್ಲಿ ರೆಸ್ಯುಮೆಯನ್ನುನೋಡಿ ಮುಗಿಸುವಂತಿರಬೇಕು ಮತ್ತು ಅಷ್ಟರಲ್ಲಿ ನಿಮ್ಮ ಸ್ಥೂಲ ಪರಿಚಯ ಆಗಬೇಕು.

ಪಾಯಿಂಟ್‌ ಬೈ ಪಾಯಿಂಟ್‌ ಇರಲಿ… :

ರೆಸ್ಯುಮೆ -ವಿಧ್ಯಾಭ್ಯಾಸ ಮಾಹಿತಿ, ತೇರ್ಗಡೆಯಾದ ವರ್ಷ, ಶೇಕಡಾ  ಅಂಕಗಳು ಇತ್ಯಾದಿ ಅಂಶಗಳನ್ನು ಒಳಗೊಂಡಿರಲಿ. ನೀವು ಮಾಡಿರುವಇತರ ಸಂಬಂಧಿತಕೋರ್ಸುಗಳು,ಕಲಿತಿರುವ ಇತರ ಸ್ಕಿಲ್‌ಗ‌ಳು, ನಿಮಗೆ ಬಳಸಲು ಗೊತ್ತಿರುವ, ಬಳಸುತ್ತಿರುವ ವಿವಿಧಕಂಪ್ಯೂಟರ್‌ ಅಥವಾ ಇತರ ಸಂಬಂಧಿತ ಅಪ್ಲಿಕೇಶನ್‌ಗಳು, ತಂತ್ರಾಂಶಗಳ ಮಾಹಿತಿಗಳನ್ನು ಪಾಯಿಂಟುಗಳಾಗಿ ನಮೂದಿಸಿ. ಈವರೆಗೆಕೆಲಸ ಮಾಡಿದ ಮತ್ತು ಮಾಡುತ್ತಿರುವ ಕಂಪನಿಗಳ ಬಗ್ಗೆ ಕಾಲಾನುಕ್ರಮವಾಗಿ, ಅಲ್ಲಿ ಯಾವ ಇಸವಿಯಿಂದ ಯಾವ ಇಸವಿವರೆಗೆ ಕೆಲಸ ಮಾಡಿದ್ದೀರಿ, ಅದರಲ್ಲಿ ನಿಮ್ಮ ಹುದ್ದೆ, ಜವಾಬ್ದಾರಿಗಳು, ನಿಭಾಯಿಸುತ್ತಿರುವ ಪ್ರಾಜೆಕ್ಟುಗಳ ಸಂಕ್ಷಿಪ್ತ ವಿವರಣೆ ಇರಲಿ. ಆನಂತರ ನಿಮ್ಮ ಹವ್ಯಾಸಗಳು, ವೈಯಕ್ತಿಕ ಮಾಹಿತಿಗಳು, ಇತರ ಆಸಕ್ತಿಕರ ವಿಷಯ ಇತ್ಯಾದಿಗಳನ್ನು ಬರೆಯಿರಿ. ಇದಿಷ್ಟು ಒಂದು ರೆಸ್ಯುಮೆ ಹೊಂದಿರಬೇಕಾದ ಮೂಲಭೂತ ಅಂಶಗಳು. ಇದರಲ್ಲಿ ಅನುಭವದ ಮಟ್ಟ ಕ್ಕೆ ತಕ್ಕಂತೆ ವಿಭಾಗಗಳು ಮೇಲೆಕೆಳಗೆಆಗಬಹುದು. ಉದಾಹರಣೆಗೆ, ಹೊಸಬನೊಬ್ಬ ತನ್ನ ವಿದ್ಯಾಭ್ಯಾಸ ಹಾಗೂಕಲಿತಿರುವ ಇತರ ಸ್ಕಿಲ್‌ಗ‌ಳ ಬಗ್ಗೆ ಹೆಚ್ಚು ಒತ್ತುಕೊಟ್ಟರೆ, ಅನುಭವಿಗಳು ತಮ್ಮ ಇಷ್ಟು ವರ್ಷಗಳ ಅನುಭವದ ಸಾರಾಂಶವನ್ನು ಮೊದಲ ವಿಭಾಗದಲ್ಲಿ ಹಾಕಬಹುದು. ಈ ಎಲ್ಲಾ ಮಾಹಿತಿಗಳನ್ನೂ ಪ್ಯಾರಾಗಳ ರೀತಿ ಬರೆಯದೇ, ಪಾಯಿಂಟುಗಳರೀತಿಯಲ್ಲಿ ಪ್ರಸ್ತುತಿಪಡಿಸುವುದು ಉತ್ತಮ ರೆಸ್ಯುಮೆಯ ಲಕ್ಷಣ.

ರೆಸ್ಯುಮೆ ಕಳಿಸುವ ಹಂತ : ಒಂದು ಉದ್ಯೋಗಾವಕಾಶದ ಜಾಹೀರಾತು ಅಥವಾ ಮಾಹಿತಿ ಕಂಡಾಗ, ಯಾವ ಹುದ್ದೆಗಳು ಇವೆ ಎಂಬುದನ್ನು ಮೊದಲು ನೋಡಬೇಕು. ಉದಾಹರಣೆಗೆ ಫೈನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ಇದೆ ಎಂದಾಗ, ಆ ಕ್ಷೇತ್ರದ ಎಲ್ಲರೂ ಅರ್ಜಿ ಹಾಕಲಾಗುವುದಿಲ್ಲ. ಅದರಲ್ಲಿ ನಿರ್ದಿಷ್ಟ ರೀತಿಯ ಹುದ್ದೆಗಳನ್ನುಕೇಳಿರುತ್ತಾರೆ. ಹಾಗಾಗಿ, ಹುದ್ದೆ ಮತ್ತು ಇತರೆ ವಿವರಣೆಗಳನ್ನು ಮೊದಲುನೋಡಿಕೊಳ್ಳಬೇಕು. ಅದು ನಿಮ್ಮ ಅನುಭವಕ್ಕೆ, ಪರಿಣಿತಿಗೆ ಹೊಂದಿಕೆಯಾ ಗುತ್ತಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು. ಈಗ ರೆಸ್ಯುಮೆ ಗಳನ್ನುಕಳಿಸುವುದು ಇ-ಮೇಲ್‌ಗ‌ಳ ಮುಖಾಂತರವಾದ್ದರಿಂದ, ಅದನ್ನು ಹೇಗೆಕಳಿಸುತ್ತೀರಿ ಎಂಬುದೂ ಬಹಳ ಮುಖ್ಯ. ಇ- ಮೇಲಿನ ಸಬ್ಜೆಕ್ಟ್ ಲೈನಿನಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದನ್ನು ಬರೆಯಿರಿ. ಇ- ಮೇಲ್‌ನಲ್ಲಿ ನೀವು ಯಾರು, ಏನುಓದಿದ್ದೀರಿ, ಎಷ್ಟು ವರ್ಷಗಳ ಅನುಭವ ಮತ್ತು ಪರಿಣಿತಿ ಇದೆ, ಏಕೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಮೂರ್ನಾಲ್ಕು ಸಾಲುಗಳಲ್ಲಿ ವಿವರಿಸಿ. ರೆಸ್ಯೂಮೆ ಫೈಲಿಗೆ ನಿಮ್ಮ ಹೆಸರನ್ನುಕೊಟ್ಟು, ಅದನ್ನು ಅಟ್ಯಾಚ್‌ ಮಾಡಿ ಕಳುಹಿಸಿ.

ಇದಿಷ್ಟು ನೆನಪಿರಲಿ… :

  • ರೆಸ್ಯುಮನ್ನು ಬೇರೆಯವರಿಂದ ಕಾಪಿ ಮಾಡಬೇಡಿ. ಅಗತ್ಯವಿ ದ್ದಲ್ಲಿಬೇರೆಡೆ ಮಾಹಿತಿ ತೆಗೆದು ಕೊಂಡು ಸ್ವಂತವಾಗಿ ಬರೆಯಿರಿ.
  • ರೆಸ್ಯುಮಿನಲ್ಲಿ ನೀಡುವ ಎಲ್ಲಾ ಮಾಹಿತಿಗಳೂ ಸಹ ಸತ್ಯವಾಗಿರ ಬೇಕು ಮತ್ತು ಆ ಬಗ್ಗೆ ನಿಮಗೆಗೊತ್ತಿರಬೇಕು. ಸಂದರ್ಶನಕ್ಕೆ ಹೋದಾಗ, ರೆಸ್ಯುಮೆ ಯಲ್ಲಿ ತಾವೇ ನೀಡಿರುವ ಮಾಹಿತಿ ಬಗ್ಗೆ ಉತ್ತರಿಸಲು ಹಲವರು ವಿಫ‌ಲರಾಗುತ್ತಾರೆ.
  • ಇ ಮೇಲ್‌ ಕಳಿಸುವಾಗ, ಸುಮ್ಮನೇ ಫಾರ್ವರ್ಡ್‌ ಮಾಡುವುದು, ರೆಸ್ಯುಮೆ ಫೈಲಿಗೆ ಸರಿಯಾಗಿ ಹೆಸರು ಕೊಡದಿರುವುದು, ರೆಸ್ಯುಮಿಯಲ್ಲಿ ನಿಮ್ಮ ಮಾಹಿತಿಯನ್ನು ಹುಡುಕಾಡು ವಂತೆ ಮಾಡುವುದು ಸರಿಯಲ್ಲ

 

 

– ವಿಕಾಸ್‌ ಹೆಗಡೆ

ಟಾಪ್ ನ್ಯೂಸ್

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.