ವಿಕಾಸವಾದ ಸಿದ್ಧಾಂತದ ಪ್ರತಿಪಾದಕ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Feb 20, 2020, 4:12 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಮಂಗನಿಂದ ಮಾನವ “ವಿಕಾಸವಾದ ಸಿದ್ಧಾಂತ’ವನ್ನು ಪ್ರತಿಪಾದಿಸಿದ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಹುಟ್ಟಿದ್ದು 1809ರ ಫೆಬ್ರವರಿ 12ರಂದು.
2. ಅವರು ಹುಟ್ಟಿದ ದಿನವನ್ನೇ “ಡಾರ್ವಿನ್‌ ದಿನ’ವನ್ನಾಗಿ ಆಚರಿಸಲಾಗುತ್ತದೆ.
3. ಭೂಮಿ ಮೇಲಿನ ಪ್ರತಿಯೊಂದು ಜೀವಿಯೂ ಅನೇಕ ರೂಪಾಂತರಗಳಿಗೆ ಒಳಗಾಗಿದೆ ಎಂಬುದರ ಬಗ್ಗೆ “ಆನ್‌ ದಿ ಒರಿಜಿನ್‌ ಆಫ್ ಸ್ಪೀಶಿಸ್‌’ ಪುಸ್ತಕದಲ್ಲಿ ಡಾರ್ವಿನ್‌ ಸವಿಸ್ತಾರವಾಗಿ ದಾಖಲಿಸಿದ್ದಾರೆ.
4. ಆ ಪುಸ್ತಕ ರಚನೆಗೂ ಮುನ್ನ ಡಾರ್ವಿನ್‌, ಹಡಗಿನಲ್ಲಿ ಐದು ವರ್ಷಗಳ ಕಾಲ ವಿಶ್ವ ಪರ್ಯಟನೆ ಮಾಡಿ, ವಿಷಯ ಸಂಗ್ರಹಿಸಿದ್ದರು.
5. ತನ್ನ ಸಿದ್ಧಾಂತದ ಬಗ್ಗೆ ನಂಬಿಕೆ ಇದ್ದರೂ, ಜಗತ್ತು ಅದನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಭಯವಿದ್ದ ಕಾರಣ, ಎರಡು ದಶಕಗಳ ಕಾಲ ಆ ಪುಸ್ತಕ ಪ್ರಕಟಣೆಗೆ ಮುಂದಾಗಿರಲಿಲ್ಲ.
6. ಮತ್ತೂಬ್ಬ ವಿಜ್ಞಾನಿ ಇದೇ ರೀತಿಯ ಸಿದ್ಧಾಂತವನ್ನು ಅಭಿವೃದ್ಧಿಪಡಿಸುತ್ತಿ¨ªಾರೆ ಎಂದು ತಿಳಿದಾಗ, ಡಾರ್ವಿನ್‌ ತಮ್ಮ ಪುಸ್ತಕ ಬಿಡುಗಡೆಗೆ ನಿರ್ಧರಿಸಿದರು.
7. ಧರ್ಮದ ಕುರಿತು ನಂಬಿಕೆ ಕಳೆದುಕೊಂಡಿದ್ದರೂ ಚಾರ್ಲ್ಸ್‌ ಡಾರ್ವಿನ್‌ ಎಂದಿಗೂ ತಾನೊಬ್ಬ ನಾಸ್ತಿಕ ಎಂದು ಹೇಳಿಕೊಳ್ಳಲಿಲ್ಲ.
8. ಯಶಸ್ವಿ ವೈದ್ಯರಾಗಿದ್ದ ಡಾರ್ವಿನ್‌ರ ತಂದೆ, ಮಗನೂ ತನ್ನಂತೆಯೇ ವೈದ್ಯನಾಗಲಿ ಎಂದು ಬಯಸಿದ್ದರು. ಆದರೆ, ಡಾರ್ವಿನ್‌ಗೆ ರಕ್ತವನ್ನು ನೋಡಲಾಗದೆ ಅರ್ಧಕ್ಕೇ ವೈದ್ಯಶಿಕ್ಷಣವನ್ನು ಮೊಟಕುಗೊಳಿಸಿದರು.
9. ಡಾರ್ವಿನ್‌ ಜೊತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಇಂಗ್ಲೆಂಡ್‌ನ‌ ಚರ್ಚ್‌ವೊಂದು, 125 ವರ್ಷಗಳ ನಂತರ ಡಾರ್ವಿನ್‌ ಕ್ಷಮೆ ಕೋರಿ ಪತ್ರ ಬಿಡುಗಡೆ ಮಾಡಿತ್ತು.
10. ಮದುವೆಗೂ ಮುನ್ನ, ವೈವಾಹಿಕ ಜೀವನದ ಸಾಧಕ- ಬಾಧಕಗಳ ಪಟ್ಟಿ ತಯಾರಿಸಿ, ನಂತರ ಹತ್ತಿರದ ಸಂಬಂಧಿ ಎಮ್ಮಾ ಎಂಬಾಕೆಯನ್ನು ವಿವಾಹವಾದರು.

ಸಂಗ್ರಹ ಪ್ರಿಯಾಂಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ

  • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

  • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

  • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...

  • ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆಯನ್ನು ನಗರಾದ್ಯಂತ ಮಾಡಲಾಯಿತು. ಸಾಂಕ್ರಾಮಿಕ ರೋಗ ತಡೆಗಟ್ಟಲು ನಗರಸಭೆ, ಅಗ್ನಿಶಾಮಕ...

  • ಬೆಂಗಳೂರು: ಅರಿವಿಲ್ಲದೆ ಆರೆಂಟು ಗಂಟೆಗಳ ಕಾಲ ಕೋವಿಡ್‌ 19 ವೈರಸ್‌ ಸೋಂಕಿತರೊಂದಿಗೆ ಪ್ರಯಾಣ ಬೆಳೆಸಿದ ಸುಮಾರು 22 ಚಾಲನ ಸಿಬಂದಿ ಗೃಹ ಬಂಧನಕ್ಕೆ ಗುರಿಯಾಗಿದ್ದಾರೆ....