- Tuesday 10 Dec 2019
ನಾನು ಶಾಲೆಗೆ ಹೋಗ್ತೀನಿ
Team Udayavani, Aug 22, 2019, 5:04 AM IST
ಹಿರಿಯೂರು ಪಟೇಲರಿಗೆ ಮೊಮ್ಮಕ್ಕಳಿರಲಿಲ್ಲ. ದೇವಸ್ಥಾನ, ವೈದ್ಯರು ಅಂತ ಸುತ್ತಾಟ ನಡೆಸಿ, ಬಹಳ ಸಮಯದ ನಂತರ ಒಬ್ಬ ಮೊಮ್ಮಗ ಹುಟ್ಟಿದ. ಮನೆ ಮಂದಿಗೆಲ್ಲ ಆತನೆಂದರೆ ಅತಿಯಾದ ಮುದ್ದು. ಅವನ ಹೆಸರು ಶೀಕಂಠ. ಅಜ್ಜ- ಅಜ್ಜಿಗೆ ಮೊಮ್ಮಗ ಏನು ಮಾಡಿದರೂ ಖುಷಿಯೋ ಖುಷಿ. ಅವನಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಅಜ್ಜ-ಅಜ್ಜಿ ಅವನ ತಾಳಕ್ಕೆ ಕುಣಿದರು. ಇಷ್ಟು ಜಮೀನಿರುವಾಗ ಮೊಮ್ಮಗ ಶಾಲೆಗೆ ಹೋಗಿ ನೌಕರಿ ಮಾಡೋದೇನಿದೆ ಅನ್ನೋ ಭಾವನೆ ಪಟೇಲರಿಗೆ. ಆದರೆ, ಪಟೇಲರ ಮಗ ಸುರೇಶ- ಸೊಸೆ ರೂಪಾಳಿಗೆ ತಮ್ಮ ಮಗ ಶಾಲೆಗೆ ಹೋಗದಿರುವುದು ದೊಡ್ಡ ತಲೆ ನೋವಾಯಿತು. ಈ ಸಮಸ್ಯೆಯನ್ನು ಜಾಣ್ಮೆಯಿಂದ ಬಗೆಹರಿಸಬೇಕು ಎಂದು ಅವರಿಬ್ಬರು ಸೇರಿ ಒಂದು ಉಪಾಯ ಮಾಡಿದರು.
ಒಮ್ಮೆ ಸುರೇಶ ಹೊಲದ ಕಡೆ ಹೊರಟಿದ್ದರು. ಅಪ್ಪನ ಜೊತೆ ತಾನು ಬರುತ್ತೇನೆ ಎಂದು ಶೀಕಂಠನೂ ಹಠ ಮಾಡಿದ. ಅಪ್ಪ ಮಗ ಇಬ್ಬರೂ ಹೊಲದ ಕಡೆ ಹೊರಟರು. ಹೊಲದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಉಳಿದಿದ್ದವು. ಸುರೇಶ ಪಂಚೆಯನ್ನು ಎತ್ತಿಕಟ್ಟಿ ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳಲು ಶುರುಮಾಡಿದ. ಶೀಕಂಠನಿಗೂ ಒಂದು ಕೆಲಸ ಹಚ್ಚಿದರು. ಇಬ್ಬರೂ ಬಿಸಿಲಿನಲ್ಲಿ ಕೆಲಸ ಮಾಡಿ ದಣಿದರು. ಅದೇ ಸಮಯಕ್ಕೆ ಮಕ್ಕಳು ಆಡಿ ನಲಿಯುವ ದನಿ ಕೇಳಿಸಿತು. ಶೀಕಂಠನಿಗೆ ಅಚ್ಚರಿಯಾಗಿ ದನಿ ಬಂದ ಕಡೆ ನಡೆದುಹೋದನು. ಹೊಲದಿಂದ ಸ್ವಲ್ಪ ದೂರದಲ್ಲಿ ಒಂದು ಶಾಲೆಯಿತ್ತು. ಅದರ ಮುಂದಿದ್ದ ಮೈದಾನದಲ್ಲಿ ಕೆಲ ಮಕ್ಕಳು ಆಟವಾಡುತ್ತಿದ್ದರು. ಕೆಲವರು ಚಿತ್ರ ಬಿಡಿಸುತ್ತಿದ್ದರು, ಇನ್ನು ಕೆಲವರು ಮೇಸ್ಟ್ರೆ ಹೇಳುವ ಕಥೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಅದನ್ನು ನೋಡಿ ಶೀಕಂಠನಿಗೆ ಶಾಲೆ ಎಂದರೆ ಏನು ಅನ್ನೋದು ಅರ್ಥವಾಯಿತು. ಅವನಿಗೂ ಶಾಲೆಗೆ ಹೋಗುವ ಮನಸ್ಸಾಯಿತು. ಶೀಕಂಠ ಮನೆಗೆ ಬಂದವನೇ “ನಾನು ನಾಳೆಯಿಂದ ಶಾಲೆಗೆ ಹೋಗುತ್ತೇನೆ’ ಎಂದನು. ಈ ಮಾತನ್ನು ಕೇಳಿ ಅಪ್ಪ ಅಮ್ಮಂದಿರಿಬ್ಬರಿಗೂ ಖುಷಿಯಾಯಿತು. ಆದರೆ ಪಟೇಲರ ಮುಖ ಸಣ್ಣದಾಯಿತು. ಶೀಕಂಠ “ತಾತ, ನಾನು ಓದಿ ದೊಡ್ಡವನಾಗಿ ನಮ್ಮ ಜಮೀನಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತೀನಿ’ ಎಂದಾಗ ಪಟೇಲರಿಗೂ ಖುಷಿಯಾಯಿತು.
-ಪ್ರೇಮಾ ಲಿಂಗದಕೋಣ
ಈ ವಿಭಾಗದಿಂದ ಇನ್ನಷ್ಟು
-
ವ್ಯಾಪಾರಿ "ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು' ಎಂದು ಹೇಳಿದ. ಅರುಣ "ಉಚಿತವಾಗಿ ಬೇಡ. ಇದಕ್ಕೂ...
-
ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು...
-
ತಿಂಗಳುಗಳಿಂದ ಬಲಿಜ ಪಕ್ಷಿ ಶೇಖರಿಸಿದ್ದ ಆಹಾರ ಮಳೆ- ಗಾಳಿಗೆ ಮಣ್ಣು ಸೇರಿತು. ಅದರಿಂದ ಒಳ್ಳೆಯದೇ ಆಗಿತ್ತು! ಆನಂದವನ ಎಂಬ ಕಾನನವು ಹಸಿರು ಮರಗಳಿಂದ ಕೂಡಿತ್ತು....
-
ಒಂದಾನೊಂದು ಊರಿನಲ್ಲಿ ಬಸವಯ್ಯ ಎಂಬ ಯುವಕ ವಾಸಿಸುತ್ತಿದ್ದನು. ಅವನು ತುಂಬಾ ಸೋಮಾರಿಯಾಗಿದ್ದನು. ತಂದೆ ತಾಯಿಗಳು ಎಷ್ಟೇ ಹೇಳಿದರೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ....
-
ಸೀಯಾಳಿಗೆ ತನ್ನ ಮನೆಗೆ ಪಾತ್ರೆ ತೊಳೆಯುವ ಕೆಲಸಕ್ಕೆ ಬರುತ್ತಿದ್ದ ಸಾಕವ್ವನನ್ನು ಕಂಡರೆ ತುಂಬಾ ಅಕ್ಕರೆ. ಒಂದು ದಿನ ಸೀಯಾಳಿಗೆ ಸಾಕವ್ವ ಓದಲು ಬರೆಯಲು ಕಲಿತರೆ...
ಹೊಸ ಸೇರ್ಪಡೆ
-
ನ್ಯೂಯಾರ್ಕ್: ಅಮೆರಿಕದ ಭಾರತೀಯ ಸಮುದಾಯ, ಡೆಮಾಕ್ರಾಟ್ ಪಕ್ಷದ ಸಂಸದೆ ಪ್ರಮೀಳಾ ಜಯಪಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರದ ಸಂವಹನ ವ್ಯವಸ್ಥೆ...
-
ದ ಹೇಗ್: ಮ್ಯಾನ್ಮಾರ್ ಸರ್ಕಾರ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವುದಕ್ಕೆ ವಿಶ್ವಸಂಸ್ಥೆಯ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ....
-
ವಿಟ್ಲ: ಆಧಾರ್ ಕಾರ್ಡ್ ನೋಂದಣಿಗೆ ವಿಟ್ಲ ಪರಿಸರದಲ್ಲಿ ನಾಗರಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ "ಉದಯವಾಣಿ' ಸುದಿನದಲ್ಲಿ ಸತತವಾಗಿ ಪ್ರಕಟವಾದ ವರದಿಗೆ...
-
ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್ ಕುಡಿಯುವ ನೀರಿನ ಪೂರೈಕೆಯ ಪಂಪ್ ನಿರ್ವಹಣೆಗೆ ಮೊಬೈಲ್ ಆ್ಯಪ್ ಬಳಕೆಗೆ ಮುಂದಾಗಿದ್ದು ಪಂಪ್ ಸ್ವಯಂಚಾಲಿತವಾಗಿ ನಿರ್ವಹಣೆ...
-
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದು ಫಲ...