ರೇಡಿಯೋ ಖಗೋಳ ವಿಜ್ಞಾನ


Team Udayavani, Nov 1, 2018, 6:00 AM IST

b-2.jpg

ಗಣಿತ ಮತ್ತು ವಿಜ್ಞಾನವೆಂಬ ಕಬ್ಬಿಣದ ಕಡಲೆಗಳ ರುಚಿಯನ್ನು ಕನ್ನಡಿಗರಿಗೆ ಹತ್ತಿಸಿದವರು ಜಿ.ಟಿ. ನಾರಾಯಣ ರಾವ್‌. ಕ್ಲಿಷ್ಟಕರ ಅಂಕಿ ಅಂಶ, ಸೂತ್ರಗಳನ್ನು ನೀಡುವಾಗ, ಅದನ್ನು ನಮ್ಮ ಸುತ್ತಮುತ್ತಲ ಪರಿಸರದೊಂದಿಗೆ ತಾಳೆ ಹಾಕುತ್ತಾ ಅದನ್ನು ಸರಳೀಕರಿಸಿದ್ದು ಅವರ ಹೆಗ್ಗಳಿಕೆ.

ಕಾರ್ಲ್ ಗುತ್ತೆ ಜಾನ್ಸಿ (1905-50) ಅಮೆರಿಕದ ರೇಡಿಯೊ ಎಂಜಿನಿಯರ್‌. ಅಲ್ಲಿಯ ಪ್ರಸಿದ್ಧ ಬೆಲ್‌ ದೂರವಾಣಿ ಕಂಪನಿಯಲ್ಲಿ ಇವನೊಬ್ಬ ತಂತ್ರಕುಶಲಿ. ಆಗ ತಾನೇ ಕಾಲೇಜಿನಿಂದ ಹೊರಬಂದಿದ್ದ ಈ ಕೃಶಾಂಗನನ್ನು ಕಂಪನಿಯು ಗ್ರಾಹಕರ ದೂರವಾಣಿ ಮತ್ತು ರೇಡಿಯೊ ಉಪಕರಣಗಳಲ್ಲಿ ಗಲಭೆ ಉಂಟಾಗುವುದರ ಕಾರಣ ಮತ್ತು ನಿವಾರಣೆ ಶೋಧಿಸಲು ನಿಯೋಜಿಸಿತು (1932)

ಜಾನ್ಸಿ ದೂರದ ಒಂದು ಹಳ್ಳಿಗೆ ಹೋದ. ಅಲ್ಲಿ 30 ಮೀಟರ್‌ ಉದ್ದದ ಗ್ರಾಹಕತಂತು ಸ್ಥಾಪಿಸಿ ಅದು ಸಂಗ್ರಹಿಸಿದ ಅಲೆಗಳನ್ನು ರೇಡಿಯೊ ಉಪಕರಣದ ಮೂಲಕ ಧ್ವನಿಯಾಗಿ ಪರಿವರ್ತಿಸಿ ಆಲಿಸತೊಡಗಿದ. ಮಿಂಚು, ಉಲ್ಕೆ ಮುಂತಾದ ನೈಸರ್ಗಿಕ ಕಾರಕಗಳಿಂದಲೂ ಮನೆಮನೆಗಳ ವಿದ್ಯುದುಪಕರಣಗಳು, ವಿಮಾನದ ಹಾರಾಟ ಮುಂತಾದ ಮಾನವಕೃತ ಕಾರಕಗಳಿಂದಲೂ ಜನಿಸಿದ ರೇಡಿಯೊ ಗಲಭೆಗಳನ್ನು ಪ್ರತ್ಯೇಕವಾಗಿ ಗುರುತಿಸಿ ವಿಶ್ಲೇಷಿಸಲು ಹೂಟೆಹೂಡಿದ. ಈ ಅಧ್ಯಯನವನ್ನು ಆಧರಿಸಿ ಕಂಪನಿಯು, ದೂರವಾಣಿಯಲ್ಲಿಯೂ, ರೇಡಿಯೋದಲ್ಲಿಯೂ ಹಲವಾರು ಸುಧಾರಣೆಗಳನ್ನು ರೂಪಿಸಿತು.

ಆದರೆ, ಜಾನ್ಸಿಗೆ ಅರ್ಥವಾಗದ ಒಂದು ನೂತನ ಸಮಸ್ಯೆ ಜೊತೆಯಲ್ಲಿಯೇ ಬೆಳೆದು ನಿಂತಿತು. ಅದು ಅವನ ರೇಡಿಯೊದಿಂದ ನಿರಂತರವಾಗಿ ಹೊಮ್ಮುತ್ತಿದ್ದ ಹಿಸ್‌ ನಾದ. ನಿಮ್ಮ ರೇಡಿಯೋದ ಇಲ್ಲವೇ ಟಿವಿಯ ಗುಂಡಿ ಒತ್ತಿದ ಅಥವಾ ತಿರುಗಿಸಿದೊಡನೆ ಅದರಿಂದ, ವಿದ್ಯುತ್‌ ಸದ್ದು ಮಾಡುತ್ತ ಹರಿಯುತ್ತಿದೆಯೋ ಎನ್ನುವಂಥ, ಅಸ್ಪಷ್ಟ ನಾದ ಬಿತ್ತರವಾಗುವುದು ಸರಿಯಷ್ಟೆ. ಇದರ ನಿಜಕಾರಣ, ಯಂತ್ರ ರಚನೆಯಲ್ಲಿನ ಅಸಮರ್ಪಕತೆ. ಜಾನ್ಸಿ ಮೊದಲು ಹೀಗೆಯೇ ಊಹಿಸಿದ. ತನ್ನ ಉಪಕರಣಗಳನ್ನು ಪರಿಶೀಲಿಸಿದ, ಪರಿಷ್ಕರಿಸಿದ. ಆದರೂ ಮಲೆನಾಡಿನ ನೀರವ ವನದಲ್ಲಿ ದೂರದ ತೊರೆ ಹರಿಯುವಾಗ ಉಂಟಾಗುವಂಥ ಹಿಸ್‌ ನಾದ ಮಾಯಲಿಲ್ಲ. ಇದು ತನ್ನ ಪರಿಸರದಲ್ಲಿಯ ಯಾವುದೇ ವಿಧವಾದ ವಿದ್ಯುತ್‌ ಕ್ಷೋಭೆಯಿಂದಲೂ ಉಂಟಾದದ್ದಲ್ಲವೆಂದು ಖಚಿತಪಡಿಸಿಕೊಂಡ. 

ಅದೇ ವೇಳೆ ಇನ್ನೊಂದು ಆಶ್ಚರ್ಯಕರ ಸಂಗತಿ ಅವನ ಲಕ್ಷ್ಯ ಸೆಳೆಯಿತು. ಹಿಸ್‌ನಾದದ ಉಗಮಸ್ಥಾನ ಆಕಾಶದಲ್ಲಿ ಚಲಿಸುತ್ತಿದೆ. ಸೂರ್ಯನೊಡನೆ ಮೂಡಿ ಮೇಲೇರಿ ಕೆಳಗಿಳಿದು ಕಂತುತ್ತಿದೆ! ಸಹಜವಾಗಿ ಜಾನ್ಸಿ ತೀರ್ಮಾನಿಸಿದ- ಸೂರ್ಯನೇ ಈ “ರೇಡಿಯೋ ಸಂಗೀತ’ದ ಆಕರ ಎಂದು. ಆದರೆ, ನಿಸರ್ಗ ಇವನ ಜೊತೆ ಕಣ್ಣಾಮುಚ್ಚಾಲೆ ಆಟ ಆಡತೊಡಗಿತು. ದಿನಗಳೆದಂತೆ ಹಿಸ್‌ ನಾದದ ಆಕರ ಸೂರ್ಯನ ಜೊತೆ ತಪ್ಪು ಕಾಲು ಇಡುತ್ತಿತ್ತು. ಅದು ಸೂರ್ಯನಿಗಿಂತ ಮೊದಲು ಮೂಡಿ, ಮೊದಲು ಕಂತುತ್ತಿತ್ತು. ವಾಸ್ತವವಾಗಿ ಇಲ್ಲಿ ಸೂರ್ಯನೇ ತಪ್ಪುಗಾರ. ಅತಿ ದೂರದ ಸ್ಥಿರ ನಕ್ಷತ್ರ ಚಿತ್ರಗಳನ್ನು ಕುರಿತಂತೆ ಸೂರ್ಯ ದಿನದಿಂದ ದಿನಕ್ಕೆ 4 ಮಿನಿಟುಗಳಷ್ಟು ನಿಧಾನವಾಗಿ ಮೂಡಿ ಮುಳುಗುತ್ತದೆ. ಅಂದಮೇಲೆ, ಹಿಸ್‌ನಾದದ ಮೂಲ ಸ್ಥಿರ ನಕ್ಷತ್ರ ವಲಯದಲ್ಲಿ- ನಿರ್ದಿಷ್ಟವಾಗಿ ಆಕಾಶಗಂಗೆಯಲ್ಲಿ ಇದೆಯೆಂದು ಜಾನ್ಸಿ ನಿಗಮಿಸಿದ (deduced) ಆಕಾಶಗಂಗೆಯ ಅಸಂಖ್ಯಾತ (4*10 11) ನಕ್ಷತ್ರಗಳ ಸಾಮೂಹಿಕ ಗಾನವೇ ಈ ಹಿಸ್‌ನಾದ. ಹೀಗೆ ಆರಂಭವಾಯಿತು ರೇಡಿಯೊ ಖಗೋಳ ವಿಜ್ಞಾನ (1932-33) ನಕ್ಷತ್ರವನ್ನು ಕಾಣುವುದು ಮಾತ್ರವಲ್ಲ, ಕೇಳುವುದು ಕೂಡ ಸಾಧ್ಯವಿದೆ ಎಂದು ಆಗ ವೇದ್ಯವಾಯಿತು. 

ದೃಗ್ಗೊಚರ ನಕ್ಷತ್ರಗಳು ಪ್ರಸರಿಸುವ ಬೆಳಕನ್ನು ಸಂಗ್ರಹಿಸಿ ಲಂಬಿಸುವ ಉಪಕರಣ ದೃಗೂªರದರ್ಶಕ. ಇದು ಆಕಾಶವನ್ನು ನೋಡುವ ಕಣ್ಣು! ದೃಗ್ಗೊಚರ ರೇಡಿಯೊ ನಕ್ಷತ್ರಗಳು ಪ್ರಸರಿಸುವ ರೇಡಿಯೊ ಅಲೆಗಳನ್ನು ಸಂಗ್ರಹಿಸಿ ಲಂಬಿಸುವ ಉಪಕರಣ ರೇಡಿಯೊ ದೂರದರ್ಶಕ. ಇದು ಆಕಾಶವನ್ನು ಆಲಿಸುವ ಕಿವಿ!

-ಜಿ.ಟಿ.ನಾರಾಯಣ ರಾವ್‌
(“ಗಣಿತಗಗನಗಮನ’ ಪುಸ್ತಕದಿಂದ ಆಯ್ದ ಭಾಗ)

ಟಾಪ್ ನ್ಯೂಸ್

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

1-v-dsadsa-d

Hooch tragedy ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ: ಅಣ್ಣಾಮಲೈ

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

Tamil-nadu-Kallakuruchi

TamilNadu: ಅಕ್ರಮ ಮದ್ಯ ಸೇವನೆ, ಮೃತರ ಸಂಖ್ಯೆ 34ಕ್ಕೆ ಏರಿಕೆ-ಸಿಐಡಿ ತನಿಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

udayavani youtube

ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

ಹೊಸ ಸೇರ್ಪಡೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1-ml

Ullal; ಯುವಮೋರ್ಚ ಮಂಡಲ ಅಧ್ಯಕ್ಷನ ಎಳೆದಾಡಿದ ಠಾಣಾಧಿಕಾರಿ: ಕಾರ್ಯಕರ್ತರ ಆಕ್ರೋಶ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.