ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರ ಬೋಸ್‌

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Jan 23, 2020, 5:03 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರ ಬೋಸ್‌ರವರು 1897ರ ಜನವರಿ 23ರಂದು ಹುಟ್ಟಿದರು.
2. ಅವರನ್ನು ಎಲ್ಲರೂ ಪ್ರೀತಿಯಿಂದ “ನೇತಾಜಿ’ ಎಂದು ಕರೆಯುತ್ತಿದ್ದರು.
3. “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಕ್ರಾಂತಿಕಾರಿ ಘೋಷಣೆ ಸುಭಾಷರದಾಗಿತ್ತು.
4. ಬಾಲ್ಯದಿಂದಲೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಸುಭಾಷರು, ಇಂಡಿಯನ್‌ ಸಿವಿಲ್‌ ಸರ್ವೀಸ್‌ ಪರೀಕ್ಷೆಯಲ್ಲಿ ನಾಲ್ಕನೇ ರ್‍ಯಾಂಕ್‌ ಗಳಿಸಿದ್ದರು.
5. ಆದರೆ, ಬ್ರಿಟಿಷರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡದೆ ಅವರು ತಮಗೆ ಸಿಕ್ಕ ಸರ್ಕಾರಿ ಹುದ್ದೆಯನ್ನು ತ್ಯಜಿಸಿದರು.
6. ಅಹಿಂಸೆಯಿಂದ ಈ ದೇಶಕ್ಕೆ ಸ್ವಾತಂತ್ರ್ಯ ತರಲು ಸಾಧ್ಯವಿಲ್ಲ ಎಂಬುದು ಸುಭಾಷ್‌ ಚಂದ್ರರ ನಿಲುವಾಗಿತ್ತು.
7. ಬ್ರಿಟಿಷರು ಜೈಲಿಗೆ ಹಾಕಿದಾಗ, ಅಲ್ಲಿಂದ ತಪ್ಪಿಸಿಕೊಂಡು ಸೋವಿಯತ್‌ ಯೂನಿಯನ್‌, ಜರ್ಮನಿ, ಜಪಾನ್‌ ದೇಶಗಳಿಗೆ ಹೋಗಿ, ಅಲ್ಲಿನವರ ಸಹಕಾರ ಕೋರಿದರು.
8. ವಿದೇಶದಲ್ಲಿ ಅವರು ಸಂಘಟಿಸಿದ ಸೇನೆಯೇ, “ಆಜಾದ್‌ ಹಿಂದ್‌ ಫೌಜ್‌’ (ಇಂಡಿಯನ್‌ ನ್ಯಾಷನಲ್‌ ಆರ್ಮಿ- ಐಎನ್‌ಎ).
9. ಸುಭಾಷರು, ಆಸ್ಟ್ರೇಲಿಯಾ ಮೂಲದ ಎಮಿಲಿ ಅವರನ್ನು ಮದುವೆಯಾದರು. ಈ ದಂಪತಿಯ ಪುತ್ರಿಯೇ, ಜರ್ಮನಿಯ ಅರ್ಥಶಾಸ್ತ್ರಜ್ಞೆ ಅನಿತಾ ಬೋಸ್‌.
10. ಅವರು, ಸ್ವಾಮಿ ವಿವೇಕಾನಂದ ಮತ್ತು ಭಗವದ್ಗೀತೆಯ ಬೋಧನೆಯ ಅನುಯಾಯಿಯಾಗಿದ್ದರು.

ಸಂಗ್ರಹ: ಪ್ರಿಯಾಂಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ