ಪರೀಕ್ಷಿತ ಮಹಾರಾಜ


Team Udayavani, May 18, 2017, 3:45 AM IST

parikshit-maharaja.jpg

ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಋಷಿ ಶಮಿಕರ ಆಶ್ರಮವಿತ್ತು. ಅಲ್ಲಿ ಸಾಕಷ್ಟು ಋಷಿಕುಮಾರರು ವೇದಾಧ್ಯಯನದಲ್ಲಿ ನಿರತರಾಗಿದ್ದರು. ಅವರಲ್ಲಿ ಋಷಿ ಶಮಿಕರ ಪುತ್ರನಾದ ಶೃಂಗಿಯೂ ಒಬ್ಬನಾಗಿದ್ದ. ಒಂದು ದಿನ ಋಷಿಕುಮಾರರು ಹೋಮ ಹವನಾದಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಒಟ್ಟು ಮಾಡಲು ಹೋಗಿದ್ದರು. ಋಷಿ ಶಮಿಕರು ಆ ಸಮಯದಲ್ಲಿ ಬ್ರಹ್ಮಧಾನ್ಯದಲ್ಲಿ ನಿರತರಾಗಿದ್ದರು. ಈ ಸ್ಥಿತಿಯಲ್ಲಿ ಅವರಿಗೆ ಹೊರ ಪ್ರಪಂಚದ ಪರಿವೆಯೇ ಇರುತ್ತಿರಲಿಲ್ಲ.

ಇದೇ ಸಮಯದಲ್ಲಿ ಅರಣ್ಯದಲ್ಲಿ ಬೇಟೆ ಆಡಲು ಬಂದ ಪರೀಕ್ಷಿತ ಮಹಾರಾಜರು (ಅರ್ಜುನನ ಮೊಮ್ಮಗ) ಬಿಸಿಲಿನ ಬೇಗೆ ಮತ್ತು ಬೇಟೆಯಾಡಿದ ಆಯಾಸದಿಂದ ಆಶ್ರಯವನ್ನು ಹುಡುಕುತ್ತಾ, ಸಮೀಪದಲ್ಲಿರುವ ಋಷಿ ಶಮಿಕರ ಆಶ್ರಮಕ್ಕೆ ಬರುತ್ತಾರೆ. ಋಷಿ ಶಮಿಕರು ಆಳವಾದ ಧಾನ್ಯದಲ್ಲಿದ್ದು, ಮಹಾರಾಜರು ಆಶ್ರಮ ಪ್ರವೇಶಿಸಿದ್ದು, ನಮಸ್ಕಾರವನ್ನು ಮಾಡಿದ್ದು ಗಮನಕ್ಕೆ ಬರುವುದೇ ಇಲ್ಲ. ಮಹಾರಾಜರು ಪುನಃ “ನಮಗೆ ಬಹಳ ಬಾಯಾರಿಕೆಯಾಗಿದೆ, ನೀರು ಬೇಕು’ ಎಂದು ಕೇಳುತ್ತಾರೆ. ಅದರೆ, ಬ್ರಹ್ಮನ ಸ್ಮರಣೆಯಲ್ಲಿ ಮಗ್ನರಾಗಿದ್ದ ಋಷಿ ಶಮಿಕರಿಗೆ ರಾಜನ ಮಾತುಗಳು ಮೂರ್ನಾಲ್ಕು ಸಲ ಕೂಗಿದರೂ ಕೇಳಿಸುವುದಿಲ್ಲ. ರಾಜ ಪರೀಕ್ಷಿತರಿಗೆ ಸಿಟ್ಟು ಬರುತ್ತದೆ. ಅವರು ಅಂಗಳದಲ್ಲಿ ಸತ್ತು ಬಿದ್ದಿರುವ ಹಾವನ್ನು ಬಾಣದ ತುದಿಯಲ್ಲಿ ಎತ್ತಿ ಅದನ್ನು ಋಷಿ ಶಮಿಕರ ಕೊರಳಿಗೆ ಹಾಕುತ್ತಾರೆ. ಆಶ್ರಮಕ್ಕೆ ಮರಳಿ ಬಂದ ಋಷಿಕುಮಾರರು, ರಾಜಾ ಪರೀಕ್ಷಿತನು ಹೊರಡುತ್ತಿರುವುದನ್ನು ನೋಡುತ್ತಾರೆ ಮತ್ತು ಶೃಂಗಿಯನ್ನು ಕರೆದುಕೊಂಡು ಬರುತ್ತಾರೆ.

ಶೃಂಗಿಯು ಪರೀಕ್ಷಿತರನ್ನು ಆಶ್ರಮಕ್ಕೆ ಬರಮಾಡಿಕೊಳ್ಳಲು ಧಾವಿಸಿ ಬರುತ್ತಾನೆ ಆದರೂ ಕೋಪಗೊಂಡ ಮಹಾರಾಜರು ಹಿಂದಿರುಗದೆ ಹೋಗುತ್ತಾರೆ. ಆಶ್ರಮವನ್ನು ಪ್ರವೇಶಿಸಿದ ಶೃಂಗಿಯು ಋಷಿ ಶಮಿಕರು ಧ್ಯಾನ ಮಗ್ನರಾಗಿರುವುದನ್ನೂ, ಅವರ ಕೊರಳಲ್ಲಿರುವ ಸತ್ತ ಹಾವು ಮತ್ತು ಅದರ ಸುತ್ತ ಒಡಾಡುವ ಇರುವೆಗಳನ್ನೂ ನೋಡಿ ಉದ್ರಿಕ್ತನಾಗುತ್ತಾನೆ. ಕೋಪಗೊಂಡು ಒಂದು ಕೋಲಿನಿಂದ ಹಾವನ್ನು ತೆಗೆದು, “ಯಾರು ಈ ಪಾಪವನ್ನು ಮಾಡಿ¨ªಾರೋ ಅವರು ಇಂದಿನಿಂದ 7 ದಿನಗಳ ಒಳಗೆ ಸರ್ಪರಾಜನಾದ ತಕ್ಷಕನಿಂದ ಮರಣ ಹೊಂದಲಿ’ ಎಂದು ಶಾಪ ಕೊಟ್ಟು, ಕಮಂಡಲದಿಂದ ನೀರನ್ನು ಭೂಮಿಗೆ ಚಿಮಿಕಿಸುತ್ತಾನೆ.

ಅಷ್ಟರಲ್ಲಿ ಎಚ್ಚರಗೊಂಡ ಋಷಿಗಳು ಮಗನು ಕೋಪದಿಂದ ನಡುಗುತ್ತಿರುವುದು ಮತ್ತು ಶಿಷ್ಯರ ಮೊಗದಲ್ಲಿರುವ ಭೀತಿಯನ್ನು ನೋಡಿ ಏನಾಯಿತು ಎಂದು ವಿಚಾರಿಸುತ್ತಾರೆ. ಆಗ ಶೃಂಗಿಯು ನಡೆದ ವಿಷಯವನ್ನು ತಿಳಿಸಿದಾಗ “ಮನುಷ್ಯನು ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳಬಾರದು. ಇಂಥ ವಿಷಯಕ್ಕೆಲ್ಲ ಶಾಪ ಹಾಕಬಾರದು’ ಎಂದು ಶೃಂಗಿಗೆ ಬುದ್ಧಿವಾದ ಹೇಳುತ್ತಾರೆ. “ಮಹಾರಾಜ ಪರೀಕ್ಷಿತರು ವಿಷ್ಣುವಿನ ಅವತಾರವಾಗಿದ್ದು, ರಾಜನಲ್ಲಿ ಕ್ಷಮೆಯನ್ನು ಯಾಚಿಸಿ ಅವರಿಗೆ ಶಾಪದಿಂದ ವಿಮುಕ್ತನಾಗಿ ಮಾಡು’ ಎಂದು ಹೇಳುತ್ತಾರೆ. ಇತ್ತ ರಾಜನು ಅರಮನೆಗೆ ತಲುಪಿದ ನಂತರ ತನ್ನ ದುಷ್ಟ ಕೆಲಸವನ್ನು ನೆನೆಸಿಕೊಂಡು, ತಾನು ತಪ್ಪುಮಾಡಿದೆ. ಋಷಿಗಳಲ್ಲಿ ಕ್ಷಮೆಯಾಚಿಸಬೇಕೆಂದು ನಿಶ್ಚಯಿಸುತ್ತಾನೆ.

– ಹನಮಂತ ಮ. ದೇಶಕುಲಕರ್ಣಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.