- Thursday 12 Dec 2019
ಮೋಸಗಾರ ಹದ್ದು
Team Udayavani, Nov 21, 2019, 4:09 AM IST
ವಿಶಾಲವಾದ ಕಡಲತೀರದಲ್ಲಿ ಕಾಗೆಯೊಂದು ಕಪ್ಪೆಚಿಪ್ಪಿನ ಹುಳುವೊಂದನ್ನು ಹಿಡಿದಿತ್ತು. ಅದನ್ನು ತಿನ್ನಲೆಂದು ಚಿಪ್ಪನ್ನು ತನ್ನ ಕೊಕ್ಕಿನಿಂದ ಜೋರಾಗಿ ಕುಕ್ಕುತ್ತಿತ್ತು. ಇಷ್ಟಾದರೂ ಪ್ರಯತ್ನ ಫಲಿಸಲಿಲ್ಲ. ಇದನ್ನೆಲ್ಲಾ ಗಮನಿಸಿದ ಅಲ್ಲೇ ಸಮೀಪದಲ್ಲಿಯೇ ಕುಳಿತಿದ್ದ ಹದ್ದೊಂದು ಕಾಗೆಯನ್ನು ಕುರಿತು “ಅಯ್ನಾ, ಕಾಗೆ. ಅದು ಬಲಿಷ್ಟವಾದ ಚಿಪ್ಪು. ನೀನು ಎಷ್ಟೇ ಪ್ರಯತ್ನ ಮಾಡಿದರೂ ನಿನ್ನ ಕೊಕ್ಕಿನಿಂದ ಅದನ್ನು ಒಡೆದು ಅದರೊಳಗಿರುವ ಹುಳುವನ್ನು ತಿನ್ನಲು ಸಾಧ್ಯವಿಲ್ಲ’ ಅಂತ ಬುದ್ಧಿವಾದ ಹೇಳಿತು.
ಹದ್ದಿನ ಮಾತನ್ನು ನಿಜವೆಂದು ಅರಿತ ಕಾಗೆ “ಹದ್ದು ಮಾಮ. ಹಾಗಾದರೆ ನಾನೀಗ ಇದನ್ನು ಒಡೆದು ಇದರೊಳಗಿರುವ ಹುಳುವನ್ನು ಹೇಗೆ ತಿನ್ನಲಿ?’ ಎಂದು ಮುಗ್ಧವಾಗಿ ಪ್ರಶ್ನಿಸಿತು. ಅದಕ್ಕೆ ಹದ್ದು “ಶಕ್ತಿಯಿಂದ ಆಗದ್ದನ್ನು ಯುಕ್ತಿಯಿಂದ ಮಾಡಬೇಕು’ ಎಂದು ಉತ್ತರಿಸಿತು. ಕಾಗೆಯು “ಅದು ಹೇಗೆ?’ ಎಂದಾಗ, ಹದ್ದು ಮುಂದುವರೆಸುತ್ತಾ “ಆ ಚಿಪ್ಪನ್ನು ಬಾಯಿಯಲ್ಲಿ ಕಚ್ಚಿಕೊಂಡು ಮೇಲಕ್ಕೆ ಹಾರು, ನಂತರ ಅದನ್ನು ನಾನು ಕುಳಿತಿರುವ ಈ ಬಂಡೆಯ ಮೇಲಕ್ಕೆ ಮೇಲಿನಿಂದ ಎತ್ತಿಹಾಕು. ಬಿದ್ದ ರಭಸಕ್ಕೆ ಚಿಪ್ಪು ಹೊಡೆದು ಹುಳು ಹೊರಬರುತ್ತದೆ. ಆಗ ಅದನ್ನು ಆರಾಮವಾಗಿ ತಿನ್ನು’ ಎಂದು ಹೇಳಿತು. ಕಾಗೆಗೂ ಹದ್ದಿನ ಉಪಾಯ ಸಮಂಜಸವೆನಿಸಿ ಅದು ಚಿಪ್ಪನ್ನು ಬಾಯಲ್ಲಿ ಕಚ್ಚಿ ಮೇಲಕ್ಕೆ ಹಾರಿ ಅದನ್ನು ಮೇಲಿನಿಂದ ಬಂಡೆಯ ಮೇಲಕ್ಕೆ ಹಾಕಿತು. ಹದ್ದು ಹೇಳಿದಂತೆಯೇ ಚಿಪ್ಪು ಒಡೆದು ಛಿದ್ರವಾಗಿ ಅದರೊಳಗಿದ್ದ ಹುಳು ಹೊರಕ್ಕೆ ಬಂದಿತು. ಇದೇ ಸಮಯಕ್ಕೆ ಹೊಂಚುಹಾಕುತ್ತಾ ಕುಳಿತಿದ್ದ ಹದ್ದು ಆ ಹುಳುವನ್ನು ಕಚ್ಚಿಕೊಂಡು ವೇಗವಾಗಿ ಹಾರಿತು. ತಾನು ಮೋಸಹೋದುದನ್ನು ತಿಳಿದ ಕಾಗೆ ಪೆಚ್ಚುಮೊರೆಹಾಕಿ ಮತ್ತೂಂದು ಕಪ್ಪೆಚಿಪ್ಪಿಗಾಗಿ ಹುಡುಕಾಡತೊಡಗಿತು.
– ಪ.ನಾ.ಹಳ್ಳಿ. ಹರೀಶ್ಕುಮಾರ್
ಈ ವಿಭಾಗದಿಂದ ಇನ್ನಷ್ಟು
-
"ಅಜ್ಜೀ, ನನ್ನ ಹೊಸ ಗೆಳೆಯರು ಬಂದಿದ್ದಾರೆ. ಏನಾದ್ರೂ ಕೊಡು ' ಎಂದು ಸಿರಿ ಹೇಳಿದಳು. "ಐದೇ ನಿಮಿಷ ಮಕ್ಕಳಾ... ಇದೋ ಬಂದೆ ' ಎಂದ ಅಜ್ಜಿ ಲಗುಬಗೆಯಿಂದ ಅಡುಗೆಮನೆಗೆ ಹೀಗೆ...
-
ಚಿನ್ನು ಕೈಲಿ ಸ್ಕೇಲ್ ಹಿಡಿದು ಮೋತಿ ನಾಯಿಯ ಬಳಿ "ನಿನ್ನ ಹೆಸರು ಹೇಳು' ಎಂದು ಅಪ್ಪಣೆ ಹೊರಡಿಸುತ್ತಿದ್ದಳು. ಅದಕ್ಕೋ... ಈ ಮಗು ಏನು ಮಾಡಿದರೂ ಚಂದವೇ. ಬಾಲ ಅಲ್ಲಾಡಿಸುತ್ತ...
-
ಮ್ಯಾಜಿಕ್ ಪ್ರದರ್ಶನಕ್ಕೆ ಬಂದವರನ್ನು ನಿಮ್ಮ ಕಡೆ ಸೆಳೆಯಬೇಕು. ಅದಕ್ಕೆ ಏನು ಮಾಡ್ತೀರ? ತಲೆ ಬಿಸಿ ಬೇಡ. ಹೀಗೆ ಮಾಡಿ, ನೀವು ಮ್ಯಾಜಿಕ್ ಪ್ರದರ್ಶನವನ್ನು ನೀಡುತ್ತಿರುವಾಗ...
-
ವ್ಯಾಪಾರಿ "ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು' ಎಂದು ಹೇಳಿದ. ಅರುಣ "ಉಚಿತವಾಗಿ ಬೇಡ. ಇದಕ್ಕೂ...
-
ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು...
ಹೊಸ ಸೇರ್ಪಡೆ
-
ಬೆಂಗಳೂರು: ಈ ವರ್ಷಾಂತ್ಯದೊಳಗೆ ಎಐಸಿಸಿ ಪುನಾರಚನೆಯಾಗಲಿದ್ದು, ಆ ವೇಳೆಯಲ್ಲಿಯೇ ರಾಜ್ಯದಲ್ಲಿಯೂ ಕೆಪಿಸಿಸಿ ಪುನಾರಚನೆ ಮಾಡಲು ಸಿದ್ಧತೆ ನಡೆದಿದೆ. ರಾಷ್ಟ್ರಮಟ್ಟದಲ್ಲಿ...
-
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕೋ, ಬೇಡವೋ ಎಂಬ ಕುರಿತು ಸರಕಾರಕ್ಕೆ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ....
-
ಆರೋಪ ರುಜುವಾತಾಗಬೇಕಾದ ಮೊದಲೇ ಹತ್ಯೆಗೈಯ್ಯಲ್ಪಡುವುದು ಸಾಮಾನ್ಯ ಸಂದರ್ಭದಲ್ಲಿ ಸರಿಯಾದದ್ದಲ್ಲ ನಿಜ. ಆದರೆ ದೇಶದಲ್ಲಿ ದುರುಳರ ಅಟ್ಟಹಾಸ ಮೇರೆ ಮೀರುತ್ತಿರುವಾಗ,...
-
ಬೆಂಗಳೂರು: ಪಾರದರ್ಶಕತೆ ಹಾಗೂ ಯೋಜನೆಗಳಿಗೆ ವೇಗ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ- ಆಡಳಿತ ಜಾರಿಗೊಳಿಸಲು ಮುಂದಾಗಿದ್ದು, ಬರುವ ತಿಂಗಳಿನಿಂದಲೇ...
-
ದಿನದಿನಕ್ಕೆ ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವ ರಾಜಕಾರಣಿಗಳ ಸಂಖ್ಯೆಹೆಚ್ಚುತ್ತಿದೆ. ಜನನಾಯಕರಿಗೆ ಸೂಕ್ಷ್ಮತೆಯ ಪ್ರಜ್ಞೆಯೊಂದನ್ನು ಜನಾಭಿಪ್ರಾಯದ...