ಹಿಮಕರಡಿಗಳಿಗೆ ಹಿಮ ಯಾಕೆ ಬೇಕು?

Team Udayavani, Feb 20, 2020, 4:16 AM IST

ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು.

ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು. ಹಿಮ ಅವುಗಳ ಅಸ್ತಿತ್ವಕ್ಕೆ ಬೇಕೇ ಬೇಕು. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉತ್ತರಧೃವದಲ್ಲಿನ ಹಿಮ ಕರಗುತ್ತಾ ಇರುವುದು ಈಗಾಗಲೇ ಎಲ್ಲೆಡೆ ಆತಂಕ ಸೃಷ್ಟಿಸಿದೆ. ಹಿಮ ಕರಗುವುದರಿಂದ ಪ್ರಕೃತಿಯಲ್ಲಿನ ಸಮತೋಲನ ಏರುಪೇರಾಗಿ ವಿಕೋಪಗಳು ಜರುಗುವವು. ಅದಕ್ಕಿಂತ ಹೆಚ್ಚಾಗಿ ಹಿಮಕರಡಿಗಳಿಗೆ ನೆಲೆಯೇ ಇಲ್ಲವಾಗುವುದು. ಹಿಮ ಇಲ್ಲದೇ ಹೋದರೆ ಅವುಗಳು ಭೂಮಿಯಿಂದಲೇ ನಿರ್ನಾಮವಾಗುವವು. ಹಿಮ ಕರಡಿ ಹಿಮವನ್ನು ಹೇಗೆ ಅವಲಂಬಿಸಿವೆ ಎಂಬುದನ್ನು ತಿಳಿಯೋಣ.

ಪ್ರಯಾಣಿಸಲು
ಅವುಗಳ ಕಾಲುಗಳು ಹಿಮದ ಮೇಲೆ ನಡೆದಾಡಲು ಹೇಳಿಮಾಡಿಸಿದಂತಿವೆ. ಅವುಗಳ ಪಾದ ಸುಮಾರು ಒಂದು ಅಡಿಯಷ್ಟು ಅಗಲವಾಗಿದ್ದು, ಏನಿಲ್ಲವೆಂದರೂ 2 ಇಂಚುಗಳಷ್ಟು ಉದ್ದದ ಉಗುರನ್ನು ಹೊಂದಿವೆ. ಹಿಮದಲ್ಲಿ ಪಾದವನ್ನು ಭದ್ರವಾಗಿ ಊರಲು ಉಗುರು ಸಹಕರಿಸುತ್ತವೆ. ನೀರಿನಲ್ಲಿ ಈಜುವುದಕ್ಕಿಂತ ಹಿಮದ ಮೇಲೆ ನಡೆದಾಡುವುದೇ ಅವುಗಳಿಗೆ ಸುಲಭ. ಈಜಲು ತುಂಬಾ ಶಕ್ತಿ ವ್ಯಯವಾಗುತ್ತದೆ. ಹೀಗಾಗಿ ಅವು ಅಗತ್ಯ ಬಿದ್ದಾಗಲಷ್ಟೇ ನೀರಿಗೆ ಇಳಿಯುತ್ತವೆ. ಅದಕ್ಕಿಂತ ಹೆಚ್ಚಾಗಿ ನಡೆದಾಡುವ ಪ್ರಕ್ರಿಯೆಯಿಂದ ಅವುಗಳ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಇಂಥ ಅನೇಕ ಕಾರಣಗಳಿಂದ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಲು ಹಿಮ ಅಗತ್ಯವಾಗಿ ಬೇಕು.

ನಿದ್ರಿಸಲು
ಹಿಮಕರಡಿಗಳು ಹಿಮದಲ್ಲಿ ಗುಂಡಿ ತೋಡಿ ಅದರಲ್ಲಿ ನಿದ್ರಿಸುತ್ತವೆ. ನಿದ್ರಿಸುವ ಮುನ್ನ ತಮ್ಮ ಮುಂಗಾಲುಗಳನ್ನು ತಲೆದಿಂಬಿನಂತೆ ಬಳಸಿಕೊಳ್ಳುತ್ತವೆ. ಮುಂಗಾಲುಗಳ ಮೇಲೆ ಮುಖವಿಟ್ಟು ಬೆಚ್ಚಗೆ ಮಲಗುತ್ತದೆ. ಅವುಗಳ ದೇಹ ಅತೀವ ಶಾಖವನ್ನು ಉತ್ಪಾದಿಸುತ್ತಲೇ ಇರುತ್ತದೆ. ಬೇಸಗೆಯ ದಿನಗಳಲ್ಲಿ ದೇಹದ ಉಷ್ಣಾಂಶವನ್ನು ಕಳೆದುಕೊಳ್ಳಲು ಹಿಮದ ಮೇಲೆ ಮಲಗುವುದನ್ನು ನೋಡಬಹುದು. ಇದರಿಂದ ದೇಹ ತಂಪಾಗುತ್ತದೆ. ಅಂದರೆ ಹಿಮಕರಡಿಗಳ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು, ತಮಗೆ ಬೇಕಾದ ಹಾಗೆ ನಿಯಂತ್ರಿಸಲು ಹಿಮ ಮುಖ್ಯ ಪಾತ್ರ ವಹಿಸುತ್ತದೆ.

ಬೇಟೆಯಾಡಲು
ಹಿಮಕರಡಿಗಳ ದೇಹ ಗಾತ್ರ ಅಗಾಧವಾದುದು ಎಂಬುದು ನಿಮಗೆ ಗೊತ್ತಿರುತ್ತದೆ. ಅದರಿಂದಾಗಿ ಬಹಳ ವೇಗವಾಗಿ ಚಲಿಸಿ ತಮ್ಮ ಆಹಾರವನ್ನು ಬೇಟೆಯಾಡುವುದು ಅವುಗಳಿಗೆ ಕಷ್ಟದ ಕೆಲಸ. ಅದರಲ್ಲೂ ಸಮುದ್ದಕ್ಕಿಳಿದು ಈಜುತ್ತಾ ಬೇಟೆಯಾಡುವುದು ತುಂಬಾ ತ್ರಾಸದಾಯಕ ಕೆಲಸ ಮತ್ತು ಬೇಟೆ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗಾಗಿ ಅವುಗಳು ಒಂದು ಸುಲಭ ವಿಧಾನವನ್ನು ಹುಡುಕಿವೆ. ಅವುಗಳ ಮುಖ್ಯ ಆಹಾರ ಸೀಲ್‌ಗ‌ಳು. ಅವು ನೀರಿನ ಮೇಲೆ ತೇಲುವ ಹಿಮದ ಹಾಳೆಯನ್ನು ಬೇಧಿಸಿಕೊಂಡು ಬರುತ್ತವೆ. ಅವು ಮೇಲಕ್ಕೆ ಬರುವುದನ್ನೇ ಹಿಮಕರಡಿಗಳು ಹೊಂಚು ಹಾಕಿ ಕಾಯುತ್ತವೆ. ತಲೆಯೆತ್ತಿ ಮೇಲಕ್ಕೆ ಬರುತ್ತಿದ್ದಂತೆ ಹಿಮಕರಡಿಗಳು ಬೇಟೆಯಾಡುತ್ತವೆ.

ಸಂತಾನೋತ್ಪತ್ತಿ
ಹಿಮಕರಡಿಗಳು ತಮ್ಮ ಜೀವನದ ಹೆಚ್ಚಿನ ಪಾಲನ್ನು ಒಬ್ಬಂಟಿಯಾಗಿ ಕಳೆಯುವವು. ಸಂತಾನೋತ್ಪತ್ತಿ ಸಂದರ್ಭದಲ್ಲಿ ಗಂಡು ಹಿಮಕರಡಿಗಳು ಹೆಣ್ಣನ್ನು ಅರಸುತ್ತಾ ಹೋಗುತ್ತವೆ. ವಾಸನೆಯನ್ನು ಗ್ರಹಿಸುವ ಮೂಲಕ ಹೆಣ್ಣು ಹಿಮಕರಡಿಗಳಿಗಾಗಿ ತುಂಬಾ ದೂರವನ್ನು ಕ್ರಮಿಸುತ್ತವೆ. ಈಗೀಗ ತಾಪಮಾನ ಏರಿಕೆಯಿಂದಾಗಿ ಹಿಮಗಳು ಬಿರುಕು ಬಿಡುತ್ತಿರುವುದರಿಂದ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸುವುದೇ ದುಸ್ತರವಾಗಿಬಿಟ್ಟಿದೆ. ಇದರಿಂದಾಗಿ ಹಿಮಕರಡಿಗಳು ಒಂದನ್ನೊಂದು ಸಂಧಿಸುವುದೇ ಕಷ್ಟವಾಗುವ ಪರಿಸ್ಥಿತಿ ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ

  • ಮಣಿಪಾಲ: ಎಲ್ಲರೂ ಇಟಲಿಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೊರಡಲು ಸಾಲಿನಲ್ಲಿ ನಿಂತಿರುವಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಈ ವಿದ್ಯಾರ್ಥಿನಿ, ನಾನು ಇಟಲಿಯಲ್ಲೇ...

  • ಹೊಸದಿಲ್ಲಿ/ವಾಷಿಂಗ್ಟನ್‌: ಕೋವಿಡ್‌ 19 ವಿಚಾರದಲ್ಲಿ ಅಸಡ್ಡೆ ಯಿಂದಲೇ ನಡೆದುಕೊಳ್ಳುತ್ತಿರುವ ಅಮೆರಿಕ ಈಗ ಅದಕ್ಕೆ ಬೆಲೆ ತೆರುತ್ತಿದ್ದು, ಸೋಂಕುಪೀಡಿತರ ಸಂಖ್ಯೆ...

  • ಮಂಗಳೂರು / ಮಣಿಪಾಲ: ಕೋವಿಡ್‌-19 ವಿಸ್ತರಣೆಯನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಶನಿವಾರ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಲಾಕ್‌ಡೌನ್‌ ನಡೆಸುವಂತೆ ಜಿಲ್ಲಾಡಳಿತ...

  • ಜಗತ್ತು ನಿಶ್ಚಲವಾಗಿಬಿಟ್ಟಿದೆ. ಕೋವಿಡ್ 19 ಎಂಬ ಮಹಾರೋಗವು ಸದಾ ಗಿಜುಗುಡುತ್ತಿದ್ದ ಮಹಾನಗರಗಳನ್ನೆಲ್ಲ ಬಿಕೋ ಎನ್ನುವಂತೆ ಮಾಡಿಬಿಟ್ಟಿದೆ. ಕಿಕ್ಕಿರಿದು ತುಂಬಿರುತ್ತಿದ್ದ...

  • ಉಡುಪಿ: ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್‌ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಸಾರ್ವಜನಿಕ...