Udayavni Special

ಹುಡುಗಿಯ ಚುಂಬನ ಮತ್ತು ಆಗಸದ ತಾರೆ


Team Udayavani, May 24, 2021, 1:47 PM IST

bahumuki

ಆಕೆಯ ಹೆಸರು ಆನೀ ಜಂಪ್‌ ಕ್ಯಾನನ್‌. ಅಮೆರಿಕದ ಡೊವರ್‌ನಲ್ಲಿ ಹುಟ್ಟಿದಾಕೆ. ಬಾಲ್ಯದಲ್ಲಿ ಬಂದುಹೋದ ಸ್ಕಾರ್ಲೆಟ್‌ ಜ್ವರ ಆಹುಡುಗಿಯ ಶ್ರವಣ ಸಾಮರ್ಥ್ಯವನ್ನು ಶಾಶ್ವತವಾಗಿ ಕಿತ್ತುಕೊಂಡಿತು. ಆಬಾಲೆಗೆ ಆಕಾಶದ ಬಗ್ಗೆ ಅದಮ್ಯ ಕುತೂಹಲ. ಚುಕ್ಕಿಗಳನ್ನೆಣಿಸುತ್ತ ಇಡೀ ಇರುಳನ್ನೂ ಕಳೆದು ಬಿಡುವಂಥ ಆಸಕ್ತಿ. ಆಕೆ ಆರೇಳು ವರ್ಷದ ಬಾಲೆಯಾಗಿದ್ದಾಗಲೇ ತಾಯಿ ಆಕಾಶದಲ್ಲಿಚುಕ್ಕಿಗಳನ್ನೂ, ನಕ್ಷತ್ರಪುಂಜಗಳನ್ನೂ ಗುರುತಿಸುವುದನ್ನುಕಲಿಸಿದಳು.ಮನೆಯ ಅಟ್ಟವೇರಿ, ಹಳೆಯದೊಂದು ಪುಸ್ತಕದ ನೆರವಿನಲ್ಲಿ ಆಕಾಶದತಾರಾಪುಂಜಗಳನ್ನು ಗುರುತಿಸುವ ಆಸಕ್ತಿಯನ್ನು ಆನೀ ಬೆಳೆಸಿಕೊಂಡಳು.

ನಕ್ಷತ್ರಗಳ ಬಗ್ಗೆ ಹೆಚ್ಚು ತಿಳಿಯಬೇಕಾದರೆ ಗಣಿತ, ಭೌತಶಾಸ್ತ್ರಗೊತ್ತಿರಬೇಕೆಂದು ಅವನ್ನು ಅಭ್ಯಾಸ ಮಾಡಿದಳು. ಕಾಲೇಜಿಗೆಹೋದಳು. ವಿಜ್ಞಾನ ಸಂಸ್ಥೆಗಳಲ್ಲಿ ನೌಕರಿ ಸಂಪಾದಿಸಿದಳು. ವಿಜ್ಞಾನತಂತ್ರಜ್ಞಾನಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಕೊಳ್ಳುವುದು, ಅವಕಾಶಗಿಟ್ಟಿಸುವುದು ಅತ್ಯಂತ ವಿರಳ ಸಂದರ್ಭವಾಗಿದ್ದಾಗ ಆಕೆ ಖಭೌತವಿಜ್ಞಾನದಲ್ಲಿ ದೊಡ್ಡ ಸಾಧನೆಗಳನ್ನೇ ಮಾಡಿಬಿಟ್ಟಿದ್ದಳು!

ನಕ್ಷತ್ರಗಳು ಸೂಸುವ ಬೆಳಕಿನ ಆಧಾರದಲ್ಲಿ ಅವುಗಳ ಗಾತ್ರ, ದೂರ,ಉಷ್ಣತೆ, ವಯಸ್ಸು ಇತ್ಯಾದಿಗಳನ್ನು ಪತ್ತೆಹಚ್ಚಬಹುದು ಎಂದುತೋರಿಸಿಕೊಟ್ಟವಳು ಆನೀ. ಮಾತ್ರವಲ್ಲ, ಬೆಳಕಿನ ಪ್ರಮಾಣ, ಬಣ್ಣಇತ್ಯಾದಿಗಳನ್ನು ಬಳಸಿಕೊಂಡೇ ನಕ್ಷತ್ರಗಳ ಒಳಗೆ ಯಾವ ಧಾತು ಯಾವ ಪ್ರಮಾಣದಲ್ಲಿದೆ ಎಂಬುದನ್ನು  ಪತ್ತೆಹಚ್ಚಬಹುದೆಂದು ಆನೀ ತೋರಿಸಿಕೊಟ್ಟಳು!

ತಾರೆಗಳನ್ನು ಅವುಗಳ ಬೆಳಕಿನ ವೈವಿದ್ಯತೆಗ ‌ ಳಿಗೆ ಅನುಗುಣವಾಗಿ ಇಂಗ್ಲಿಷ್‌ ವರ್ಣಮಾಲೆಯ ಪ್ರಥಮಾಕ್ಷರಗಳಿಂದ ಸೂಚಿಸುವ ಹೊಸ ಕ್ರಮವನ್ನು ಆನೀ ಪ್ರಾರಂಭಿಸಿದಳು. ಹೀಗೆ ಪ್ರಥಮಾಕ್ಷರವಾದ ಅ ಯಿಂದ ಖ ವರೆಗೆ ಅಕ್ಷರಗಳನ್ನು ಬಳಸಿಕೊಳ್ಳಲಾಯಿತು.

ಆದರೆ ಕಾಲಾಂತರದಲ್ಲಿ, ಆ ವರ್ಗೀಕರಣವನ್ನು ಮತ್ತೆ ಪರಿಷ್ಕರಿಸುವ ಅಗತ್ಯ ಕಂಡುಬಂತು. ಕೆಲವು ಗುಂಪುಗಳನ್ನು ಒಂದೇ ಗುಂಪಾಗಿಪರಿಗಣಿಸಲಾಯಿತು. ಕೆಲವು ಗುಂಪುಗಳನ್ನು ಆಚೀಚೆ ಬರೆದು ಹೊಸಪಟ್ಟಿ ಸಿದ್ಧಪಡಿಸಲಾಯಿತು.ಹಲವು ರೀತಿಯ ‌ ಪರಿಷ್ಕರಣೆಗಳ ‌ ನ್ನು ಹಾದುಬಂದ ಮೇಲೆ O, B,A, F, G,
K, M, R, N, S ಎಂಬ ಪಟ್ಟಿ ಉಳಿಯಿತು.

ಇದರಲ್ಲಿ ವರ್ಣಮಾಲೆಯ ಅಕ್ಷರಗಳು ಅನುಕ್ರಮವಾಗಿರಲಿಲ್ಲ. ಹಾಗಾಗಿ ಇದನ್ನು ನೆನಪಿಟ್ಟುಕೊಳ್ಳುವುದು ಹೇಗೆಂಬುದು ಖಗೋಳತಜ್ಞರಿಗೆ ದೊಡ್ಡ ತಲೆ ನೋವಾಯಿತು. ಈ ಪಟ್ಟಿಯನ್ನು ನೆನಪಿಡಲು ಹಲವುನೆನೆ ಗುಬ್ಬಿಗಳು ರಚನೆಯಾದವು. ಉದಾಹರಣೆಗೆ ತನ್ನ ರೂಮ್ ಮೇಟ್‌ನಿಂದ ಬಹುಶಃ ತೊಂದರೆಗೊಳಗಾಗಿದ್ದ ಹುಡುಗನೊಬ್ಬ Brutal And Fearless Gorilla, Kill My Roommate Next Saturday ಎಂಬನೆನೆ ಗುಬ್ಬಿ ರಚಿಸಿದ. ಈ ವಾಕ್ಯದ ಪ್ರತಿ ಶಬ್ಧದ ಪ್ರಥಮಾಕ್ಷ ‌ ರ ತೆಗೆದು ಜೋಡಿಸಿದರೆ ಅದು ಮೇಲೆಕೊಟ್ಟ ಪಟ್ಟಿಯಾಗುತ್ತದೆ! ‌

ಸರಕಾರ ವಿಜ್ಞಾನ-ತಂತ್ರಜ್ಞಾನದ ಸಂಶೋಧನೆಗಳಿಗೆ ಸಹಕಾರಕೊಡುತ್ತಿಲ್ಲ; ಧನಸಹಾಯ ಮಾಡುತ್ತಿಲ್ಲ ಎಂಬ ಸಿಟ್ಟಿನ ಲ್ಲಿದ್ದ ವಿಜ್ಞಾನಿಗಳು Official BureaucratsAt Federal Government Kill Many Researchers’ National Support ಎಂಬ ನೆನೆಗುಬ್ಬಿ ಮಾಡಿ ಸರಕಾÃವ ‌ ನ್ನು ಚುಚ್ಚಿದರು. ಹೆನ್ರಿ ನೊರಿಸ್‌ರಸೆಲ್‌ ಎಂಬಖಗೋಳತಜ್ಞ ಮಾತ್ರ ರೊಮ್ಯಾಂಟಿಕ್‌ಮೂಡಿನಲ್ಲಿದ್ದನೇನೋ ; Oh, BeAFine Girl! Kiss Me Right Now Sweet heart ಎಂಬ ನೆನೆಗುಬ್ಬಿಯನ್ನು ಬರೆದ.

ರೋಹಿತ್‌  ಚಕ್ರತೀರ್ಥ

ಟಾಪ್ ನ್ಯೂಸ್

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

rgsfaew

ಮೂರ್ತಿ ತಯಾರಕರಿಗೆ 3ನೇ ಅಲೆ ಭೀತಿ

fhgdfghtrytr

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ : ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸ್ಫೋಟಕಗಳು ವಶಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

adline castelino

ವಿಶ್ವ ಸುಂದರಿ ಸುಮರಾಶಿಯಲ್ಲಿ ಕನ್ನಡದ ಕುವರಿ!

MUST WATCH

udayavani youtube

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ :ತಲಪಾಡಿಯಲ್ಲಿ ಬಿಗು ಬಂದೋಬಸ್ತ್

udayavani youtube

273 ದಿನಗಳು 8300 ಕಿ.ಮೀ ಪಾದಯಾತ್ರೆ !

udayavani youtube

ಅಪರೂಪದಲ್ಲಿ ಅಪರೂಪ ಈ ಬಿಳಿ ಹೆಬ್ಬಾವು!

udayavani youtube

ಎಲ್ಲಾ ಶಾಸಕರನ್ನು ಸಚಿವರನ್ನಾಗಿಸಲು ಸಾಧ್ಯವಿಲ್ಲ : ಬೊಮ್ಮಾಯಿ

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

ಹೊಸ ಸೇರ್ಪಡೆ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.