ಲಕ್ಷ್ಮೀ ದೇವಿ ಎಲ್ಲಿ ನೆಲೆಸುತ್ತಾಳೆ?

Team Udayavani, Nov 17, 2018, 5:30 AM IST

ಈ ಸಂಪತ್ತಿನ ಪ್ರತಿರೂಪವೇ ಲಕ್ಷ್ಮೀದೇವಿ. ಹಾಗಾಗಿಯೇ, ಲಕ್ಷ್ಮೀಯ ಕೃಪಾಕಟಾಕ್ಷವೊಂದಿದ್ದರೆ ಸಾಕು ಎಂಬುದು ಎಲ್ಲರ ಅಭಿಲಾಷೆ; ಪ್ರಾರ್ಥನೆ ಕೂಡ. ಎಲ್ಲಿ ಲಕ್ಷ್ಮೀ ನೆಲೆಸಿ¨ªಾಳ್ಳೋ ಅಲ್ಲಿ ದಾರಿದ್ರ್ಯ ಉಂಟಾಗುವುದಿಲ್ಲ. ವಿದ್ಯೆ, ಧನ, ಧಾನ್ಯ, ಸಂಪತ್ತು, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಗೆ ಲಕ್ಷ್ಮೀ ಕಾರಣಳು. 

ಎಲ್ಲಿ ಧರ್ಮವು ರಕ್ಷಿಸಲ್ಪಡುತ್ತದೋ ಅಲ್ಲಿ ದೇವರು ನೆಲೆಗೊಳ್ಳುತ್ತಾನೆ ಮತ್ತು ಅವನು ನಮ್ಮನ್ನು ರಕ್ಷಿಸುತ್ತಾನೆ. ದೇವರು ಎಂಬುದು ಸನ್ಮಾರ್ಗದ ನಂಬಿಕೆ, ನಡವಳಿಕೆ. ಧರ್ಮದ ಹಾದಿಯಲ್ಲಿ ದೇವರು ಎಂಬ ಶಕ್ತಿಯು ಸದಾ ಉಚ್ಚರಿಸಲ್ಪಡುತ್ತಲೇ ಇರುತ್ತದೆ. ಕಾರಣ, ನಾವು ಏನನ್ನು ನಂಬುವುದಕ್ಕೂ ನಮಗೆ ಕಾರಣಗಳು ಬೇಕು. ಹಾಗೆಂದು, ಸಕಾರಣವನ್ನು ಹುಡುಕುತ್ತಲೇ ಬದುಕಿನ ಸಮಯವನ್ನು ವ್ಯರ್ಥಮಾಡುವುದರಲ್ಲೂ ಅರ್ಥವಿಲ್ಲ. ಈ ಆಧ್ಯಾತ್ಮದ 
ಅಥವಾ ಧರ್ಮದ ವಿಶೇಷವೆಂದರೆ, ಕಾರಣವನ್ನು ಹುಡುಕದೇ ಧರ್ಮವನ್ನು ನಂಬುತ್ತ ಹೋದರೆ ಕಾರಣಗಳು 
ಕಣ್ಣೆದುರಿಗೇ ಬಂದು ನಿಲ್ಲುತ್ತವೆ! ಇದನ್ನು ಮೊದಲು ಅರಿಯಬೇಕು.

ಕಾಲ ಬದಲಾದಂತೆ, ಬದುಕಿನ ರೀತಿಗಳೂ ಬದಲಾಗಿವೆ. ಕಾಡಿನ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ಮಾನವ ಆಮೇಲೆ ಪರಸ್ಪರ ವಸ್ತುಗಳನ್ನು ಬದಲಾಯಿಸಿಕೊಂಡು ಬದುಕುವ ತನಕ ಬೆಳವಣಿಗೆ ಹೊಂದಿ, ಈಗ ಪರಸ್ಪರ ಬದಲಾಯಿಸಲ್ಪಡುತ್ತಿದ್ದ ವಸ್ತುಗಳು, ಈಗ ಹಣದ ರೂಪಕ್ಕೆ ರೂಪಾಂತರ ಹೊಂದಿದೆ. ಈ ರೂಪಾಂತರದಿಂದ ಪರಾವಲಂಬಿತನವು ಗೋಚರದಿಂದ ಅಗೋಚರ ರೂಪಕ್ಕೆ ಪರಿವರ್ತಿತವಾಗಿದೆ.  ಸಂಪತ್ತು ಎಂದು ಕರೆಸಿಕೊಳ್ಳುತ್ತಿದ್ದ ವಸ್ತುಗಳೆಲ್ಲವೂ ಕಾಣದಾಗಿ ಈಗ ಕೇವಲ ಹಣ ಮಾತ್ರ ಸಂಪತ್ತೆನಿಸಿದೆ. ಹಣವಿದ್ದರೆ ಮಾತ್ರ ಬದುಕು; ಇಲ್ಲವೆಂದರೆ ಭೂಲೋಕವೂ ನರಕವೇ!

ಈ ಸಂಪತ್ತಿನ ಪ್ರತಿರೂಪವೇ ಲಕ್ಷ್ಮೀದೇವಿ. ಹಾಗಾಗಿಯೇ, ಲಕ್ಷಿ$¾ಯ ಕೃಪಾಕಟಾಕ್ಷವೊಂದಿದ್ದರೆ ಸಾಕು ಎಂಬುದು ಎಲ್ಲರ ಅಭಿಲಾಷೆ; ಪ್ರಾರ್ಥನೆ ಕೂಡ. ಎಲ್ಲಿ ಲಕ್ಷಿ$¾à ನೆಲೆಸಿ¨ªಾಳ್ಳೋ ಅಲ್ಲಿ ದಾರಿದ್ರ್ಯ ಉಂಟಾಗುವುದಿಲ್ಲ. ವಿದ್ಯೆ, ಧನ, ಧಾನ್ಯ, ಸಂಪತ್ತು, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಗೆ ಲಕ್ಷಿ$¾ ಕಾರಣಳು. ಲಕ್ಷ್ಮೀಯು ಬ್ರಹ್ಮನ ಮಾನಸಪುತ್ರ ಭೃಗುಮಹರ್ಷಿ ಮತ್ತು ಖ್ಯಾತಿ ದಂಪತಿಗಳ ಸುಪುತ್ರಿ. ಮುಂದೆ ತನಗೆ ಯೋಗ್ಯವಾದ ವರನು ಯಾರು ಎಂದು ಹುಡುಕುತ್ತ, ವಿಷ್ಣುವೇ ಯೋಗ್ಯ ಎಂದು ತಿಳಿದು ಆತನ ಪತ್ನಿಯಾದಳು. ವಿಷ್ಣುವಿನ ವಕ್ಷಸ್ಥಲದಲ್ಲಿ ಕಮಲಾಸನಳಾಗಿ, ಪದ್ಮನೇತ್ರೆಯಾಗಿ, ಪದ್ಮಹಸ್ತೆಯಾಗಿ, ಕಮಲಮುಖೀಯಾಗಿ, ಸಂಪತ್ತು, ವಿದ್ಯೆ, ಯಜ್ಞ, ಮಂತ್ರ ಮತ್ತು ಶ್ರದ್ಧೆಗಳಿಗೆ ಸಾಕಾರರೂಪಳಾಗಿ ಇರುವವಳೇ ಈ ಲಕ್ಷ್ಮೀ.

ಈ ಲಕ್ಷ್ಮೀ ಎಲ್ಲಿ ನೆಲೆಸುತ್ತಾಳೆ? ಯಾರಿಗೆ ಸಂಪತ್ತನ್ನು ಕರುಣಿಸುತ್ತಾಳೆ?
ಧರ್ಮಃ ಸತ್ಯಂ ತಥಾ ವೃತ್ತಂ ಬಲಂ ಚೈವ ತಪಾಪ್ಯಹಮ… |
ಶೀಲಮೂಲಾ ಮಹಾಪ್ರಾಜ್ಞ ಸದಾ ನಾಸ್ತಯ ಸಂಶಯಃ ||

ಎಲ್ಲಿ ಧರ್ಮ, ಸತ್ಯ, ಸದಾಚಾರವಿರುತ್ತದೆಯೋ ಅಲ್ಲಿ ಲಕ್ಷ್ಮೀ ನೆಲೆನಿಲ್ಲುತ್ತಾಳೆ. ಇದಕ್ಕೆ ಪೂರಕವಾದ ಪುರಾಣ ಕಥೆಯೊಂದಿದೆ. ಪ್ರಹ್ಲಾದನು ಸ್ವರ್ಗದ ಒಡೆತನವನ್ನು ಪಡೆದಾಗ, ಇಂದ್ರನು ಈತನಿಂದ ಸ್ವರ್ಗವನ್ನು ಹಿಂಪಡೆಯಲು ಬ್ರಾಹ್ಮಣ ರೂಪದಿಂದ ಪ್ರಹ್ಲಾದನ ಶಕ್ತಿಗೆ, ಶ್ರೇಯಸ್ಸಿಗೆ, ಸತ್ಯಕ್ಕೆ ಕಾರಣವಾದ ಧರ್ಮಮೂಲವನ್ನು ಪ್ರಹ್ಲಾದನಲ್ಲಿ ಬೇಡಿದ. ಪ್ರಹ್ಲಾದ ಇದನ್ನು ಆತನಿಗೆ ನೀಡಿದ ತಕ್ಷಣವೇ ಲಕ್ಷ್ಮೀ ಆತನನ್ನು ಬಿಟ್ಟು ಇಂದ್ರನನ್ನು ಸೇರಿಕೊಂಡಳು. 
ಏಕೆಂದರೆ, ಧರ್ಮದ ಮೂಲ ಇಂದ್ರನ ಬಳಿ ಬಂದಿತ್ತು. ಇದರಿಂದ ಸತ್ಯ, ಶಕ್ತಿ, ಸದಾಚಾರ, ಧರ್ಮಗಳೆಲ್ಲವೂ ಇಂದ್ರನ ಬಳಿಗೇ ಬಂದುದರಿಂದ ಲಕ್ಷ್ಮೀಯು ಇಂದ್ರನಲ್ಲಿ ನೆಲೆಯಾದಳು.

ದೇವರು ಎಂಬ ಭಾವ ಹುಲುಮಾನವನ ಜೀವನವನ್ನು ಪಾವನವಾಗಿಸುವ ಮಾರ್ಗಗಳನ್ನೇ ಹೇಳಿವೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ. ಮನುಷ್ಯನು ಶೀಲ ಕಳಕೊಂಡ ಮೇಲೆ ಶಿಲೆಗಿಂತಲೂ ಕಡೆ ಎಂಬ ಗಾದೆ ಮಾತಿದೆ. ಶೀಲ ಎಂಬುದು ಶುದ್ಧತೆಯ ಸಂಕೇತ. ಮನಸ್ಸು ಮೊದಲು ಶುದ್ಧವಾಗಬೇಕು. ಮನಸ್ಸು ಶುದ್ಧವಾಗಿದ್ದರೆ ಮಾತ್ರ ಧರ್ಮದ ಸದಾಚರಣೆ ಸಾಧ್ಯ, ಧರ್ಮದ ಸದಾಚರಣೆಯಿಂದ ದೇಹವು ಸದ್ವಿವಿನಿಯೋಗವಾಗುತ್ತದೆ. ಆಗ ನಾವು ಗಳಿಸುವ ಸಂಪತ್ತುಗಳೂ ಸನ್ಮಾರ್ಗದಿಂದಲೇ ಬರುತ್ತವೆ. ಹಾಗಾದಾಗ ಮಾತ್ರ, ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲೆ ಉಂಟಾಗಿದ್ದು ಉಳಿಯುತ್ತದೆ; ಉಳಿಸಿದ್ದು ದುಪ್ಪಟ್ಟಾಗುತ್ತದೆ.

ದೇವಪೂಜೆಗೆ, ಯಜ್ಞಯಾಗಾದಿಗಳಿಗೆ ಗೋವಿನ ಹಾಲು, ತುಪ್ಪ, ಮೊಸರು ಬಳಕೆಯಾಗುತ್ತದೆ. ಗೋವಿನ ತುಪ್ಪದಿಂದಲೇ ಅಗ್ನಿ ದೇವನನ್ನು ಆಹ್ವಾನಿಸಿ ಆ ಮೂಲಕ ಹವಿಸ್ಸನ್ನು ದೇವರಿಗೆ ಅರ್ಪಿಸಲಾಗುತ್ತದೆ. ಗೋವಿಗೂ ನಮ್ಮ ದೇವರರೂಪಗಳಿಗೂ ಅವಿನಾಭಾವ ಸಂಬಂಧಗಳಿವೆ.

ಲಕ್ಷ್ಮೀ ಒಲಿಯಬೇಕೆಂದರೆ …

ಶ್ರಮ ಪಡದೇ, ಬೆವರು ಹರಿಸದೇ ಏಕಾಏಕಿ ಸಂಪತ್ತು ಗಳಿಸಲು ಸಾಧ್ಯವಿಲ್ಲ. ಕಷ್ಟಪಡದೇ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಲಕ್ಷ್ಮೀಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಅನಾರೋಗ್ಯದ ಸಂದರ್ಭ, ಅಥವಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಬೆಳಿಗ್ಗೆ ವಿಳಂಬವಾಗಿ ಏಳುವುದು, ಸಂಜೆ ವೇಳೆ ಮಲಗುವುದು ಸೇರಿದಂತೆ ಸೋಮಾರಿತನ ಬಿಡಬೇಕು ಎನ್ನುತ್ತವೆ ಹಿಂದಿನಿಂದಲೂ ನಡೆದುಬಂದಿರುವ ನಂಬಿಕೆಗಳು. ವಿಶ್ವಾಸವಿಡುವುದು:  ಸಂಪತ್ತು, ಸಂವೃದ್ಧಿಯನ್ನು ಗಳಿಸಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು ಹಾಗಾದಲ್ಲಿ ಮಾತ್ರ ಲಕ್ಷ್ಮೀ ದೇವಿಯೂ ನಮಗೆ ಒಲಿಯುತ್ತಾಳೆ.

ಅತಿ ಆಸೆ: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ. ಅದರಂತೆ,  ಶ್ರೀಮಂತಿಕೆಯ ಆಸೆ ಗಳಿಸಿದಷ್ಟೂ ಮತ್ತಷ್ಟು ಗಳಿಸಬೇಕೆಂಬ ಅತಿ ಆಸೆಯೂ ಲಕ್ಷ್ಮೀಯ ಸಾನ್ನಿಧ್ಯ ಇಲ್ಲದಂತೆ ಮಾಡುತ್ತದೆ. ಆದ್ದರಿಂದ ಅತಿ ಆಸೆ, ಸ್ವಾರ್ಥ, ಕೋಪ ಇವುಗಳನ್ನು ತ್ಯಜಿಸುವ ಮೂಲಕ ಲಕ್ಷ್ಮೀಯ ಆಶೀರ್ವಾದಕ್ಕೆ ಪಾತ್ರರಾಗಬಹುದಂತೆ.

ಪೂಜೆ ಹೀಗಿರಲಿ…
ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುವ ಹಿಂದಿನ ದಿನವೇ ಪೂಜೆಗೆ ಬೇಕಾದ ಎÇÉಾ ಸಾಮಗ್ರಿಗಳನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ: ಸೀರೆ, ಹಣ್ಣು, ಅಲಂಕಾರಿಕ ವಸ್ತು, ಶುದ್ಧ ನೀರು ಇತ್ಯಾದಿ… ಲಕ್ಷ್ಮೀಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದಾದರೆ ಹಸಿರು ಬಣ್ಣದ ಸೀರೆಯನ್ನು ತೊಡಿಸಬೇಕು. ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಬೇಕು. ದೀಪವನ್ನು ತುಪ್ಪದಿಂದ ಹಚ್ಚಬೇಕು. ಪೂಜಾ ಸ್ಥಳವನ್ನು ತುಂಬಿದ ಕೊಡದ ನೀರಿನಿಂದ ಶುದ್ಧ ಮಾಡಿ. ಸ್ಥಳದಲ್ಲಿ ಅಷ್ಟದಳದ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಬೇಕು.
ಕಲಶಕ್ಕೆ ತುಂಬಿದ ಕೊಡದ ಶುದ್ಧ ನೀರು ಹಾಕಿ/ಶುದ್ಧ ಅಕ್ಕಿ ಹಾಕಬೇಕು. ಇದರ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಯಾವುದೇ ನಾಣ್ಯ, ದ್ರಾಕ್ಷಿ$, ಗೋಡಂಬಿ, ಕರ್ಜೂರ, ಬಾದಾಮಿ, ಕಲ್ಲುಸಕ್ಕರೆ ಹಾಕಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • "ಶಾಂತಿ ಹುಟ್ಟುವುದೇ ನಗುವಿನಿಂದ' ಎನ್ನುವ ಜೀವನತತ್ತ್ವದಲ್ಲಿ ನಂಬಿಕೆಯಿಟ್ಟು, ದೀನರ, ರೋಗಿಗಳ, ನಿರ್ಗತಿಕರಿಗೆ ವಾತ್ಸಲ್ಯದ ಚಿಕಿತ್ಸೆ ನೀಡಿದವರು, ಮದರ್‌ ತೆರೇಸಾ....

  • ರಾಜಧಾನಿ ಬೆಂಗಳೂರಿಗೆ ಬಂದವರೆಲ್ಲರೂ ಭೇಟಿ ನೀಡುವ ದೇವಸ್ಥಾನ, ಶ್ರೀ ರಾಧಾಕೃಷ್ಣ ಮಂದಿರ ಅಥವಾ ಇಸ್ಕಾನ್‌. ರಾಜಾಜಿನಗರದ ಹರೇ ಕೃಷ್ಣ ಬೆಟ್ಟದ ಮೇಲಿರುವ ಈ ದೇಗುಲ,...

  • ಕ್ರಿಕೆಟ್‌ ಮೈದಾನದಲ್ಲಿದ್ದಾಗ ಉರಿಉರಿದು ಬೀಳುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಎಸ್‌.ಶ್ರೀಶಾಂತ್‌, ಈಗ ತಣ್ಣಗಾಗಿದ್ದಾರೆ. 2011ರ ನಂತರ ಅವರ...

  • ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ....

  • ಪ್ರಕೃತಿ ನಿರ್ಮಿತ ಸುಂದರ ಮಡಿಲಿನಲ್ಲಿ, ಹಚ್ಚ ಹಸಿರಿನ ಬೆಟ್ಟಗಳ ಮಧ್ಯದಲ್ಲಿರುವ ಸಿದ್ಧೇಶ್ವರ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿ. ಬೆಳಗಾವಿ ಜಿಲ್ಲೆಯ ರಾಮದುರ್ಗ...

ಹೊಸ ಸೇರ್ಪಡೆ