Udayavni Special

ರಾಮ ಕೊಟ್ಟ ಕಾಣಿಕೆ

Team Udayavani, Nov 23, 2019, 5:06 AM IST

ramakotta-kani

ಪುರಾತನ ಹಾಗೂ ಶಿಲ್ಪಕಲೆಗಳ ಚೆಲುವಿನಿಂದ ಮೋಕ್ಷರಂಗನಾಥನ ಕ್ಷೇತ್ರ, ಭಕ್ತಾದಿಗಳ ಮನಸ್ಸೊಳಗೆ ಅಚ್ಚಾಗುತ್ತದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದಲ್ಲಿರುವ ಮಧ್ಯರಂಗನಾಥ ಹಾಗೂ ಶ್ರೀರಂಗಂನಲ್ಲಿರುವ ಅಂತ್ಯ ರಂಗನಾಥನ ದರ್ಶನ ಮಾಡಿ, ರಂಗಸ್ಥಳದ ಮೇಲಿರುವ ಈ ಮೋಕ್ಷರಂಗನನ್ನು ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ.

ಮೋಕ್ಷರಂಗನ ದರ್ಶನಕ್ಕೆ ಭಕ್ತಾದಿಗಳು ದೂರದಿಂದ ಆಗಮಿಸುತ್ತಾರೆ. ಚಿಕ್ಕಬಳ್ಳಾಪುರ ಸಮೀಪವಿರುವ ಈ ದೇಗುಲ, ಹೊಯ್ಸಳ ವಾಸ್ತುಶಿಲ್ಪದ ಆಕರ್ಷಣೆ. ಸುತ್ತಲೂ ಹಬ್ಬಿರುವ ನಂದಿ ಬೆಟ್ಟದ ತಪ್ಪಲಿನ ತಂಪು, ಮೋಕ್ಷರಂಗನ ಪರಿಸರವನ್ನು ಇನ್ನೂ ದಿವ್ಯವಾಗಿಸಿದೆ. ತ್ರೇತಾಯುಗದಲ್ಲಿ ರಾಮ, ರಾವಣನನ್ನು ಸಂಹರಿಸಿದ ಮೇಲೆ ಅಯೋಧ್ಯೆಗೆ ಬರುತ್ತಾನೆ. ಅಲ್ಲಿ ಪಟ್ಟಾಭಿಷೇಕವಾಗುತ್ತದೆ.

ಪಟ್ಟಾಭಿಷೇಕಕ್ಕೆ ಆಗಮಿಸಿದ್ದ ವಿಭೀಷಣ, ಹಿಂದಿರುಗುವಾಗ, ಶ್ರೀರಾಮನು ವಿಭೀಷಣನಿಗೆ ಸ್ನೇಹದ ಸಂಕೇತವಾಗಿ ತಮ್ಮ ಮನೆದೇವರಾದ ರಂಗನಾಥನ ವಿಗ್ರಹವನ್ನು, ಬಿದಿರಿನ ಬುಟ್ಟಿಯಲ್ಲಿಟ್ಟು ಕಾಣಿಕೆಯಾಗಿ ನೀಡುತ್ತಾನಂತೆ. ವಿಭೀಷಣ, ಆ ಮೂರ್ತಿಯನ್ನು ಶ್ರೀರಂಗದಲ್ಲಿ ಸ್ಥಾಪಿಸಬೇಕಿತ್ತು. ಆದರೆ, ಆತ ಸ್ಕಂದಗಿರಿ ಗುಹೆಯಲ್ಲಿದ್ದ ಸಪ್ತ ಋಷಿಗಳ ಆದೇಶದಂತೆ ಇಲ್ಲಿ ಪ್ರತಿಷ್ಠಾಪಿಸುತ್ತಾನೆ ಎನ್ನುವುದು ಪೌರಾಣಿಕ ಕತೆ.

ಇಲ್ಲಿರುವ ರಂಗನಾಥ, ಏಕಶಿಲಾ ಸಾಲಿಗ್ರಾಮ ಮೂರ್ತಿ. ಅನಂತ ಶಯನನ ಮೇಲೆ ಮಲಗಿರುವ ಕೆತ್ತನೆ ಅತ್ಯಂತ ಮನೋಹರ. ಆತನ ಮುಖದಲ್ಲಿರುವ ನಗು, ನೋಡುಗರನ್ನು ಮಂತ್ರಮುಗ್ಧರ­ನ್ನಾಗಿಸುತ್ತದೆ. “ಜಗನ್ಮೋಹನ’ ಅಂತಲೇ ಭಕ್ತಾದಿಗಳು, ಶ್ರೀರಂಗನ ರೂಪವನ್ನು ಬಣ್ಣಿಸುತ್ತಾರೆ. ರಂಗನಾಥನ ಕಾಲ ಬಳಿಯಲ್ಲಿ ನೀಲಾದೇವಿ ಹಾಗೂ ಭೂದೇವಿ ಕುಳಿತಿದ್ದಾರೆ. ರಂಗನ ಕಮಲಚರಣ­ಗಳಲ್ಲಿ ವಿಶೇಷವಾದ ಚಿಹ್ನೆಗಳನ್ನು ಕೆತ್ತಲಾಗಿದೆ.

ದೇವರ ಗರ್ಭಗುಡಿ ಬಿದಿರಿನ ಬುಟ್ಟಿಯ ಹಾಗೆ ಇದ್ದು, ಹಳ್ಳಿಗಳಲ್ಲಿ ಬಳಸುವ ಸಿಬಿರು ತಟ್ಟೆಯನ್ನು ಹೋಲುತ್ತದೆ. ವಿಭೀಷಣನಿಗೆ ರಾಮ, ಬಿದಿರಿನ ಬುಟ್ಟಿಯಲ್ಲೇ ರಂಗನಾಥನ ವಿಗ್ರಹವನ್ನು ಇಟ್ಟು ಕೊಟ್ಟಿದ್ದರಿಂದ ಅದೇ ರೀತಿಯಲ್ಲಿ, ಗರ್ಭಗುಡಿಯನ್ನು ಕಟ್ಟಲಾಗಿದೆ. ಮಲಗಿರುವ ರಂಗನಾಥನ ವಿಗ್ರಹ ನಾಲ್ಕೂವರೆ ಅಡಿ ಉದ್ದವಿದೆ. ಇಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಕಿಟಕಿಯ ಮೂಲಕ ಮೋಕ್ಷರಂಗನ ಪಾದ ಸ್ಪರ್ಶಿಸುವುದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ಬರುತ್ತಾರೆ.

ದರುಶನಕೆ ದಾರಿ…: ಗೌರಿಬಿದನೂರಿನಿಂದ 6 ಕಿ.ಮೀ. (ಚಿಕ್ಕಬಳ್ಳಾಪುರ ರಸ್ತೆ) ದೂರದಲ್ಲಿ “ರಂಗಸ್ಥಳ’ ಎಂಬ ತಾಣವಿದೆ. ಮೋಕ್ಷರಂಗನ ಸನ್ನಿಧಾನ ಇಲ್ಲಿದೆ.

ವೈಕುಂಠದ ಕಲ್ಪನೆ: ರಂಭೆ, ಊರ್ವಶಿಯ ಸುಂದರವಾದ ಮೂರ್ತಿಗಳು ಕೈಮುಗಿಯುತ್ತಾ ನಿಂತಿವೆ. ಅವರಿಬ್ಬರೂ ಶ್ರೀರಂಗನ ಸೇವೆಮಾಡಲು ಕಾದಿರುವ­ರೇನೋ ಎಂಬಂತೆ ಕಾಣುತ್ತದೆ. ಅಲ್ಲದೆ, ಬ್ರಹ್ಮ, ಶಿವ, ಅಷ್ಟ ದಿಕಾ³ಲಕರು, ಶ್ರೀರಂಗನ ಆಯುಧಗಳನ್ನು ಕಂಡಾಗ ವೈಕುಂಠದ ಕಲ್ಪನೆ ಕಣ್ಮುಂದೆ ಬರುತ್ತದೆ.

* ಪ್ರಕಾಶ್‌ ಕೆ. ನಾಡಿಗ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ವಿಧಾನಸಭೆ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಬ್ರೇಕ್: ಹೆಚ್ ಕೆ ಪಾಟೀಲ್ ತೀವ್ರ ವಿರೋಧ

ವಿಧಾನಸಭೆ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಬ್ರೇಕ್: ಹೆಚ್ ಕೆ ಪಾಟೀಲ್ ತೀವ್ರ ವಿರೋಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

sagarotttara

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

ondu-kote

ಒಂದು ಕೋಟೆ ಯಾನ

koodali

ಕೂಡಲಿ ಊಟದ ಸೊಗಸು

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

28-May-12

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹೆಚ್ಚಿನ ಒತ್ತು

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

28-May-11

ಕೋವಿಡ್ ಜಾಗೃತಿ ಕಿರುಚಿತ್ರ ಬಿಡುಗಡೆ

ಯಾದಗಿರಿಯಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್ ಸೋಂಕು ದೃಡ

ಯಾದಗಿರಿಯಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್ ಸೋಂಕು ದೃಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.