ಸಮೋಸಾ ಸಾಮ್ರಾಜ್ಯ : ರಂಜಾನ್‌ ಸ್ಪೆಷಲ್‌


Team Udayavani, May 18, 2019, 9:05 AM IST

11

ರಂಜಾನ್‌ ಮಾಸ ಶುರುವಾಗಿದೆ. ಸಂಜೆ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಮಸೀದಿಗಳ ಆಸುಪಾಸಿನಲ್ಲಿ ಸಮೋಸ ಸಾಮ್ರಾಜ್ಯ ಸೃಷ್ಟಿಯಾಗುತ್ತದೆ. ಪ್ರತಿದಿನವೂ ಲಕ್ಷ ಲಕ್ಷ ಸಮೋಸಾಗಳು ಮಾರಾಟವಾಗುತ್ತವೆ ! ಇಫ್ತಾರ್‌ ಮುಗಿಯಿತೆಂದು ದ್ರಾಕ್ಷಿ, ಡ್ರೈಫ್ರೂಟ್ಸ್‌, ಹಣ್ಣು, ಹಾಲು, ಖೀರು, ಬೇಕರಿ ಉತ್ಪನ್ನಗಳನ್ನು ಸೇವಿಸುವ ಪದ್ಧತಿಯೂ ಇದೆ. ಆದರೆ, ಸಮೋಸಕ್ಕೆ ಇರುವಷ್ಟು ಖ್ಯಾತಿ, ಬೇಡಿಕೆ ಮತ್ತು ರುಚಿ-ಬೇರೆ ಯಾವ ತಿನಿಸಿಗೂ ಇಲ್ಲ ಎಂಬ ಮಾತಿದೆ. ಸಮೋಸಾದ ಇತಿಹಾಸ, ಅದರಲ್ಲಿ ಇರುವ ವಿಧಗಳು, ಈ ತಿನಿಸು ತಲುಪುವ ಸ್ಥಳಗಳು.. ಹೀಗೆ ಸಮೋಸಾದ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿವರ ಮಾಹಿತಿ ಇಲ್ಲಿದೆ…

ರಂಜಾನ್‌ ಮಾಸ ಮತ್ತೆ ಬಂದಿದೆ. ರಂಜಾನ್‌ ಎಂದ ತಕ್ಷಣ; ಮೊದಲು ಶ್ರದ್ಧಾಭಕ್ತಿಯ ಉಪವಾಸ, ಆನಂತರ ಹಸಿವು ತಣಿಸಲು ಸಮೋಸ ಎಂಬ ಹಿರಿಯರು ಮಾತು ನೆನಪಾಗುತ್ತದೆ. ಉಪವಾಸ ಮುಗಿದ ನಂತರ ಹಣ್ಣು, ದ್ರಾಕ್ಷಿ, ಖರ್ಜೂರ, ಡ್ರೈಫ‌ೂÅಟ್ಸ್‌, ಬಗೆಬಗೆಯ ಬಿಸ್ಕತ್‌ಗಳು, ಬೇಕರಿ ಉತ್ಪನ್ನಗಳನ್ನು ಬಳಸಿ ಇಫ್ತಾರ್‌ ಆಚರಿಸಲಾಗುತ್ತದೆ. ಆದರೆ, ಇವೆಲ್ಲ ತಿನಿಸುಗಳಿಗಿಂತ ಹೆಚ್ಚಿನ ಆಕರ್ಷಣೆ ಮತ್ತು ಬೇಡಿಕೆ ಇರುವುದು ಸಮೋಸಾಕ್ಕೇ. ರಂಜಾನ್‌ ಮಾಸದಲ್ಲಂತೂ ಸಿಲಿಕಾನ್‌ ಸಿಟಿ ಬೆಂಗಳೂರು, ಸಮೋಸ ಸಿಟಿಯಾಗಿ ಬದಲಾಗಿಬಿಡುತ್ತದೆ. ಕೇವಲ ಬೆಂಗಳೂರೊಂದರಲ್ಲೇ ಪ್ರತಿ ದಿನವೂ ಲಕ್ಷದ ಸಂಖ್ಯೆಯಲ್ಲಿ ಸಮೋಸಗಳು ಮಾರಾಟ ಆಗುತ್ತವೆ ಅಂದರೆ, “ಸಮೋಸಾ ಸಾಮ್ರಾಜ್ಯ’ದ ವ್ಯಾಪ್ತಿ-ವಿಸ್ತಾರ ಹೇಗಿರಬಹುದೋ ಲೆಕ್ಕ ಹಾಕಿ.

ರಂಜಾನ್‌ ಮಾಸದಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲ; ಶಿವಮೊಗ್ಗ, ದಾವರಣಗೆರೆ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿಯಲ್ಲೂ ಸಮೋಸಾದ ಹವಾ ಜೋರಾಗಿರುತ್ತದೆ. ಪ್ರತಿಯೊಂದು ನಗರದಲ್ಲಿಯೂ ರಂಜಾನ್‌ ಸಂದರ್ಭದಲ್ಲಿ ಮಾತ್ರ ಸಮೋಸ ತಯಾರಿಸುವ ಏಳೆಂಟು ಅಂಗಡಿಗಳು ದಿಢೀರ್‌ ಎದ್ದು ನಿಲ್ಲುತ್ತವೆ.

ವಿಶೇಷವಾಗಿ ಉಪವಾಸ ಆಚರಿಸುವ ಮುಸ್ಲಿಮರಿಗೆ ರಂಜಾನ್‌ ಪೂರ್ಣ ಅನಿಸುವುದಿಲ್ಲ. ಸಮೋಸದ ಸವಿ ಇಲ್ಲದಿದ್ದರೆ “ಇಫ್ತಾರ್‌’ (ಉಪವಾಸ ಬಿಡುವುದು) ಆಗುವುದೇ ಇಲ್ಲ ಎಂಬಷ್ಟರ ಮಟ್ಟಿಗೆ, ಸಮೋಸ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ರಂಜಾನ್‌ ತಿಂಗಳಲ್ಲಿ ರಾಜ್ಯದ ಎಲ್ಲೇ ಸಮೋಸ ಸವಿದರೂ ರುಚಿಗೆ ಮೋಸವಿಲ್ಲ. ಆಲೂಗಡ್ಡೆ, ಬಟಾಣಿ, ಈರುಳ್ಳಿ ಮಿಶ್ರಿತ ತರಕಾರಿ ಸಮೋಸ, ಚಿಕನ್‌ ಸಮೋಸ, ಮಟನ್‌ ಸಮೋಸ ಬಹಳ ಫೇಮಸ್‌. ಯಾರೇ ಸಮೋಸ ತಿಂದರೂ “ಪೈಸಾ ವಸೂಲ್‌’ ಗ್ಯಾರಂಟಿ.

ಶತಮಾನಗಳ ಇತಿಹಾಸ

ಭಾರತದಲ್ಲಿ ಸಮೋಸ ಗೆ ಶತಮಾನಗಳ ಇತಿಹಾಸವಿದೆ. “ಸನ್‌ಬೊಸ್ಗಾ ‘ ಎಂಬ ಪರ್ಶಿಯನ್‌ ಪದದಿಂದ ಸಮೋಸ ಹುಟ್ಟಿಕೊಂಡಿದ್ದು. ಮಧ್ಯ ಪೂರ್ವ ಹಾಗೂ ಕೇಂದ್ರ ಏಷ್ಯಾ ರಾಷ್ಟ್ರಗಳ ಮೂಲದ ಈ ಸಮೋಸ ವ್ಯಾಪಾರಿಗಳ ಮೂಲಕ 13 ಮತ್ತು 14ನೇ ಶತಮಾನದಲ್ಲಿ ಕೇಂದ್ರ ಏಷ್ಯಾ ದೇಶಗಳ ವ್ಯಾಪಾರಿಗಳ ಮೂಲಕ ಭಾರತ ಉಪಖಂಡಕ್ಕೆ ಬಂತು ಎಂಬ ಐತಿಹ್ಯವಿದೆ. ದೆಹಲಿ ಸುಲ್ತಾನರ ಆಸ್ಥಾನ ಕವಿಯಾಗಿದ್ದ ಅಮಿರ್‌ ಖುಸ್ರೋ ಅವರ ಕವನಗಳಲ್ಲಿ ಸಮೋಸ ಬಗ್ಗೆ ಉಲ್ಲೇಖಗಳಿವೆ. ಭಾರತದ ಉತ್ತರದ ರಾಜ್ಯಗಳಲ್ಲಿ ಇದು ಹೆಚ್ಚು ಜನಜನಿತ. ಆಯಾ ರಾಜ್ಯಗಳ ಜನರ ಅಭಿರುಚಿಗೆ ತಕ್ಕಂತೆ ಸಮೋಸ ತಯಾರಿಸಲಾಗುತ್ತದೆ.

ಸಂಜೆ ಸಮೋಸ ಗರಂ

ರಂಜಾನ್‌ ತಿಂಗಳಲ್ಲಿ ರೋಜಾ (ಉಪವಾಸ) ಇದ್ದವರಿಗೆ ಸಂಜೆ ಇಫ್ತಾರ್‌ ವೇಳೆಗೆ ಸಮೋಸ ಕೊಡಬೇಕು ಎಂದು ಸಮೋಸ ತಯಾರಕರು ಬೆಳಗ್ಗೆಯಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇಫ್ತಾರ್‌ ಸಮಯ ಸಂಜೆ 6.30ರ ನಂತರ ಇದ್ದರೂ. ಮಧ್ಯಾಹ್ನ 3 ಗಂಟೆಯಿಂದಲೇ ಜನ ಸಮೋಸ ಕೊಳ್ಳಲು ಮುಗಿ ಬೀಳುತ್ತಾರೆ. ಮಸೀದಿಗಳು, ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶಗಳ ರಸ್ತೆಗಳಲ್ಲಿ, ಬೀದಿಗಳಲ್ಲಿ ಬಿಸಿ-ಬಿಸಿಯಾಗಿ ತಯಾರಾಗುವ ಸಮೋಸಗಳು ಅಷ್ಟೇ ವೇಗದಲ್ಲಿ ಖಾಲಿಯಾಗಿ ಬಿಡುತ್ತವೆ. ಸಂಜೆ 6 ಗಂಟೆಗೆ ಹೋದರೆ ಸಮೋಸ ಸಿಗುವುದಿಲ್ಲ.

ಈರುಳ್ಳಿ ಬೇಕಾ, ಚಿಕನ್‌ ಬೇಕಾ?

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯೂ ಈರುಳ್ಳಿ, ಚಿಕನ್‌, ಮಟನ್‌ ಸಮೋಸ ಬಹಳ ಫೇಮಸ್‌. ಸಾಮಾನ್ಯ ದಿನಗಳಲ್ಲಿ ಎಲ್ಲಾ ನಗರಗಳಲ್ಲೂ ಈರುಳ್ಳಿ ಅಥವಾ ತರಕಾರಿ ಸಮೋಸ ಹೆಚ್ಚಾಗಿ ಸಿಗುತ್ತದೆ. ಆದರೆ ರಂಜಾನ್‌ ತಿಂಗಳಲ್ಲಿ ಚಿಕನ್‌, ಮಟನ್‌ ಸಮೋಸಗಳ ಭರಾಟೆ ಹೆಚ್ಚಾಗುತ್ತದೆ. ಕೆಲವು ಕಡೆ ಎಗ್‌ ಸಮೋಸ, ಸ್ವೀಟ್‌ ಸಮೋಸ ಸಹ ಸಿಗುತ್ತದೆ. ಅಪರೂಪ ಎಂಬಂತೆ ಕೆಲವರು ಫಿಶ್‌ ಸಮೋಸ ಸಹ ತಯಾರಿಸುತ್ತಾರೆ. ಆದರೆ, ಇದು ಇನ್ನೂ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಲಿತಕ್ಕೆ ಬಂದಿಲ್ಲ. ತರಕಾರಿ ಸಮೋಸ 10ರಿಂದ 12 ರೂ.ಗೆ ಸಿಕ್ಕರೆ, ಚಿಕನ್‌, ಮಟನ್‌ ಸಮೋಸ 15 ರಿಂದ 20 ರೂ.ಗೆ ಸಿಗುತ್ತದೆ. ಗೋರಿಪಾಳ್ಯ ಮತ್ತಿತರ ಮುಸ್ಲಿಂ ಬಾಹುಳ್ಯ ಜನವಸತಿ ಪ್ರದೇಶಗಳಲ್ಲಿ 6ರಿಂದ 8 ರೂಪಾಯಿಗೂ ಸಮೋಸ ಸಿಗುತ್ತದೆ. ಸಮೋಸದ ವಿಚಾರಕ್ಕೆ ಬಂದರೆ ಎಲ್ಲರೂ “ರುಚಿ ಫ‌ಸ್ಟ್‌, ರೇಟ್‌ ನೆಕ್ಸ್ಟ್’ ಅನ್ನುತ್ತಾರೆ.

8 ಲಕ್ಷ ಸಮೋಸ ಸೇಲ್‌; ಫ‌ುಲ್‌ ಬ್ಯುಸಿನೆಸ್‌
ರಂಜಾನ್‌ ಬಿಟ್ಟರೆ ಬೇರೆ ತಿಂಗಳುಗಳಲ್ಲಿ ಸಮೋಸ ವ್ಯಾಪಾರ ಅಷ್ಟೊಂದು ಇರಲ್ಲ. ಉಳಿದ ದಿನಗಳಲ್ಲಿ ಇದು ಉತ್ತರ ಭಾರತೀಯ “ಚಾಟ್‌’ ಆಗಿ ಸಿಮೀತಗೊಳ್ಳುತ್ತದೆ. ಆದರೆ, ರಂಜಾನ್‌ ತಿಂಗಳಲ್ಲಿ ಇದರ ಖದರು ಹೇಳತೀರದು. 12 ತಿಂಗಳ ವ್ಯಾಪಾರ ಈ ಒಂದು ತಿಂಗಳಲ್ಲಿ ಆಗುತ್ತದೆ. ರಂಜಾನ್‌ ತಿಂಗಳಲ್ಲಿ ಬೆಂಗಳೂರಲ್ಲಿ ಸಾವಿರಾರು ಸಮೋಸ ಸ್ಟಾಲ್‌ಗ‌ಳನ್ನು ಹಾಕಲಾಗುತ್ತದೆ. ಸಮೋಸ ತಯಾರಕರು ಹೇಳುವಂತೆ, ಇಡೀ ನಗರದಲ್ಲಿ 15 ರಿಂದ 20 ಸಾವಿರ ಸಮೋಸ ಸ್ಟಾಲ್‌ಗ‌ನ್ನೂ ಹಾಕಲಾಗುತ್ತದೆ. ಶಿವಾಜಿನಗರದ ಸುತ್ತ ರಸೆಲ್‌ ಮಾರ್ಕೆಟ್‌, ಲಾಲ್‌ ಮಸೀದಿ, ಹರಿ ಮಸ್ಜಿದ್‌, ಬ್ರಾಡ್‌ವೇ ರಸ್ತೆ, ಜುಮ್ಮಾ ಮಸೀದಿ, ಚೌಕ್‌ ಮತ್ತಿತರ ಪ್ರದೇಶಗಳಲ್ಲಿ ಸುಮಾರು 300ರಿಂದ 400 ಸಮೋಸ ಸ್ಟಾಲ್‌ಗ‌ಳನ್ನು ಹಾಕಲಾಗುತ್ತದೆ. ಇಲ್ಲಿ ದಿನಕ್ಕೆ 2ರಿಂದ 3 ಲಕ್ಷ ಸಮೋಸ ಮಾರಾಟ ಆಗುತ್ತವೆ. ಎಲ್ಲ ಕಡೆಯ ವಹಿವಾಟನ್ನು ಲೆಕ್ಕ ಹಾಕಿದರೆ, ರಂಜಾನ್‌ ತಿಂಗಳಲ್ಲಿ ಕೇವಲ ಬೆಂಗಳೂರಲ್ಲಿ ಒಂದು ದಿನಕ್ಕೆ 6 ರಿಂದ 8 ಲಕ್ಷ ಸಮೋಸ ಮಾರಾಟ ಆಗುತ್ತದೆ.

ವಿಮಾನ ಏರುತ್ತೆ ಶಿವಾಜಿನಗರ ಸಮೋಸ
ಅಚ್ಚರಿಯೆಂದರೆ, ಬೆಂಗಳೂರಿನ ಶಿವಾಜಿನಗರದಲ್ಲಿ ತಯಾರಾಗುವ ಸಮೋಸ ಪ್ರತಿ ವರ್ಷ ವಿಮಾನ ಏರುತ್ತೆ. ಸೌದಿ, ದುಬೈ, ಮಸ್ಕತ್‌, ಜಿದ್ದಾ ಮತ್ತಿತರರ ಅರಬ್‌ ರಾಷ್ಟ್ರಗಳಿಗೆ ಇಲ್ಲಿಂದ ಸಮೋಸ ಹೋಗುತ್ತದೆ. ಕಳೆದ ವರ್ಷವೂ ಇಲ್ಲಿಂದ ವಿದೇಶಕ್ಕೆ ಸಮೋಸ ತೆಗೆದುಕೊಂಡು ಹೋಗಲಾಗಿತ್ತು. ಈ ಬಾರಿಯೂ ಅರ್ಡರ್‌ ಬರುವ ನಿರೀಕ್ಷೆಯಿದೆ. ಇನ್ನೂ ಎಣ್ಣೆಯಲ್ಲಿ ಕರಿಯ‌ದ ಹಸಿ ಅಥವಾ ಕಚ್ಚಾ ಸಮೋಸವನ್ನು 4ರಿಂದ 5 ಗಂಟೆವರೆಗೆ ಕೆಡದಂತೆ ಇಡಬಹುದು. ಈ ಅವಧಿಯಲ್ಲಿ ಕೆಲವರು ಅದನ್ನು ವಿಮಾನದಲ್ಲಿ ತೆಗೆದುಕೊಂಡು ಅಲ್ಲಿ, ಅದನ್ನು ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುತ್ತಾರೆ ಎಂದು ಶಿವಾಜಿನಗರದ ಬಿಲಾಲ್‌ ಬೇಕರಿ ಮಾಲೀಕ ವಸೀಂ ಅಹ್ಮದ್‌ ಹೇಳುತ್ತಾರೆ. ಅಲ್ಲದೇ ನೆರೆಯ ತಮಿಳುನಾಡು, ಪಕ್ಕದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರಿಗೂ ಇಲ್ಲಿಂದ ಸಮೋಸ ತೆಗೆದುಕೊಂಡು ಹೋಗುತ್ತಾರೆ.

ಸಮೋಸ ತಯಾರಿಸುವುದು ಹೇಗೆ?
ಮೈದಾ ಅಥವಾ ಗೋದಿ ಹಿಟ್ಟು ಚೆನ್ನಾಗಿ ನಾದಿ, ಚೆನ್ನಾಗಿ ಹದ ಮಾಡಿದ ನಂತರ ಚಪಾತಿಯಂತೆ ಲಟ್ವಾಸಲಾಗುತ್ತದೆ. ಬಳಿಕ ಬೇಕಾದ ಗಾತ್ರದಲ್ಲಿ ಚಪಾತಿಯನ್ನು ಕತ್ತರಿಸಿಕೊಂಡು ಅದರಲ್ಲಿ ಈರುಳ್ಳಿ, ಬಟಾಣಿ, ಆಲೂಗಡ್ಡೆ, ತರಕಾರಿ ಹೂರಣ ತುಂಬಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದೇ ರೀತಿ ಚಿಕನ್‌ ಅಥವಾ ಮಟನ್‌ ಸಮೋಸ ಸಹ ಮಾಡಲಾಗುತ್ತದೆ. ಒಮ್ಮೆ ಎಣ್ಣೆಯಲ್ಲಿ ಕರಿದ ಸಮೋಸವನ್ನು ಒಂದು ದಿನದ ಮಟ್ಟಿಗೆ ಇಡಬಹುದು.

-ಪೂರಕ ಮಾಹಿತಿ- ಜಿ.ಎಸ್‌. ಕಮತರ, ಹನುಮಂತ ಭೈರಾಮಡಗಿ, ಬಸವರಾಜ ಹೂಗಾರ, ಬೈರೋಬಾ ಕಾಂಬಳೆ, ಶರತ್‌

ವಿಜಯುಪುರ

ರಂಜಾನ್‌ ಸಂದರ್ಭದಲ್ಲಿ ವಿಜಯಪುರದ ಮಾಡರ್ನ್ ಟೀ ಸ್ಟಾಲ್‌ನಲ್ಲಿ ಜರುಗುವ ವಿಶೇಷ ಎಂದರೆ, ರಮಜಾನ್‌ ಮಾಸದಲ್ಲಿ ಈ ಹೊಟೇಲ್‌ನಲ್ಲಿ ಬಿಲ್‌ ಕೇಳುವುದಿಲ್ಲ, ಹಣ ಪಡೆಯಲು ಕೌಂಟರ್‌ನಲ್ಲಿ ಮಾಲೀಕ ಕುಳಿತುಕೊಳ್ಳುವುದಿಲ್ಲ. ಈ ಹೊಟೇಲ್‌ನಲ್ಲಿ ತಿಂಡಿ ತಿಂದ ಗ್ರಾಹಕರು ತಾವೇ ಲೆಕ್ಕ ಹಾಕಿ, ಹೋಟೆಲ್‌ನ ಹೊರ ಭಾಗದಲ್ಲಿ ಇರಿಸಿರುವ ಬಾಕ್ಸ್‌ಗಳಲ್ಲಿ ಹಣ ಹಾಕುತ್ತಾರೆ. “ಅಲ್ಲಾನ ದಯೆ, ಗ್ರಾಹಕರ ವಿಶ್ವಾಸದ ಪರಿಣಾಮ, ಕಳೆದ ಮೂರೂವರೆ ದಶಕದಿಂದ ನನಗೆ ವ್ಯಾಪಾರದಲ್ಲಿ ಎಂದೂ ನಷ್ಟವಾಗಿಲ್ಲ ಎನ್ನುತ್ತಾರೆ ಹೋಟೆಲ್‌ ಮಾಲೀಕ ಬಷೀರ್‌ ಹುನಗುಂದ.

ಶಿವಮೊಗ್ಗ
ಶಿವಮೊಗ್ಗದಲ್ಲಿ ಈರುಳ್ಳಿ ಹಾಗೂ ಕೈಮಾ ಸಮೋಸ ತುಂಬಾ ಫೇಮಸ್‌. ಕೆ.ಆರ್‌. ಪುರಂನ ಸಮೋಸ ಸ್ಟಾಲ್‌ಗ‌ಳಿಗೆ ಎಲ್ಲಿಲ್ಲದ ಬೇಡಿಕೆ. ಲಷ್ಕರ್‌ ಮೊಹಲ್ಲಾ, ಪೆನÒನ್‌ ಮೊಹಲ್ಲಾ, ಟ್ಯಾಂಕ್‌ ಮೊಹಲ್ಲಾ, ಅಣ್ಣಾ ನಗರ ಹೀಗೆ ಪ್ರತಿ ಏರಿಯಾದಲ್ಲೂ ಸಮೋಸ ಮಾರಾಟ ಜೋರಾಗಿರುತ್ತದೆ. ಶಿವಮೊಗ್ಗ ನಗರದಲ್ಲಿ ಒಟ್ಟು 65 ಮಸೀದಿಗಳಿದ್ದು, ರಂಜಾನ್‌ ಮಾಸದಲ್ಲಿ ಎಲ್ಲ ಮಸೀದಿಗಳ ಬಳಿ ಬಗೆಬಗೆಯ ಸಮೋಸಾ, ಉಪವಾಸವಿದ್ದವರ ಹಸಿವು ತಣಿಸುತ್ತದೆ. ಪ್ರತಿದಿನ 1 ಲಕ್ಷ ಸಮೋಸಾ ತಯಾರಾಗುತ್ತವೆ. ತಾಲೂಕು ಕೇಂದ್ರಗಳಿಗೂ ಇಲ್ಲಿಂದಲೇ ರವಾನೆಯಾಗುತ್ತದೆ. ಈರುಳ್ಳಿ ಸಮೋಸಾಕ್ಕೆ 6 ರೂ. ಇದ್ದರೆ, ಕೈಮಾ ಸಮೋಸ 9, 10 ರೂ. ಸಿಗುತ್ತದೆ. ಬೆಳಗ್ಗೆಯಿಂದಲೇ ಸಮೋಸಾ ತಯಾರಿಕೆ ಮುಂದಾಗುವ ವ್ಯಾಪಾರಿಗಳು ಮಧ್ಯಾಹ್ನದಿಂದ ರಾತ್ರಿ 11 ಗಂಟೆವರೆಗೆ ಮಾರಾಟ ಮಾಡುತ್ತಾರೆ.

ಹುಬ್ಬಳ್ಳಿ

ಹುಬ್ಬಳ್ಳಿಯ ಶಹಾ ಬಜಾರ್‌, ಗಣೇಶ ಪೇಟೆ, ಹಳೇಹುಬ್ಬಳ್ಳಿ ಸದರಸೋಫಾ, ಇಸ್ಲಾಂಪುರ ಸೇರಿದಂತೆ ವಿವಿಧೆಡೆ ಘಮ ಘಮಿಸುವ ಖೀಮಾ ಸಮೋಸಾ, ಬೀಫ್‌ ಸಮೋಸಾ, ಚಿಕನ್‌ ಸಮೋಸಾ, ಎಗ್‌ ಸಮೋಸಾ, ಫಿಶ್‌ ಸಮೋಸಾ ಸೇರಿದಂತೆ ವಿವಿಧ ಬಗೆಯ ಸಮೋಸಾ ಮಾರಾಟ ಮಾಡಲಾಗುತ್ತಿದೆ. ಸಂಜೆ ರೋಜಾ ಮುಕ್ತಾಯದ ನಂತರ ಇಫ್ತಿಯಾರ್‌ಗೆ ತೆರಳುವ ಮುಸ್ಲಿಂ ಬಾಂಧವರು ವಿವಿಧ ಬಗೆಯ ಸಮೋಸಾ ಸೇವಿಸುತ್ತಾರೆ. ರಂಜಾನ್‌ ವೇಳೆ ಕೆಲವೊಂದು ಅಂಗಡಿಗಳಲ್ಲಿ ಸುಮಾರು 1500 ರಿಂದ 2000 ಅಧಿಕ ಸಮೋಸಾಗಳನ್ನು ಮಾರಾಟ ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ಸುಮಾರು 500 ಸಮೋಸಾ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಹುಬ್ಬಳ್ಳಿಯಲ್ಲಿರುವ ಬೆಂಗಳೂರ ಸಮೋಸಾ ಮಳಿಗೆ ಮಾಲೀಕ ಅಬ್ದುಲ್‌.

ಬೆಳಗಾವಿ

ಬೆಳಗಾವಿ ನಗರದ ದರ್ಬಾರ್‌ಗಲ್ಲಿ ಪ್ರವೇಶಿಸಿದರೆ ಘಮ್‌ ಎಂದು ಬರುವ ಮೂಗಿಗೆ ಬಂದೆರಗುವ ಘಮ ಬಾಯಲ್ಲಿ ನೀರು ತರಿಸುವುದರಲ್ಲಿ ಸಂದೇಹವೇ ಇಲ್ಲ. ದರ್ಬಾರ್‌ ಗಲ್ಲಿಯಲ್ಲಿರುವ ಅಷಾ#ಕ್‌ ಬೇಪಾರಿ ತಯಾರಿಸುವ ವೆಜ್‌ ಸಮೋಸಾ, ಚಿಕನ್‌ ಸಮೋಸಾ, ಖೀಮಾ ಸಮೋಸಾಗಳು ವಿಶೇಷವಾಗಿ ಜನರನ್ನು ಸೆಳೆಯುತ್ತವೆ. ಅಲ್ಲದೇ ಬಸ್‌ ನಿಲ್ದಾಣ ಪಕ್ಕದ ನಿಯಾಜ್‌ ಹೋಟೆಲ್‌ನಲ್ಲಿ ರಮ್‌ಜಾನ್‌ಗೆಂದೇ ವಿಶೇಷ ಸಮೋಸಾ ತಯಾರಿಸಲಾಗುತ್ತದೆ. ಇಲ್ಲಿ ದೊರೆಯುವ ಚಿಕನ್‌ ಕಬಾಬ್‌, ಚಿಕನ್‌ ತಂದೂರಿ ಖಾದ್ಯಗಳ ರುಚಿಯನ್ನಂತೂ ತಳ್ಳಿ ಹಾಕುವಂತೇ ಇಲ್ಲ.

ದಾವಣಗೆರೆ
ರಂಜಾನ್‌ ಬಂದರೆ ದಾವಣಗೆರೆಯ ಅಜಾದ್‌ ನಗರ, ಭಗತ್‌ಸಿಂಗ್‌ ನಗರ,
ವಿನೋಭನಗರ ಮಸೀದಿಗಳ ಮುಂದೆ ಸಾಲು ಸಾಲಾಗಿ 50ರೂಗೆ ಹೆಚ್ಚು ಸಮೋಸ ಅಂಗಡಿಗಳು ತಲೆ ಎತ್ತುತ್ತಿರುತ್ತವೆ. ಇಲ್ಲಿ ಸಿಗುವ ಈರುಳ್ಳಿ, ಕ್ಯಾಪ್ಸಿಕಾಂ, ಆಲೂಗಡ್ಡೆ, ಮಿಕ್ಸ್‌ ಸೊಪ್ಪು, ಮಿಕ್ಸ್‌ ತರಕಾರಿ, ಎಗ್‌ , ಚಿಕನ್‌, ಮಟನ್‌ ಸಮೋಸಗಳನ್ನು ತಿನ್ನಲೆಂದೇ ರಂಜಾನ್‌ ದಿನಗಳಿಗೆ ಏರಿಯಾ ಜನ ಕಾಯುತ್ತಿರುತ್ತಾರೆ. ಮಸೀದಿ ಮುಂದೆ ಮಾತ್ರವಲ್ಲದೇ ಮಾಮಾಸ್‌ ಜಾಯಿಂಟ್‌ ರಸ್ತೆ, ಬಾಯ್ಸ್‌  ಹಾಸ್ಟೆಲ್‌ ರಸ್ತೆಗಳಲ್ಲೂ ಕೇವಲ 100ರೂ.ನಿಂದ 30 ರೂ ಒಳಗೆ ಸಮೋಸಗಳು ಲಭ್ಯ.

ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.