ಕೃಷ್ಣಾರ್ಪಣ ಅನ್ನೋದು ಏಕೆ ಗೊತ್ತಾ?

Team Udayavani, Jun 8, 2019, 6:32 AM IST

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಕೃಷ್ಣನನ್ನು ಗೋವಿಂದ ಎಂದು ಕರೆಯುವುದು. ಗೋವಿಂದ ಎಂದರೆ ಗೋಪಾಲಕನಲ್ಲ. ಗೋ ಎಂದರೆ ಇಂದ್ರಿಯ. ವಿಂದ ಎಂದರೆ ನಿಲುಕು ಅಥವಾ ಸಿಗು ಎಂಬರ್ಥ.

ನಮ್ಮಲ್ಲೊಂದು ಕ್ರಮವಿದೆ. ಯಾವುದೇ ಪೂಜೆಯ ಕೊನೆಗೆ ಅಥವಾ ಯಾವುದೇ ಸೇವೆ/ ವಸ್ತು ದೇವರಿಗೆ ಅರ್ಪಿಸುವಾಗ ಕೃಷ್ಣಾರ್ಪಣಮಸ್ತು ಎಂದು ಹೇಳಿ, ತುಳಸಿ ನೀರು ಬಿಟ್ಟು ವಸ್ತುವನ್ನು ಅರ್ಪಿಸಿ ತುಳಸಿಯನ್ನು ಮಾತ್ರ ಸ್ವೀಕರಿಸುತ್ತೇವೆ. ಇಲ್ಲಿ ಏಕೆ ಶ್ರೀ ಕೃಷ್ಣಾರ್ಪಣಮಸ್ತು ಅಂತ ಹೇಳಬೇಕು? ಏಕೆ ರಾಮಾರ್ಪಣಮಸ್ತು, ವೆಂಕಟರಮಣಾರ್ಪಣಮಸ್ತು, ಮತ್ಸಾರ್ಪಣಮಸ್ತು, ಕೂರ್ಮಾರ್ಪಣಮಸ್ತು, ವರಾಹಾರ್ಪಣಮಸ್ತು… ಹೀಗೆ ಯಾವುದೇ ದೇವರ ಹೆಸರಿನಲ್ಲಿ ಅರ್ಪಣಮಸ್ತು ಹೇಳಲ್ಲ?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಕೃಷ್ಣನನ್ನು ಗೋವಿಂದ ಎಂದು ಕರೆಯುವುದು. ಗೋವಿಂದ ಎಂದರೆ ಗೋಪಾಲಕನಲ್ಲ. ಗೋ ಎಂದರೆ ಇಂದ್ರಿಯ. ವಿಂದ ಎಂದರೆ ನಿಲುಕು ಅಥವಾ ಸಿಗು ಎಂಬರ್ಥ. ಯಃ ಗಾಃ( ಇಂದ್ರಿಯಾಣಾಂ) ವಿಂದತಿ ಸಃ ಗೋವಿಂದಃ. ಅವನೇ ಶ್ರೀ ಕೃಷ್ಣ.

ಕೃಷ್ಣಾವತಾರವು ಒಂದು ಸಂಪೂರ್ಣ ಅವತಾರ. ಈ ಅವತಾರದಲ್ಲಿ ದಶಾವತಾರದ ಒಂಬತ್ತು ಅವತಾರಗಳಲ್ಲಿ ಭಗವಂತನು ತೋರಿಸಿದ ಲೀಲೆಗಳೆಲ್ಲವೂ ಇವೆ. ಕೃಷ್ಣನಿಗೆ ಅರ್ಪಣೆ ಮಾಡಿದರೆ ಉಳಿದೆಲ್ಲಾ ದೇವರಿಗೂ(ಅವತಾರಗಳಿಗೂ) ಅರ್ಪಿಸಿದಂತೆ. ಹಾಗಾಗಿಯೇ ಶ್ರೀ ಕೃಷ್ಣಾರ್ಪಣಮಸ್ತು ಎಂಬುದೇ ಮುಖ್ಯ ಘೋಷಣೆಯಾಗಿ ಉಳಿದುಕೊಂಡಿದೆ.

ನಮ್ಮಲ್ಲಿ ಕೆಲವರಿಗೊಂದು ಅಭ್ಯಾಸವಿದೆ. ಅದು ಮನುಷ್ಯ ಸಹಜವಾದ ಅಭ್ಯಾಸ -ಇದು ನಾನು ದೇವರಿಗೆ ಅರ್ಪಿಸಿದ್ದು, ಇದು ನನ್ನದು, ನಾನು ಅತೀ ದೊಡ್ಡ ಕಾಣಿಕೆ/ ಸೇವೆ ಮಾಡಿದ್ದೇನೆ. ಈ ಕಾರಣದಿಂದಲೇ ನನಗೆ ಅಗ್ರ ಪ್ರಸಾದ ಸಿಗಬೇಕು ಎಂಬೆಲ್ಲಾ ಆಸಪಡುವುದು, ತಾನು ಮಾಡಿರುವ ಸೇವೆಯ ಕುರಿತು ವಿವರವಾಗಿ ದೇವಲಾಯದ ಹೊರಗಿನ ಬೋರ್ಡಿನಲ್ಲಿ ಹೆಸರನ್ನು ತಾನು ಮಾಡಿರುವ ಸೇವೆಯ ಕುರಿತು ವಿವರವಾಗಿ ದೇವಲಾಯದ ಹೊರಗಿನ ಬೋರ್ಡಿನಲ್ಲಿ ಬೋರ್ಡ್‌ ಮೇಲೆ ಬರೆಯದಿದ್ದರೆ ಕೋಪಿಸಿಕೊಳ್ಳುವುದು….ಇತ್ಯಾದಿ.

ಇದೆಲ್ಲವೂ ನಮ್ಮ ಅಹಂ ತೋರಿಸುತ್ತದೆ. ಒಮ್ಮೆ ದೇವರಿಗೆ ಕೃಷ್ಣಾರ್ಪಣ ಆಯಿತೋ, ಆ ವಸ್ತು/ ಸೇವೆ/ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೊಂದೇ ನಮ್ಮ ಭಾಗಕ್ಕೆ. ಅಹಂಕಾರವನ್ನು ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫ‌ಲ.

ಗೋವಿಂದನ ಮುಂದೆ ಅಹಂಭಾವದಿಂದ ವರ್ತಿಸಿದರೆ “for every action there is an equal and opposite reaction”. ನಿರಹಂಕಾರದಿಂದ ಗೋವಿಂದನ ಮುಂದೆ ವರ್ತಿಸಿದರೆ ಜೀವನದಲ್ಲಿ “only ಭಗವಂತನ ACTION –   ಅದುವೇ ದೇವರ ಕೃಪೆ, ಶ್ರೀ ಕೃಷ್ಣಾನುಗ್ರಹ.

ಕೃಷ್ಣಾರ್ಪಣವೇ ಯಾಕೆ ?
ಎಲ್ಲರೂ ಸಂಧ್ಯಾವಂದನಾದಿ ಕರ್ಮಗಳನ್ನು ಮಾಡಿ ಕೃಷ್ಣಾರ್ಪಣವೆನ್ನುತ್ತಾರೆ.
ಕೃಷ್ಣಾರ್ಪಣವೇ ಯಾಕೆ ಎಂದರೆ, ಕೆಲವರು ಕೃಷ್ಣನ ರೂಪ ಕಲಿಯುಗಕ್ಕೆ ಅತ್ಯಂತ ಹತ್ತಿರದ ರೂಪವಾದ್ದರಿಂದ ಕೃಷ್ಣಾರ್ಪಣವೆನ್ನಬೇಕು ಎಂದು ಹೇಳುತ್ತಾರೆ. ಅದು ಸರಿ. ಅದರ ಜೊತೆಗೆ ಬ್ರಹ್ಮಾಂಡಪುರಾಣದ ವೆಂಕಟೇಶ ಮಹಾತೆ¾ಯಲ್ಲಿ ಈ ರೀತಿ ತಿಳಿಸುತ್ತಾರೆ.

ಕೃತೇ ಶ್ವೇತಂ ಹರಿಂ ವಿಂದ್ಯಾತ್‌ ತ್ರೇತಾಯಾಂ ರಕ್ತವರ್ಣಕಂ ದ್ವಾಪರೇ ಪೀತವರ್ಣಂ ತು ಕೃಷ್ಣವರ್ಣಂ ಕಲೌ ಯುಗೇ- ಎಲ್ಲಾ ಜೀವರ ಹೃದ್ಗುಹಾವಾಸಿಯಾದ ಭಗವಂತ ಒಬ್ಬನೇ ಆದರೂ, ಯುಗಾನುಸಾರ ತನ್ನ ಬಣ್ಣವನ್ನು ಬದಲಿಸುತ್ತಾನೆ. ಕೃತಯುಗದಲ್ಲಿ ಬಿಳಿ, ತ್ರೇತಾಯುಗದಲ್ಲಿ ಕೆಂಪು, ದ್ವಾಪರದಲ್ಲಿ ಹಳದಿ ಹಾಗೂ ಕಲಿಯುದಲ್ಲಿ ಕೃಷ್ಣ ಬಣ್ಣದಿಂದ ಕೂಡಿ ಎಲ್ಲರ ಬಿಂಬವಾಗಿದ್ದಾ ನೆ. ಕೃಷ್ಣ ವರ್ಣ ಕಲೌ ಕೃಷ್ಣಂ ಎಂದಿದ್ದಾರೆ. ಆದ್ದರಿಂದಲೇ ಕೃಷ್ಣಾರ್ಪಣವೆನ್ನುವುದು ಅತ್ಯಂತ ಸಮಂಜಸವಾದದ್ದು ಅದಕ್ಕೇ ಏನೋ ವ್ಯಾಸರಾಯರು ಮೂರು ಬಾರಿ ಕೃಷ್ಣನನ್ನು ಕರೆದದ್ದು. ಒಂದು ಬಿಂಬನನ್ನು, ಮತ್ತೂಂದು ಅವತಾರ ರೂಪವನ್ನು, ಮಗದೊಂದು ಮೂಲರೂಪವನ್ನು.

ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ, ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವೆನು. ಸ್ವತಃ ಶ್ರೀ ಕೃಷ್ಣನೇ ಗೀತೆಯಲ್ಲಿ ತಿಳಿಸಿ¨ªಾನೆ. ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್‌/ ಯತ್ತಪಸ್ಯಸಿ ಕೌಂತೇಯ ತತುRರುಷÌ ಮದರ್ಪಣಮ್‌// ಏನೇ ಮಾಡು ಅದನ್ನು ನನಗರ್ಪಿಸು ಎಂದು ನೇರವಾಗಿ ತನಗರ್ಪಿಸುವಂತೆ ತಿಳಿಸಿಲ್ಲವೇ?

ದೀಪಾ ಉಡುಪಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ....

  • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

  • 1. ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ...

ಹೊಸ ಸೇರ್ಪಡೆ