ಬೈರಾಗಿ ಟೀಸರ್: ಶಿವಣ್ಣ-ಡಾಲಿ ಜುಗಲ್ ಬಂದಿಗೆ ಬಹುಪರಾಕ್
Team Udayavani, Mar 18, 2022, 10:14 AM IST
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ “ಡಾಲಿ’ ಧನಂಜಯ್ ಪ್ರಮುಖ ಭೂಮಿಕೆಯಲ್ಲಿರುವ “ಬೈರಾಗಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. “ಟಗರು’ ಬಳಿಕ ಶಿವಣ್ಣ-ಡಾಲಿ ಮತ್ತೂಮ್ಮೆ “ಬೈರಾಗಿ’ ಮೂಲಕ ಎದುರುಬದುರಾಗಿದ್ದಾರೆ.
ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಟೀಸರ್, “ಜೇಮ್ಸ್’ ತೆರೆಕಂಡಿರುವ ಎಲ್ಲಾ ಪರದೆಗಳಲ್ಲೂ ರಾರಾಜಿಸುತ್ತಿದೆ. ಟೀಸರ್ ನೋಡಿದ ಶಿವಣ್ಣ, ಪುನೀತ್ ಹಾಗೂ ಡಾಲಿ ಫ್ಯಾನ್ಸ್ ಸಖತ್ ಫಿದಾ ಆಗಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಯಾಗಿ ರುವ “ಬೈರಾಗಿ’ ಝಲಕ್ಗೆ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಣ್ಣ ಹಾಗೂ ಡಾಲಿ ಧನಂಜಯ್ ಜುಗಲ್ಬಂದಿಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ. ಡಿಫರೆಂಟ್ ಲುಕ್ನಲ್ಲಿ ಇಬ್ಬರೂ ಕಂಗೊಳಿಸುತ್ತಿದ್ದಾರೆ. ಭಾರೀ ಸದ್ದು ಮಾಡುತ್ತಿರುವ “ಬೈರಾಗಿ’ ಟೀಸರ್ ಈಗಾಗಲೇ ಲಕ್ಷಾಂತರ ಹಿಟ್ಸ್ ದಾಖಲಿಸಿ ಟ್ರೆಂಡಿಂಗ್ನಲ್ಲಿದೆ. ವಿಜಯ್ ಮಿಲ್ಟನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ನಿರ್ಮಾಪಕ.
ಇದನ್ನೂ ಓದಿ:‘ಪರಮಾತ್ಮ’ನ ಜಾತ್ರೆಯಲ್ಲಿ ಮಿಂದೇಳುತ್ತಿರುವ ಅಭಿಮಾನಿಗಳು…
ಅನೂಪ್ ಸೀಳಿನ್ ಸಂಗೀತ ಹಾಗೂ ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ಹಿರಿಯ ನಟ ಶಶಿಕುಮಾರ್, ಪೃಥ್ವಿ ಅಂಬರ್, ಅಂಜಲಿ ಯಶ ಶಿವಕುಮಾರ್ ಸೇರಿದಂತೆ ಮೊದಲಾದವರು ಚಿತ್ರದ ತಾರಾಗಣ ದಲ್ಲಿದ್ದಾರೆ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!