ಬರ್ತ್‌ಡೇ ಸಂಭ್ರಮದಲ್ಲಿ ಗಣೇಶ್‌ : ಟೀಸರ್‌, ಮೋಶನ್‌ ಪೋಸ್ಟರ್‌ ಗಿಫ್ಟ್

Team Udayavani, Jul 2, 2021, 7:56 AM IST

ಬರ್ತ್‌ಡೇ ಸಂಭ್ರಮದಲ್ಲಿ ಗಣೇಶ್‌ : ಟೀಸರ್‌, ಮೋಶನ್‌ ಪೋಸ್ಟರ್‌ ಗಿಫ್ಟ್

ಇಂದು ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬ. ಪ್ರತಿವರ್ಷ ಗಣೇಶ್‌ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಮತ್ತುಕುಟುಂಬ ವರ್ಗದೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೊರೊನಾ ಮಹಾಮಾರಿ ಗೋಲ್ಡನ್‌ ಸ್ಟಾರ್‌ ಅದ್ಧೂರಿ ಬರ್ತ್‌ಡೇಗೆ ಬ್ರೇಕ್‌ ಹಾಕಿದೆ.ಕಳೆದ ವರ್ಷ ಕೊರೊನಾ ಆತಂಕದಿಂದ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಗಣೇಶ್‌, ಈ ಬಾರಿಯೂ ಹಾಗೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಕೋವಿಡ್‌ನಿಂದಾಗಿ ಕಳೆದ ಒಂದು ವರ್ಷದಿಂದ ಎಲ್ಲ ಸ್ಟಾರ್ ನಟ-ನಟಿಯರ ಹುಟ್ಟುಹಬ್ಬ ಸೋಶಿಯಲ್‌ ಮೀಡಿಯಾ ವೇದಿಕೆಯಲ್ಲೇ ನಡೆಯುತ್ತಿದ್ದು, ಅಂತೆಯೇ ಗಣೇಶ್‌ ಬರ್ತ್‌ಡೇ ಕೂಡ ಸೋಶಿಯಲ್‌ ಮೀಡಿಯಾದಲ್ಲೇ ನಡೆಯುತ್ತಿದೆ.

ಹೌದು, ಈಗಷ್ಟೇ ಕೊರೊನಾ ಎರಡನೇ ಅಲೆಯಿಂದ ಸ್ವಲ್ಪ ಮಟ್ಟಿಗೆ ಎಲ್ಲರೂ ನಿಟ್ಟುಸಿರು ಬಿಡುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸೋದು ಬೇಡ ಎಂದು ನಟ ಗಣೇಶ್‌ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗಣೇಶ್‌, “ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾದದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ, ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಚಿಸಿರುತ್ತೇನೆ. ಅಲ್ಲದೇ, ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್‌, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ, ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ… ಅದೇ ನನಗೆ ಶ್ರೀರಕ್ಷೆ’ ಎಂದಿದ್ದಾರೆ.

ಇನ್ನು, ಗಣೇಶ್‌ ಅವರ ಹುಟ್ಟುಹಬ್ಬಕ್ಕೆ ಯೋಗರಾಜ್‌ ಭಟ್‌ ನಿರ್ದೇಶನ “ಗಾಳಿಪಟ-2′ ಚಿತ್ರತಂಡ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿದರೆ, “ತ್ರಿಬಲ್‌ ರೈಡಿಂಗ್‌’ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಲು ಪ್ಲಾನ್‌ ಹಾಕಿಕೊಂಡಿದೆ. ಸದ್ಯ ಗಣೇಶ್‌ “ಸಖತ್‌’ ಶೂಟಿಂಗ್‌ನಲ್ಲಿ ಬಿಝಿ ಇದ್ದಾರೆ.

ಟಾಪ್ ನ್ಯೂಸ್

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

akshith shashikumar’s seethayana release on May 27th

ಶಶಿಕುಮಾರ್‌ ಪುತ್ರ ಅಕ್ಷಿತ್ ಚೊಚ್ಚಲ ಚಿತ್ರ ‘ಸೀತಾಯಣ’ ಮೇ 27ಕ್ಕೆ ರಿಲೀಸ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಎಚ್ ಡಿ ಕೋಟೆಯಲ್ಲಿ 77ನೇ ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನೇರಿ ಸಿನಿಮಾ

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

akshith shashikumar’s seethayana release on May 27th

ಶಶಿಕುಮಾರ್‌ ಪುತ್ರ ಅಕ್ಷಿತ್ ಚೊಚ್ಚಲ ಚಿತ್ರ ‘ಸೀತಾಯಣ’ ಮೇ 27ಕ್ಕೆ ರಿಲೀಸ್‌

gadang-rakkamma

ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

11

ನಾಯಕತ್ವ ಗುಣ ಬೆಳೆಸುತ್ತೆ ಕ್ರೀಡೆ: ಸಂಸದ ಕರಡಿ

flood

ಮಳೆ ಬಿರುಸು; ಕೆಲವೆಡೆ ಕೃತಕ ನೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.