ಸಿಡಿದೆದ್ದ ಸಾಮಾನ್ಯ! ಕೆಂಪಿರ್ವೆ ಬಿಟ್ಟುಕೊಂಡವರ ನಡುವೆ


Team Udayavani, Jul 21, 2017, 5:35 AM IST

pag.gif

ಸಮಾಜದಲ್ಲಿ ಶ್ರೀಸಾಮಾನ್ಯರ ತಾಳ್ಮೆ ಕಟ್ಟೆ ಒಡೆದರೆ ಅದರಿಂದ ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ. ಕಾಮನ್‌ ಮ್ಯಾನ್‌ನ ಪವರ್‌ ದೊಡ್ಡದು ಎಂಬುದು ಎಲ್ಲರಿಗೂ ಗೊತ್ತು. ತಗ್ಗುವಷ್ಟು ತಗ್ಗಿ, ಬಗ್ಗುವಷ್ಟು ಬಗ್ಗಿ ಕೊನೆಗೆ ಸಿಡಿದೆದ್ದರೆ ಸಾಮಾನ್ಯರ ಮುಂದೆ ನಿಲ್ಲೋದು ಕಷ್ಟ. ಈಗ ಇದೇ ಕಾನ್ಸೆಪ್ಟ್ ಅನ್ನು ಮೂಲವಾಗಿಟ್ಟುಕೊಂಡು ಸಿನಿಮಾವೊಂದು ಬರುತ್ತಿದೆ. ಅದು “ಕೆಂಪಿರ್ವೆ’. ಸಣ್ಣ ಇರುವೆ ಕೂಡಾ ಆನೆಯನ್ನು ಬೀಳಿಸಬಲ್ಲದು ಎಂಬುದು ನಿಮಗೆ ಗೊತ್ತೇ ಇದೆ.

ಅದೇ ಕಾನ್ಸೆಪ್ಟ್ನಡಿ ತಯಾರಾದ ಚಿತ್ರವಾದ್ದರಿಂದ “ಕೆಂಪಿರ್ವೆ’ ಎಂದು ಟೈಟಲ್‌ ಇಡಲಾಗಿದೆ. ಈ ಚಿತ್ರವನ್ನು ನಿರ್ದೇಶಿಸಿರೋದು ವೆಂಕಟ್‌ ಭಾರಧ್ವಜ್‌. ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್‌ ಅವರ ಪುತ್ರರಾಗಿರುವ ವೆಂಕಟ್‌ ಈಗಾಗಲೇ ಎರಡು ಸಿನಿಮಾ ಮಾಡಿದ್ದಾರೆ. “ಕೆಂಪಿರ್ವೆ’ ಚಿತ್ರಕ್ಕೆ ಕಥೆ ಒದಗಿಸಿರೋದು ಅವರ ಸಹೋದರ ಲಕ್ಷ್ಮಣ.

ಐಟಿ ಉದ್ಯೋಗಿಯಾಗಿರುವ ಲಕ್ಷ್ಮಣ ಚಿತ್ರಕ್ಕೆ ಕಥೆ, ಸಂಭಾಷಣೆಯ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ.
ಮೊದಲೇ ಹೇಳಿದಂತೆ ಚಿತ್ರದಲ್ಲಿ ಶ್ರೀಸಾಮಾನ್ಯರ ತಾಳ್ಮೆ ಕೆಟ್ಟರೆ ಏನೆಲ್ಲಾ ಆಗಬಹುದು, ಅವರ ಶಕ್ತಿ ಏನು ಎಂಬ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ ವೆಂಕಟ್‌. “ನಮ್ಮ ತಂಟೆಗೆ ಬಂದರೆ ಖಂಡಿತಾ ಬಿಡಲ್ಲ’
ಎಂಬ ಅಂಶವನ್ನು ಕೂಡಾ ಇಲ್ಲಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಪ್ರಮುಖ ಪಾತ್ರ ಮಾಡಿದ್ದಾರೆ. ಹಾಗೆ ನೋಡಿದರೆ ಅವರೇ ಈ ಚಿತ್ರದ ಹೀರೋ. ವೆಂಕಟ್‌ ಕಥೆ ಸಿದಟಛಿವಾದ ಮೇಲೆ ದತ್ತಣ್ಣ ಅವರನ್ನು ಭೇಟಿಯಾದರಂತೆ. ದತ್ತಣ್ಣ ಅವರು ಕೆಲವು ಅಂಶಗಳನ್ನು ಹೇಳುವ ಮೂಲಕ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರಂತೆ. “ಶ್ರೀಸಾಮಾನ್ಯನ ಪ್ರತಿಬಿಂಬವಾಗಿ ಈ ಸಿನಿಮಾದಲ್ಲಿ ಮೂಡಿಬಂದಿದೆ. ತುಂಬಾ ನೈಜವಾಗಿ ಮಾಡಿದ್ದೇವೆ. ನೀವು ಪಾರ್ಕ್‌ನಲ್ಲಿ ಇಂತಹ ಸಂಭಾಷಣೆಗಳನ್ನು ಕೇಳಿರುತ್ತೀರಿ. ಆ ತರಹದ ಹತ್ತಿರವಾಗುವ ಹಾಗೂ ದಿನನಿತ್ಯ ಕೇಳುವಂತಹ ಸಂಭಾಷಣೆಯನ್ನೇ ಇಲ್ಲಿ ಬಳಸಲಾಗಿದೆ’ ಎನ್ನುವುದು ವೆಂಕಟ್‌ ಮಾತು. ಚಿತ್ರದಲ್ಲಿ ಸುಮಾರು 48 ಪಾತ್ರಗಳು ಬಂದು ಹೋಗುತ್ತವೆಯಂತೆ. ಪ್ರತಿ ಪಾತ್ರ ಕೂಡಾ ಸಿನಿಮಾದ ಪ್ರಮುಖ ಪಾತ್ರಗಳು ಎಂಬುದು ವಿಶೇಷ.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ದತ್ತಣ್ಣ ಅವರಿಗೆ ಇದು ಹೊಸ ಬಗೆಯ ಹಾಗೂ ಭರವಸೆ ಮೂಡಿಸುವ ಸಿನಿಮಾ ಎನಿಸಿದೆ. “ಹುಡುಗರು ಕಥೆ ತುಂಬಾ ಚೆನ್ನಾಗಿ ಮಾಡಿಕೊಂಡು ಬಂದಿದ್ದರು.ಅದರಂತೆ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಶ್ರೀಸಾಮಾನ್ಯ ಸಿಡಿದೆದ್ದರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ.

ತನ್ನದೇ ಆದ ಹೊಸ ಕಾನ್ಸೆಪ್ಟ್ನಿಂದ ಈ ಸಿನಿಮಾ ಗಮನಸೆಳೆಯುತ್ತದೆ ಎಂಬ ವಿಶ್ವಾಸವಿದೆ. ತಂಡದ
ಪ್ರತಿಯೊಬ್ಬರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ದತ್ತಣ್ಣ ಮಾತು. ಚಿತ್ರದಲ್ಲಿ ಉಮೇಶ್‌ ಬಣಕಾರ್‌ ಕೂಡಾ ನಟಿಸಿದ್ದು, ಅವರಿಲ್ಲಿ ಕಾಮಿಡಿ ಪಾತ್ರ ಮಾಡಿದ್ದಾರಂತೆ. ಆರಂಭದಲ್ಲಿ ದತ್ತಣ್ಣ ಜೊತೆ ನಟಿಸುವಾಗ ಎಲ್ಲಿ ಅವರಿಂದ ಬೈಯಿಸಿಕೊಳ್ಳುತ್ತೇನೋ ಎಂಬ ಭಯ ಅವರಿಗೆ ಕಾಡಿತ್ತಂತೆ. ಆದರೆ, ನಟಿಸುತ್ತಾ ಆ ಭಯ ಹೋಯಿತಂತೆ. ಚಿತ್ರದಲ್ಲಿ ಭಾಸ್ಕರ್‌ ಕೂಡಾ ನಟಿಸಿದ್ದು, ಸಣ್ಣ ಪಾತ್ರವಾದರೂ ಚಿತ್ರಕ್ಕೆ ತಿರುವು ಕೊಡುವಂತಿದೆ ಎನ್ನುವುದು ಅವರ ಮಾತು. ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ. 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.