‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’


Team Udayavani, Mar 24, 2023, 4:41 PM IST

Malegaala Bantu Saniha song from pranayam movie

ನಟ ರಾಜವರ್ಧನ್‌ ಮತ್ತು ನೈನಾ ಗಂಗೂಲಿ ಜೋಡಿಯಾಗಿ ಅಭಿನಯಿಸಿರುವ ರೊಮ್ಯಾಂಟಿಕ್‌, ಕ್ರೈಂ-ಥ್ರಿಲ್ಲರ್‌ ಕಥಾಹಂದರದ”ಪ್ರಣಯಂ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. “ಪಿ2 ಪ್ರೊಡಕ್ಷನ್ಸ್‌’ ಮತ್ತು “ಮಾನ್ಸಿ ವೆಂಚರ್’ ಬ್ಯಾನರಿನಲ್ಲಿ ಪರಮೇಶ್‌ ನಿರ್ಮಿಸಿರುವ “ಪ್ರಣಯಂ’ ಚಿತ್ರಕ್ಕೆ ಎಸ್‌. ದತ್ತಾತ್ರೇಯ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸದ್ಯ “ಪ್ರಣಯಂ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದ ಮೊದಲ ರೊಮ್ಯಾಂಟಿಕ್‌ ಲಿರಿಕಲ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌, “ಪ್ರಣಯಂ’ ಸಿನಿಮಾದ “ಮಳೆಗಾಲ ಬಂತು ಸನಿಹ…’ ಎಂಬ ಈ ರೊಮ್ಯಾಂಟಿಕ್‌ ಲಿರಿಕಲ್‌ ವಿಡಿಯೋ ಸಾಂಗ್‌ನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮನೋಮೂರ್ತಿ ಸಂಗೀತ ಸಂಯೋಜನೆಯ ಈ ಗೀತೆಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯವಿದ್ದು, ಸೋನು ನಿಗಮ್‌ ಈ ಗೀತೆಗೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ:ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ಇದೇ ವೇಳೆ ಮಾತನಾಡಿದ ನಿರ್ಮಾಪಕ ಪರಮೇಶ್‌, “ಇದೊಂದು ಲವ್‌ ಕಂ ರೊಮ್ಯಾಂಟಿಕ್‌ ಕಥಾಹಂದರದ ಸಿನಿಮಾ. ಸಿನಿಮಾದ ಕಥೆಗೆ ತಕ್ಕಂತೆ ಮೆಲೋಡಿ ಹಾಡುಗಳನ್ನು ಸಂಗೀತ ನಿರ್ದೇಶಕ ಮನೋಮೂರ್ತಿ ಸಂಯೋಜಿಸಿದ್ದಾರೆ. ಮಳೆ ಮತ್ತು ಪ್ರೀತಿಯ ಸುತ್ತ ಈ ಮೆಲೋಡಿ ಗೀತೆ ಮೂಡಿಬಂದಿದೆ. ಕನ್ನಡ ಸಿನಿಪ್ರಿಯರಿಗೆ ಖಂಡಿತವಾಗಿಯೂ ಈ ಗೀತೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಈ ಗೀತೆಯ ಬಗ್ಗೆ ಮಾತನಾಡಿದ ಚಿತ್ರ ಸಾಹಿತಿ ಜಯಂತ ಕಾಯ್ಕಿಣಿ, “ಮನೋಮೂರ್ತಿ, ಸೋನು ನಿಗಮ್‌ ಮತ್ತು ನನ್ನ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ “ಮಳೆ’ ಹಾಡು ಇದಾಗಿದೆ. ಹಿಂದಿನ ಹಾಡುಗಳಂತೆ, ಈ ಹಾಡು ಕೂಡ ಕೇಳುಗರ ಮನಮುಟ್ಟಲಿದೆ’ ಎಂದು ಭರವಸೆಯ ಮಾತುಗಳನ್ನಾಡಿದರು.

“ಪ್ರಣಯಂ’ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಉಳಿದಂತೆ ಚಿನ್ಮಯ್‌ ಭಾವಿಕೆರೆ, ಹೃದಯ ಶಿವ ಇತರ ಹಾಡುಗಳಿಗೆ ಸಾಲುಗಳನ್ನು ಬರೆದಿದ್ದಾರೆ.

ಕಾರ್ಯಕ್ರಮದಲ್ಲಿ “ಝೇಂಕಾರ್‌ ಮ್ಯೂಸಿಕ್‌’ನ ಭರತ್‌ ಜೈನ್‌, ಗೀತ ಸಾಹಿತಿ ಚಿನ್ಮಯ್‌ ಭಾವಿಕೆರೆ ಮೊದಲಾದವರು ಹಾಜರಿದ್ದು ಗೀತೆಯ ಬಗ್ಗೆ ಮಾತನಾಡಿದರು. ಸದ್ಯ “ಝೇಂಕಾರ್‌ ಮ್ಯೂಸಿಕ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಈ ಗೀತೆ ಬಿಡುಗಡೆಯಾಗಿದೆ.

ಟಾಪ್ ನ್ಯೂಸ್

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

agrasena kannada movie

ಟೀಸರ್ ನಲ್ಲಿ ‘ಅಗ್ರಸೇನಾ’

melody drama kannada movie

ಪ್ರೇಕ್ಷಕರ ಜತೆ ‘ಮೆಲೋಡಿ ಡ್ರಾಮಾ’ದ ಹೊಸ ಕಥೆ

naveen shankar’s kshetrapathi

‘ಕ್ಷೇತ್ರಪತಿ’ಯಾದ ನವೀನ್‌ ಶಂಕರ್‌

pinki elli kannada movie

ಥಿಯೇಟರ್‌ನತ್ತ ಪಿಂಕಿ ಎಲ್ಲಿ?: ಜೂ.2ರಂದು ಚಿತ್ರ ತೆರಗೆ

radha

ಜೂ.02ಕ್ಕೆ ‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು