ಪ್ಯಾನ್‌ ಇಂಡಿಯಾ ಅಖಾಡದಲ್ಲಿ ‘ಚಂದ್ರು’ ಬಿಂಬ; ಭರ್ಜರಿ ಕಲೆಕ್ಷನ್‌ ಖುಷಿಯಲ್ಲಿ ‘ಕಬ್ಜ’


Team Udayavani, Mar 24, 2023, 12:32 PM IST

ಪ್ಯಾನ್‌ ಇಂಡಿಯಾ ಅಖಾಡದಲ್ಲಿ ‘ಚಂದ್ರು’ ಬಿಂಬ; ಭರ್ಜರಿ ಕಲೆಕ್ಷನ್‌ ಖುಷಿಯಲ್ಲಿ ‘ಕಬ್ಜ’

ನಿರ್ದೇಶಕ ಆರ್‌.ಚಂದ್ರು ಮುಖದಲ್ಲಿ  ನಗುಮೂಡಿದೆ. ಈ ನಗುವಿಗೆ ಕಾರಣ “ಕಬ್ಜ’ ಮತ್ತು ಆ ಚಿತ್ರ ತಂದುಕೊಟ್ಟ ಗೆಲುವು. ಬಿಡುಗಡೆಗೆ ಮುನ್ನ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ತೆರೆಕಂಡ ನಂತರವೂ ಮಾಸ್‌ ಪ್ರಿಯರ ಮನಗೆದ್ದಿದೆ.

ಪರಿಣಾಮವಾಗಿ ಬಾಕ್ಸಾಫೀಸ್‌ ಕಬ್ಜವಾಗಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಇತ್ತೀಚೆಗೆ ಚಂದ್ರು ಮಾಧ್ಯಮದ ಮುಂದೆ ಬಂದಿದ್ದರು. ಬಿಗ್‌ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಬಿಡುಗಡೆ ನಂತರ ಏನಾಗುತ್ತದೋ ಎಂಬ ಕುತೂಹಲ ಅನೇಕರಲ್ಲಿತ್ತು. ಆದರೆ, ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ತೆರೆಕಂಡ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಬಾಚಿಕೊಂಡು ಚಿತ್ರ 100 ಕೋಟಿ ಕ್ಲಬ್‌ ಸೇರಿದೆ ಎಂಬುದು ಗಾಂಧಿನಗರದ ಸಿನಿಪಂಡಿತರ ಲೆಕ್ಕಾಚಾರ.

ನಿರ್ದೇಶಕ ಚಂದ್ರು ಕೂಡಾ “ಕಬ್ಜ’ ಗೆಲುವಿನಿಂದ ಖುಷಿಯಾಗಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ, “ನಾನು ಈ ಸಿನಿಮಾ ವಿಚಾರದಲ್ಲಿ ಯಾವತ್ತೋ ಗೆದ್ದಿದ್ದೇನೆ. ಮೊದಲ ಬಾರಿ ಪುನೀತ್‌ ರಾಜ್‌ಕುಮಾರ್‌ ಸೆಟ್‌ಗೆ ಬಂದು ಖುಷಿಪಟ್ಟಾಗ ಗೆದ್ದಿದ್ದೇನೆ, ಸಿನಿಮಾ ರಿಲೀಸ್‌ ಮುಂಚೆಯೇ ಒಳ್ಳೆಯ ಬಿಝಿನೆಸ್‌ ಆಗಿ, ಹಾಕಿದ ಬಂಡವಾಳ ವಾಪಾಸ್‌ ಬಂದಾಗ ಗೆದ್ದಿದ್ದೇನೆ, ಇಡೀ ದೇಶ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಾಗ, ದೊಡ್ಡ ದೊಡ್ಡ ವಿತರಣಾ ಸಂಸ್ಥೆ ಮುಂದೆ ಬಂದಾಗ ಗೆದ್ದಿದ್ದೇನೆ, ಉಪೇಂದ್ರ, ಸುದೀಪ್‌, ಶಿವಣ್ಣರಂತಹ ದೊಡ್ಡ ನಟರು ಸಾಥ್‌ ನೀಡಿದಾಗ ಗೆದ್ದಿದ್ದೇನೆ’ ಎನ್ನುವ ಮೂಲಕ ಪ್ಯಾನ್‌ ಇಂಡಿಯಾ ಮಟ್ಟ ನಿರ್ದೇಶಕರಾಗಿ ಗುರುತಿಸಿಕೊಂಡ ಖುಷಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ:ಕಗ್ಗದ ಮೇಲೆ ಸ್ವರ್ಣವಲ್ಲೀ ಶ್ರೀ ಪ್ರವಚನ; ಇಂದಿನಿಂದ ಶಿರಸಿ ಯೋಗ ಮಂದಿರದಲ್ಲಿ!

ಅಂದಹಾಗೆ, ಚಂದ್ರು ಅವರದ್ದು ಒನ್‌ಮ್ಯಾನ್‌ ಆರ್ಮಿ ಎನ್ನಬಹುದು. ನಿರ್ಮಾಣ, ನಿರ್ದೇಶನ, ವಿತರಣೆ ಎಲ್ಲವೂ ಅವರದ್ದೇ. ಉಪೇಂದ್ರ, ಸುದೀಪ್‌, ಶಿವಣ್ಣ, ಶ್ರೇಯಾರಂತಹ ದೊಡ್ಡ ಕಲಾವಿದರು ಒಂದು ಕಡೆಯಾದರೆ, ಬೃಹತ್‌ ಸೆಟ್‌ ಗಳು ಮತ್ತೂಂದು ಕಡೆ… ಹೀಗಿದ್ದರೂ ಎಲ್ಲವನ್ನು ಸರಿದೂಗಿಸಿಕೊಂಡು, ಚಿತ್ರವನ್ನು 4 ಸಾವಿರ ಪರದೆಯಲ್ಲಿ ಬಿಡುಗಡೆ ಮಾಡಿ, ಚಿತ್ರ ಕೋಟ್ಯಾಂತರ ಬಿಝಿನೆಸ್‌ ಮಾಡುವಲ್ಲಿ ಚಂದ್ರು ಯಶಸ್ವಿಯಾಗಿದ್ದಾರೆ. ಈ ಮೂಲಕ ಮತ್ತೂಮ್ಮೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಕನ್ನಡದ ಸಿನಿಮಾವೊಂದು ಗಮನ ಸೆಳೆದಿದೆ. ಈ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ಕೆಲವೇ ಕೆಲವು ನಿರ್ಮಾಣ ಸಂಸ್ಥೆಗಳ ಸಾಲಿನಲ್ಲಿ ಈಗ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್‌ ಕೂಡಾ ಸೇರಿಕೊಂಡಿದೆ. ಚಿತ್ರದ ಆಡಿಯೋ, ಸ್ಯಾಟ್‌ಲೈಟ್‌, ಓಟಿಟಿ ಹಕ್ಕುಗಳು ಕೂಡಾ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ.

ಒಂದು ಸಿನಿಮಾ ಎಂದ ಮೇಲೆ ಪ್ರಶಂಸೆಯ ಜೊತೆಗೆ ಟೀಕೆ-ಟಿಪ್ಪಣಿ ಸಹಜ. ಸದ್ಯ ಚಂದ್ರು ಇವೆರಡನ್ನೂ ಸಮಾನವಾಗಿ ಸ್ವೀಕರಿಸಿ, “ಕಬ್ಜ’ ಗೆಲುವನ್ನು ಎಂಜಾಯ್‌ ಮಾಡುತ್ತಿರುವುದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

MOBILE FRAUD MONEY

ಬ್ಯಾಂಕ್‌ ಖಾತೆ ವಿವರ ಪಡೆದು 1.21 ಲ.ರೂ. ವಂಚನೆ

power lines

kadaba: ಲೈನ್‌ಮನ್‌ ಸಾವು ಪ್ರಕರಣ: ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Naveen shankar spoke about cini journey

ಹೀರೋ- ವಿಲನ್ ಅಂತೇನಿಲ್ಲ, ಪಾತ್ರಗಳಿಗೆ ನ್ಯಾಯ ಕೊಡುವುದೇ ನನ್ನಉದ್ದೇಶ… ನವೀನ್‌ ಶಂಕರ

ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?

ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?

Kannada film yada yada hi relased

ತೆರೆಗೆ ಬಂತು ಥ್ರಿಲ್ಲರ್‌ ‘ಯದಾ ಯದಾ ಹೀ’

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು