ಡಿಸೆಂಬರ್ನಿಂದ ಶಿವಾಜಿ ಸುರತ್ಕಲ್ 2 ಶುರು
Team Udayavani, Nov 26, 2021, 11:25 AM IST
ರಮೇಶ್ ಅರವಿಂದ ನಟನೆಯ “ಶಿವಾಜಿ ಸುರತ್ಕಲ್-2′ ಚಿತ್ರಕ್ಕೆ ಗುರುವಾರ ಮುಹೂರ್ತ ನಡೆದಿದೆ. ಮಲ್ಲೇಶ್ವರಂನ ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿದ್ದು, ಪ್ರಮುಖ ತಾರಾಗಣ ತಂತ್ರಜ್ಞರ ತಂಡ ಎಲ್ಲರೂ ಭಾಗಿಯಾಗಿದ್ದರು.
ಇನ್ನು ತಾರಾಗಣದಲ್ಲಿ ಮಗಳು ಜಾನಕಿ ಧಾರಾವಾಹಿಯ ರಾಕೇಶ್ ಮಯ್ಯ ನಟಿಸುತ್ತಿದ್ದಾರೆ. ಈಗಾಗ ರಾಕೇಶ್, ಶುಭಮಂಗಳ ಮತ್ತು ಟೆನಂಟ್ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈಗ ಶಿವಾಜಿ ಸುರತ್ಕಲ್-2 ಚಿತ್ರತಂಡ ಸೇರಿಕೊಂಡಿದ್ದಾರೆ. ಈಗಷ್ಟೇ ತರಬೇತಿ ಮುಗಿಸಿ ಕೆಲಸಕ್ಕೆ ಸೇರಿರುವ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್ಗಳಿದ್ದು ಚಿತ್ರದುದ್ದಕ್ಕು ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ.
ಈ ಚಿತ್ರದಲ್ಲಿ ವಿನಾಯಕ್ ಜೋಷಿ ಕೂಡಾ ನಟಿಸುತ್ತಿದ್ದಾರೆ. ಇವರದ್ದು ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿ ಪಾತ್ರವಾಗಿದ್ದು ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆಯಂತೆ.
ಇದನ್ನೂ ಓದಿ:ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ನಿಧನ
ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತವಿದೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದು. ಉಳಿದಂತೆ ಚಿತ್ರದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಾಘುರಮಣ ಕೊಪ್ಪ, ವಿದ್ಯಾ ಮೂರ್ತಿ ಇವರೆಲ್ಲ ಈಗಾಗಲೆ ತಾರಾಗಣದಲ್ಲಿದ್ದು, ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರ ಮೂಡಿಬರಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…