Sapta Sagaradaache Ello – Side B…; ನೀಲಿ ಹಾದಿಯಲ್ಲಿ ಕೆಂಪು ಹೆಜ್ಜೆ


Team Udayavani, Nov 17, 2023, 10:23 AM IST

sapta sagaradaache ello – side b

“ಮುಂದೆ ಮನು ರಗಡ್‌ ರೌಡಿಯಾಗುತ್ತಾರಾ, ಜೈಲಿನೊಳಗೆ ತನಗೆ ಚಿತ್ರಹಿಂಸೆ ಕೊಟ್ಟವರಿಗೆ ಹೊರಗಡೆ ಬಂದ ಶೆಟ್ರಾ ಕೂಳೇ ಕೊಡುತ್ತಾರಾ, ಹಳೆಯ ಪ್ರೀತಿ ಮರೆತು ಹೊಸ ಪ್ರೀತಿ ಹೇಗೆ ಬೆಳೆಯಿತು…’ – ಹೊಸ ಹೊಸ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಇವೆ. ಮುಂದೇನಾಗಬಹುದು, ಕಥೆ ಯಾವ ದಿಕ್ಕಿನಲ್ಲಿ ಸಾಗಬಹುದು, ರಕ್ಷಿತ್‌ ಶೆಟ್ಟಿ ಅಟಿಟ್ಯೂಡ್‌ ಹೇಗಿರಬಹುದು… ಹೀಗೆ ಸಿಕ್ಕಾಪಟ್ಟೆ ಕುತೂಹಲದೊಂದಿಗೆ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು “ಸಪ್ತಸಾಗರ ದಾಚೆ ಎಲ್ಲೋ- ಸೈಡ್‌- ಬಿ’.

ನಿಮಗೆ ಗೊತ್ತಿರುವಂತೆ ಸೆ.01ರಂದು ತೆರೆಕಂಡ “ಸಪ್ತಸಾಗರ ದಾಚೆ ಎಲ್ಲೋ -ಸೈಡ್‌-ಎ’ ಚಿತ್ರ ಒಂದು ಎಮೋಶನಲ್‌ ಲವ್‌ಸ್ಟೋರಿಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಸಿನಿಮಾ ನೋಡಿದವರಿಗೆ ಆ ಚಿತ್ರ ಒಂದು ಹೊಸ ಫೀಲ್‌ ಕಟ್ಟಿಕೊಟ್ಟಿದೆ. ಈಗ ಅದರ ಮುಂದುವರೆದ ಭಾಗವಾದ “ಸಪ್ತಸಾಗರದಾಚೆ ಎಲ್ಲೋ-ಸೈಡ್‌ ಬಿ’ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಇಂದು ತೆರೆ ಕಾಣುತ್ತಿದೆ.

ಹೆಚ್ಚಿದ ಕುತೂಹಲ

ಯಾವುದೇ ಒಂದು ಸಿನಿಮಾದ ಮೊದಲ ಭಾಗ ಹಿಟ್‌ ಆದರೆ ಆ ಚಿತ್ರದ ಮುಂದು ವರೆದ ಭಾಗದ ಕುತೂಹಲ ಹಾಗೂ ಬೇಡಿಕೆ ಎರಡೂ ಹೆಚ್ಚಾಗುತ್ತದೆ. ಈಗ “ಸಪ್ತಸಾಗರ ದಾಚೆ ಎಲ್ಲೋ’ ಚಿತ್ರ ಕೂಡಾ ಇದೇ ಹಾದಿಯಲ್ಲಿದೆ. ಸಿನಿಮಾದ ಮೊದಲ ಭಾಗ ನೋಡಿದವರು ಎರಡನೇ ಭಾಗಕ್ಕೆ ಕಾಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಟ್ರೇಲರ್‌ ಕೂಡಾ ಹಿಟ್‌ ಆಗಿದೆ. ಚಿತ್ರದ ಬಿಝಿನೆಸ್‌ ವಿಚಾರದಲ್ಲೂ ಅಷ್ಟೇ, ಮೊದಲ ಭಾಗಕ್ಕಿಂತ ಈ ಭಾಗದ ಬೇಡಿಕೆ ಹೆಚ್ಚಿದೆ. ಅದಕ್ಕೆ ಮುಖ್ಯವಾಗಿ ಎರಡು ಕಾರಣ, ಒಂದು ಮೊದಲ ಭಾಗ ಹಿಟ್‌ ಆಗಿರೋದು, ಇನ್ನೊಂದು ಎರಡನೇ ಭಾಗ ಸಖತ್‌ ರಗಡ್‌ ಆಗಿರೋದು.

ಬಿಝಿನೆಸ್‌ ವಿಚಾರ ಬಂದಾಗ ಲವ್‌ಸ್ಟೋರಿಗಳಿಂತ ಮೊದಲು ದೊಡ್ಡ ಮಟ್ಟದಲ್ಲಿ ಬಿಝಿನೆಸ್‌ ಮಾಡೋದು ಆ್ಯಕ್ಷನ್‌ ಅಥವಾ ರಗಡ್‌ ಸ್ಟೋರಿಗಳು. “ಸಪ್ತಸಾಗರದಾಚೆ ಎಲ್ಲೋ’ ಮೊದಲ ಭಾಗದ ಕ್ಲೈಮ್ಯಾಕ್ಸ್‌ ನೋಡಿದವರಿಗೆ ಕೊನೆಯಲ್ಲಿ ರಕ್ಷಿತ್‌ ಶೆಟ್ಟಿ ಹೊಸ ಗೆಟಪ್‌ನಿಂದ ಮಿಂಚಿರೋದು ಕಾಣುತ್ತದೆ. ಮೊದಲ ಭಾಗದಲ್ಲಿ ಸೈಲೆಂಟ್‌ ಅಂಡ್‌ ಸಾಫ್ಟ್ ಆಗಿದ್ದ ರಕ್ಷಿತ್‌ ಇಲ್ಲಿ ರಗಡ್‌ ಆಗಿದ್ದಾರೆ.

ಸೌತ್‌ ಇಂಡಿಯಾ ರಿಲೀಸ್‌

ಇನ್ನು, “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಕನ್ನಡದಲ್ಲಿ ಹಿಟ್‌ ಆಗುತ್ತಿದ್ದಂತೆ ತೆಲುಗಿನಲ್ಲೂ ಆ ಚಿತ್ರಕ್ಕೆ ಬೇಡಿಕೆ ಬಂದಿದ್ದು, ಅದರಂತೆ ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾ ನೋಡಿದ ತೆಲುಗು ಮಂದಿ ಕೂಡಾ ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಇದರ ಜೊತೆಗೆ ರಕ್ಷಿತ್‌ ಶೆಟ್ಟಿ ಕೂಡಾ ತೆಲುಗಿನಲ್ಲಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳುತ್ತಿದ್ದಾರೆ. ಈಗ ಸಪ್ತಸಾಗರದಾಚೆ ಎಲ್ಲೋ-2 ಚಿತ್ರ ಏಕಕಾಲಕ್ಕೆ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ತೆರೆಕಾಣುತ್ತಿದ್ದು, ಈಗಗಾಲೇ ಚಿತ್ರತಂಡ ಎಲ್ಲಾ ರಾಜ್ಯಗಳಿಗೂ ಹೋಗಿ ಸಿನಿಮಾ ಪ್ರಚಾರ ಮಾಡಿ ಬಂದಿದೆ.

ಕವಿತೆ ಇದ್ದಂತೆ…

“ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಒಂದು ಕವಿತೆ ಇದ್ದಂತೆ ಎನ್ನುವುದು ರಕ್ಷಿತ್‌ ಶೆಟ್ಟಿ ಮಾತು. “ಇದೊಂದು ಕವಿತೆಯಿದ್ದಂತೆ. ಕವಿತೆ ಯಾವಾಗಲೂ ವೈಭವೀಕರಿಸಿ ಹೇಳಲಾಗುತ್ತದೆ. ಆದರೆ ಜೀವನ ಹಾಗಲ್ಲ. ನಿಜ ಜೀವನದ ಅಂಶಗಳನ್ನು ತೆಗೆದುಕೊಂಡು ಅದನ್ನು ಕವಿತೆಯಾಗಿ ವೈಭವೀಕರಿಸಿ ಹೇಳಬಹುದಷ್ಟೇ. ಸಮುದ್ರದಂತಹ ಕನಸನ್ನು ನೀಲಿ ಬಣ್ಣದ ನೂಲಿನಲ್ಲಿ ಹೆಣೆಯುವ ಪ್ರಯತ್ನವನ್ನು ಮನು ಮತ್ತು ಪ್ರಿಯಾ ಪಾತ್ರದಲ್ಲಿ ಮೊದಲ ಭಾಗದಲ್ಲಿ ಹೇಮಂತ್‌ ಹೆಣೆದಿದ್ದಾರೆ. ಈಗ ಎರಡನೇ ಭಾಗ ಮತ್ತೂಂದು ಆಯಾಮ ಪಡೆದುಕೊಳ್ಳುತ್ತದೆ’ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ.

ಟ್ರೇಲರ್‌ ಮತ್ತು ಕೆಂಪು ಬಣ್ಣ

“ಸಪ್ತಸಾಗರದಾಚೆ ಎಲ್ಲೋ-ಬಿ’ ಟ್ರೇಲರ್‌ ನೋಡಿದವರಿಗೆ “ಸೈಡ್‌-ಬಿ’ ಮತ್ತಷ್ಟು ಇಂಟೆನ್ಸ್‌ ಆಗಿರುವುದು ಎದ್ದು ಕಾಣುತ್ತದೆ. ಪ್ರೀತಿ ಕಳೆದುಕೊಂಡ ಮನುವಿನ ಒದ್ದಾಟ, ಅಲೆದಾಟ, ನೋವು ಎಲ್ಲವೂ ಇಲ್ಲಿ ಪ್ರೇಕ್ಷಕರನ್ನು “ದಟ್ಟ’ವಾಗಿ ಆವರಿಸುವ ಸುಳಿವು ನೀಡಿದೆ. ಜೊತೆಗೆ ಹೊಸ ಪ್ರೀತಿಯೊಂದು ಚಿಗುರೊಡೆದ ಸಣ್ಣ ಸೂಚನೆಯೂ ಟ್ರೇಲರ್‌ನಲ್ಲಿ ಸಿಕ್ಕಿದೆ. ಇಲ್ಲಿ ನಾಯಕನಿಂದ ಯಾವುದೇ ಮಾತಿಲ್ಲ. ಆಗಾಗ ಕಾಡುವ ಫ್ಲ್ಯಾಶ್‌ ಬ್ಯಾಕ್‌ಗಳು, ನೀಲಿ ಸಮುದ್ರ,ಅದರ ಪಕ್ಕ ಮನೆ ಮಾಡುವ ಆಸೆ, ಯಾರು ಅಂದ್ರೆ ಯಾರೂ ಇಲ್ಲದ ಕನಸು, ಜೊತೆಗೆ ಕೆಂಪು ಬಣ್ಣ ನೀಡುವ ಸುಳಿವು…ಹೀಗೆ ಹಲವು ಅಂಶಗಳು ಟ್ರೇಲರ್‌ ಅನ್ನು ಆವರಿಸಿಕೊಳ್ಳುವ ಮೂಲಕ ಸಿನಿಮಾದೊಳಗೊಂದು ಗಟ್ಟಿ ಕಂಟೆಂಟ್‌ ಇರುವ ಭರವಸೆ ನೀಡಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.