Udayavni Special

ಶೈನ್‌ ಶೆಟ್ಟಿ ಹಿರಿ ಕನಸು

ಮತ್ತೆ ಕಿರುತೆರೆಗೆ ಹೋಗಲ್ಲ, ಸಿನಿಮಾವೇ ನನ್ನ ಆದ್ಯತೆ

Team Udayavani, Mar 20, 2020, 10:45 AM IST

ಶೈನ್‌ ಶೆಟ್ಟಿ ಹಿರಿ ಕನಸು

ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ ಖಂಡಿತ ಅವುಗಳನ್ನು ಸಿನಿಮಾ ಮಾಡಲು ಯೋಚನೆ ಮಾಡುತ್ತೇನೆ.

ಇತ್ತೀಚೆಗಷ್ಟೆ ಬಿಗ್‌ಬಾಸ್‌ ಮನೆಯಿಂದ ವಿಜೇತರಾಗಿ ಹೊರಬಂದಿರುವ ಶೈನ್‌ ಶೆಟ್ಟಿ ಸದ್ಯ ಹೊಸ ಜೋಶ್‌ನಲ್ಲಿ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಯಾಗಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಶೈನ್‌ ಶೆಟ್ಟಿ ನಾಯಕ ನಟನಾಗಿ ಎರಡು ಚಿತ್ರಗಳಲ್ಲಿ ಅಭಿನಯಿಸಲು ರೆಡಿಯಾಗಿದ್ದು, ಆ ಚಿತ್ರಗಳ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಆ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಹೋರಬೀಳುವ ಸಾಧ್ಯತೆ ಇದೆ. ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಶೈನ್‌ ಶೆಟ್ಟಿ ತಮ್ಮ ಮುಂದಿನ ಸಿನಿ ನಡೆಯ ಕುರಿತು ಒಂದಷ್ಟು ಮಾತನಾಡಿದ್ದಾರೆ.

“ಬಿಗ್‌ಬಾಸ್‌ ಮನೆಯಿಂದ ಗೆದ್ದು ಹೊರಬಂದ ಮೇಲೆ ಸಹಜವಾಗಿಯೇ ಒಂದಷ್ಟು ಸಿನಿಮಾಗಳ ಆಫ‌ರ್ ಬರುತ್ತಿರುವುದೇನೋ ನಿಜ. ಆದ್ರೆ ಹಾಗೆ ಬಂದ ಎಲ್ಲ ಆಫ‌ರ್‌ಗಳನ್ನು ಏಕಾಏಕಿ ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಎರಡು ಒಳ್ಳೆಯ ಸಬೆjಕ್ಟ್‌ನ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಆ ಸಿನಿಮಾಗಳ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಇದೇ ಮಾರ್ಚ್‌ನಲ್ಲೇ ಆ ಸಿನಿಮಾ ಶುರುವಾಗಬೇಕಿತ್ತು. ಆದ್ರೆ ಈಗ ಎಲ್ಲಾ ಕಡೆ ಕೊರೊನಾ ಭಯ ಇರುವುದರಿಂದ ಸ್ವಲ್ಪ ಕಾಲ ಎಲ್ಲವನ್ನೂ ಪೋಸ್ಟ್‌ಪೋನ್‌ ಮಾಡಲಾಗಿದೆ. ಆದಷ್ಟು ಬೇಗ ಆ ಸಿನಿಮಾಗಳ ಟೈಟಲ್‌, ನನ್ನ ಕ್ಯಾರೆಕ್ಟರ್‌ ಎಲ್ಲವನ್ನೂ ರಿವೀಲ್‌ ಮಾಡುತ್ತೇವೆ’ ಎನ್ನುತ್ತಾರೆ ಶೈನ್‌ ಶೆಟ್ಟಿ.

ಇನ್ನು ಶೈನ್‌ ಶೆಟ್ಟಿಗೆ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಿಗಿಂತ ಕಂಟೆಂಟ್‌ ಆಧರಿತ ಚಿತ್ರಗಳ ಕಡೆಗೆ ಹೆಚ್ಚಿನ ಒಲವಿದೆಯಂತೆ. ಈ ಬಗ್ಗೆ ಅವರೇ ಹೇಳು ವಂತೆ, “ನನಗೆ ಎಲ್ಲರೂ ಮಾಡುವಂಥ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳು, ಅಂಥ ಪಾತ್ರಗಳನ್ನು ಮಾಡುವುದರಲ್ಲಿ ಆಸಕ್ತಿಯಿಲ್ಲ. ಆದಷ್ಟು ಕಂಟೆಂಟ್‌ ಆಧಾರಿತ, ರಿಯಾಲಿಸ್ಟಿಕ್‌ ಸಬ್ಜೆಕ್ಟ್ ಆಧಾರಿತ ಸಿನಿಮಾಗಳನ್ನು ಮಾಡಬೇಕು. ಅಂಥ ಸಿನಿಮಾಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿದೆ. ಅದರಲ್ಲೂ ಬಯೋಪಿಕ್‌ ಮಾಡಲು ತುಂಬಾನೇ ಆಸೆ ಇದೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಮಾಡ್ತೀನಿ’ ಎನ್ನುತ್ತಾರೆ.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮೂಲಕವೇ ಪ್ರಸಿದ್ದಿ ಪಡೆದ ಶೈನ್‌ ಶೆಟ್ಟಿ ಮತ್ತೆ ಕಿರುತೆರೆ ಕಡೆಗೆ ಹೋಗುತ್ತಾರಾ ಎಂಬ ಪ್ರಶ್ನೆಗೆ ಅವರಿಂದ “ಇಲ್ಲ’ ಎನ್ನುವ ಉತ್ತರ ಬರುತ್ತದೆ. “ನಾನು ಸಂಪೂರ್ಣವಾಗಿ ಸಿನಿಮಾ ಕಡೆಗೆ ಬರಬೇಕು ಎನ್ನುವ ಉದ್ದೇಶದಿಂದಲೇ ಸೀರಿಯಲ್‌ನಿಂದ ಹೊರಬಂದೆ. ಕಿರುತೆರೆ ನನಗೆ ಸಾಕಷ್ಟು ಹೆಸರು, ಜನಪ್ರಿಯತೆ ಎಲ್ಲ ತಂದು ಕೊಟ್ಟಿದ್ದರೂ, ಮತ್ತೆ ಕಿರುತೆರೆಗೆ ಹೋಗುವ ಯಾವುದೇ ಯೋಚನೆಯಿಲ್ಲ. ಸದ್ಯಕ್ಕೆ ನನ್ನ ಗಮನ ಏನಿದ್ದರೂ ಸಿನಿಮಾದ ಕಡೆಗೆ’ ಎನ್ನುತ್ತಾರೆ ಶೈನ್‌ ಶೆಟ್ಟಿ.

ಸದ್ಯ ಶೈನ್‌ ಶೆಟ್ಟಿ ತಾವು ಒಪ್ಪಿಕೊಂಡಿರುವ ಎರಡು ಚಿತ್ರ ಗಳನ್ನು ಶುರು ಮಾಡುವುದಕ್ಕೂ ಮೊದಲು, “ದೂಂಡಾ’ ಎನ್ನುವ ಮ್ಯೂಸಿಕ್‌ ಆಲ್ಬಂ ಒಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಡ್ಯಾನಿಯಲ್‌ ಮತ್ತು ಸುಹಿತ್‌ ಬಂಗೇರ ಸಂಗೀತ ಸಂಯೋಜಿಸಿ, ನಿರ್ಮಿಸುತ್ತಿರುವ ಈ ಮ್ಯೂಸಿಕ್‌ ಆಲ್ಬಂನಲ್ಲಿ ಶೈನ್‌ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬೆನ್ನಿ ದಯಾಳ್‌ ಈ ಮ್ಯೂಸಿಕ್‌ ಆಲ್ಬಂನ ಗೀತೆಗೆ ಧ್ವನಿಯಾಗಿದ್ದು, ನಾರ್ಥ್-ಈಸ್ಟ್‌ ರಾಜ್ಯದ ಬುಡಕಟ್ಟು ಜನರ ಮೋಡಿ ವಿದ್ಯೆಯ ಕುರಿತಾಗಿ ಮೂಡಿಬರುತ್ತಿರುವ “ದೂಂಡಾ’ ಮ್ಯೂಸಿಕ್‌ ಆಲ್ಬಂನ ಬಹುತೇಕ ಚಿತ್ರೀಕರಣ ನಾರ್ಥ್-ಈಸ್ಟ್‌ ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲೆ ನಡೆಯಲಿದೆಯಂತೆ.

“ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರುವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ ರೈಟರ್ ತುಂಬ ಒಳ್ಳೆಯ ಕಥೆಗಳನ್ನು ತರುತ್ತಿದ್ದಾರೆ. ನನಗೆ ಅವು ಇಷ್ಟವಾದ್ರೆ, ಮುಂದೆ ಖಂಡಿತ ಮಾಡಲು ಯೋಚನೆ ಮಾಡುತ್ತೇನೆ. ಸದ್ಯಕ್ಕಂತೂ ಈಗ ಒಪ್ಪಿಕೊಂಡಿರುವ ಎರಡು ಸಿನಿಮಾಗಳನ್ನು ಮುಗಿಸುವುದರ ಕಡೆಗೆ ನನ್ನ ಗಮನ’ ಎನ್ನುತ್ತಾರೆ ಶೈನ್‌ ಶೆಟ್ಟಿ.

ಜಿ.ಎಸ್‌.ಕಾರ್ತಿಕ್‌ ಸುಧನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

suchitra-tdy-9

ಮನರೂಪ ಚಿತ್ರಕ್ಕೆಪ್ರಶಸ್ತಿ ಖುಷಿ

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

suchitra-tdy-07

ಡೈರೆಕ್ಟರ್ ಸ್ಪೆಷಲ್‌! : ನಿರ್ದೇಶಕರ ಹೊಸ ಯೋಚನೆಗಳೇನು ಗೊತ್ತಾ?

suchitra-tdy-6

ಮೀನಾ ಬಜಾರ್‌ ನಿರ್ದೇಶಕರ ಕಾಫಿ ಬ್ರೇಕ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

08-April-40

ಗಡಿ ಭಾಗದ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಕ್ರಮ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ

08-April-39

2,450 ಲೀಟರ್‌ ನಂದಿನಿ ಹಾಲು ವಿತರಣೆ