Totapuri 2 ಜಗ್ಗೇಶ್-ಡಾಲಿ ಜೊತೆಯಾಟ; ಸೆ.28ರಿಂದ ತೋತಾಪುರಿ ರುಚಿ


Team Udayavani, Sep 22, 2023, 3:51 PM IST

Totapuri 2 ಜಗ್ಗೇಶ್-ಡಾಲಿ ಜೊತೆಯಾಟ; ಸೆ.28ರಿಂದ ತೋತಾಪುರಿ ರುಚಿ

ಜಗ್ಗೇಶ್‌ ಹಾಗೂ ಡಾಲಿ ಧನಂಜಯ್‌ ಅಭಿನಯದ “ತೋತಾಪುರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದು, ಚಿತ್ರ ಸೆ.28ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಬಾರಿ ಸಿನಿಮಾದಲ್ಲಿ ಹೊಸದೇನೋ ಇರುವುದು ಎದ್ದು ಕಾಣುತ್ತದೆ. ತಿಳಿ ಹಾಸ್ಯದ ಜೊತೆಗೆ ಗಂಭೀರವಾದ ಒಂದು ಕಥೆಯನ್ನು ಹೇಳಿದಂತಿದೆ. ನಟ ಡಾಲಿ ಧನಂಜಯ್‌ ಈ ಚಿತ್ರದಲ್ಲಿ ಜಗ್ಗೇಶ್‌ ಅವರ ಜೊತೆ ಇಡೀ ಸಿನಿಮಾದುದ್ದಕ್ಕೂ ಸಾಗಿಬಂದಿದ್ದಾರೆ. ಧನಂಜಯ್‌ ಹಾಗೂ ಜಗ್ಗೇಶ್‌ ಅವರ ಕ್ಯಾರೆಕ್ಟರ್‌ ಲುಕ್‌ ಗುರುಪೂರ್ಣಿಮೆಯ ದಿನ ಬಿಡುಗಡೆಯಾಗಿತ್ತು. ಮೊದಲ ಭಾಗದಲ್ಲಿ ನವರಸ ನಾಯಕ ಜಗ್ಗೇಶ್‌, ಅದಿತಿ ಪ್ರಭುದೇವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಚಿತ್ರಕ್ಕೆ ನಿರಂಜನ ಬಾಬು ಅವರ ಛಾಯಾಗ್ರಹಣ, ಅರುಣ್‌ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ.

“ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್‌ ಚಿತ್ರದಲ್ಲಿದೆ. ಥೇಟರಿಗೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಪರಿಶುದ್ಧ ಹಾಸ್ಯದ ಹೂರಣವೂ ಇರುತ್ತದೆ’ ಎಂದು ನಿರ್ಮಾಪಕ ಕೆ.ಎ.ಸುರೇಶ್‌ ಹೇಳಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್‌, ವೀಣಾ ಸುಂದರ್‌, ಹೇಮಾದತ್‌ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿದೆ.

ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ “ಬಾಗ್ಲು ತೆಗಿ ಮೇರಿ ಜಾನ್‌ ಹಾಡು ಸೂಪರ್‌ ಹಿಟ್‌ ಆಗಿತ್ತು. ರೊಮ್ಯಾಂಟಿಕ್‌ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಲಕ್ಷಾಂತರ ಹಿಟ್ಸ್‌ ದಾಖಲಾಗಿತ್ತು. ಇದೀಗ “ತೋತಾಪುರಿ-2 ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಹಾಡು ಮೋಡಿ ಮಾಡುತ್ತಿರೋದು ವಿಶೇಷ.

ಹೃದಯಶಿವ ಸಾಹಿತ್ಯ ರಚಿಸಿರುವ “ಮೊದಲ ಮಳೆ ಮನದೊಳಗೆ… ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡು ಮಾಡುತ್ತಿದೆ. ಡಾಲಿ ಧನಂಜಯ್‌ ಹಾಗೂ ಸುಮನ್‌ ರಂಗನಾಥ್‌ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್‌ ಹೆಗ್ಡೆ ಕಂಠಸಿರಿಯಲ್ಲಿ “ಮಳೆ ಡಾಲಿ-ಜಗೆ ಹಾಡು ಮೂಡಿಬಂದಿದೆ.

ಟಾಪ್ ನ್ಯೂಸ್

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ ಟು ಸ್ಯಾಂಡಲ್‌ ವುಡ್:‌ ಮನೆ ಕೆಲಸದಲ್ಲಿದ್ದಾಕೆ ಖ್ಯಾತ ನಟಿಯಾಗಿ ಮಿಂಚಿದ ಲೀಲಾವತಿ

ಬೆಳ್ತಂಗಡಿ ಟು ಸ್ಯಾಂಡಲ್‌ ವುಡ್:‌ ಮನೆ ಕೆಲಸದಲ್ಲಿದ್ದಾಕೆ ಖ್ಯಾತ ನಟಿಯಾಗಿ ಮಿಂಚಿದ ಲೀಲಾವತಿ

pretha kannada movie

Kannada Cinema; ‘ಪ್ರೇತ’- ಹರೀಶ್ ರಾಜ್ ಸಿನಿಮಾ ರಿಲೀಸ್ ಗೆ ರೆಡಿ

I Love You Kane Lyrical; Bheema song out

Kannada Cinema: ‘ಐ ಲವ್ ಯೂ ಕಣೇ.. ‘; ಭೀಮನ ಸೈಕ್ ಡ್ಯುಯೆಟ್ ಬಂತು

manoj bajpayee

Joram; ಕನ್ನಡದ ಸಾಕಷ್ಟು ಸಿನಿಮಾಗಳು ನನ್ನನ್ನು ತುಂಬ ಕಾಡಿದೆ: ಮನೋಜ್ ಬಾಜಪಾಯಿ

Dhanveerrah spoke about Kaiva

Kaiva ಅಮರಪ್ರೇಮಿಯ ರಕ್ತಚರಿತ್ರೆ; ಬಜಾರಿಗೆ ಬಂತು ಧನ್ವೀರ್ ಚಿತ್ರ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

ELEPHANT HINDU

Elephant: ಆನೆಯ ದಾರಿಗೆ ನಮ್ಮದೇ ಅಡ್ಡಿ !

rat virtual

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

beml

BEML: ಬೆಮೆಲ್‌ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯ

MONEY GONI

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.