ಚಾಲುಕ್ಯರ ಸಮಾಧಿಗಳ ಸುತ್ತ


Team Udayavani, Dec 22, 2019, 4:34 AM IST

cd-2

ವಾಸ್ತುಶಿಲ್ಪ ಸುವರ್ಣಯುಗಕ್ಕೆ ಸಾಕ್ಷಿಯಾಗಿದ್ದ ಚಾಲುಕ್ಯ ರಾಜರ ಸಮಾಧಿಗಳ ಸಮಗ್ರ ಅಧ್ಯಯನ ನಡೆದರೆ ಇತಿಹಾಸದಲ್ಲಿ ಮತ್ತೂಂದು ಅಧ್ಯಾಯ ತೆರೆದುಕೊಂಡೀತು.

ಭಾರತದಲ್ಲಿ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದವರು ಚಾಲುಕ್ಯ ಅರಸರು. ಅವರ ಸಮಾಧಿಗಳು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ.

ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟ ದೇವಾಲಯಗಳನ್ನು ನಿರ್ಮಿಸಿ “ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ’ ಅಥವಾ ಹಿಂದೂ ವಾಸ್ತುಶಿಲ್ಪದ ತೊಟ್ಟಿಲು’ ಎಂದೇ ಪ್ರಸಿದ್ಧಿಯಾಗಿರುವ ಚಾಲುಕ್ಯರ ಬಗ್ಗೆ ಕಳೆದ ನಾಲ್ಕೈದು ದಶಕಗಳಿಂದ ಅನೇಕ ವಿದ್ವಾಂಸರು ಸಂಶೋಧನೆಯಲ್ಲಿ ತೊಡಗಿದ್ದರು. ಈ ಪರಂಪರೆಯನ್ನು ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಕೇವಲ 30 ಕಿ.ಮೀ. ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿವಿಧ ದೇವಾಲಯಗಳು ಇಡೀ ದೇಶದಲ್ಲಿ ಕಂಡುಬರುವುದು ಚಾಲುಕ್ಯರು ಆಳಿದ ಈ ನಾಡಿನಲ್ಲಿ ಮಾತ್ರ.

ದೇವಾಲಯದ ನಿರ್ಮಾಣದಲ್ಲಿ ವಿವಿಧ ಪ್ರಯೋಗಗಳು ಮತ್ತು ಪ್ರಭೇದಗಳನ್ನು ಒಳಗೊಂಡ ಕಾರಣ ಇದನ್ನು ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು ಎಂದು ಪ್ರಸ್ಸಿ ಬ್ರೌನ್‌ ಉಲ್ಲೇಖೀಸುತ್ತಾನೆ. ಹಿಂದೂ ವಾಸ್ತುಶಿಲ್ಪ ನಾಗರಿಕತೆಯ ಇತಿಹಾಸದಲ್ಲಿ ಅತಿದೊಡ್ಡ ದೇವಾಲಯ ನಿರ್ಮಾಣ ಚಳುವಳಿ, ಕ್ರಿ.ಶ. 540-800 ರಿಂದ 250 ನೂರು ವರ್ಷಗಳಿಗೂ ಹೆಚ್ಚು ಕಾಲ ಮುಂದುವರೆದಿದೆ.

6ನೇ ಶತಮಾನದಿಂದ 8ನೇ ಶತಮಾನದವರೆಗೆ ನಡೆದ ಈ ದೇವಾಲಯಗಳ ನಿರ್ಮಾಣದ ಆಂದೋಲನ ಹೊಸ ಶಿಲ್ಪಕಲಾ ಪರಂಪರೆಗೆ ದಾರಿದೀಪವಾಯಿತು. ದ್ರಾವಿಡ ಹಾಗೂ ನಾಗರ ಶೈಲಿಯ ಈ ದೇವಾಲಯಗಳು ಚಾಲುಕ್ಯರ ಶಿಲ್ಪಕಲೆ ಪರಂಪರೆಯ ಪರಾಕಾಷ್ಠೆಯನ್ನು ಎತ್ತಿ ತೋರುತ್ತವೆ. ಇಂತಹ ಮಹಾನ್‌ ರಾಜರು ಬದುಕಿ ಬಾಳಿದ ಜೀವನ ವೃತ್ತಾಂತ ರಹಸ್ಯಮಯ.

ಚಾಲುಕ್ಯರು ಬಾಳಿದ ಅರಮನೆಗಳ ಬಗ್ಗೆ ಯಾವ ಉಲ್ಲೇಖವೂ ಇಲ್ಲ ಮತ್ತು ಅರಮನೆಗಳ ಕುರುಹುಗಳೂ ಇಲ್ಲ. ಸಾವಿನ ನಂತರ ಆಡಂಬರದ ಸಮಾಧಿ ನಿರ್ಮಾಣವನ್ನೂ ಮಾಡಲಿಲ್ಲ. ಇವರ ಸಮಾಧಿಗಳೆಲ್ಲಿ ಎಂಬುದೇ ಸಂಶೋಧಕರಿಗೆ ಸವಾಲಾಗಿತ್ತು. ಶಿವ ಮತ್ತು ವಿಷ್ಣುವನ್ನು ನಂಬಿದ ರಾಜರು ತಮ್ಮ ಸಾವನ್ನು ಸಹ ರಹಸ್ಯಮಯಗೊಳಿಸಿರುವುದು ಆಶ್ಚರ್ಯ. ಆದರೆ 2005ರಿಂದ ಸತತ ಹದಿನಾಲ್ಕು ವರ್ಷಗಳ ಕಾಲ ಚಾಲುಕ್ಯರ ನಾಡಿನ ಸಂಶೋಧನೆ ನಡೆದಿದೆ. ಈ ಹಾದಿಯಲ್ಲಿ ಅನೇಕ ರೋಚಕ ವಿಷಯಗಳು ಕಂಡುಬಂದಿವೆ. ಚಾಲುಕ್ಯರ ನಾಡಿನಲ್ಲಿ ಬೆಳಕಿಗೆ ಬಾರದ ಶಕ್ತಿ ಆರಾಧನೆ ತಂತ್ರಸಾಧನೆಗಳು ಅಚ್ಚರಿ ಮೂಡಿಸಿವೆ.

ಚಾಲುಕ್ಯ ರಾಜವಂಶಸ್ಥರ ಮೂಲ ಸ್ಥಾನ ಹಾಗೂ ಇತಿಹಾಸದ ಬಗ್ಗೆ ಅನೇಕ ಸಂಶೋಧನಾಕಾರರು ವಿಚಾರಗಳನ್ನು ಮಂಡಿಸಿದ್ದಾರೆ. ತುಂಗಭದ್ರಾ ಸುತ್ತಮುತ್ತಲಿನವರೆಂದು, ಸ್ಥಳೀಯ ಆಂಧ್ರದ ಗಡಿಭಾಗದ ವರೆಂದು, ಅಲ್ಲದೆ ಇವರು ಸ್ಥಳೀಯ ಪಾಳೆಗಾರರೆಂದು ಗುರುತಿಸಿದ್ದುಂಟು. ಇತಿಹಾಸಜ್ಞ ಡಾ. ಶೀಲಾಕಾಂತ ಪತ್ತಾರ ಅವರ ಪ್ರಕಾರ ಚಾಲುಕ್ಯರು ಕನ್ನಡನಾಡಿನವರು. ಸ್ಥಳೀಯ ಚಲಕಿ, ಸಲುಕಿ, ಸಲಕಿ, ಎಲ್ಲವೂ ದೇಶಿಯ ನಾಮಗಳಿದ್ದು ಇವರೆಲ್ಲರೂ ಕೃಷಿಕರು. ಚಾಲುಕ್ಯರ ನಾಡಿನಲ್ಲಿ ಸತತ ಮೂವತ್ತು ವರ್ಷ ಸಂಶೋಧನೆ ಕೈಗೊಂಡಿರುವ ವಿದೇಶಿ ವಿದ್ವಾಂಸ ಡಾ. ಜಾರ್ಜ್‌ ಮಿಶೆಲ್‌ ಒಟ್ಟು 16 ರಾಜವಂಶಸ್ಥರ ಪೀಳಿಗೆಯಲ್ಲಿ 7 ಪ್ರಮುಖರನ್ನು ಉಲ್ಲೇಖೀಸಿರುತ್ತಾರೆ. 6ನೆಯ ಶತಮಾನದ ಆರಂಭದಲ್ಲಿ ಜಯಸಿಂಹನಿಂದ ಆರಂಭಗೊಂಡ ಈ ವಂಶ 757ರಲ್ಲಿ ಕೀರ್ತಿವರ್ಮನವರೆಗೆ ಹಬ್ಬಿದೆ.

ಹುಲಿಗೆಮ್ಮನ ಕೊಳ್ಳದ ಸಮಾಧಿ ರೂಪದ ದೇವಾಲಯಗಳು ಪಟ್ಟದಕಲ್ಲು ಹತ್ತಿರದ ಭದ್ರ ನಾಯಕನ ಜಾಲಿಹಾಳ ಹತ್ತಿರದಲ್ಲಿವೆ. ಈ ಪ್ರದೇಶದಲ್ಲಿ 2ನೇ ಪುಲಿಕೇಶಿ ಕೆಲಕಾಲ ವಾಸಿಸಿರುವ ಉಲ್ಲೇಖವಿದೆ. ಇಲ್ಲಿರುವ 11 ಚಿಕ್ಕ ಚಿಕ್ಕ ದೇವಾಲಯಗಳು ಹನ್ನೊಂದು ರಾಜರ ಸಮಾಧಿಗಳು ದೇಶದ ಪ್ರಮುಖ 12 ಜ್ಯೋತಿರ್ಲಿಂಗಗಳ ರೂಪವೆಂದು ಸ್ಥಳೀಯರು ತಪ್ಪಾಗಿ ಅರ್ಥೈಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಒಂದೇ ವಂಶಸ್ಥರ ಅಂತ್ಯಕ್ರಿಯೆಗಳನ್ನು ಒಂದೆಡೆ ಮಾಡುವುದು ರೂಢಿ. ಅಲ್ಲದೆ ಚಾಲುಕ್ಯ ರಾಜರ ಅಸ್ತಿ ಅಂತ್ಯಕ್ರಿಯೆಗಳನ್ನು ಹುಲಿಗೆಮ್ಮನ ಕೊಳ್ಳದ ಬೆಟ್ಟದಲ್ಲಿ ಮಾಡಿ ಅದರ ಮೇಲೆ ಲಿಂಗಗಳನ್ನು ಸ್ಥಾಪಿಸಿ ಚಿಕ್ಕ ಚಿಕ್ಕ ದೇವಸ್ಥಾನ ನಿರ್ಮಿಸಲಾಗಿದೆ.

ಈ ರಾಜವಂಶಸ್ಥರ ರುಧ್ರಭೂಮಿ ಇಲ್ಲಿರುವ ಬಗ್ಗೆ ಅನೇಕ ಐತಿಹ್ಯಗಳಿವೆ. ಇದನ್ನು ಪುಷ್ಟೀಕರಿಸುವಂತೆ ಶಿಖರವಲ್ಲದ ಒಂದು ದೇವಾಲಯದ ಮಂಟಪದಲ್ಲಿ 2ನೇ ವಿಕ್ರಮಾದಿತ್ಯನ ಅಸ್ತಿಗಳನ್ನು ಸಮಾಧಿ ಮಾಡಲಾಗಿರುವ ಬಗ್ಗೆ ಅಲ್ಲಿರುವ ಶಾಸನದಲ್ಲಿ ಉಲ್ಲೇಖೀಸಲಾಗಿದೆಯೆಂದು ಡಾ. ಜಾರ್ಜ್‌ ಮಿಶೆಲ್‌ ಸಂಶೋಧಿಸಿದ್ದಾರೆ.

ಉಳಿದ ಯಾವ ರಾಜರ ಸಮಾಧಿಗಳ ಬಗ್ಗೆ ಉಲ್ಲೇಖ ವಿಲ್ಲವಾದರೂ ಹಿಂದೂ ಸಂಪ್ರದಾಯದಂತೆ ರಾಜವಂಶಸ್ಥರ ಸಮಾಧಿಗಳನ್ನು ಒಂದೆಡೆ ನಿರ್ಮಿಸುವುದು ಹಾಗೂ ಸಮಾಧಿಗಳ ಮೇಲೆ ಲಿಂಗಗಳನ್ನು ಇಡುವ ಪದ್ಧತಿ ಇದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆಗಳು ಇಲ್ಲಿರುವ ಸಮಾಧಿಗಳ ಉತ್ಖನನ ನಡೆಸಿದಲ್ಲಿ ಸತ್ಯಾಸತ್ಯತೆ ಗೊತ್ತಾಗುವುದು.

ಚಾಲುಕ್ಯರ ಸಮಾಧಿಗಳ ಕುರಿತು 80ರ ದಶಕದಲ್ಲಿ ಚಾಲುಕ್ಯರ ಶಾಸನ ಅಧ್ಯಯನ ಮಾಡಿದ ಡಾ. ಕೆ. ವಿ. ರಮೇಶ ಅವರು ಅಲ್ಲಿರುವ 2ನೇ ವಿಕ್ರಮಾದಿತ್ಯ ರಾಜನ ಅಸ್ತಿ ಸಮಾಧಿ ಬಗ್ಗೆ ಉಲ್ಲೇಖೀಸಿದ್ದಾರೆ ನಿಜ. ಆದರೆ ಅಲ್ಲಿರುವ ಉಳಿದ 10 ಚಿಕ್ಕ ಚಿಕ್ಕ ಗುಡಿಗಳ ಬಗ್ಗೆ ಸರಿಯಾಗಿ ತಿಳಿಸಿಲ್ಲ. ಅಲ್ಲದೆ, ಈವರೆಗೆ ಯಾವೊಬ್ಬ ಸಂಶೋಧಕನೂ ಸಹ ಅವು ರಾಜರ ಸಮಾಧಿಗಳಲ್ಲಯೆಂದು ವಾದಿಸಿಲ್ಲ. ಇವುಗಳ ಬಗ್ಗೆ ಹೆಚ್ಚಿನ ತರ್ಕಬದ್ಧ ವಿಚಾರಗಳನ್ನು ತಿಳಿಸಿಲ್ಲ.

ಉತ್ತರ ಕರ್ನಾಟಕ ವಿಶೇಷವಾಗಿ ಈ ಚಾಲುಕ್ಯ ಭೂಮಿ ಬಹಳ ಪ್ರಾಚೀನ ಕಾಲದ ಭೂಮಿ. ಅದರ ಪುರಾತತ್ವ ಅವಶೇಷಗಳ ಸಂಪತ್ತು ಇನ್ನೂ ತೆಗೆಯಲಾಗಿಲ್ಲ. ಪೂರ್ವ ಐತಿಹಾಸಿಕ ತಾಣಗಳ ಸಮೀಕ್ಷೆ ಮತ್ತು ಪರಿಶೋಧನೆ ಮತ್ತು ಅವುಗಳ ಉತ್ಖನನ, ಡಾಲ್ಮೆನ್ಸ್‌ ಮತ್ತು ಬಂಡೆಗಳ ಅಧ್ಯಯನ, ಕಲಾತ್ಮಕ ಸ್ಮಾರಕಗಳ ಪರಿಶೀಲನೆ, ಭೂಮಿಯಲ್ಲಿ ಹರಡಿರುವ ಹೆಚ್ಚಿನ ಸಂಖ್ಯೆಯ ಶಾಸನಗಳ ಅರ್ಥೈಸುವಿಕೆ ಮತ್ತು ಜನರ ಸಾಂಸ್ಕೃತಿಕ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಲು ಅವುಗಳ ಸರಿಯಾದ ಮೌಲ್ಯಮಾಪನ ಮಾಡುವ ಅಗತ್ಯವಿದೆ.

ಮಂಜುನಾಥ ಸುಳ್ಳೊಳ್ಳಿ

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.