ಓದಲೆಂದೇ ಹುಟ್ಟಿದ ಹೆರಾಲ್ಡ್‌ ಬ್ಲೂಮ್‌! 


Team Udayavani, Apr 16, 2017, 3:45 AM IST

harold_bloomjpg.jpg

ಪ್ರತಿಯೊಂದು ಸಾಹಿತ್ಯಕ್ಕೂ ಹೆರಾಲ್ಡ್‌ ಬ್ಲೂಮಿನಂಥ ಒಬ್ಬ ವಕ್ತಾರ ಸಿಕ್ಕಿದರೆ ಎಷ್ಟು ಒಳ್ಳೆಯದೆಂದು ನಾನು ಕೆಲವೊಮ್ಮೆ ಯೋಚಿಸುವುದಿದೆ. ಹೆರಾಲ್ಡ್‌ ಬ್ಲೂಮ್‌ (Harold Bloom, 1930),  ಅಮೆರಿಕನ್‌ ಪ್ರೊಫೆಸರ್‌, ಪಾಶ್ಚಾತ್ಯ ಸಾಹಿತ್ಯದ, ಅದರಲ್ಲೂ ಅಮೆರಿಕನ್‌ ಮತ್ತು ಇಂಗ್ಲಿಷ್‌ ಸಾಹಿತ್ಯದ ವಿಮರ್ಶಕ, ಅಧ್ಯಾಪಕ, ನಿರೂಪಕ, ವಾಚಕ: ಅವನನ್ನು ಒಂದು ಪದದಲ್ಲಿ ಹಿಡಿದಿಡುವುದು ಅಸಾಧ್ಯ. ಓದಲೆಂದೇ ಹುಟ್ಟಿದ 86 ವರ್ಷಗಳ ಈ ವಯೋವೃದ್ಧ, ಜ್ಞಾನವೃದ್ಧ 1955ರಿಂದಲೂ ಯೇಲ್‌ ಯುನಿವರ್ಸಿಟಿಯಲ್ಲಿ ಪ್ರೊಫೆಸರ್‌ ಆಗಿ¨ªಾನೆ; ಅವನು ಬರೆದ ಕೃತಿಗಳು ಇಪ್ಪತ್ತಕ್ಕೂ ಹೆಚ್ಚು ; ಸಂಖ್ಯೆಯಲ್ಲಿ ಅದೇನೂ ಅದ್ಭುತ ಎನಿಸದಿದ್ದರೂ, ವಿದ್ವತ್ತು, ವ್ಯಾಪ್ತಿ, ಪ್ರತಿಭೆ ಮತ್ತು ಪ್ರಭಾವದ ದೃಷ್ಟಿಯಿಂದ ಅವು ಅದ್ವಿತೀಯವೇ ಸರಿ. ಮೂರು ತಲೆಮಾರುಗಳ ವಿದ್ಯಾರ್ಥಿಗಳಿಗೆ ಅವು ಸಾಹಿತ್ಯದ ಓದಿನ ಹುಚ್ಚನ್ನು ಹಿಡಿಸಿವೆ, ಸಾಹಿತ್ಯದ ಓದು ಸಾರ್ಥಕ ಎನ್ನುವ ಭಾವವನ್ನು ನೀಡಿವೆ. 

1994ರಲ್ಲಿ ಅವನು ಪ್ರಕಟಿಸಿದ The Western Canon (ಪಾಶ್ಚಾತ್ಯ ಮುಖ್ಯವಾಹಿನಿ) ಎಂಬ ಬೃಹತ್‌ ಸಂಪುಟ ಒಂದು ಪ್ರಸಿದ್ಧವೂ ವಿವಾದಾತ್ಮಕವೂ ಆದ ಪುಸ್ತಕ. ಇದರಲ್ಲಿ ಬ್ಲೂಮ್‌ ಸುಮಾರು 26 ಶ್ರೇಷ್ಠ ಪಾಶ್ಚಾತ್ಯ ಕೃತಿಗಳನ್ನು ತನ್ನ ಪ್ರಕಾರದ ಮುಖ್ಯವಾಹಿನಿಯ ದೃಷ್ಟಿಯಿಂದ ಅವಲೋಕಿಸುತ್ತಾನೆ. ಅವನೇನೂ ಈ ಕೃತಿಗಳನ್ನು ಮುಖ್ಯವಾಹಿನಿಗೆ ಸೇರಿಸಿದುದಲ್ಲ. ಅವು ಈಗಾಗಲೇ ಹಾಗೆ ಸ್ವೀಕೃತವಾದಂಥವು; ಆದರೆ ಯಾಕೆ ಅವು ಸ್ವೀಕೃತವಾಗಿವೆ ಎನ್ನುವುದಕ್ಕೆ ಬ್ಲೂಮ್‌ ವಿಮಶಾìತ್ಮಕ ಕಾರಣಗಳನ್ನು ನೀಡುತ್ತಾನೆ. ಈ ಕ್ಯಾನನ್‌ನನ್ನು ಪ್ರಶ್ನೆ ಮಾಡುವ ಕಾಲದಲ್ಲಿ ಬ್ಲೂಮ್‌ನ ಪುಸ್ತಕ ಬಂದುದರಿಂದ ಅವನು “ಕ್ಯಾನನ್‌ ವಾರ್‌’ಗೆ (“ವಾಹಿನಿಯುದ್ಧ’ಕ್ಕೆ) ಸೇರಿದ ಹಾಗಾಗುತ್ತದೆ. ಕ್ಯಾನನ್‌ನನ್ನು ನೋಡುವ ದೃಷ್ಟಿ ಬದಲಾಗಿದೆ ನಿಜ; ಆದರೂ ಬ್ಲೂಮ್‌ ಹೆಸರಿಸುವ ಕೃತಿಗಳು ಆ ಕಾರಣಕ್ಕೆ ನೇಪಥ್ಯದ ಹಿಂದೆ ಸರಿದಿವೆ ಎನ್ನುವಂತೆಯೂ ಇಲ್ಲ. ಆದ್ದರಿಂದ ಬ್ಲೂಮ್‌ನ ಪುಸ್ತಕ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ, ಬಹುಶಃ ಎಂದೂ ಕಳೆದುಕೊಳ್ಳುವುದಿಲ್ಲ. 

ಬ್ಲೂಮ್‌ ಇತರ ಕೆಲವು ವಿವಾದಗಳಿಗೂ ಸಿಲುಕಿಕೊಂಡಿ¨ªಾನೆ. 1920ರಲ್ಲಿ ವಿಮ್ಸಾಟ್‌, ಕ್ಲೆಯಾಂತ್‌ ಬ್ರೂಕ್ಸ್‌ , ಜಾನ್‌ ಕ್ರೋ ರ್ಯಾನ್ಸಮ್‌, ಐ. ಎ. ರಿಚರ್ಡ್ಸ್‌ ಮುಂತಾದವರು “ನ್ಯೂ ಕ್ರಿಟಿಸಿಸಂ'(“ನವ ವಿಮರ್ಶೆ’) ಎಂಬ ವಿಮಶಾìವಿಧಾನವೊಂದನ್ನು ಪ್ರಚುರಪಡಿಸಿದರು: ಲೇಖಕ- (ಮತ್ತು ಇತಿಹಾಸ-) ಕೇಂದ್ರಿತ ವಿಮಶಾì ಕ್ರಮವನ್ನು ಅದು ವಿರೋಧಿಸುತ್ತಿತ್ತು; ಸಾಹಿತ್ಯ ವಿಮರ್ಶೆಗೆ ಪಠ್ಯವೇ ಮುಖ್ಯವಲ್ಲದೆ ಇನ್ನೇನೂ ಅಲ್ಲ ಎನ್ನುವ ವಾದ ಅದು. ಬ್ಲೂಮ್‌, ಯೇಲ್‌ನಲ್ಲಿ ವಿದ್ಯಾರ್ಥಿಯಾಗಿ ಸೇರಿದಾಗ ನವ ವಿಮರ್ಶೆ ಜೋರಾಗಿ ನಡೆಯುತ್ತಿತ್ತು. ಬ್ಲೂಮ್‌ ಇದನ್ನು ವಿರೋಧಿಸಿದ: ಪಠ್ಯದ ಜತೆ ಜತೆಗೇ ಲೇಖಕ ಮತ್ತು ಅವನ ಕಾಲ ಕೂಡ ಮುಖ್ಯವೇ ಎನ್ನುವುದು ಅವನ ವಾದವಾಗಿತ್ತು.

” ಇಸಂ’ ಆಧರಿತ ದೃಷ್ಟಿಕೋನಗಳನ್ನೂ ಕೂಡ ಬ್ಲೂಮ್‌ ವಿರೋಧಿಸುತ್ತಾನೆ. ಸಾಹಿತ್ಯ ಕೃತಿಗಳನ್ನು ಐಡಿಯಾಲಜಿಗಳಿಗೆ ಇಳಿಸಿದರೆ ಅವುಗಳನ್ನು ಕೊಂದ ಹಾಗೆ ಎನ್ನುವುದು ಅವನ ಅಭಿಪ್ರಾಯ. ಒಂದು ರೀತಿಯ ಮಾನವೀಯತೆ (humanism) ಮತ್ತು ಅತೀತತೆಯನ್ನು (transcedentalism) ಬ್ಲೂಮಿನಲ್ಲಿ ಕಾಣಬಹುದು; ಪ್ರಬಲವಾದ ಜ್ಯೂವಿಶ್‌ ಮೂಲದ ಅವನಿಗೆ ಬಹುಶಃ ಇವೆರಡೂ ಒಂದೆಯೇ ಎನ್ನುವ ಹಾಗೆ ಕಾಣಿಸುತ್ತದೆ. 

ಸುದೀರ್ಘ‌ ಕಾಲ ವಿಮಶಾìಕ್ಷೇತ್ರದಲ್ಲಿರುವ ಬ್ಲೂಮ್‌ ತನ್ನದೇ ಕೆಲವು ಸೈದ್ಧಾಂತಿಕ ತತ್ವಗಳನ್ನೂ ಮುಂದೂಡಿ¨ªಾನೆ: strong writer, anxiety of influence, misprison (‘strong misreading’),  ಇತ್ಯಾದಿ. ಅವನ ಪ್ರಕಾರ ಕೆಲವು ಲೇಖಕರು ಶಕ್ತಿಯುತವಾಗಿರುತ್ತಾರೆ ಹಾಗೂ ಯುವ ಲೇಖಕರು ಅವರ ಅಭಿಮಾನಿಗಳಾಗಿ ತಮ್ಮ ಬರಹಗಳನ್ನು ಅರಂಭಿಸುತ್ತಾರೆ, ಆದರೆ ಹಿರಿಯ ಲೇಖಕರ ಪ್ರಭಾವದಿಂದ ಹೊರಬರಲಾರದ “ಭೀತಿ’ಯೊಂದು ಅವರನ್ನು ಕಾಡುತ್ತದೆ. ಆಗ ಅವರು ಈ ಹಿರಿಯ ಲೇಖಕರ ಕೃತಿಗಳನ್ನು ತಪ್ಪೋದಿಗೆ ಗುರಿಮಾಡುತ್ತಾರೆ; ತಾವು ಮುಂದೆ ಬರಬೇಕಿದ್ದರೆ ಅವರಿಗೆ ಈ ತಪ್ಪೋದು ಅಗತ್ಯವಾಗುತ್ತದೆ. ಬ್ಲೂಮಿನ ಈ ಸಿದ್ಧಾಂತವನ್ನು ಎಲ್ಲರೂ ಒಪ್ಪುವುದಿಲ್ಲ, ಅದೊಂದು ರೋಚಕ ವಾದವಾಗಿಯಷ್ಟೆ ಉಳಿದುಕೊಂಡಿದೆ. 

ಇವೆಲ್ಲದರ ಹೊರತಾಗಿಯೂ ಬ್ಲೂಮ್‌ನ ವಿಮಶಾì ಬರಹಗಳು ಆಪ್ಯಾಯಮಾನವಾಗಿರುವುದಕ್ಕೆ ಅವನ ಸಾಹಿತ್ಯಪ್ರೀತಿಯೇ ಕಾರಣ, ಸಾಹಿತ್ಯಪ್ರೀತಿ ಹಾಗೂ ಬೆರಗುಗೊಳಿಸುವ ಒಳನೋಟಗಳು. ಅವನು “ಓದಿದ’ ಕೃತಿಗಳನ್ನು ಓದಬೇಕೆನಿಸುತ್ತದೆ, ಈಗಾಗಲೇ ಓದಿದ್ದರೆ ಇನ್ನೊಮ್ಮೆ ಓದಬೇಕೆನಿಸುತ್ತದೆ. ಒಬ್ಬ ವಿಮರ್ಶಕನಿಂದ ನಾವೇನೂ “ಮಿದುಳು ತೊಳೆಯುವ’ ಕೆಲಸವನ್ನು ಅಪೇಕ್ಷಿಸಬಾರದು, ನಮ್ಮನ್ನೂ ಓದಿಗೆ ಹಚ್ಚುವ ಹಾಗೆ ಆತ ಮಾಡಿದರೆ ಸಾಕು; ಬ್ಲೂಮ್‌ ಇದನ್ನು ಮಾಡುತ್ತಾನೆ ಎನ್ನುವುದೇ ಅವನ ಹೆಚ್ಚಳ. ಅವನೊಬ್ಬ “ಪಾರಸ್‌ಮಣಿ’ ಇದ್ದ ಹಾಗೆ. 

ಬ್ಲೂಮ್‌ನದೊಂದು How to Read and Why (2001) ಎಂಬ ಇನ್ನೂರ ಎಂಬತ್ತು ಪುಟಗಳ ಪುಸ್ತಕವಿದೆ. ಹೇಗೆ ಮತ್ತು ಯಾಕೆ ಓದಬೇಕು ಎಂದು ತಿಳಿಸುವ ಪುಸ್ತಕ, ನನಗೆ ಬಹಳ ಇಷ್ಟವಾದ್ದು. ಹೇಗೆ ಮತ್ತು ಯಾಕೆ ಎನ್ನುವುದು ಒಂದೇ ಪ್ರಶ್ನೆ ಎನ್ನುತ್ತಾನೆ ಬ್ಲೂಮ್‌. ಆರಂಭದಲ್ಲಿ ಕೆಲವು ಅಮೂರ್ತ ವಿಚಾರಗಳ ಅವತರಿಣಿಕೆಯಿದೆ. ಇದನ್ನು ದಾಟಿ ಒಳ ಪ್ರವೇಶಿಸಿದರೆ ನಮಗೆ ದೊರಕುವುದು ಅದ್ಭುತವಾದೊಂದು ಸಾಹಿತ್ಯವಿಹಾರ. ಕತೆಗಳು, ಕವಿತೆಗಳು, ಕಾದಂಬರಿಗಳು (ಎರಡು ಭಾಗಗಳಲ್ಲಿ), ಮತ್ತು ನಾಟಕಗಳೆಂದು ಬೇರೆ ಬೇರೆ ಪ್ರಕಾರಗಳಿಂದ ಉದಾಹರಣೆಗಳನ್ನು ತೆಗೆದು ಹೇಗೆ ಮತ್ತು ಯಾಕೆ ಅವುಗಳನ್ನು ಓದಬೇಕು, ಎಂದರೆ ತಾನು ಅವುಗಳನ್ನು ಹೇಗೆ ಮತ್ತು ಯಾಕೆ ಓದುತ್ತೇನೆ, ಎನ್ನುವುದನ್ನು ಸರಳ ಭಾಷೆಯಲ್ಲಿ ವಿವರಿಸುತ್ತ ಹೋಗುತ್ತಾನೆ. ಬ್ಲೂಮ್‌ ನಮ್ಮ ಮೇಲೆ ಯಾವ ಐಡಿಯಾಲಜಿಯನ್ನೂ ಹೇರದೆ ನಮ್ಮನ್ನು ಸ್ವತಂತ್ರ ಓದುಗರನ್ನಾಗಿ ಬಿಡುತ್ತಾನೆ ಎನ್ನುವುದು ಮುಖ್ಯ. ಅವನ ವಿದ್ವತ್ತು, ಅಪರಿಮಿತವಾದ ಓದು ಇಲ್ಲಿ ಕೆಲಸ ಮಾಡುತ್ತವೆ ಎನ್ನುವುದು ನಿಜ; ಆದರೆ ಅವನೆಂದೂ ನಮಗೆ ಭಯ ಹುಟ್ಟಿಸುವುದಿಲ್ಲ. 

ಪ್ರತಿಯೊಂದು ವಿಭಾಗದಲ್ಲೂ ಬ್ಲೂಮ್‌ ಕೆಲವು ಪ್ರಾತಿನಿಧಿಕ ಬರಹಗಾರರ ಒಂದೆರಡು ಕೃತಿಗಳನ್ನು ವಿಶ್ಲೇಷಣೆಗೆ ಎತ್ತಿಕೊಳ್ಳುತ್ತಾನೆ. ಅವುಗಳ ಕುರಿತು ಒಂದೆರಡು ಪುಟಗಳಲ್ಲಿ ನಾವು ದಿನವಿಡೀ ಯೋಚಿಸಬಹುದಾದಷ್ಟು ವಿಷಯಗಳನ್ನು ನೀಡುತ್ತಾನೆ. ಕೆಲವು ಬರಹಗಾರರನ್ನು ಅವನು ಒಟ್ಟಾಗಿ ನೋಡುವುದೂ ಇದೆ. ಉದಾಹರಣೆಗೆ, ಕವಿತೆಯ ವಿಭಾಗದಲ್ಲಿ ಹೌಸ್‌ಮನ್‌, ಬ್ಲೇಕ್‌, ಲ್ಯಾಮಡರ್‌ ಮತ್ತು ಟೆನ್ನಿಸನ್‌ರನ್ನು ಒಟ್ಟಾಗಿ ತೆಗೆದುಕೊಳ್ಳುತ್ತಾನೆ. ಆದರೆ ಟೆನ್ನಿಸನ್‌ನ ನೀಳYವನ “ಯೂಲಿಸಿಸ್‌’ಗೆ ಹೆಚ್ಚು ಜಾಗ ಕೊಡುತ್ತಾನೆ. “ಯೂಲಿಸಿಸ್‌’ ಅವನಿಗೆ ಮನುಷ್ಯ ಏಕಾಂತವನ್ನು ಎದುರಿಸುವ ಬಗೆಯಾಗಿ ತೋರುತ್ತದೆ. ಮನುಷ್ಯ ತನ್ನೊಳಗಿನ “ಇತರತ್ವ’ದೊಂದಿಗೆ, ಅರ್ಥಾತ್‌ ನಾವು ನಮ್ಮೊಂದಿಗೇ, ಮಾತಾಡುವುದಕ್ಕೆ ಕವಿತೆ ಸಹಾಯಮಾಡುತ್ತದೆ. ನಮ್ಮೊಳಗಿನ ನಮ್ಮ ಮಾತುಗಳು ನಮ್ಮ ಕಿವಿಗೆ ಬೀಳುತ್ತವೆ. ಇದಕ್ಕೆ ಶೇಕ್ಸ್‌ಪಿಯರನ ಹೆಣ್ಣು-ಗಂಡುಗಳ ಪಾತ್ರಗಳು ನಮಗೆ ಮಾದರಿಯಾಗುತ್ತವೆ. We read to find ourselves, more fully and more strange than otherwise we could hope to find” (p. 79). ಎನ್ನುತ್ತಾನೆ ಬ್ಲೂಮ್‌. ಈ “ಕಿವಿಗೆ ಬೀಳುವ’ ವಿಚಾರವನ್ನು ತನಗೆ ಎಲ್ಲಿ ಸಿಕ್ಕಿತು ಎಂದು ಬ್ಲೂಮ್‌ ಯೋಚಿಸುತ್ತ ಅದು ಟೆನ್ನಿಸನ್‌ನ ಸಮಕಾಲೀನ ತತ್ವಜ್ಞಾನಿ ಜೆ. ಎಸ್‌. ಮಿಲ್‌ನ What is  Poetry ಯಲ್ಲಿ ಬರುತ್ತದೆ ಎನ್ನುವುದು ಅವನಿಗೆ ನೆನಪಾಗುತ್ತದೆ. ಇಂಥ ನೆನಪುಗಳೂ ಬ್ಲೂಮ್‌ನ ಒಂದು ವಿಶಿಷ್ಟ ಗುಣ! “ಸ್ಮತಿಶಪಿತ’ ಎನ್ನುತ್ತಾರಲ್ಲ, ಅಂಥ ನೆನಪಿನ ಶಕ್ತಿ ಈ ವಿದ್ವಾಂಸನಿಗೆ. ಆದ್ದರಿಂದಲೇ ಅವನು ಕೃತಿಯೊಂದನ್ನು ಅದರ ಮೈಕ್ರೋ ಮತ್ತು ಮ್ಯಾಕ್ರೋ ಎರಡೂ ಕೋನಗಳಿಂದ ನೋಡಬಲ್ಲ. ಇನ್ನು ಬ್ರೌನಿಂಗ್‌ನ ಕವಿತೆಗಳಲ್ಲಿ ಅವನು ಎತ್ತಿಕೊಳ್ಳುವುದು ಅತಿ ಪಠಿÂàಕರಣಗೊಂಡ ಕವಿತೆಗಳನ್ನಲ್ಲ, Childe Roland to the Dark Tower came’ ಎಂಬ ಲಾವಣಿಯನ್ನು; ಯಾಕೆಂದರೆ ಇದರಲ್ಲವನು ಶೇಕ್ಸ್‌ ಪೀರಿಯನ್‌ ಗುಣಗಳನ್ನು ಕಾಣುತ್ತಾನೆ. ಕಾದಂಬರಿಕಾರರಲ್ಲಿ ಬುÉಮ್‌ ಸರ್ವಾಂಟಿಸ್‌, ಸ್ಟೆಂಡಾಲ್‌, ಜೇನ್‌ ಆಸ್ಟಿನ್‌, ಡಿಕೆನ್ಸ್‌ , ದೋಸ್ತೊವ್‌ಸ್ಕಿ, ಪ್ರೂಸ್ಟ್‌ ಮುಂತಾಗಿ ಯುರೋಪಿನ ಪ್ರಸಿದ್ಧರನ್ನು ತೆಗೆದುಕೊಳ್ಳುತ್ತಾನೆ.

ನಾಟಕಕಾರರಲ್ಲಿ ಶೇಕ್ಸ್‌ಪಿಯರ್‌, ಇಬೆÕನ್‌, ವೈಲ್ಡರನ್ನು. ಈ ಮಧ್ಯೆ ಕೆಲವು ಕಾದಂಬರಿಗಳನ್ನು ಎರಡನೆ ಸಲ ಓದುವುದರ ಪ್ರತ್ಯೇಕ ಖುಷಿಯ ಕುರಿತು ಹೇಳುವ ಮಾತುಗಳನ್ನು ಇಲ್ಲಿ ಉದ್ಧರಿಸಲೇ ಬೇಕು: There is a pure pleasure in the first reading of a great novel, and yet I think it is a different when you reread Great Epectations or The Charter House of Parma. You are liberated into perspectives not previously available to you, and the pleasures of reading can be more various and enlightening than your first expereince of the novel. ಎರಡನೆಯ ಬಾರಿ ನಾವು ಕತೆಯಿಂದ ಮುಕ್ತವಾಗಿರುತ್ತೇವೆ, ಕತೆಯ ಹೊರತಾಗಿಯೂ ಕಾದಂಬರಿಯಲ್ಲಿ ಬೇರೆ ಖುಷಿಗಳಿರುತ್ತವೆ. ಕವಿತೆಗಳನ್ನಂತೂ ನಾವು ಪದೇ ಪದೇ ಓದುತ್ತೇವೆ, ಮಾತಿಗೆ ಸಿಗದ ಮೌನಕ್ಕಾಗಿ. 

– ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Agriculture ಡಿಪ್ಲೊಮಾ ಕಾಲೇಜು ಉಳಿಸಲು ಹೋರಾಟ

Agriculture ಡಿಪ್ಲೊಮಾ ಕಾಲೇಜು ಉಳಿಸಲು ಹೋರಾಟ

Manipal ಮಾಹೆ ವಿಶ್ವವಿದ್ಯಾನಿಲಯ: ಸಂಶೋಧನ ಸಮ್ಮೇಳನ

Manipal ಮಾಹೆ ವಿಶ್ವವಿದ್ಯಾನಿಲಯ: ಸಂಶೋಧನ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ…

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Rainy Days: ಮಳೆ ಎಂಬ ಮಾಯೆ!

Rainy Days: ಮಳೆ ಎಂಬ ಮಾಯೆ!

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

17

Baratang‌ Island: ಬಾರಾತಂಗ್‌ ಎಂಬ ಬೆರಗು

MUST WATCH

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

udayavani youtube

ಪ್ರಮಾಣವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

udayavani youtube

ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಮೋ

ಹೊಸ ಸೇರ್ಪಡೆ

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

T20 World Cup ಹ್ಯಾಟ್ರಿಕ್‌ ಭಾರತ ಸೂಪರ್‌ 8ಕ್ಕೆ ಪ್ರವೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾ.ಹೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.