ಪಂಚತಂತ್ರ: ಎರಡು ತಲೆಯ ಹಕ್ಕಿ

Team Udayavani, Jan 19, 2020, 5:59 AM IST

ಹಕ್ಕಿ ಒಂದು ರೂಪಕ, ಕಾವ್ಯ-ಶಾಸ್ತ್ರಗಳೆರಡರಲ್ಲಿಯೂ. ಮಾಂಡುಕ್ಯ ಉಪನಿಷತ್ತಿನಲ್ಲಿ ಎರಡು ಹಕ್ಕಿಗಳ ಕತೆ ಬರುತ್ತದೆ. ಒಂದು ಹಣ್ಣನ್ನು ತಿನ್ನುವ ಹಕ್ಕಿ, ಇನ್ನೊಂದು ಸುಮ್ಮನೆ ಅದನ್ನು ನೋಡುವ ಹಕ್ಕಿ. ದೇಹ-ಆತ್ಮಗಳ ಸಂಬಂಧಗಳ ಕುರಿತ ರೂಪಕಾತ್ಮಕ ಚಿತ್ರವಿದು. ಇದರ ಬಗ್ಗೆ ರವೀಂದ್ರನಾಥ ಠಾಕೂರ್‌, ಅರವಿಂದ ಘೋಷ್‌ ಮೊದಲಾದ ತಣ್ತೀಜ್ಞಾನಿಗಳು ವಿವಿಧ ಬಗೆಯ ವಿವರಣೆ ಕೊಟ್ಟಿದ್ದಾರೆ.

ಉಪನಿಷತ್ತಿನ ಕತೆಗೆ ಕಡಿಮೆ ಇಲ್ಲದಂತೆ ಪಂಚತಂತ್ರದಲ್ಲೊಂದು ಕತೆ ಬರುತ್ತದೆ. ಅದು ಎರಡು ತಲೆಯ ಹಕ್ಕಿಯ ಒಂದು ಕತೆ. ಎರಡು ತಲೆಯ ಹಕ್ಕಿಯೊಂದು ಮರದ ಮೇಲೆ ಕುಳಿತಿರುವಾಗ ನೀರಿನ ಮೇಲೆ ಹಣ್ಣೊಂದು ತೇಲುತ್ತಿರುವುದು ಕಾಣಿಸಿತು. ಹಣ್ಣೊಂದು ಅನಾಯಾಸವಾಗಿ ಸಿಗುವಾಗ ತಿನ್ನಬೇಕೆಂದು ಅನಿಸುವುದು ನಿಸರ್ಗ ಸಹಜ ಅಲ್ಲವೇ.

ಹಕ್ಕಿಯು ಹಾರಿ ಅದನ್ನು ಒಂದು ತಲೆಯ ಕೊಕ್ಕಿನಲ್ಲಿ ಕಚ್ಚಿಕೊಂಡಿತು. ಮರದಮೇಲೆ ಕುಳಿತು ಕೊಕ್ಕಿನಲ್ಲಿದ್ದ ಹಣ್ಣನ್ನು ತಿನ್ನಲಾರಂಭಿಸಿತು. ಆಗ ಎರಡನೆಯ ತಲೆಗೂ ಹಣ್ಣು ತಿನ್ನಬೇಕು ಎಂದು ಆಸೆಯಾಯಿತು. ತನಗೂ ಹಣ್ಣು ಕೊಡುವಂತೆ ಕೇಳಿತು. ಆಗ ಮೊದಲನೆಯ ತಲೆ, “”ಇದನ್ನು ನಾನು ಮೊದಲು ನೋಡಿದ್ದು. ಹಾಗಾಗಿ, ನಾನೇ ತಿನ್ನಲು ಯೋಗ್ಯ. ನಾನು ತಿಂದರೇನು, ನೀನು ತಿಂದರೇನು, ಸೇರುವುದು ಒಂದೇ ಹೊಟ್ಟೆಗೆ ತಾನೆ!” ಎಂದಿತು.

ಎರಡನೆಯ ತಲೆಗೆ ಮಾತು ಕಟ್ಟಿತು. ಬಾಯಿ ಚಪಲವನ್ನು ನಿಯಂತ್ರಿಸಿಕೊಂಡು ಸುಮ್ಮನಾಯಿತು.
ಮತ್ತೂಂದು ಸಲ ಇನ್ನೊಂದು ಹಣ್ಣು ನೀರಿನಲ್ಲಿ ತೇಲುತ್ತಿರುವುದು ಕಾಣಿಸಿತು. ಹಕ್ಕಿ ಅದನ್ನು ಎರಡನೆಯ ತಲೆಯಲ್ಲಿ ಎತ್ತಿಕೊಂಡು ಬಂದಿತು. ಆದರೆ, ಅದು ವಿಷಕಾರಿಯಾದ ಹಣ್ಣು. ಅದನ್ನು ಕುಕ್ಕಿ ತಿನ್ನುತ್ತಿರುವ ಎರಡನೆಯ ತಲೆಯನ್ನು ತಡೆದು ಮೊದಲನೆಯ ತಲೆ ಹೇಳಿತು, “”ಅದು ವಿಷಕಾರಿಯಾದ ಹಣ್ಣು. ತಿನ್ನಬೇಡ”
“”ಇದನ್ನು ಮೊದಲು ನೋಡಿದ್ದು ನಾನು. ಹಾಗಾಗಿ, ತಿನ್ನುವುದು ನಾನೇ. ತಿನ್ನಬಾರದು ಎನ್ನಲು ನೀನ್ಯಾರು?”
“”ಅಲ್ಲ… ಅದು ಸೇರುವುದು ಒಂದೇ ಹೊಟ್ಟೆಗಲ್ಲವೆ? ವಿಷ ಏರಿ ಸತ್ತರೆ?”
“”ಅದು ನನಗೆ ಗೊತ್ತಿಲ್ಲ. ನಾನು ತಿನ್ನುವುದು ತಿನ್ನುವುದೇ. ಈ ಹಿಂದೆ ಹಣ್ಣು ಕೊಡದೆ ನೀನೊಬ್ಬನೇ ತಿಂದಿದ್ದಿ. ಈಗ ನಾನು ತಿನ್ನುವಾಗ ನೀನು ಆಕ್ಷೇಪಿಸಬಾರದು” ಎಂದಿತು ಎರಡನೆಯ ತಲೆ.

“”ಬೇಡ, ಹಣ್ಣನ್ನು ತಿನ್ನಬೇಡ. ನೀನೊಬ್ಬನು ತಿಂದರೂ ನಾವಿಬ್ಬರೂ ಸಾಯುತ್ತೇವೆ” ಎಂದಿತು ಮೊದಲನೆಯ ತಲೆ.
ಆದರೆ ಹಣ್ಣು ತಿನ್ನುವ ಉತ್ಸಾಹದಲ್ಲಿ ಎರಡನೆಯ ತಲೆಗೆ ಯೋಚಿಸುವ ವ್ಯವಧಾನವೇ ಉಳಿದಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಮೊದಲನೆಯ ತಲೆ ತನಗೆ ಕೊಡದೇ ಹಣ್ಣು ತಿಂದಿತ್ತು.

“”ನೀನು ಆವತ್ತು ಮಾಡಿದ ತಪ್ಪಿಗೆ ಇವತ್ತು ಶಿಕ್ಷೆ ಅನುಭವಿಸಬೇಕು” ಎಂದದ್ದೇ ಎರಡನೆಯ ತಲೆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನಲು ಶುರು ಮಾಡಿತು.
ಹೊಟ್ಟೆಗೆ ಸೇರಿದ ಹಣ್ಣಿನಿಂದಾಗಿ ಹಕ್ಕಿಯ ದೇಹವಿಡೀ ವಿಷ ಆವರಿಸಿತು. ಕೆಟ್ಟ ವಿಚಾರಗಳಿಗೆ ಆ ತಲೆ, ಈ ತಲೆ ಎಂಬ ಭೇದವುಂಟೇ. ವಿಷವು ವ್ಯಾಪಿಸಲು ದೇಹದ ಆ ಭಾಗ ಈ ಭಾಗ ಎಂಬ ಭೇದವೂ ಇಲ್ಲ. ಹಕ್ಕಿಯೊಂದಿಗೆ ಎರಡೂ ತಲೆಗಳು ಸತ್ತು ಹೋದವು. ಕುಟುಂಬದ, ಸಮಾಜದ ಘಟಕಗಳು ಒಂದಕ್ಕೊಂದು ಪೂರಕವಾಗಿ ಇರಬೇಕೆಂಬುದನ್ನು ಸಾರುವ ಕತೆಯಿದು. ಒಬ್ಬರು ಹೇಳುವ ವಿಚಾರವನ್ನು ಮತ್ತೂಬ್ಬರು ತಾಳ್ಮೆಯಿಂದ ಆಲಿಸುವುದೇ ಒಳಿತಿನ ಲಕ್ಷಣ.

ಕೃಷ್ಣ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು...

  • ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ...

  • ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ...

  • ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ...

  • ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. "ಅದ್ವಿಕಾ' ಎಂದು ಉತ್ತರ ಬಂತು....

ಹೊಸ ಸೇರ್ಪಡೆ

  • ಇವತ್ತು- ನಾಳೆ ಭಾರತದಲ್ಲಿ ಮೂರು ಹೊಸ ಫೋನ್‌ಗಳು ಬಿಡುಗಡೆಯಾಗುತ್ತಿವೆ. ಇದರಲ್ಲಿ ವಿವೋದ ಶಾಖೆಯಾದ "ಐಕೂ' ಎಂಬ ಹೊಸ ಬ್ರಾಂಡ್‌ ಸೇರಿದೆ. ಜೊತೆಗೆ ರಿಯಲ್‌ಮಿ , ಸ್ಯಾಮ್‌ಸಂಗ್‌ಗಳು...

  • ಕಾಸರಗೋಡು: ಕಾದಿರುವರು ಹೊಸಮನೆಯಲ್ಲಿ ಶರ್ಮಿಳಾ ಸಹೋದರಿಯ ಬರೋಣಕ್ಕಾಗಿ... ರಾಜ್ಯ ಸರಕಾರದ ಜನಪರ ಯೋಜನೆಗಳಲ್ಲಿ ಒಂದಾಗಿರುವ ಲೈಫ್‌ ಮಿಷನ್‌ ಮೂಲಕ ನೂತನ ನಿವಾಸ...

  • ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ....

  • ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ...

  • ವರ್ಷಗಳ ಹಿಂದೆ ಪ್ರಮುಖ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ...