ಸೆಲ್ಫೀ ಅರ್ಥಾತ್‌ ಸ್ವಂತೀ

Team Udayavani, Oct 28, 2018, 6:00 AM IST

ನೀವು ದಾರಿಯಲ್ಲಿ ಓಡಾಡುವಾಗ ಅಲ್ಲಲ್ಲಿ ಈ ಹುಡುಗರ ಗುಂಪು ನಿಂತಿರುವುದನ್ನು ಗಮನಿಸಿರಬೇಕು. ಎಲ್ಲರ ಕೈಗಳಲ್ಲೂ ಸಾಮಾನ್ಯವಾಗಿ “ಯುವ ಕೇಡಿನ ಕಿಚ್ಚು ‘ (ಮೊಬೈಲ್‌) ಹೊತ್ತೇ ಇರುವುದನ್ನು ಗಮನಿಸಿರುತ್ತೀರಿ. ತುಂಬ ಕುತೂಹಲವೆನಿಸಿದರೆ ನಿಂತು ನೋಡಿಯೂ ನೋಡುತ್ತೀರಿ. ಅವರುಗಳು ತುಟಿಗಳನ್ನು ಉದ್ದ ಮಾಡಿ ತಮ್ಮ ಕೈಯಿನ  ಕಿಚ್ಚಿಗೆ ಸೆರೆಯಾಗಲು ಹವಣಿಸುತ್ತಿರುತ್ತಾರೆ. ಕೆಲವರು ಹೇಗೇಗೋ ನಿಂತು ಫೋಜು ಕೊಡುತ್ತಿರುತ್ತಾರೆ. ಮತ್ತೆ ಕೆಲವರು ಕೆಲವರ ತಲೆಗಳ ಹಿಂದೆ ಗೆಲುವಿನ ಎರಡು ಬೆರಳುಗಳನ್ನು ಸಂಕೇತವಾಗಿ ತೋರಿಸುತ್ತಿರುತ್ತಾರೆ. ಇನ್ನೂ ಕೆಲವರು ಕೊಂಬಿನಂತೆ ಇನ್ನೊಬ್ಬರ ತಲೆಯ ಮೇಲೆ ಅವರಿಗೆ ಗೊತ್ತಾಗದಂತೆ ಹಿಡಿದಿರುತ್ತಾರೆ. ಇನ್ನೂ ಕೆಲವೊಮ್ಮೆ ಬಾಲವಿಲ್ಲದ ಮಂಗನಂತೆ ಹೇಗೇಗೋ ನಿಂತು ಕುಳಿತು ಬಳುಕಿ ಬಾಗಿ ಕಾಲು ಸ್ಟೈಲಾಗಿ ಎತ್ತಿಕೊಂಡು, ಕೈಯನ್ನು ಹೇಗೆಗೋ ಆಡಿಸುತ್ತ ಸೆರೆಯಾಗಲು ಹವಣಿಸುತ್ತಿರುತ್ತಾರೆ. ಇದನ್ನೆಲ್ಲ ನೀವು ನೋಡಿಯೇ ಇರುತ್ತೀರಿ. ಇದು ಏನೂಂತ ಗೊತ್ತಾಯ್ತು ಅಲ್ವಾ? ನಿಜ, ನಿಜ, ಇದು ಸೆಲ್ಫೀ ಅಥವಾ ಸ್ವಂತೀ ! 

ಮೊನ್ನೆ ದಸರಾ ವೇಳೆಯಲ್ಲಿ ಕರ್ನಾಟಕ ಕಲಾಮಂದಿರಕ್ಕೆ ಹೋಗಿದ್ದೆವು. ಅಲ್ಲಿ ಎರಡು ಆನೆಗಳನ್ನು ನಿಲ್ಲಿಸಿದ್ದಾರೆ. ಅದ್ಯಾರೋ ಒಬ್ಬ ವಯಸ್ಸಾದ ಪುಣ್ಯಾತ್ಮರಿಗೆ ಅದೇನು ಆಸೆ ಬಂತೋ ಏನೋ. ಆ ಆನೆಯ ಮುಂದೆ ನಿಂತು, ಹುಡುಗರಂತೆ ಮೂತಿ ಉದ್ದ ಮಾಡಿಕೊಂಡು, ಬಲಗೈಯನ್ನು ನೇರ ಮೇಲಕ್ಕೆತ್ತಿ, ಸೆಲ್ಫೀ ತಕ್ಕೊಳ್ಳಲು ಪ್ರಯತ್ನಿಸುತ್ತಿದ್ದರು. ಅದ್ಯಾವ ಮಾಯದಲ್ಲೋ, ಅವರು ಹಿಡಿದ ಯುವ ಕೇಡಿನ ಕಿಚ್ಚು ಅಂದರೆ ಮೊಬೈಲು ಕೆಳಗೆ ಬಿದ್ದು ಒಡೆದೇ ಹೋಯಿತು. ನನಗೆ ನಗು ಒಂದು ಕಡೆ, ಒಂದು ಕಡೆ ಕೋಪ. ಇವರಿಗ್ಯಾಕೆ ಬೇಕಿತ್ತು ಇದು ಎಂದು. 

ವಯಸ್ಸಾದವರಿಗೂ ಹುಚ್ಚು ಹಿಡಿಸಿರುವ ಈ ಸೆಲ್ಫಿ, ನೋ ಫೀ ಆಗಿರುವುದಕ್ಕೇ ಆಬಾಲವೃದ್ಧರಾದಿಯಾಗಿ, “”ಏ ನಂದೊಂದ್‌ ಸೆಲ್ಫಿà ತಕ್ಕೊಡಪ್ಪ” ಎಂದು ಬೇರೆಯವರನ್ನು ಕೇಳುತ್ತ ನಿಲ್ಲುವ ಪರಿಸ್ಥಿತಿ ಬಂದಿದೆ. ಎಲ್ಲರಿಗೂ ಫೋಟೊ ತೆಗೆಸಿಕೊಳ್ಳುವ, ಆ ಫೋಟೋವನ್ನು ತಕ್ಷಣವೇ ವಾಟ್ಸಾಪಿಗೋ ಫೇಸುºಕ್ಕಿಗೋ ಹಾಕಿಕೊಂಡು ಲೈಕುಗಳನ್ನು, ಹೇಳಿಕೆಗಳನ್ನು ಪಡೆಯುವ ಹುಚ್ಚು. ಹೊಗಳಿಸಿಕೊಳ್ಳುವ ಹುಚ್ಚು. ನೀವು ಪ್ರವಾಸೀತಾಣಗಳಲ್ಲಿ ಇಂತಹ ಜನರನ್ನು ನೋಡಲೇಬೇಕು. ನೀವು ಭೇಟಿ ನೀಡಿದ ಆ ಸ್ಥಳಗಳನ್ನು ನೋಡದಿದ್ದರೂ ಚಿಂತೆಯಿಲ್ಲ, ಆ ಸ್ಥಳದ ಇತಿಹಾಸ, ಮಹಿಮೆ, ಅದರ ವಿಶೇಷತೆಗಳನ್ನು ಅರಿಯುವ ಮೊದಲೇ ತುಟಿ ಉಬ್ಬಿಸಿಕೊಂಡು, ಮೂಗು ಉದ್ದ ಮಾಡಿಕೊಂಡು, ಕತ್ತರಿಸಿ, ಹರಡಿಕೊಂಡಿರುವ  ಕೂದಲನ್ನು ಇನ್ನೂ ಯದ್ವಾತದ್ವಾ ಹರಡಿಕೊಂಡು, ಸರಿಯಾಗಿರುವ ಉಡುಪುಗಳನ್ನು ಮತ್ತೆ ಮತ್ತೆ ಸರಿಪಡಿಸಿಕೊಂಡು, ಸಾಲಾಗಿ ಫ್ಯಾಷನ್‌ ಶೋಗೆ ನಿಂತುಬಿಡುತ್ತಾರೆ.

ಮೊನ್ನೆ ದಸರಾ ಫ‌ಲಪುಷ್ಪ ಪ್ರದರ್ಶನಕ್ಕೆ ಬಂದಂಥ ಇಂಥವರು ಆ ಲೋಟಸ್‌ ಮಹಲ್‌ ನೋಡೋದಕ್ಕಿಂತ ಮೊದಲೇ ಸೆಲ್ಫಿಗೆ ಓಡಿಹೋಗಿ ಜಾಗ ಹಿಡಿದು ನಿಲ್ಲುವುದರಲ್ಲೇ ಕಾಲಹರಣ ಮಾಡಿದರು. ಲೈಟಿಂಗ್ಸ್‌ ನೋಡಲು ಬಂದವರ ಕಥೆ ! ಅಯ್ಯೋ ಪಾಪ! ಮೊಬೈಲಿನಲ್ಲಿ ನೋಡಿಕೊಂಡರೇ ಹೊರತು, ಮೊಬೈಲಿನಿಂದ ಕಣ್ಣು ಕೀಳಲಿಲ್ಲ. ಡ್ಯಾನ್ಸ್‌ ಇರಲಿ, ಸಂಗೀತವಿರಲಿ, ಕುಣಿತವಿರಲಿ, ಗಣಪತಿ ಬಿಡಲಿ, ಬೀದೀಲಿ ಸುಮ್ಮನೆ ಹೋಗುತ್ತಿದ್ದರೂ ಅಲ್ಲೊಂದು ತಕ್ಷಣ ಸೆಲ್ಫೀ! ದೇವಸ್ಥಾನಕ್ಕೆ ಹೋಗಲಿ, ಯಾರದೋ ಮನೆಯ, ಯಾವುದೋ ಕಾರ್ಯಕಜಟ್ಟಳೆಗೆ ಹೋಗಿರಲಿ ತಗೋ… ಅಲ್ಲೂ ಸೆಲ್ಫೀ! ನಿದ್ದೆ ಮಾಡುವಾಗ, ನಿದ್ದೆ ಬರುವ ಮೊದಲೊಂದು ಸೆಲ್ಫೀ, ನಿದ್ದೆ ಮಾಡುವವರೊಂದಿಗೆ ಸೆಲ್ಫಿà, ಮಾತಾಡುವಾಗ…. ಅಯ್ಯೋ! ಅಷ್ಟು ಬೇಗ ಅಲ್ಲೇ ಒಂದು ಕ್ಲಿಕ್ಕು !  ಬಹುಶಃ ಇದೊಂದು ಕಿಕ್‌ ಕೊಡುವ ಕೆಲಸವಾಗಿರಬಹುದೆ, ಇವರಿಗೆ ! ಈಜಾಡುವಾಗ, ಹೊಸಬಟ್ಟೆ ಧರಿಸಿದಾಗ, ಬೆಂಕಿ ಕಾಯಿಸಿಕೊಳ್ಳುವಾಗ, 

ಅಳುವವರೊಂದಿಗೆ, ನಗುವವರೊಂದಿಗೆ, ಅಪಘಾತಗಳಾದಾಗಲೂ ಇವರಿಗೆ ಸೆಲ್ಫಿà ಹುಚ್ಚು ಹೋಗುವುದಿಲ್ಲ.  ಇಂದಿನ ದಿನಗಳಲ್ಲಿ ಎvದರೂ ಸರಿ ಸೆಲ್ಫಿà ತೆಗೆದುಕೊಂಡು, ಫೇಸುºಕ್ಕಿಗೆ ಹಾಕದೇ ಇದ್ದರೆ ಅವನೊಬ್ಬ ಬಡಪಾಯಿ ಎಂದೇ ಅರ್ಥೈಸಿಕೊಳ್ಳುವ ಕಾಲ ಬಂದಿದೆ ! ನಾವು ಭೇಟಿಕೊಟ್ಟ ಸ್ಥಳವನ್ನು ನೋಡಿ ಸಂಭ್ರಮ ಪಡುವುದಕ್ಕಿಂತ ಸೆಲ್ಫಿà ಸಂಭ್ರಮವೇ ಹಬ್ಬವಾಗಿ ಹೋಗಿದೆ. ನಾವು ಸೆಲ್ಫಿ ತೆಗೆದುಕೊಳ್ಳದಿದ್ದರೆ ನಮ್ಮನ್ನು ಗೂಬೆಗಳಂತೆ ನೋಡಲಾಗುತ್ತದೆ. ಇವರುಗಳ ಈ ನೋಟದ ಪ್ರಹಾರವನ್ನು ಹೊಡೆತಗಳನ್ನು ತಪ್ಪಿಸಿಕೊಳ್ಳಲು ನಾವೂ ಕೂಡ ಸೆಲ್ಫಿà ತಕ್ಕೊಳ್ಳುವ ಸಾಹಸಕ್ಕೆ ಕೈಹಾಕಿದ್ದೇವೆ.  ನಿಜಕ್ಕೂ ಸೆಲ್ಫಿà ಒಂದು ಕಲೆ! ಫೋನನ್ನು ಎಡಗೈಲಿ ಹೇಗೆ ಹಿಡಿದುಕೊಳ್ಳಬೇಕೆಂದು ಚೆನ್ನಾಗಿ ಪ್ರಾಕ್ಟೀಸು ಮಾಡಲೇಬೇಕಾಗುತ್ತದೆ. ಮೊದಲು ಮೊಬೈಲ್‌ ಹೇಗೆ ಹಿಡಿದುಕೊಳ್ಳಬೇಕೆಂದು ಗೊತ್ತಿಲ್ಲವೆಂದರೆ ಅವನು ಸೆಲ್ಫಿà ತೆಗೆದುಕೊಳ್ಳಲು ಅಯೋಗ್ಯನೆಂದೇ ಅರ್ಥ. ಮೊಬೈಲನ್ನು ಎಷ್ಟು ಎತ್ತರಕ್ಕೆ ಒಯ್ಯಬೇಕು, ಹೇಗೆ ನೇರ ಹಿಡಿಯಬೇಕು, ಅಥವಾ ಕೆಳಗಿಳಿಸಿಕೊಂಡು ಅದನ್ನು ಹೇಗೆ ಸುತ್ತಲೂ ಇರುವ ಪರಿಸರ ಕವರ್‌ ಆಗುವಂತೆ ತೆಗೆಯಬೇಕು, ಎಲ್ಲರೂ ಅದರೊಳಗೆ ಬೀಳುತ್ತಾರಾ? ಅಥವಾ ಬೇಡವಾದವರನ್ನು ಹೇಗೆ ಬೀಳಿಸದಿರುವುದು, ಹೀಗೇ… ಇನ್ನೂ ಅನೇಕಾನೇಕ ತಿಳುವಳಿಕೆ, ಜ್ಞಾನಗಳಿದ್ದರೆ ಮಾತ್ರ ಸೆಲ್ಫಿ ಫೋಟೋ ಯಶಸ್ವಿಯಾಗಿ ಮೊಬೈಲಿನಲ್ಲಿ ದಾಖಲಾಗುತ್ತದೆ. ಇಲ್ಲವಾದಲ್ಲಿ ನನ್ನಂಥವರು ತೆಗೆದರೆ ನಗೆಪಾಟಲಿಗೆ ಈಡಾಗುತ್ತದೆ. ಅಂದ್ರೆ, ರುಂಡವಿದ್ದರೆ, ಮುಂಡವಿಲ್ಲ: ಮುಖವಿದ್ದರೆ ತಲೆಯಿಲ್ಲ, ಕೈಗಳಿರುವುದಿಲ್ಲ, ಅರ್ಧಮುಖ, ನಗುತ್ತಿದ್ದರೆ ಹಲ್ಲು ಮಾತ್ರ, ಪಟದ ತುಂಬಾ ಒಬ್ಬರೇ ರಾರಾಜಿಸುವುದು… ಹೀಗೆ ಇನ್ನೂ ಏನೇನೋ ಆಭಾಸಗಳಾಗಿಬಿಡುತ್ತವೆ !

ಒಮ್ಮೆ ಒಂದು ನಾಟಕಕ್ಕೆ ಹೋಗಿದ್ದೆವು. ಆ ನಾಟಕದಲ್ಲಿ ಪರಿಚಯದವರೊಬ್ಬರ ಮಗ ಅಭಿನಯಿಸಿದ್ದ. ತುಂಬಾ ಚೆನ್ನಾದ ನಟನೆಯೂ ಇತ್ತು. ಆದರೆ, ದುರಂತವೆಂದರೆ ಅವರಮ್ಮ ನಾಟಕದಲ್ಲಿ ಮಗನನ್ನು ನೋಡಲು ಬಂದಿದ್ದವರು, ಅವರು ಮಗನನ್ನು ನೇರವಾಗಿ ನೋಡಲೇ ಇಲ್ಲ, ಇಡೀ ನಾಟಕಪೂರ್ತಿ ಮೊಬೈಲ್‌ ಕಣ್ಣಿಂದಲೇ ನೋಡಿದರು. ಇದಕ್ಕೆ ಏನು ಹೇಳ್ಳೋದಪ್ಪಾ? ಮಾರನೆಯ ದಿನದ ಸ್ಟೇಟಸ್ನಲ್ಲಿ, ಫೇಸ್‌ಬುಕ್‌ನಲ್ಲಿ ಬರೀ ವಿಡಿಯೋಗಳು. ಫೋಟೋಗಳು! ನಾವಂತೂ ಆ ಹುಡುಗನ ಅಭಿನಯವನ್ನು ಕಣ್ತುಂಬಿಕೊಂಡು ಅವರಮ್ಮನಿಗೆ ಅಭಿನಂದನೆಯನ್ನೂ ಸಲ್ಲಿಸಿದೆವು. 

ಅದಿರಲಿ, ಮರಣಹೊಂದಿದವರೊಂದಿಗೆ ಯಾರಾದರೂ ಸೆಲ್ಫಿ ತೆಗೆದುಕೊಂಡಿದ್ದಾರಾ? ಇದೇನಾದರೂ ನಿಮಗೆ ಯಾರಿಗಾದರೂ ಗಮನಕ್ಕೆ ಬಂದಿದ್ದರೆ, ದಯವಿಟ್ಟು ತಿಳಿಸಿ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮರಣಿಸಿದ ದುರಂತಜೀವಿಗಳ ಬಗ್ಗೆ ವೃತ್ತಪತ್ರಿಕೆಗಳಲ್ಲಿ ಓದಿಯೇ ಇರುತ್ತೇವೆ. ಅದಲ್ಲ, “ಸತ್ತವರೊಂದಿಗೆ ಸೆಲ್ಫಿ ಎಂದು ಹಾಕಿಕೊಂಡ ಪುಣ್ಯಾತ್ಮರೇನಾದರೂ ಇದ್ದಾರೆಯೇ? ಸದ್ಯ! ಇರದಿದ್ದರೆ ಸಾಕು ಎಂದು ಆ ದೇವರಲ್ಲಿ ಕೇಳಿಕೊಳ್ಳೋಣ ಅಲ್ವೆ? ದೆವ್ವಗಳೊಂದಿಗೆ ಮಾತಾಡಿದವರು, ಅವುಗಳನ್ನು ಸೆರೆಹಿಡಿದು ಫೇಸ್‌ಬುಕ್ಕಿನಲ್ಲಿ ಹಾಕಿದವರಿದ್ದಾರೆ. ಆದರೆ, ಆತ್ಮಗಳೊಂದಿಗೆ ಸೆಲ್ಫಿ ಇನ್ನೂ ಬಂದಿಲ್ಲವೆನಿಸುತ್ತದೆ. ಅಲ್ಲವಾ? 

ಸೆಲ್ಫೀ ತೆಗೆದುಕೊಳ್ಳಿಪ್ಪ. ಅದು ನಿಮ್ಮ ಹಕ್ಕಾಗಿಯೇಬಿಟ್ಟಿದೆ. ಆದರೆ, ಇದು ಯಾವ ರೀತಿ ಉಪಯೋಗವಾಗುತ್ತದೆ ಎಂಬುದನ್ನು ಸ್ವಲ್ಪ ಗಮನದಲ್ಲಿಟ್ಟುಕೊಂಡರೆ ಒಳ್ಳೆಯದಲ್ವೇ? ನೆನಪು ಎಲ್ಲರಿಗೂ ಬೇಕು. ಬೇಡದ ಸಾವಿರ ನೆನಪುಗಳಿಗಿಂತ ಬೇಕಾಬಿಟ್ಟಿಯ ನೆನಪುಗಳಿಗಿಂತ  ಬೇಕಾದ ಒಂದೆರಡು ನೆನಪುಗಳನ್ನು ಪುನರವಲೋಕಿಸಿಕೊಂಡು ಖುಷಿಪಟ್ಟರೆ ಅದಕ್ಕಿಂತ ಸಂಭ್ರಮ ಇನ್ನೇನಿದೆ? ಅದಿರಲಿ, ಎಲ್ಲರೂ ಸೆಲ್ಫಿà ತೆಗೆದುಕೊಳ್ಳುವುದಕ್ಕಿಂತ ಒಬ್ಬರು ತೆಗೆದುಕೊಂಡು ಷೇರ್‌ ಮಾಡಿಕೊಳ್ಳುವುದು ಉತ್ತಮ ಮಾರ್ಗವಲ್ಲವೆ? ಬರಬರುತ್ತ, “ಯಪ್ಪಾ, ಇದನ್ನು ಡಿಲೀಟ್‌ ಮಾಡೋದು ಯಾರಪ್ಪ, ಅಂತ ಕೂಡ ಬೇಸರ ಬರುವುದು ನಿಜ ಮತ್ತು ಸಹಜ ಅಲ್ಲವೆ? ಡಿಲೀಟ್‌ ಮಾಡಿಬಿಡಬಹುದಾದದ್ದಕ್ಕೆ ಯಾಕಿಷ್ಟು ಪರದಾಡಿಕೊಂಡು ಪ್ರತ್ಯಕ್ಷ ನೋಡುವ ಸುಖ-ಸಂತೋಷ ಕಳೆದುಕೊಳ್ಳುತ್ತೀರೆನಿಸುವುದಿಲ್ವೇ? ಯೋಚಿಸಿ, ನಮ್ಮ ಸಂತಸ ಸಂಭ್ರಮಗಳು ಬೇರೆಯವರಿಗೆ ಕಿರಿಕಿರಿಯಾಗಬಾರದಲ್ಲವೆ? 

ಬಿ. ಕೆ. ಮೀನಾಕ್ಷಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುತಿನ ಅವರ ಗೋಕುಲ ನಿರ್ಗಮನದ ಬಗ್ಗೆ ಚಿಂತಿಸದೆ ಕೆ. ವಿ. ಸುಬ್ಬಣ್ಣನವರ ಬಗ್ಗೆ ಯೋಚಿಸಲಾಗದು. ಸ್ಮತಿ ಅವಶೇಷವಾಗಿದ್ದ ಗೋಕುಲ ನಿರ್ಗಮನವನ್ನು ಮತ್ತೆ ವರ್ತಮಾನದ...

  • ಈ ಕೆಳಗಿನದ್ದು ಯಾವುದೋ ಒಂದು ಮಳೆಗಾಲದಲ್ಲಿ ನಾನೇ ತೆಗೆದ ಫೊಟೊ. ಫೊಟೊ ಎನ್ನಲು ನನಗೇ ಅನುಮಾನವಾಗುತ್ತಿದೆ, ಜಲವರ್ಣದ ಕಲಾಕೃತಿ ಎನ್ನುವುದೇ ಹೆಚ್ಚು ಸರಿ....

  • ದ‌ರ್ಬೆ ಕೃಷ್ಣಾನಂದ ಚೌಟ (ಡಿ. ಕೆ. ಚೌಟ)ರು ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಅವರು ತುಳು ಸಾಹಿತ್ಯ ಕೃತಿಗಳು ಮತ್ತು ರಂಗಭೂಮಿಗೆ ನೀಡಿರುವ ಕೊಡುಗೆಗಳು ನಮ್ಮ...

  • ದೊಡ್ಡದೊಂದು ಮಥನವಿಲ್ಲದೆ "ಸತ್ಯ'ವು ಪ್ರಕಟವಾಗಲಾರದು ಎಂಬುದು ಉಪನಿಷತ್ತಿನ ತಿಳಿವಳಿಕೆಯಾಗಿದೆ. "ಸತ್ಯ'ವು ಇಲ್ಲಿ ಅಡಗಿ ಇರುವುದು ಎಂಬ ಕಾಣ್ಕೆಯ ಮುಂದಿನ ಮಜಲು...

  • ಇನ್ಮುಂದೆ ಏನಿದ್ರೂ ನಂದೇ ಹವಾ' ಎಂದು ಬೇಸಿಗೆ ಅಂತ್ಯದಲ್ಲಿ ಆಗೊಮ್ಮೆ ಈಗೊಮ್ಮೆ ನೆನಪಿಸಿ ಹೋದ ಮಳೆರಾಯನ ಅಧಿಕೃತ ಆಗಮನಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ...

ಹೊಸ ಸೇರ್ಪಡೆ