ನಾಯಕಿ, ಗಾಯಕಿ ಮೇಘನಾ ಈಗ ನಿರ್ಮಾಪಕಿ

Team Udayavani, May 5, 2019, 6:00 AM IST

ಸಾಮಾನ್ಯವಾಗಿ ಚಿತ್ರರಂಗದಲ್ಲಿ ವಿವಾಹದ ಬಳಿಕ ನಾಯಕ ನಟಿಯರು ತೆರೆಮರೆಗೆ ಸರಿಯುತ್ತಾರೆ, ಚಿತ್ರರಂಗಕ್ಕೆ ಬಹುತೇಕರು ಗುಡ್‌ ಬೈ ಹೇಳುತ್ತಾರೆ ಅನ್ನೋದು ಚಾಲ್ತಿಯಲ್ಲಿರುವ ಮಾತು. ಆದರೆ ಇದಕ್ಕೆ ಅಪವಾದ ಎಂಬಂತೆ ಕೆಲವು ನಟಿಯರು ವಿವಾಹದ ಬಳಿಕವೂ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕ್ರಿಯರಾಗುತ್ತಾರೆ. ಅಂತಹ ನಟಿಯರ ಸಾಲಿಗೆ ಈಗ ಮೇಘನಾ ರಾಜ್‌ ಹೆಸರು ಸೇರ್ಪಡೆಯಾಗುತ್ತಿದೆ.

ಹೌದು, ಚಿತ್ರರಂಗದಲ್ಲಿ ಬಾಲನಟಿಯಾಗಿ ಪ್ರವೇಶ ಪಡೆದು ಬಳಿಕ ನಾಯಕ ನಟಿಯಾಗಿ ಬಡ್ತಿ ಪಡೆದು ಕನ್ನಡ, ತಮಿಳು ಚಿತ್ರರಂಗ ಎರಡರಲ್ಲೂ ಗುರುತಿಸಿಕೊಂಡಿದ್ದ ಮೇಘನಾ ರಾಜ್‌, ಮದುವೆಯ ಬಳಿಕ ಯಾವ ಚಿತ್ರಗಳಿಗೂ ಬಣ್ಣ ಹಚ್ಚಿರಲಿಲ್ಲ. ಅದಾದ ಬಳಿಕ ಎಂಎಂಸಿಹೆಚ್‌, ಸಿಂಗ ಸೇರಿದಂತೆ ಕೆಲವು ಚಿತ್ರದ ಗೀತೆಗಳಿಗೆ ಧ್ವನಿಯಾಗುವ ಮೂಲಕ ಗಾಯಕಿಯಾಗಿಯೂ ಮೇಘನಾ ಸೈ ಎನಿಸಿಕೊಂಡಿದ್ದರು . ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಮೇಘನಾ ಸಿನಿಮಾ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಮೇಘನಾ ಪುಟಾಣಿ ಪಂಟರ್ ಎಂಬ ಹೆಸರಿನ ಮಕ್ಕಳ ಚಿತ್ರವನ್ನು “ಮೇಘನಾ ಕ್ರಿಯೇಷನ್ಸ್‌’ ಬ್ಯಾನರ್‌ ಮೂಲಕ ನಿರ್ಮಿಸುತ್ತಿದ್ದು, ಇಲ್ಲಿಯವರೆಗೆ ನಾಯಕಿಯಾಗಿ, ಗಾಯಕಿಯಾಗಿ ಪರಿಚಿತರಾಗಿದ್ದ ಮೇಘನಾ ಈಗ ನಿರ್ಮಾಪಕಿಯಾಗುತ್ತಿದ್ದಾರೆ.

ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಬಗ್ಗೆ ಮತ್ತು ನಿರ್ಮಾಪಕಿ ಆಗುತ್ತಿರುವುದರ ಬಗ್ಗೆ ಮಾತನಾಡುವ ಮೇಘನಾ ರಾಜ್‌, “”ಪುಟಾಣಿ ಪಂಟರ್ ಚಿತ್ರದ ಹೆಸರೇ ಹೇಳುವಂತೆ ಇದೊಂದು ಮಕ್ಕಳ ಚಿತ್ರ. ಮೊದಲಿನಿಂದಲೂ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿಯಿತ್ತು. ಈಗ ಆ ಕನಸು ನನಸಾಗುತ್ತಿದೆ. ನಾನು ಮಾಡುವ ಚಿತ್ರ ಮೊದಲು ನನಗೆ ಇಷ್ಟವಾಗಬೇಕು ನಂತರ ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಹಾಗಾಗಿ ನನಗೆ ಇಷ್ಟವಾಗುವ ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಚಿತ್ರವನ್ನು ನಿರ್ಮಿಸಲು ಮುಂದಾದೆ’ ಎನ್ನುತ್ತಾರೆ.

ಇನ್ನು ಮೇಘನಾ ನಿರ್ಮಾಣದ ಈ ಚಿತ್ರವನ್ನು ಬೆನಕ ಪವನ್‌ ನಿರ್ದೇಶಿಸುತ್ತಿದ್ದು, “ಕನ್ನಡದ ಪ್ರೇಕ್ಷಕರ ಮುಂದೆ ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಸದಭಿರುಚಿಯ ಚಿತ್ರವನ್ನು ಕೊಡಲು ನಮ್ಮ ತಂಡ ತಯಾರಿ ಮಾಡಿಕೊಂಡಿದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾರೆ.

ಸದ್ಯ ಮೇಘನಾ ರಾಜ್‌ ನಿರ್ಮಾಣದ ಚೊಚ್ಚಲ ಚಿತ್ರದ ಚಿತ್ರೀಕರಣ ಆರಂಭ ವಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಈ ವರ್ಷ ಅಂತ್ಯದೊಳಗೆ ಮೇಘನಾ ಪ್ರೊಡಕ್ಷನ್‌ನ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ನಾಯಕಿಯಾಗಿ, ಗಾಯಕಿಯಾಗಿ ಸೈ ಎನಿಸಿಕೊಂಡಿರುವ ಮೇಘನಾ ರಾಜ್‌ ನಿರ್ಮಾಪಕಿಯಾಗಿಯೂ ಸೈ ಎನಿಸಿಕೊಳ್ಳುತ್ತಾರಾ ಅನ್ನೋದು ಪುಟಾಣಿ ಪಂಟರ್ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

  • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

  • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

  • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

  • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

  • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ