ಮನೆ ಕೆಲಸ ಮನೆಯೊಡತಿಯ ಕೆಲಸ!


Team Udayavani, Feb 27, 2019, 12:30 AM IST

c-7.jpg

ಇದು ಬೆಂಗಳೂರಿನ ಮನೆ ಕೆಲಸದವರ ಕಂಡಿಷನ್ಸ್‌ಗಳು. ಇಲ್ಲಿ ಅಷ್ಟು ಸುಲಭಕ್ಕೆ ಮನೆಗೆಲಸದವರು ಸಿಗುವುದಿಲ್ಲ. ನಿಮ್ಮ ಅದೃಷ್ಟಕ್ಕೆ ಕೆಲಸದವರು ಸಿಕ್ಕರೂ, ಎಲ್ಲ ಕೆಲಸವನ್ನು ಅವರಿಂದ ಮಾಡಿಸಲು ಸಾಧ್ಯವೇ ಇಲ್ಲ…! 

ಕರೆಗಂಟೆಯ ಸದ್ದಾಗಿ, ಯಾರೆಂದು ಬಾಗಿಲು ತೆರೆದು ನೋಡಿದರೆ, ಸ್ಟೈಲಾಗಿ ರೆಡಿಯಾಗಿದ್ದ ಹದಿನೆಂಟು ವರ್ಷದ ಹುಡುಗಿಯೊಬ್ಬಳು ನಿಂತಿದ್ದಳು. ಯಾರಿರಬಹುದು ಇವಳು ಅಂತ ಯೋಚಿಸುತ್ತಿರುವಾಗಲೇ, ಆ ಹುಡುಗಿ, “ಅಕ್ಕ, ನೀನು ಮನೆಕೆಲಸಕ್ಕೆ ಜನ ಬೇಕಂತ ಸೀತಕ್ಕನತ್ರ ಹೇಳಿದ್ಯಂತಲ್ಲ. ಅವಳು ನನಗೆ ಹೇಳಿದಳು. ಏನೇನು ಕೆಲಸ ಮಾಡಬೇಕಂತ ಹೇಳಕ್ಕ. ಮನೆಯಲ್ಲಿ ನೀವು ಎಷ್ಟು ಜನ ಇದ್ದೀರಾ? ಮನೆ ದೊಡ್ಡದಾಗಿ ಕಾಣ್ತಿದೆ. ದೊಡ್ಡ ಮನೇನ ಗುಡಿಸಿ, ಒರೆಸೋಕೆ ಕಷ್ಟವಾಗುತ್ತೆ. ನಾನು ಮನೆ ಕೆಲಸ ಮಾಡುವ ಮನೆಗಳಲ್ಲಿ ಜಾಸ್ತಿ ಪಾತ್ರೆ ತೊಳೆಯೋಕೆ ಹಾಕಬಾರದು. ಸೀದು ಹೋದ ಪಾತ್ರೆಯನ್ನು ನಾನು ತೊಳೆಯೋದೇ ಇಲ್ಲ. ಯಾಕಂದ್ರೆ, ನಾನು ನಾಲ್ಕು ಮನೆ ಕೆಲಸ ಮಾಡೋದ್ರಿಂದ ಕೈನೋವು ಬರುತ್ತೆ. ಬಟ್ಟೆ ಒಗೆಯುವುದಿಲ್ಲ. ಎರಡು ರೂಮಿಗಿಂತ ಜಾಸ್ತಿ ರೂಮುಗಳಿರೋ ಮನೆಗಳಲ್ಲಿ, ವಾರಕ್ಕೆ ಎರಡು ಬಾರಿ ಗುಡಿಸಿ- ಒರೆಸಿ ಮಾಡ್ತೀನಿ ಅಷ್ಟೆ. ನಿಮ್ಮ ಮನೆಯಲ್ಲೂ ನಾನು ಹಾಗೇ ಮಾಡುವುದು. ಕೆಲಸ ಮಾಡುವಾಗ ಅದು ಸರಿಯಿಲ್ಲ, ಇದು ಸರಿಯಲ್ಲ ಅನ್ನಬಾರದು. ಭಾನುವಾರ ಕೆಲಸಕ್ಕೆ ಬರೋದಿಲ್ಲ. ಎÇÉಾ ಮನೆಯವೂ ಭಾನುವಾರ ರಜೆ ಕೊಡುತ್ತಾರೆ. ಒಂದು ಕೆಲಸಕ್ಕೆ ಸಾವಿರ ರೂಪಾಯಿಯಂತೆ ಕೊಡಬೇಕು. ಹಾಗೆ ಕೊಟ್ಟರೆ ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತೇನೆ. ಪಾತ್ರೆ ತೊಳೆಯೋದಾದ್ರೆ, ಎಷ್ಟು ಪಾತ್ರೆ ಅಂತ ಲೆಕ್ಕ ಹಾಕಿ ಹೆಚ್ಚಿಗೆ ಸಂಬಳ ಕೇಳುತ್ತೇನೆ. ರಂಗೋಲಿ ಹಾಕಬೇಕೆಂದರೆ 800 ರೂ. ಎಕ್ಸ್‌ಟ್ರಾ. ಒಂದೇ ಸಲ ಎಲ್ಲ ಪಾತ್ರೆ ತೊಳೆಯೋಕೆ ಹಾಕಬೇಕು. ಪದೇ ಪದೆ ಅದೇ ಕೆಲಸ ಮಾಡೋಕೆ ಆಗಲ್ಲ. ಪಾತ್ರೆ ತೊಳೆಯಲು ವಿಮ್‌ ಸೋಪ್‌ ಬೇಕು. ಎಲ್ಲರ ಮನೆಯಲ್ಲೂ ಅದನ್ನೇ ಯೂಸ್‌ ಮಾಡೋದು, ಇಲ್ಲಾಂದ್ರೆ ಅಲರ್ಜಿ ಆಗುತ್ತೆ. ಮನೆ ಗುಡಿಸಲು ಮಂಕಿ ಬ್ರ್ಯಾಂಡ್‌ ಪೊರಕೆ, ಒರೆಸೋಕೆ ದಪ್ಪ ಬಟ್ಟೆ ಬೇಕು. ಚೆನ್ನಾಗಿರೋ ಮ್ಯಾಪ್‌ ತನ್ನಿ. ಕುಳಿತು ಪಾತ್ರೆ ತೊಳೆಯೋಕೆ ಗಟ್ಟಿಯಾದ ಚಿಕ್ಕ ಸ್ಟೂಲ್‌ ತನ್ನಿ. ಎಣ್ಣೆ ಜಿಡ್ಡಿರುವ ಪಾತ್ರೆಗೆ ಬಿಸಿ ನೀರು ಕೊಡಬೇಕು. ದಿನಾ ಒಂದು ತಾಸು ಕೆಲಸ ಮಾಡಲು ತಿಂಗಳಿಗೆ ಐದು ಸಾವಿರ ಸಂಬಳ. ನನ್ನ ಕಂಡಿಷನ್ಸ್‌ ಇಷ್ಟೇ’ ಎಂದು ಒಂದೇ ಉಸಿರಿನಲ್ಲಿ ಎಲ್ಲ ವಿವರಗಳನ್ನೂ ಹೇಳಿದಳು. ಅವಳ ಮಾತು ಕೇಳಿಯೇ ನಾನು ಸುಸ್ತಾದೆ. 

ಇದು ಬೆಂಗಳೂರಿನ ಮನೆಕೆಲಸದವರ ಕಂಡಿಷನ್ಸ್‌ಗಳು. ಇಲ್ಲಿ ಅಷ್ಟು ಸುಲಭಕ್ಕೆ ಮನೆಗೆಲಸದವರು ಸಿಗುವುದಿಲ್ಲ. ನಿಮ್ಮ ಅದೃಷ್ಟಕ್ಕೆ ಕೆಲಸದವರು ಸಿಕ್ಕರೂ, ಎಲ್ಲ ಕೆಲಸವನ್ನು ಅವರಿಂದ ಮಾಡಿಸಲು ಸಾಧ್ಯವೇ ಇಲ್ಲ. ಅದು ಸರಿಯಿಲ್ಲ, ಇದು ಸರಿಯಲ್ಲ ಅಂತ ನೀವೇನಾದ್ರೂ ತುಟಿ ಬಿಚ್ಚಿದಿರೋ, ಮಾರನೇ ದಿನದಿಂದ ಅವರು ನಾಪತ್ತೆ! ಕೆಲಸದವರೇನೋ ನೂರಿನ್ನೂರು ರೂ. ಹೆಚ್ಚಿಗೆ ಸಂಬಳಕ್ಕೆ ಇನ್ನೊಂದು ಮನೆ ಹಿಡಿಯುತ್ತಾರೆ. ಆದರೆ, ನಿಮಗೆ ಮಾತ್ರ ಬೇರೆ ಕೆಲಸದವರು ಸಿಗುವುದಿಲ್ಲ. ಮನೆಯೊಡತಿಯರು ಯಾರಿಗೆ ಹೆದರದಿದ್ದರೂ, ಯಾರನ್ನು ಸಹಿಸಿಕೊಳ್ಳದಿದ್ದರೂ, ಕೆಲಸದವರ ವಿಷಯದಲ್ಲಿ ಮಾತ್ರ ಒಂದು ಮಾತೂ ಆಡದಿರುವುದು ಇದೇ ಕಾರಣಕ್ಕೆ.

ಮನೆಕೆಲಸದವರನ್ನು ಅತ್ತೆಯಂತೆ ನೋಡುವ ಮಹಿಳೆಯರೇ ಹೆಚ್ಚು. ಈಗ ಎಲ್ಲರ ಮನೆಯಲ್ಲಿ ಅತ್ತೆ- ಸೊಸೆ ಒಟ್ಟಿಗೆ ಇರುವುದಿಲ್ಲ. ಸೊಸೆ ಕೂಡ ದೊಡ್ಡ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುತ್ತಾಳೆ. ಆಗೊಮ್ಮೆ ಈಗೊಮ್ಮೆ ಊರಿಗೆ ಹೋದರೆ ಅದೇ ಹೆಚ್ಚು. ಹಾಗಾಗಿ ಅಪರೂಪಕ್ಕೆ ಒಂದು ಕಡೆ ಸೇರುವ ಅತ್ತೆ- ಸೊಸೆ ನಡುವೆ ಜಗಳ ಬರುವುದು ಕಡಿಮೆ. ಅದರೆ, ಈ ಕೆಲಸದವರು ಅತ್ತೆಯ ಸ್ಥಾನ ತುಂಬಿ, ದಿನಕ್ಕೊಂದು ಜಗಳ ಮಾಡುತ್ತಾ, ಕೆಲಸಕ್ಕೆ ಬರುವುದಿಲ್ಲವೆಂದು ಹೆದರಿಸುತ್ತಾ ಉದ್ಯೋಗಸ್ಥ ಮಹಿಳೆಯರನ್ನು ಹೆದರಿಸುತ್ತಾರೆ.

ಹಿಂದೆಲ್ಲ ಮೂರು ಹೆಂಗಸರು ಒಟ್ಟಿಗೆ ಸೇರಿದರೆ, ನನ್ನ ಸೊಸೆ ಸರಿಯಿಲ್ಲ, ನನ್ನ ಅತ್ತೆ ಸರಿಯಿಲ್ಲ ಎಂದು ಮಾತಾಡುತ್ತಿದ್ದರು. ಈಗ ಚರ್ಚೆ, ಹರಟೆಗಳೆಲ್ಲ ಮನೆಕೆಲಸದರ ಸುತ್ತಲೇ ಗಿರಕಿ ಹೊಡೆಯುತ್ತವೆ. “ನಿಮ್ಮ ಮನೆಗೆಲಸದವಳು ಹೇಗಿ¨ªಾಳೆ? ಜಗಳ ಮಾಡುತ್ತಾಳಾ?, “ಅಯ್ಯೋ, ಕೆಲಸದಾಕೆಗೆ ಕೆಲಸ ಒಂದು ಬಿಟ್ಟು ಬೇರೆ ಎಲ್ಲಾ ಗೊತ್ತು’ ಎಂದು ಕೆಲಸದವರಿಂದ ತಾವು ಅನುಭವಿಸುತ್ತಿರುವ ಕಷ್ಟವನ್ನು ಹಂಚಿಕೊಳ್ಳುತ್ತಾರೆ.

ಅದೊಂದು ದಿನ ನಾನು ಸೀದು ಹೋದ ಪಾತ್ರೆಯನ್ನು ತೊಳೆಯಲು ಹಾಕಿದ್ದಕ್ಕೆ, ನಮ್ಮ ಕೆಲಸದಾಕೆ ಪಾತ್ರೆ ತೊಳೆಯುವುದು ನಿಲ್ಲಿಸಿ, ಮರುದಿನದಿಂದ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟಳು. ಆಕೆ ಯಾವತ್ತೂ ಜಿಡ್ಡಾದ ಪಾತ್ರೆಗಳನ್ನು ತೊಳೆದವಳೇ ಅಲ್ಲ. ಅವಳ ಕೈಗೆ ನೋವು ಮಾಡದಂಥ ಪಾತ್ರೆಗಳನ್ನಷ್ಟೇ ತೊಳೆಯುತ್ತಿದ್ದಳು. ಗುಡಿಸುವ ವಿಷಯದಲ್ಲೂ ಅಷ್ಟೇ; ನೆಲ ಗುಡಿಸುವುದು ಮಾತ್ರ ಅವಳ ಕೆಲಸ. ಗೋಡೆ ಬದಿಯಲ್ಲಿ ಗುಡಿಸು ಎಂದು ಅಪ್ಪಿತಪ್ಪಿಯೂ ಹೇಳಬಾರದು. ಹೀಗೆ ಸುಲಭದ ಕೆಲಸ ಮಾಡಿಕೊಂಡಿದ್ದಳು ಅವಳು. ಈಗಂತೂ ಕೆಲಸದವರು ಎರಡು ವರ್ಷ, ಒಂದು ಮನೆಯಲ್ಲಿ ಕೆಲಸ ಮಾಡಿದರೆ ಅದೇ ಹೆಚ್ಚು. ಐಟಿ- ಬಿಟಿಯವರು ಕಂಪನಿ ಬದಲಿಸಿದಂತೆ, ಇವರೂ ಮನೆ ಮನೆ ಬದಲಿಸುತ್ತಾರೆ. ಮಕ್ಕಳು ಚಿಕ್ಕವರೆಂದೋ ಅಥವಾ ತಮಗೆ ವಯಸ್ಸಾಯಿತೆಂದೋ ಕೆಲಸದವರನ್ನು ಇಟ್ಟುಕೊಂಡರೆ, ಅವರು ಬಿಟ್ಟು ಹೋಗದಂತೆ ಸಂಭಾಳಿಸುವುದೇ ಬಹುದೊಡ್ಡ ಸವಾಲು.

ವೇದಾವತಿ ಎಚ್‌.ಎಸ್‌.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.