ಹೂವನು ಮಾರುತ ಹೂವಾಡಗಿತ್ತಿ…

Team Udayavani, Aug 21, 2019, 5:38 AM IST

“ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು. ಹೆತ್ತವರಿಗೆ ವಯಸ್ಸಾಯ್ತು ಅಂತ ಮಕ್ಕಳು ಕಡೆಗಣಿಸಿದರೆ…? ಹಾಗಾಗಿ ನಮ್ಮ ಪಾಡು ನಾವು ನೋಡಿಕೋಬೇಕು’- ಅಂತ ನಿಟ್ಟುಸಿರಾದರು ರಮಾಬಾಯಿ.

ದೇಹದಲ್ಲಿ ಶಕ್ತಿ ಇರುವವರೆಗೆ ಸ್ವಾವಲಂಬಿಯಾಗಿಯೇ ಬದುಕುತ್ತೇನೆ ಅಂತ, ಹೂಗಳನ್ನು ಬೆಳೆದು, ಹೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ರಮಾಬಾಯಿಯ ವಯಸ್ಸು ಎಪ್ಪತ್ತಿರಬಹುದು!

ಮನೆಯ ಕೆಲಸ ಮುಗಿಸಿ, ಮನೆಯಂಗಳದಲ್ಲಿ ಅಂದರೆ ಅರ್ಧ ಗುಂಟೆ ಜಾಗದಲ್ಲಿ ಗಲಾಟೆ ಹೂ, ಬಟನ್‌ ರೋಸ್‌ಗಳನ್ನ ಬೆಳೆಯುವ ರಮಾಬಾಯಿ, ವಿಜಯಪುರದ ಗೋಳಗುಮ್ಮಟದ ಎದುರಿಗೆ ನಡೆಯುವ ಸಂತೆಯಲ್ಲಿ ಹೂವು ಮಾರಲು ಬರುತ್ತಾರೆ. ಸಮೀಪದ ಮದಬಾವಿಯವರಾದ ಇವರು, ಪ್ರತಿದಿನ ಗಂಡನ ಜೊತೆ ಎರಡು ಚೀಲದಷ್ಟು ಹೂಗಳನ್ನು ತಂದು ವ್ಯಾಪಾರ ಮಾಡುತ್ತಾರೆ.

ಹಬ್ಬಗಳು ಬಂದಾಗ, ಗಲಾಟೆ ಹೂ ಮತ್ತು ಬಟನ್‌ ರೋಸ್‌ನ ವ್ಯಾಪಾರ ಜೋರಾಗಿರುತ್ತದೆ. ಬೇರೆ ದಿನಗಳಲ್ಲಿ ಒಂದು ಕೆ.ಜಿಗೆ 60- ರಿಂದ 80 ರೂ. ಇದ್ದರೆ, ಹಬ್ಬದ ದಿನಗಳಲ್ಲಿ ದರ 80-160ರೂ.ವರೆಗೆ ಮಾರಲಾಗುತ್ತದೆ. ಪ್ರತಿದಿನ 400-600 ರೂ. ಸಂಪಾದಿಸುವ ರಮಾಬಾಯಿ, ಹೂಗಳನ್ನ ಮಾರಿಯೇ ತಮ್ಮ ಜೀವನದ ಖರ್ಚು-ವೆಚ್ಚ ನಿಭಾಯಿಸುತ್ತಾರೆ.

ಇವರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಮಕ್ಕಳು ನೌಕರಿಯ ನಿಮಿತ್ತ ಬೇರೆ ಊರಿನಲ್ಲಿದ್ದಾರೆ. ವಯಸ್ಸಾದ ಮೇಲೆ ಮಕ್ಕಳಿಗೆ ಭಾರವಾಗಬಾರದು ಎಂದು, ಮನೆ ಮುಂದಿನ ಜಾಗದಲ್ಲಿ ಹೂ ಗಿಡಗಳನ್ನು, ಲಿಂಬೆಗಿಡಗಳನ್ನು ನೆಟ್ಟಿದ್ದಾರೆ.

ಮಕ್ಕಳಿಗ್ಯಾಕೆ ಭಾರವಾಗಬೇಕು?
“ಮಕ್ಕಳು ಯಾವುದೇ ರೀತಿ ಕೊರತೆ ಮಾಡಿಲ್ಲ. ಖರ್ಚಿಗೆ ಹಣ ಕೂಡಾ ಕಳಿಸುತ್ತಾರೆ. ಆದರೆ, ನಮ್ಮ ಖರ್ಚನ್ನು ನಾವೇ ನೋಡಿಕೊಳ್ಳಬೇಕು ಅನ್ನುವುದು ನಮ್ಮ ನಿರ್ಧಾರ. ಮಕ್ಕಳು ಕಳುಹಿಸಿದ್ದನ್ನ ಬ್ಯಾಂಕಿನಲ್ಲಿ ಇಡುತ್ತೇವೆ. ಮುಂದೆ ಅವರ ಹಣ ಅವರಿಗೇ ಸಿಗುವ ಹಾಗೆ ಮಾಡಿದ್ದೇವೆ’ ಎನ್ನುತ್ತಾರೆ ರಮಾಬಾಯಿ.

ನಮ್ಮ ಯಜಮಾನರಿಗೂ ಹೊಲ ಇತ್ತು. ಆದರೆ, ಮಕ್ಕಳ ವಿದ್ಯಾಭ್ಯಾಸ, ನೌಕರಿ, ಮದುವೆಗೆ ಅಂತ ಇದ್ದ ಬದ್ದ ಹೊಲವನ್ನೆಲ್ಲ ಮಾರಿಬಿಟ್ಟೆವು. ಈಗ, ನಾವಿಬ್ಬರೂ ಹವ್ಯಾಸದಿಂದ ಬೆಳೆಸಿದ ಗಿಡಗಳೇ ಜೀವನಕ್ಕೆ ಆಧಾರವಾಗಿವೆ.
-ರಮಾಬಾಯಿ, ಹೂ ವ್ಯಾಪಾರಿ

-ವಿದ್ಯಾಶ್ರೀ ಗಾಣಿಗೇರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪರೀಕ್ಷೆ ಎಂದರೆ, ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಆತಂಕದ ವಿಚಾರ. ಓದಿದ್ದೆಲ್ಲ ಪರೀಕ್ಷೆ ದಿನ ನೆನಪಾಗುತ್ತೋ ಇಲ್ಲವೋ ಎಂದು ಮಕ್ಕಳು ಹೆದರಿದರೆ, ಅವರು ಸರಿಯಾಗಿ...

  • ವಯಸ್ಸಾದ ಮೇಲೆ ಮಕ್ಕಳ ಮನೆಯಲ್ಲಿದ್ದುಕೊಂಡು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಬದುಕಬೇಕೆಂಬುದು ಹೆಚ್ಚಿನವರ ಕನಸು. ಆದರೆ, ಅಂದುಕೊಂಡಂತೆಯೇ ಬಾಳುವ ಅದೃಷ್ಟ...

  • ಎಸ್ಸೆಸ್ಸೆಲ್ಸಿವರೆಗಷ್ಟೇ ಓದಿರುವ ಸುಬ್ಬಲಕ್ಷ್ಮಿ, ಕುಟುಂಬ ನಿರ್ವಹಣೆಗಾಗಿ ಅವಲಕ್ಕಿ ತಯಾರಿಸಿ ಮಾರಲು ಆರಂಭಿಸಿದರು. ಅದೀಗ, ಒಂದು ಫ್ಯಾಕ್ಟರಿಯಾಗಿ ಬೆಳೆದಿದೆ... ಅಕ್ಕಿ...

  • ಕಾಮನಬಿಲ್ಲು ಇದಕೆ ಸಾಟಿಯಲ್ಲ, ಋಷಿಗಳ ಸಂಯಮವೂ ಇದರ ಮುಂದೆ ನಿಲ್ಲೋದಿಲ್ಲ ಅಂತ ಕವಿಗಳಿಂದ ಹೊಗಳಿಸಿಕೊಂಡ ಆಭರಣ ಬಳೆ. ಕೈಗೆ ಸಿಂಗಾರವಾಗಿ, ಶುಭದ ಸಂಕೇತವಾದ ಈ ಬಳೆಗಳನ್ನು...

  • ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ...

ಹೊಸ ಸೇರ್ಪಡೆ