ಕಟ್ಟಿ ಕೊಟ್ಟ ಬುತ್ತಿ ಖಾಲಿಯಾಗದೇ ವಾಪಸ್‌ ಬರುತ್ತಾ?


Team Udayavani, Feb 15, 2017, 3:45 AM IST

butti.jpg

ಎಲ್ಲ ಮನೆಗಳಲ್ಲೂ ಪೋಷಕರು ಹೆಲ್ತ… ಕಾನ್ಷಿಯಸ್‌ ಆಗಿರ್ತಾರೆ. ಮಕ್ಕಳಿಗೆ ಶಾಲೆಗೆ ಕಳಿಸುವ ಊಟದ ಕ್ವಾಂಟಿಟಿ, ಕ್ವಾಲಿಟಿ ಎರಡಕ್ಕೂ ಬಹಳ ಆದ್ಯತೆ ಕೊಡುತ್ತಾರೆ. ಖರೀದಿ ಮಾಡುವ ಮನಸ್ಸೊಂದಿದ್ದರೆ ದಿನಕ್ಕೊಂದು ಬಗೆಯ ರುಚಿ ಕೊಡುವಷ್ಟು ತರಹೇವಾರಿ ವಸ್ತುಗಳು ಮಾರುಕಟ್ಟೆಯಲ್ಲಿವೆ. ತಿನ್ನೋ ವಿಚಾರಕ್ಕೆ ಬಂದರೆ ಅಪ್ಪಅಮ್ಮ ಚೌಕಾಸಿ ಮಾಡದೇ ತರುತ್ತಾರೆ. ಕೇಳಿ ತಿನ್ನುವ ಮಕ್ಕಳಿದ್ದರೆ ಎಷ್ಟು ಕಷ್ಟವಾದರೂ ಮಾಡಿ ಕೊಡುತ್ತಾರೆ. ಆದರೂ ಮಕ್ಕಳು ತಿನ್ನುತ್ತಿಲ್ಲ. 

ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದೆ. ಯೂನಿಫಾರ್ಮ್ ಹೊಂದಿಸುವ, ಪುಸ್ತಕ, ಪೆನ್ನು ಪೆನ್ಸಿಲುಗಳ ಖರೀದಿ ಭರಾಟೆ, ಬೈಂಡ್‌ ಹಾಕುವ ತರಾತುರಿ ಯಾವುದೂ ಇಲ್ಲದೇ ಒಂದು ಮಟ್ಟಕ್ಕೆ ನಿರಾಳವಾಗಿದೆ. ಯಾವುದೂ ಸಮಸ್ಯೆಯಿಲ್ಲ, ತಲೆನೋವಿಲ್ಲ. ಎಲ್ಲ ಮನೆಯಲ್ಲೂ ಶಾಲೆಯ ಜತೆ ಜತೆಗೇ ಶುರುವಾಗುವ ಮತ್ತು ಸಂಜೆ ಎಲ್ಲೋ ಒಂದೆಡೆ ಸೇರುವ ಅಷ್ಟೂ ಜನ ಅಮ್ಮಂದಿರ ಒಂದೇ ಸಮಸ್ಯೆ ಎಂದರೆ ಲಂಚ್‌ ಬಾಕ್ಸ್ ಖಾಲಿ ಆಗ್ತಿಲ್ಲ. ಬಹುಶಃ ಇದು ಈ ತಲೆಮಾರಿನ ಎಲ್ಲಾ ಅಮ್ಮಂದಿರನ್ನು ಕಾಡುವ ಪ್ರಶ್ನೆ.  

ನಾವೆಲ್ಲ ಚಿಕ್ಕವರಿದ್ದಾಗ ಈಗಿನಂತೆ ತರಹೇವಾರಿ ಆಹಾರಗಳೂ ಇರಲಿಲ್ಲ; ಬಾಕ್ಸ್ಗಳು ಕೂಡ ಇರಲಿಲ್ಲ. ಒಂದನೇ ಕ್ಲಾಸಿನಿಂದ ಐದು ಆರನೇ ಕ್ಲಾಸಿನವರೆಗೆ ಒಂದು ಡಬ್ಬಿ, ನಂತರ ಹೈಸ್ಕೂಲ… ಮುಗಿಯೋವೆರೆಗೆ ಇನ್ನೊಂದು ಡಬ್ಬಿ. ಪಟ್ಟಣಗಳಲ್ಲಿ ಸುಮಾರಿಗೆ ಉರುಟಾದ ಆಕಾರವಿದ್ದರೆ, ಹಳ್ಳಿ ಕಡೆಯೆಲ್ಲ ಉದ್ದನೆಯ ಹ್ಯಾಂಡಲ… ಇರುವ ಡಬ್ಬಿ. ಏನು ಹಾಕಿರಬಹುದು ಎನ್ನುವ ಕುತೂಹಲ ಕೂಡ ಇಲ್ಲದಷ್ಟು ಕಾಮನ್‌ ಆಗಿರುತ್ತಿತ್ತದು. ಇನ್ನು ಮಕ್ಕಳನ್ನು ಕೇಳಿ ಬುತ್ತಿ ಕಟ್ಟುತ್ತಿದ್ದ ಪೋಷಕರು ಬೆರಳೆಣಿಕೆಯಷ್ಟೂ ಇರಲಿಲ್ಲವೇನೋ!!! ಒಂದೋ ಅನ್ನ ಸಾಂಬಾರ್‌ ಅಥವಾ ಮಜ್ಜಿಗೆ/ಮೊಸರು ಕಲಸಿ ಜತೆಗೊಂದು ಹೋಳು  ಉಪ್ಪಿನಕಾಯಿ ಹಾಕಿ ಕೊಟ್ಟರೆ ಅವತ್ತಿಗದು ಮೃಷ್ಟಾನ್ನ ಭೋಜನ. ಖಾಲಿ ಮಾಡದೆ ವಾಪಸ್‌ ತಂದ ಒಂದು ದಿನವೂ ನನಗೆ ನೆನಪಿಲ್ಲ.      

ಇವತ್ತು ಚಿತ್ರ ಪೂರ್ಣ ಬದಲಾಗಿದೆ. ಎಲ್ಲ ಮನೆಗಳಲ್ಲೂ ಪೋಷಕರು ಹೆಲ್ತ… ಕಾನ್ಷಿಯಸ್‌ ಆಗಿ¨ªಾರೆ. ಮಕ್ಕಳಿಗೆ ಶಾಲೆಗೆ ಕಳಿಸುವ ಊಟದ ಕ್ವಾಂಟಿಟಿ, ಕ್ವಾಲಿಟಿ ಎರಡಕ್ಕೂ ಬಹಳ ಆದ್ಯತೆ ಕೊಡುತ್ತಾರೆ. ಖರೀದಿ ಮಾಡುವ ಮನಸ್ಸೊಂದಿದ್ದರೆ ದಿನಕ್ಕೊಂದು ಬಗೆಯ ರುಚಿ ಕೊಡುವಷ್ಟು ತರಹೇವಾರಿ ವಸ್ತುಗಳು ಮಾರುಕಟ್ಟೆಯಲ್ಲಿವೆ. ತಿನ್ನೋ ವಿಚಾರಕ್ಕೆ ಬಂದರೆ ಅಪ್ಪಅಮ್ಮ ಚೌಕಾಸಿ ಮಾಡದೇ ತರುತ್ತಾರೆ. ಕೇಳಿ ತಿನ್ನುವ ಮಕ್ಕಳಿದ್ದರೆ ಎಷ್ಟು ಕಷ್ಟವಾದರೂ ಮಾಡಿ ಕೊಡುತ್ತಾರೆ. ಆದರೂ ಮಕ್ಕಳು ತಿನ್ನುತ್ತಿಲ್ಲ ಅನ್ನೋದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.  

ಒಂದಷ್ಟು ಮಟ್ಟಿಗೆ ಇವತ್ತಿನ ಮಕ್ಕಳು ವೈವಿಧ್ಯತೆ ಬಯಸುವುದು ನಿಜ. ಬದಲಾದ ಜಗತ್ತಿನ ನಿಟ್ಟಿನಿಂದ ನೋಡಿದರೆ ಅದು ತಪ್ಪಲ್ಲ. ತಿನ್ನುವ ಪ್ರಕ್ರಿಯೆಯನ್ನೇ ಒಂದು ಶಿಕ್ಷೆ ಎಂಬಂತೆ ನೋಡುವುದೂ ಅಷ್ಟೇ ನಿಜ. ಮನೆಯÇÉಾದರೆ ಪೋಷಕರ ಕಣ್ಗಾವಲು, ತಿನ್ನದೇ ವಿಧಿಯಿಲ್ಲ. ಬೈದು, ಆಸೆ ಆಮಿಷ ತೋರಿಸಿ, ಗದರಿ ಕೊನೆಗೆ ಒಂದು ಏಟು ಕೊಟ್ಟಾದರೂ ತಿನ್ನಿಸುತ್ತಾರೆ. ಸುಮಾರು ಎಲ….ಕೆ.ಜಿ ವರೆಗೆ ಆಯಾನೋ ಟೀಚರೋ ತಿನ್ನಿಸುವ ಪರಿಪಾಠ ಇರುವ ಕಾರಣ ಒಂದಷ್ಟಂತೂ ಹೊಟ್ಟೆ ಸೇರುತ್ತದೆ. ಒಂದನೇ ಕ್ಲಾಸಿಗೆ ಸೇರಿದ ನಂತರ ಹಾಗಲ್ಲ. ಬೆಲ… ಬಾರಿಸಿದಾಗ ಊಟದ ಡಬ್ಬಿ ತೆರೆದರೂ ನಡೆಯುತ್ತದೆ; ತೆರೆಯದಿದ್ದರೂ ಕೇಳುವವರಿಲ್ಲ. ಆ ಸ್ವಾತಂತ್ರ್ಯದ ಸದುಪಯೋಗ (!!) ಪಡೆಯುವಲ್ಲಿ ಮಕ್ಕಳು ಬಲು ಜಾಣರು. ನನ್ನ ಮಗನಿಗೆ ಬರ್ಗರ್‌ ಅಂದರೆ ಜೀವ. ಅದ್ಕೆà ಈ ಬಾರಿ ಬರ್ಗರ್‌ ಥರದ ಲಂಚ್‌ ಬಾಕÕ… ತಂದಿದೀನಿ. ಮೊದಲಿಗಿಂತ ಚೆನ್ನಾಗಿ ಊಟ ಮಾಡ್ತಾನೆ ಅಂತಿದ್ದಳು ಬಬಿತ. 

ಇಂಥವೊಂದಷ್ಟನ್ನು ಪ್ರಯತ್ನ ಮಾಡುವುದು ಜಾಣತನ. ಜತೆಗೆ ಆಯ್ಕೆಯನ್ನೂ ಮಕ್ಕಳಿಗೆ ಬಿಟ್ಟು ನಿಂಗಿಷ್ಟವಾದ್ದನ್ನ ಕೊಡಿಸೋದು ನಮ್ಮ ಕೆಲಸ; ಅದರೊಳಗೆ ಇರೋದನ್ನ ಪೂರ್ತಿ ಖಾಲಿ ಮಾಡೋದು ನಿನ್ನ ಕೆಲಸ ಎಂಬ ಜವಾಬ್ದಾರಿಯನ್ನೂ ಅವರಿಗೇ  ವಹಿಸಿ ನೋಡಬಹುದು. ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನಕ್ಕೂ ಹಾಕುವುದು ಅಮ್ಮನ ಕೆಲಸ ಸುಲಭ ಮಾಡೀತು ಆದರೆ ಮಕ್ಕಳಿಗದು ಬೋರ್‌ ಅನಿಸೀತು. ಸಾಧ್ಯವಾದಷ್ಟೂ ಬೇರೇನಾದರೂ ಹಾಕುವುದು ಆರೋಗ್ಯ, ವೈವಿಧ್ಯತೆ ಎರಡೂ ದೃಷ್ಟಿಯಿಂದ ಒಳ್ಳೆಯದು. ಅನ್ನ ಸಾಂಬಾರ್‌ ಕಲಸಿ ತುಂಬಿಸುವ ಬದಲು ಬೇರೆ ಬೇರೆಯೇ ಹಾಕಿ ಕೊಟ್ಟರೆ ರುಚಿಯೂ ಹೆಚ್ಚು, ಅಲ್ಲದೇ ತಮಗೆ ಬೇಕಾದ ಹಾಗೆ ಮಕ್ಕಳು ಕಲಸಿಕೊಳ್ಳಲೂ ಸಾಧ್ಯ. 

ಸ್ನಾಕÕ… ಬ್ರೇಕ್‌ ಅಥವಾ ಶಾರ್ಟ್‌ ಬ್ರೇಕ್‌ ಸಮಯಕ್ಕೆ ಬರೀ ಬಿಸ್ಕೆಟ… ಹಾಕುವ ಬದಲು ತರಕಾರಿ ಅಥವಾ ಹಣ್ಣುಗಳ ಸಲಾಡ್‌ ಕಳಿಸಬಹುದು. ಮೊಳಕೆ ಕಾಳುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿ ಹೋಳುಗಳು, ಒಂದ್ನಾಲ್ಕು ದಾಳಿಂಬೆ ಬೀಜ ಸೇರಿಸಿ ಚೂರೇ ಚೂರು ಉಪ್ಪು ಸೇರಿಸಿ ಕೊಟ್ಟರೆ ಅದರ ರುಚಿ ಇನ್ಯಾವುದಕ್ಕೂ ಸಾಟಿಯಿಲ್ಲ. ಜತೆಗೇ ಇದು ತುಂಬಾ ಉತ್ಕೃಷ್ಟ ಗುಣಮಟ್ಟದ ಆಹಾರವೂ ಕೂಡ. 

ಇನ್ನು ದೋಸೆ ಮಾಡುವಾಗ ಒಂದಷ್ಟು ಹಿಟ್ಟಿಗೆ ಒಂದು ಮುಷ್ಟಿ ಬೀಟ…ರೂಟ… ತುರಿದು ಹಾಕಿದರೆ ಯಾವತ್ತಿನ ಬೋರಿಂಗ್‌ ಬಿಳಿ ದೋಸೆ ಬದಲು ಪಿಂಕ್‌ ದೋಸೆ ನೋಡಲು, ತಿನ್ನಲು ಎರಡಕ್ಕೂ ಸೈ. ಇಡ್ಲಿ, ಪಡ್ಡು ಮುಂತಾದ ಹಬೆಯಲ್ಲಿ ಬೇಯಿಸುವಂಥ¨ªಾದರೆ ಟೊಮ್ಯಾಟೋ ಚಕ್ರದಂತೆ ಹೆಚ್ಚಿ ಅದರ ಮೇಲಿಟ್ಟು ಬೇಯಿಸಿದರೆ ನೋಡುವಾಗಲೇ ತಿನ್ನಬೇಕೆನಿಸುತ್ತದೆ. ಯಾವ್ಯಾವುದಕ್ಕೆಲ್ಲ ಸಾಧ್ಯವೋ ಅವಕ್ಕೆಲ್ಲ ಸಣ್ಣಗೆ ಹೆಚ್ಚಿದ ಸೊಪ್ಪು, ಚೂರು ಕಾಯಿ ತುರಿ, ಒಣ ಹಣ್ಣುಗಳು ಇಂಥವನ್ನೆಲ್ಲ ಸೇರಿಸಿ ಬೇಯಿಸುವುದು, ಬಣ್ಣ ಕೊಡಲು ಅರಶಿನ, ಬೀಟ…ರೂಟ…, ಕ್ಯಾರೆಟ… ಪೇÓr… ಮುಂತಾದ ನೈಸರ್ಗಿಕವಾದ್ದನ್ನೇ ಹಾಕುವುದರಿಂದ ಆರೋಗ್ಯ ಆನಂದ ಎರಡೂ ವೃದ್ಧಿಸುತ್ತದೆ. 

ಅನ್ನದ ಐಟಂಗಳಾದ ಬಾತ್‌, ಪಲಾವ್‌, ಪುಳಿಯೋಗರೆ ಮಾಡಿದರೆ ಅದರ ಜತೆಗೆ ಇನ್ನೇನಾದರೂ ಮನೆಯÇÉೇ ಮಾಡಿದ ಆರೋಗ್ಯ ಕೆಡಿಸದಂಥ ಕುರುಕಲು ಕಳಿಸಿದರೆ ಒಳ್ಳೆಯದು. ಮುಂಚಿನ ದಿನ ಹೆಪ್ಪು$ಹಾಕಿದ ಮೊಸರಿನ ಬದಲು ಹಾಲು ಮಜ್ಜಿಗೆ ಸೇರಿಸಿ ಡಬ್ಬಿಗೆ ತುಂಬಿಸಿದರೆ ಮಧ್ಯಾಹ್ನದ ಹೊತ್ತಿಗೆ ರುಚಿಯಾದ ಹುಳಿಯಿಲ್ಲದ ಮೊಸರಾಗುತ್ತದೆ. ಒಟ್ಟಿನಲ್ಲಿ ಆಹಾರ ಒಳ ಹೋಗಲೇಬೇಕು; ಬುತ್ತಿ ಖಾಲಿ ಆಗಲೇಬೇಕು. Healthy meal ಅನ್ನೋದು Happy meal ಕೂಡ ಆಗುವಂತೆ ನೋಡಿಕೊಂಡರೆ ಬಹುಶಃ ಮಕ್ಕಳ ಊಟದ ಸಮಸ್ಯೆ ಪೂರ್ಣ ಅಲ್ಲದೇ ಇದ್ದರೂ ಒಂದಷ್ಟು ಮಟ್ಟಿಗೆ ಪರಿಹಾರ ಕಂಡೀತು.   

– ಶಮ, ನಂದಿಬೆಟ್ಟ

ಟಾಪ್ ನ್ಯೂಸ್

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Big Bash Winning Coach Luke Williams Joins RCB Women’s Team as Head Coach

WPL; Royal Challengers Bangalore ಮಹಿಳಾ ತಂಡಕ್ಕೆ ಹೊಸ ಕೋಚ್ ನೇಮಕ

Election: ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ನೂತನ ತಂತ್ರ ರೂಪಿಸಿದ ಗಡ್ಕರಿ

Election: ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ನೂತನ ತಂತ್ರ ರೂಪಿಸಿದ ಗಡ್ಕರಿ

3-panaji

Panaji: ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Desi Swara: ದುಬೈ, ಅಬುಧಾಬಿ- ಸೆ. 30, ಅ. 1ರಂದು ಯಕ್ಷಸಂಭ್ರಮ

Desi Swara: ದುಬೈ, ಅಬುಧಾಬಿ- ಸೆ. 30, ಅ. 1ರಂದು ಯಕ್ಷಸಂಭ್ರಮ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Desi Swara: ದುಬೈ-ರಘುಪತಿ ಭಟ್‌ ಅವರಿಗೆ ಸಮ್ಮಾನ

Desi Swara: ದುಬೈ-ರಘುಪತಿ ಭಟ್‌ ಅವರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.