ಎಲ್ಲ ದಿನಗಳೂ ಮಹಿಳಾ ದಿನಗಳೇ!

Team Udayavani, Mar 20, 2020, 5:00 AM IST

ಸಾಂದರ್ಭಿಕ ಚಿತ್ರ

ಹೆಣ್ಣನ್ನು ದೇವತೆಯೆಂದು ಪೂಜಿಸುವ ಭಾರತದಲ್ಲಿ ನಿಜ ಅರ್ಥದಲ್ಲಿ ಅವಳನ್ನು ಹಾಗೆ ನಡೆಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ದೇವತೆಯೆಂದು ಪೂಜಿಸಬೇಕು ಎನ್ನುವುದು ಆಶಯವಷ್ಟೇ. ಆ ಆಶಯ ವಾಸ್ತವ ರೂಪದಲ್ಲಿ ಇನ್ನೂ ಗೋಚರಿಸಿಲ್ಲ.

ಇಂದಿಗೂ ಮಹಿಳೆ ಮೇಲೆ ದೌರ್ಜನ್ಯ ನಡೆಯುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಹೆಣ್ಣನ್ನು ವ್ಯವಸ್ಥಿತವಾಗಿ ಗಂಡು ತನಗೆ ಬೇಕಾದಂತೆ ಬಳಸಿಕೊಳ್ಳುವ ಹುನ್ನಾರ ಭದ್ರವಾಗಿಯೇ ಇದೆ. “ಗಂಡು ಶ್ರೇಷ್ಠ’ ಎಂಬ ಪರಿಕಲ್ಪನೆಯು, ಗಂಡಸರ ಆಳುವ ಪರಿಕಲ್ಪನೆಯೇ ಆಗಿದೆ. ಅವಳನ್ನು ಅಸಮರ್ಥಳೆಂದು ಹೇಳುತ್ತ, ಅವಳಲ್ಲಿ ಕೀಳರಿಮೆ ಹುಟ್ಟಿಸಿ ಶೋಷಣೆಗೆ ಗುರಿಪಡಿಸುವುದು ಪುರುಷಪ್ರಧಾನ ವ್ಯವಸ್ಥೆಯ ಮಾದರಿ. ಮಹಿಳೆಯರೂ ಇದನ್ನು ಒಪ್ಪಿಕೊಂಡೇ ಬದುಕುತ್ತಿದ್ದಾರೆ !

ಉದಾಹರಣೆಗೆ ಹೇಳಬೇಕೆಂದರೆ, ಭಾರತದ ಆರ್ಥಿಕ ಕ್ಷೇತ್ರದಲ್ಲಿ ಸಿದ್ಧ ಉಡುಪು ಉದ್ಯಮಕ್ಕೆ ಆದ್ಯತೆ ಇದೆ. ಈ ಉದ್ಯಮಗಳಲ್ಲಿ ಕೆಲಸಮಾಡುವ ಉದ್ಯೋಗಿಗಳಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿ. ಈ ಕಾರಣದಿಂದಲೇ ಈ ಉದ್ಯಮ ಬೆಳೆಯಲು ಹಾಗೂ ಇಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಬಂಡವಾಳಶಾಹಿಗಳು ಉತ್ಸುಕರಾಗಿದ್ದಾರೆ. ವಿಶ್ವವಿಖ್ಯಾತ “ವಾಲ್‌ಮಾರ್ಟ್‌’, “ಟೆಸ್ಕೋ’, “ಮಾರ್ಕ್ಸ್ ಆ್ಯಂಡ್‌ ಸ್ಪೆನ್ಸರ್‌’ ಮುಂತಾದವು ಮುಖ್ಯ ಕಂಪೆನಿಗಳು. ಇಲ್ಲಿ ಮಹಿಳಾ ನೌಕರರಿಗೆ ಕಡಿಮೆ ಸಂಬಳ ನೀಡಿ ಅವರಿಂದ ಹೆಚ್ಚಿನ ಅವಧಿ ತನಕ ದುಡಿಸಿಕೊಳ್ಳುತ್ತಾರೆ ಎಂಬ ವರದಿಗಳನ್ನು ಓದಿದ್ದೇವೆ.

ಮಹಿಳೆಯರು ಪ್ರತಿಭಟಿಸದೇ ಮೌನವಾಗಿ ಮೇಲ್ವಿಚಾರಕರ, ಮ್ಯಾನೇಜರುಗಳ ಆದೇಶಗಳನ್ನು ಪಾಲಿಸುತ್ತಾರೆ ಎಂಬ ಕಾರಣಕ್ಕೆ ಮಹಿಳಾ ಉದ್ಯೋಗಿಗಳನ್ನೇ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅದು ಮೇಲ್ವಿಚಾರಕರು ಮಾಡುವ ಶೋಷಣೆಯೂ ಆಗಿರುತ್ತದೆ. ಒಂದು ಉದಾಹರಣೆ ಹೇಳಬೇಕೆಂದರೆ, 9 ವರ್ಷದಿಂದ ಒಂದು ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕಳೊಬ್ಬಳು ಗರ್ಭಿಣಿಯಾಗಿದ್ದರೂ ಅವಳಿಗೆ ಹೆರಿಗೆ ರಜೆ ಸಿಗಲಿಲ್ಲ. ಹೆರಿಗೆ ನೋವು ಉಂಟಾದರೂ ಆಕೆಗೆ ಮನೆಗೆ ಹೋಗಲು ಬಿಡಲಿಲ್ಲ. ಕೊನೆಗೆ ಕೆಲಸದ ಸ್ಥಳದಲ್ಲಿಯೇ ಮಗು ಹೊರಬಂದು ತೀರಿಹೋಯಿತು. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದರೆ ಸಮಸ್ಯೆ ಸೃಷ್ಟಿಯಾದೀತು ಎಂಬ ಕಾರಣಕ್ಕೆ ಅದನ್ನು ಗುಟ್ಟಾಗಿ ಇರಿಸಲಾಯಿತು. ಇಂಥ ದೌರ್ಜನ್ಯದ ಉದಾಹರಣೆಗಳು ಅನೇಕ ಇವೆ. ಆದರೆ, ಆಡಳಿತ ವರ್ಗ ಈ ಬಗ್ಗೆ ಕಾಳಜಿ ವಹಿಸಿಕೊಳ್ಳುವುದಿಲ್ಲ.

“ಸಮಾನ ಕೆಲಸಕ್ಕೆ ಸಮಾನ ವೇತನ’ ಹೆಚ್ಚಿನ ಉದ್ಯೋಗಸ್ಥ ಮಹಿಳೆಯರಿಗೆ ಸಿಗುವುದಿಲ್ಲ. ಇದು ಭಾರತದ ಕತೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೇ ಕತೆ. ಹಿಂದೆಲ್ಲ ಟೆಕ್ಸ್‌ ಟೈಲ್‌ ಉದ್ಯಮದಲ್ಲಿ ದುಡಿಯುವ ಮಹಿಳೆಯರ ಸ್ಥಿತಿ ಇನ್ನೂ ಹೀನಾಯವಾಗಿತ್ತು. ಮುಖ್ಯವಾಗಿ ಚಿಕಾಗೋ ನಗರದಲ್ಲಿ ದುಡಿಯುವ ಸ್ಥಳದಲ್ಲಿ ಹೀನಾಯ ಪರಿಸ್ಥಿತಿ ಇತ್ತು. 1907ರಲ್ಲಿ ಚಿಕಾಗೋ ನಗರದ ಟೆಕ್ಸ್‌ ಟೈಲ್‌ ಕಾರ್ಖಾನೆಯ 30,000 ಮಹಿಳಾ ನೌಕರರು ಹೆಚ್ಚಿನ ಕೂಲಿಗಾಗಿ ಹಾಗೂ ಉತ್ತಮ ಸೌಕರ್ಯಗಳಿಗಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾದರು.

ಜರ್ಮನಿಯ ಕ್ಲಾರಾ ಜೆಟಕಿನ್‌ ಹಾಗೂ ರಷ್ಯಾದ ಅಲೆಕ್ಸಾಂಡ್ರಾ ಕೊಲಂಕಾಯ ಎಂಬ ಮಹಿಳೆಯರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ನಂತರ 1910ರಲ್ಲಿ ಅಮೆರಿಕದ ಉದ್ದಗಲಕ್ಕೂ ಸಮಾಜವಾದಿಗಳು ಮಹಿಳಾದಿನ ಆಚರಿಸಿ, ಇಡೀ ಪ್ರಪಂಚದಲ್ಲಿ ಒಂದು ನಿರ್ದಿಷ್ಟ ದಿನವನ್ನು “ಮಹಿಳಾ ದಿನ’ವಾಗಿ ಆಚರಿಸಬೇಕೆಂದು ಕರೆ ಇತ್ತರು.

1977ರಲ್ಲಿ ವಿಶ್ವಸಂಸ್ಥೆ ಮಾರ್ಚ್‌ 8ನ್ನು “ಮಹಿಳಾ ದಿನ’ವಾಗಿ ಆಚರಿಸಬೇಕೆಂದು ಘೋಷಿಸಿದ ನಂತರ ಇಂದು ವಿಶ್ವದಾದ್ಯಂತ ಇದನ್ನು ಆಚರಿಸಲಾಗುತ್ತಿದೆ. ಒಟ್ಟಿನಲ್ಲಿ “ಮಹಿಳಾ ದಿನ’ಮಹಿಳೆಯರ ಸಮಸ್ಯೆಗಳ ಬಗ್ಗೆ ಹಾಗೂ ಸಮಾಜದಲ್ಲಿ ಧನಾತ್ಮಕ ಬೆಳವಣಿಗೆ ತರುವುದರ ಬಗ್ಗೆ ಚಿಂತನೆ ನಡೆಸುವುದು ಹಾಗೂ ಶ್ರಮಿಸುವುದು ಗುರಿ ಆಗಬೇಕು. ಮಹಿಳಾವಾದವೆಂಬುದು ಮಹಿಳೆಯರ ಸ್ಥಿತಿಗತಿ ಬದಲಿಸಬೇಕೆಂಬ ಪ್ರಜ್ಞೆಯಿಂದ ಹೊರಟ ಮಹಿಳಾಪರ ಚಳವಳಿಗಳ ಪ್ರತಿಫ‌ಲವಾಗಿದೆ.

ಇತ್ತೀಚೆಗೆ ಮಾರ್ಚ್‌ ತಿಂಗಳಿಡೀ ಮಹಿಳಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪದ್ಧತಿ ಶುರುವಾಗಿದೆ. ಆದರೆ, ಮಹಿಳೆಯರ ಸ್ಥಿತಿಗತಿ ಸುಧಾರಿಸಬೇಕಾದರೆ ಆಕೆ ಕೆಲಸ ಮಾಡುವ ಕಚೇರಿಗಳಲ್ಲಿ ಆಕೆಗೆ ಸಮಾನತೆ, ಗೌರವ ಲಭಿಸಬೇಕು. ಮನೆಯಲ್ಲಿ ಆಕೆಯನ್ನು ಗೌರವದಿಂದ ನಡೆಸಿಕೊಳ್ಳಬೇಕು ಎನ್ನುವ ಶಿಕ್ಷಣ ನೀಡಬೇಕು.

ಕೆ. ತಾರಾ ಭಟ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದಿನನಿತ್ಯದ ಕೆಲಸಗಳಲ್ಲಿ ನಾವು ಎಷ್ಟೊಂದು ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಸುತ್ತೇವೆ. ಅವುಗಳನ್ನು ಕಡಿಮೆ ಮಾಡಿಕೊಂಡರೆ ಅತ್ತ ಪರಿಸರಕ್ಕೂ ಒಳ್ಳೆಯದು. ಇತ್ತ...

  • ಉಡುಪಿಯ ಆಸುಪಾಸಿನಲ್ಲಿ ಯಾವುದೇ ನೃತ್ಯ-ನಾಟಕವಿರಲಿ "ಬಾಷಾ'ಅವರ ವೇಷಭೂಷಣವೇ ಬೇಕು. "ಬಾಷಾ ಡ್ರೆಸ್ಸ್'ಗೆ ಒಂದು ಪರಂಪರೆಯೇ ಇದೆ. ಆ ಪರಂಪರೆಯನ್ನು ಸುಹೈಲ್‌ ಸಮರ್ಥವಾಗಿ...

  • ಫ್ಯಾಷನ್‌ ಲೋಕದಲ್ಲಿ ಇಂದಿನ ಫ್ಯಾಷನ್‌ ನಾಳೆ ಮಾಯವಾಗಬಹುದು. ಅಥವಾ ಹಿಂದಿನ ಕಾಲದ ಫ್ಯಾಷನ್‌ ಮತ್ತೆ ಬರಲೂಬಹುದು. ಹಿಂದಿನ ಕಾಲದ ಮಹಿಳೆಯರ ಅಚ್ಚುಮೆಚ್ಚಿನ ಹೇರ್‌ಸ್ಟೈಲ್‌...

  • ಇಪ್ಪತ್ತು ವರ್ಷಗಳ ಹಿಂದೆ ಹಿರಿಯಡ್ಕ ಬಳಿಯ ಪೆರ್ಣಂಕಿಲದ ಸುತ್ತಮುತ್ತ ಹೀಗೆ ಆಟೋರಿಕ್ಷಾ ಓಡಿಸುವ ಕಾಯಕ ಕೈಗೆತ್ತಿಕೊಳ್ಳುವಾಗ ನನಗೆ ಬೆಂಬಲವಾಗಿ ನಿಂತವರು...

  • ಸಾಮಾನ್ಯವಾಗಿ ಸ್ಟಾರ್‌ಗಳು ಮತ್ತು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಯಾವಾಗಲೂ ಹರಿದಾಡುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ...

ಹೊಸ ಸೇರ್ಪಡೆ