ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ಉಡುಗೆ


Team Udayavani, Nov 22, 2019, 4:12 AM IST

pp-19

ಲಂಬಾಣಿ ಮಹಿಳೆಯರು ಕರ್ನಾಟಕ (ಸಂಡೂರ್‌, ಬಳ್ಳಾರಿ)ಯಲ್ಲಿ , ಆಂಧ್ರ, ತೆಲಂಗಾಣ ಪ್ರದೇಶದಲ್ಲಿ (ಲಂಬಾಣಿ) ಹಾಗೂ ರಾಜಸ್ಥಾನ ಮೊದಲಾದ ಪ್ರದೇಶಗಳಲ್ಲಿ ಬಂಜಾರ ಜನಾಂಗದ ಮಹಿಳೆಯರು ಎಂದು ಹೆಸರು ಪಡೆದಿದ್ದಾರೆ.

ಕರ್ನಾಟಕದ ಬಳ್ಳಾರಿಯ ಸಂಡೂರಿನಲ್ಲಿ ವಾಸಿಸುವ ಲಂಬಾಣಿ ಮಹಿಳೆಯರು ಉಡುಗೆಯ ಮೇಲೆ ತಯಾರಿಸುವ ಕಸೂತಿಗೆ “ಸಂಡೂರು’ ಕಸೂತಿ ಎಂದೇ ಹೆಸರು. ಅಲ್ಲಿ ಹಲವು ವರ್ಷಗಳವರೆಗೆ ಅಲ್ಲಲ್ಲಿ ಹಂಚಿಹೋಗಿದ್ದ ಈ ಕಲೆ, ಇಂದು ಸಂಡೂರು ಕಸೂತಿ ಕೇಂದ್ರದ ಹೆಸರಿನಲ್ಲಿ 400 ಲಂಮಾಣಿ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ಹಾಗೂ ಕಸೂತಿಗೆ ಪ್ರೋತ್ಸಾಹ ನೀಡುತ್ತಿದೆ. 15 ಹಳ್ಳಿಗಳಲ್ಲಿ ಸಂಡೂರು ಕಸೂತಿ ತಯಾರಿಸುವ ಜನರಿದ್ದಾರೆ.

ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ತೊಡುಗೆಯ ಹೆಸರು ಫೆಥಿಯಾ ಕಂಚಲಿ ದಿರಿಸು. ಅಂದರೆ, ಸಡಿಲವಾದ ಸ್ಕರ್ಟ್‌ನಂತಹ ತೊಡುಗೆಗೆ ವಿವಿಧ ಆಭರಣಗಳಿಂದ ಸಿಂಗರಿಸಿದ ಕುಪ್ಪಸವನ್ನು ತೊಡಲಾಗುತ್ತದೆ.

ಇಂದಿನ ಆಧುನಿಕ ಮಹಿಳೆಯರ ಆಯ್ಕೆಗೆ ತಕ್ಕಂತೆ ಸಂಡೂರು ಕಸೂತಿಯನ್ನು ಇತರ ಚೂಡಿದಾರ, ಸಲ್ವಾರ್‌ ಹಾಗೂ ಬಗೆ ಬಗೆಯ ಕುಪ್ಪಸಗಳ ವಿನ್ಯಾಸಕ್ಕೂ ಬಳಸುತ್ತಾರೆ. ಸಂಡೂರಿನಲ್ಲಿ ತಯಾರಾಗುವ ವಿವಿಧ ಸಂಡೂರು ಕಸೂತಿಯ ಲಮಾಣಿ ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಗೆಗಳು ಅಮೆರಿಕ, ಲಂಡನ್‌ ಹಾಗೂ ಜಪಾನ್‌ಗಳಿಗೆ ರಫ್ತಾಗುತ್ತಿದೆ.

ಸಂಡೂರು ಕಸೂತಿಯಲ್ಲಿ 39 ಬಗೆಬಗೆಯ ಹೊಲಿಗೆಗಳಿವೆ. ಹಿರಿಯ ಮಹಿಳೆಯರು ಇಂದಿನ ತರುಣಿಯರಿಗೆ ಹಂತ ಹಂತವಾಗಿ ಈ ಎಲ್ಲಾ ಹೊಲಿಗೆಗಳನ್ನು ಕಲಿಸುತ್ತಾರೆ. ಶಾಂತಿಬಾಯಿ ಹಾಗೂ ಗೌರಿ ಬಾಯಿ ಎಂಬ ಹಿರಿಯ ಲಂಬಾಣಿ ಮಹಿಳೆಯರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಸಂಡೂರು ಲಂಬಾಣಿ ಕಸೂತಿ ಕಲೆಗೆ ಜಿಯೋಗ್ರಾಫಿಕಲ್‌ ಇಂಡೆಕ್ಸ್‌ಯನ್ನು 2008ರಲ್ಲಿ ನೀಡಿ ಗೌರವಿಸಲಾಗಿದೆ.

ಗೌರಿಬಾಯಿ ಎಂಬ ಲಂಬಾಣಿ ಹಿರಿ ಮಹಿಳೆಯ ಸಾಧನೆಯೆಂದರೆ ಲಂಡನ್‌ ಫ್ಯಾಶನ್‌ ವೀಕ್‌ನಲ್ಲಿ ರ್‍ಯಾಂಪ್‌ ಮೇಲೆ ವಾಕ್‌ (ಕ್ಯಾಂಪ್‌ವಾಕ್‌) ಮಾಡಿದ್ದು ! ಆಕರ್ಷಕ ಕಸೂತಿಯ ವೈಭವಯುತ ದಿರಿಸಿನಂತೆ ಕಾಣುವ ಸಾಂಪ್ರದಾಯಿಕ ತೊಡುಗೆ ತೊಟ್ಟಾಗ ವೀಕ್ಷಕರಿಂದ ಕರತಾಡನದ ಸ್ವಾಗತವಾಯಿತು. ಕೆಲವರು ಕೇಳಿದ ಪ್ರಶ್ನೆಯೆಂದರೆ ಇಂತಹ ಅಂದದ ಕಸೂತಿಯ ದಿರಿಸನ್ನು ನಿತ್ಯ ಉಡುವುದಾದರೆ ಲಂಬಾಣಿ ಮಹಿಳೆಯರು ಎಷ್ಟು ಸಿರಿವಂತರು! ಅವರ ಸಾಂಪ್ರದಾಯಿಕ ಅಲೆಮಾರಿ ಜೀವನದಲ್ಲಿ ಎಲ್ಲಿದ್ದರೂ ತಮ್ಮ ಉಡುಗೆ-ತೊಡುಗೆಯ ಕಸೂತಿಯ ಅಂದವನ್ನು ಬದಲಿಸದೇ ಇರುವುದು ವಿಶೇಷ ದಾಖಲೆ ಎನ್ನಬಹುದು. ಈ ಕಸೂತಿಯ ವಿವಿಧ ದಿರಿಸಿಗೆ 400ರಿಂದ 4000 ರೂಪಾಯಿಗಳವರೆಗೆ ಮೌಲ್ಯವಿದೆ. ರಾಜಸ್ಥಾನ ಗುಜರಾತಿನಲ್ಲಿ ಮಧ್ಯಪ್ರದೇಶ ಸಿಂಧ್‌ ಪ್ರಾಂತ್ಯಗಳಲ್ಲಿ ಅಧಿಕವಾಗಿ ಹರಡಿರುವ ಈ ಬಂಜಾರ ಮಹಿಳೆಯರು ಭಾರತದ ಜಿಪ್ಸಿ ಮಹಿಳೆಯರು ಎಂಬ ಹೆಸರು ಪಡೆದುಕೊಂಡಿದ್ದಾರೆ.

ಬಂಜಾರಾ ಮಹಿಳೆಯರ ಕಸೂತಿಯ ದಿರಿಸಿನ ವೈಶಿಷ್ಟ್ಯವು ಉದಾಹರಣೀಯ. ಇವರು ಅಫ‌ಘಾನಿಸ್ಥಾನದಿಂದ ಬಂದು ರಾಜಸ್ಥಾನದಲ್ಲಿ (ಮಿರವರ್‌) ಪ್ರದೇಶದಲ್ಲಿ ನೆಲೆನಿಂತರು ಎಂಬ ಐತಿಹ್ಯವಿದೆ. ಇವರು ಧರಿಸುವ ಸಾಂಪ್ರದಾಯಿಕ ತೊಡುಗೆಯ ಮೇಲೆ “ಲೆಪೊ’ ಎಂಬ ವಿಶಿಷ್ಟ ವಿಧಾನದ ಕಸೂತಿ ಕಲೆಯನ್ನು ಪಡಿಮೂಡಿಸುತ್ತಾರೆ. ಗಾಢ ರಂಗಿನ ವರ್ಣಮಯ ತಿಪೋ ಕಸೂತಿಯ ಜೊತೆಗೆ ಮಿರರ್‌ ವರ್ಕ್‌ (ಪುಟ್ಟ ಕನ್ನಡಿಗಳನ್ನು) ಬಳಸುತ್ತಾರೆ. ಈ ದಿರಿಸಿನೊಂದಿಗೆ ವಿಶಿಷ್ಟ ರೀತಿಯ ನತ್ತು, ಕಿವಿಯ ಓಲೆ, ತಲೆಯ ಮೇಲೆ ಧರಿಸುವ ವಸ್ತ್ರವನ್ನು ಧರಿಸುತ್ತಾರೆ. ಅಸ್ಥಿಯಂತಹ ಬಿಳಿ ಬಣ್ಣದ ಹಲವು ಬಳೆಗಳನ್ನು ಧಾರಣೆ ಮಾಡುತ್ತಾರೆ. ಇವರು ಕಸೂತಿಯ ಜೊತೆಗೆ ಬಣ್ಣ ಹಚ್ಚಲು (ಪೇಂಟಿಂಗ್‌), ಹಚ್ಚೆ ಹಾಕುವುದು (ಟ್ಯಾಟೂ) ಹಾಗೂ ವಿಶೇಷ ರಂಗೋಲಿಗಳನ್ನು ರಚಿಸುವಲ್ಲಿಯೂ ಬಹಳ ಪ್ರವೀಣರು.

ಶ್ರಾವಣ ಮಾಸದಲ್ಲಿ ಬಂಜಾರಾ ಮಹಿಳೆಯರು “ತೀಜ್‌’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಆ ಸಮಯದಲ್ಲಿ ಆಕರ್ಷಕ ಸಾಂಪ್ರದಾಯಿಕ ಉಡುಗೆ ತೊಡುಗೆಯ ಜೊತೆಗೆ ನೃತ್ಯ, ಸಂಗೀತಗಳು ಮಹತ್ವ ಪಡೆದುಕೊಂಡಿವೆ.

ಹಂಪಿಯಲ್ಲೂ ವಾಸಿಸುವ ಲಂಬಾಣಿ ಮಹಿಳೆಯರು ಲೆಪೋ ವಿಧದ ಕಸೂತಿಯ ಪೆಥಿಯಾ ಎಂಬ ಸ್ಕರ್ಟ್‌ನಂತಹ ಲಂಗ, ಕಂಚಲಿ ಎಂಮ ಕುಪ್ಪಸ, ಜೊತೆಗೆ ಶಿರೋವಸ್ತ್ರವನ್ನು ಧರಿಸುತ್ತಾರೆ. ಲೆಪೋ ಬಗೆಯ ಲಂಬಾಣಿ ಮಹಿಳೆಯರು ತಮ್ಮ ಉಡುಗೆಯಲ್ಲಿ ಮಣಿಗಳನ್ನು ಸಮುದ್ರದ ಪುಟ್ಟ ಶಂಖ ಹಾಗೂ ನಾಣ್ಯ (ಕಾಯಿನ್‌) ಬಳಸುವುದು ವಿಶಿಷ್ಟ.

ಅನುರಾಧಾ ಕಾಮತ್‌

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.