ನಿರಂತರ ಕಲಿಕೆಯ ಆಕಾಂಕ್ಷಿ ಮುಮ್ತಾಜ್‌ ಬೇಗಂ

ಹಿರಿಯ ಲೇಖಕಿಯೊಂದಿಗೆ ಈ ದಿನ

Team Udayavani, Feb 7, 2020, 4:40 AM IST

big-6

ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳಿನ್ನೂ ಮನೆಯಿಂದ ಹೊರಬರಲು ಲೆಕ್ಕಾಚಾರ ಹಾಕುತ್ತಿದ್ದ ದಿನಗಳಲ್ಲಿ ಕಾರ್ಕಳದ ಸುಶಿಕ್ಷಿತ ಕುಟುಂಬದಲ್ಲಿ ಹುಟ್ಟಿದವರು ಮುಮ್ತಾಜ್‌ ಬೇಗಂ. ಪ್ರಪಂಚದ ಜ್ಞಾನವನ್ನೆಲ್ಲ ಮೊಗೆದುಕೊಳ್ಳಬೇಕು ಎಂಬ ತುಡಿತ ಇರುವ ಮುಮ್ತಾಜ್‌ ತಮ್ಮ ಇಳಿವಯಸ್ಸಿನಲ್ಲಿ ಕಂಪ್ಯೂಟರ್‌ ಕಲಿತದ್ದು ಮಾತ್ರವಲ್ಲ, ಅನಿಮೇಷನ್‌ ಕೋರ್ಸ್‌ ಮಾಡಿ ಪುಟ್ಟ ಚಿತ್ರವನ್ನೂ ತಯಾರಿಸಿದವರು. ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್‌ ಭಾಷಾ ಸಾಹಿತ್ಯದ ಅಪಾರವಾದ ಓದಿನ ಹಿನ್ನೆಲೆ ಇರುವವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಮ್ಮ ಬರವಣಿಗೆಯ ಕಾಯಕವನ್ನು ಮುಂದುವರೆಸಿದವರು. ಹೀಗೆ ಲವಲವಿಕೆಯ ವ್ಯಕ್ತಿತ್ವದವರಾದ ಮುಮ್ತಾಜ್‌ ಅವರ ಬರಹ, ಬದುಕಿನ ಆಸಕ್ತಿಯ ಬಗ್ಗೆ ಮಾತನಾಡಿದಾಗ, ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡರು…
.
ಸ್ವಾತಂತ್ರ್ಯದ ನವ ಪರ್ವದಲ್ಲಿ, ಎಲ್ಲೆಡೆ ಸಂತಸದ ವಾತಾವರಣ ಇರುವ ಸುಸಂದರ್ಭದಲ್ಲಿ ಜನಿಸಿದ ನಿಮ್ಮ ಹಿನ್ನೆಲೆಯನ್ನು ವಿವರಿಸಬಹುದೆ?
-ನಾನು ಹುಟ್ಟಿದ್ದು 1948 ಡಿಸೆಂಬರ್‌ 21. ನನ್ನ ತಾಯಿ ಫಾತಿಮಾ ಬೇಗಂ ಬಗ್ಗೆ ಹೇಳಬೇಕೆಂದರೆ ಮುಸ್ಲಿಂ ಮಹಿಳೆಯರು ಶಿಕ್ಷಣ ಪಡೆಯಲು ಹಿಂಜರಿಯುತ್ತಿದ್ದ ಆ ಕಾಲದಲ್ಲಿ ಅವರು ಕಾರ್ಕಳದ ಕನ್ನಡ ಶಾಲೆಯಲ್ಲಿ ಕಲಿತು ಉಡುಪಿಯ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಅಲ್ಲೇ ಇದ್ದ ಟೀಚರ್‌ ಟ್ರೈನಿಂಗ್‌ ಕಾಲೇಜಿನಲ್ಲಿ ಕಲಿತು ಶಿಕ್ಷಕಿಯಾದವರು. ಅವರಿಗೆ ಓದುವುದರಲ್ಲಿ ಬಹಳ ಆಸಕ್ತಿ. ಬಹುಶಃ ಅವರು ಓದದೇ ಇರುವ ಪುಸ್ತಕಗಳ ಸಂಖ್ಯೆ ತೀರ ವಿರಳ. ತಂದೆ ಮಹಮ್ಮದ್‌ ಇಶಾಕ್‌ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಅವರಿಗೂ ಜ್ಞಾನಾಸಕ್ತಿ ಹೆಚ್ಚಿತ್ತು. ಅದರೊಂದಿಗೆ ಸ್ಮರಣಶಕ್ತಿಯಲ್ಲಿಯೂ ಮುಂದು. ಹಾಗಾಗಿ, ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಭಾಷಣವನ್ನು, ಯಾವಾಗಲೂ ನಮ್ಮನ್ನು ಕುಳ್ಳಿರಿಸಿಕೊಂಡು ಹೇಳುತ್ತಿದ್ದರು. ತಂದೆಯ ಸ್ಮರಣಶಕ್ತಿ ಮತ್ತು ತಾಯಿಯ ಸಾಹಿತ್ಯದ ಗೀಳನ್ನು ಅಂಟಿಸಿಕೊಂಡು ಬೆಳೆದವಳು ನಾನು.

ಬಾಲ್ಯದಲ್ಲಿ ಅಚ್ಚೊತ್ತಿದ ನೆನಪುಗಳೇನು?
-ಕಾರ್ಕಳದಲ್ಲಿ ಅಮ್ಮನ ಮನೆ ಅಂದರೆ ಅಜ್ಜಿ ಮನೆ. ಅಪ್ಪನ ಮನೆ ಮುಲ್ಕಿ ಕಿಲ್ಪಾಡಿಯಲ್ಲಿ. ಇವೆರಡೂ ನಾನು ಆಡಿ ಬೆಳೆದ ಊರು. ನಮ್ಮ ಮನೆಯಲ್ಲಿ ಯಾವುದೇ ಕಟ್ಟು ಪಾಡುಗಳಿಲ್ಲದೇ ನನ್ನನ್ನು ಬೆಳೆಸಿದುದರಿಂದಾಗಿ ಎಲ್ಲರೂ ನನ್ನ ಸ್ನೇಹಿತರೇ ಆಗಿದ್ದರು. ಅದರೊಂದಿಗೆ ಆ ಕಾಲದಲ್ಲಿ ರಸ್ತೆಗಳಾಗಲಿ ವಿದ್ಯುತ್ತಾಗಲಿ ರೇಡಿಯೋ ಆಗಲಿ ಇರಲಿಲ್ಲ. ಬಯಲು ಗದ್ದೆಗೆ ನೆರೆಬಂದಾಗ ಅದನ್ನು ನೋಡಲು ಹೋಗುತ್ತಿ¨ªೆವು. ದೀಪಾವಳಿಯಲ್ಲಿ ಎಲ್ಲರೊಂದಿಗೆ ನಾನು ಕೂಡ ಬಲಿಯೇಂದ್ರನಿಗೆ “ಕೂ’ ಹಾಕುತ್ತಾ ಬೆಳೆದವಳು.

ನಿಮ್ಮ ಧರ್ಮದಲ್ಲಿ ಕುರಾನ್‌ ಓದುವುದು ಆಗಲೂ ಇತ್ತೆ?
-ಹೌದು, ಆಗ ನಾನೂ ಕುರಾನ್‌ ಓದಲು ಹೋಗುತ್ತಿದ್ದೆ. ಒಮ್ಮೆ ಗುರುಗಳು ಹೇಳಿದ್ದರು, “ದೇವರು ಎಲ್ಲಾ ಕಡೆಯೂ ಇದ್ದಾನೆ’ ಎಂದು. ಆ ಮಾತು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತು ಎಂದರೆ, ದೇವರ ವಿಷ‌ಯದ ಕುರಿತು ಮೊದಲ ಬಾರಿಗೆ ಒಂದು ಕವನವನ್ನು ಬರೆದೆ.

ದೇವನೆಲ್ಲಿ ದೇವನೆಲ್ಲಿ
ಹುಡುಕುವೇಕೆ ಅಲ್ಲಿ ಇಲ್ಲಿ
ನಿನ್ನ ಅಂತರಂಗದಲ್ಲಿ
ನೋಡು ದೇವನಿಹನು ಅಲ್ಲಿ
ಎಂಬ ಕವನವನ್ನು ಮೊದಲ ಬಾರಿಗೆ ಬರೆದೆ.

ಶಾಲಾ-ಕಾಲೇಜು ಜೀವನದಲ್ಲಿ ಬರಹಕ್ಕೆ ಪ್ರೇರಣೆ ಏನು? ನಿಮ್ಮ ಹವ್ಯಾಸಗಳೇನು ?
-ನಾನು ಕಲಿಯುತ್ತಿದ್ದಂತಹ ಮುಲ್ಕಿಯ ಕಾನ್ವೆಂಟಿನಲ್ಲಿ ನಾವು ಬರೆದ ಕತೆ-ಕವನಗಳನ್ನು ನೋಟಿಸ್‌ ಬೋರ್ಡಿನಲ್ಲಿ ಹಾಕುತ್ತ ಇದ್ದರು. ಹೆಚ್ಚಿನೆಲ್ಲ ಬರಹಗಳು ನನ್ನದೇ ಆಗಿದ್ದವು. ಆಗ ಮಂಗಳೂರಿನಿಂದ ನವಭಾರತ ಪತ್ರಿಕೆ ಇತ್ತು. ನನ್ನ ಶಾಲೆಯ ಮುಖ್ಯೋಪಾಧ್ಯಾಯಿನಿ ಮಿಸ್‌ ಪಿಂಟೋ ನನ್ನ ಲೇಖನಗಳನ್ನು ಆ ಪತ್ರಿಕೆಗೆ ಕಳುಹಿಸಿಕೊಡುತ್ತಿದ್ದರು. ಅವೆಲ್ಲ ಪ್ರಕಟ ಆಗುತ್ತಿದ್ದವು. ನಂತರ ಹತ್ತನೆಯ ತರಗತಿ ಮುಗಿಯಿತು. ನಮ್ಮ ಊರಿನಲ್ಲಿ ಹತ್ತನೆಯ ತರಗತಿ ಮುಗಿಸಿದ ಪ್ರಥಮ ಮುಸ್ಲಿಂ ಹೆಣ್ಣುಮಗಳು ನಾನು. ಪಿಯುಸಿಗಾಗಿ ಅಲ್ಲೇ ಇದ್ದ ಸರಕಾರಿ ಜೂನಿಯರ್‌ ಕಾಲೇಜು ಸೇರಿದೆ. ನಂತರ ಪದವಿ ಕಲಿಯಲು ಮುಲ್ಕಿ ವಿಜಯ ಕಾಲೇಜಿಗೆ ಸೇರಿಕೊಂಡೆ. ಸಂಗೀತ, ನೃತ್ಯ, ಚಿತ್ರ ಕಲೆಗಳಲ್ಲಿ ತುಂಬಾ ಆಸಕ್ತಿ ಇತ್ತು. ಕಾಲೇಜಿನಲ್ಲಿರುವಾಗ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ನಯನಾ ಎಂಬ ಕಥೆ ಎಲ್ಲರ ಪ್ರಶಂಸೆ ಗಳಿಸಿತ್ತು. ಕನ್ನಡ ಪ್ರಾಧ್ಯಾಪಕರಾಗಿದ್ದ ರಾಮದಾಸ್‌ ಅವರ ಪ್ರೋತ್ಸಾಹದಿಂದ ಸುಧಾ ಪತ್ರಿಕೆಯಲ್ಲೂ ನನ್ನ ಕಥೆಗಳು ಪ್ರಕಟವಾಗತೊಡಗಿದವು. ಬಳಿಕ ಉದಯವಾಣಿ ಪತ್ರಿಕೆಯಲ್ಲಿಯೂ ನನ್ನ ಲೇಖನಗಳು ಪ್ರಕಟಗೊಂಡವು. ಗುಲ್ಶನ್‌ನಂದ ಅವರ ಉರ್ದು ಕಾದಂಬರಿಗಳು, ತ್ರಿವೇಣಿ ಅವರ ಕಾದಂಬರಿಗಳನ್ನು ಓದುತ್ತಿದ್ದೆವು. ಎಸ್‌.ಎಲ್‌. ಭೈರಪ್ಪ ಅವರ ವಂಶವೃಕ್ಷ ಕಾದಂಬರಿಯಲ್ಲಿ ಪ್ರವಾಹದ ವರ್ಣನೆ ಇಂದಿಗೂ ಮೈ ಝುಂ ಎನ್ನಿಸುತ್ತದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಉರ್ದು ಸಾಹಿತಿ ಖರ್ರತುಲ್‌ ಅಯನ್‌ ಹೈದರ್‌ ಅವರ ವರ್ಣನೆ ಆಪ್ಯಾಯಮಾನವಾಗಿರುತ್ತವೆ. ಈಗಲೂ ಅವರ ಕೃತಿಯೊಂದನ್ನು ಅನುವಾದಿಸಲು ಪ್ರಯತ್ನಿಸುತ್ತಾ ಇದ್ದೇನೆ. ಇಂಗ್ಲಿಷ್‌ ಸಾಹಿತ್ಯದಲ್ಲಿ ವರ್ಡ್ಸ್‌ವರ್ತ್‌, ಕೀಟ್ಸ್‌ ಮುಂತಾದವರ ನವೋದಯ ಸಾಹಿತ್ಯ ಬಹಳ ಇಷ್ಟ. ಕನ್ನಡದಲ್ಲಿ ಕುವೆಂಪು ಕಾವ್ಯ ಇಷ್ಟವಾಗುತ್ತದೆ. ಹಿಂದಿ ಕತೆ-ಕಾವ್ಯಗಳನ್ನೂ ಸಿಕ್ಕಾಗ ಓದಿಕೊಳ್ಳುತ್ತೇನೆ. ಹಿಂದಿಯಲ್ಲಿಯೂ ಬರವಣಿಗೆ ಮಾಡಲು ಪ್ರಯತ್ನಿಸಿದ್ದುಂಟು. ಆದರೆ, ಉತ್ತರಭಾರತದ ಹಿಂದಿಯ ಹಾಗೆ ಪ್ರೌಢ ಹಿಂದಿಯಲ್ಲಿ ನಾನು ಬರೆಯುತ್ತಿಲ್ಲ ಎನಿಸಿ ಅದನ್ನು ಕೈಬಿಟ್ಟೆ.

ಕನ್ನಡದಲ್ಲಿ ಕಥೆ, ಕವನ, ಕಾದಂಬರಿ ಪ್ರಕಾರಗಳಲ್ಲಿ ನಾನು ಬರವಣಿಗೆ ಮಾಡಿದ್ದರೂ, ಕಾದಂಬರಿ ಪ್ರಕಾರದಲ್ಲಿ ಬರೆಯುವುದು ಹೆಚ್ಚು ಖುಷಿ ಕೊಡುತ್ತದೆ. ಮದುವೆಯಾಗಿ ಕತಾರ್‌ಗೆ ಹೋದಾಗ ಅಲ್ಲಿನ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಗಲ್ಫ್ ಟೈಮ್ಸ್‌ ಎಂಬ ಇಂಗ್ಲಿಷ್‌ ಪತ್ರಿಕೆಗೆ ಬರೆಯುತ್ತಿದ್ದೆ.

ನಿಮ್ಮ ಮೊದಲ ಪುಸ್ತಕದ ಬಗ್ಗೆ ಹೇಳುತ್ತೀರಾ?
-ನಾನು ವಿದೇಶದಿಂದ ಬಂದ ನಂತರ ಮಾಡಿದ ಮೊದಲ ಕೆಲಸ ಏನೆಂದರೆ ಅವ್ಯಕ್ತ ಎಂಬ ಕಥಾಸಂಕಲನ ಬರೆದುದು. ಅದನ್ನು ಅಕ್ಷರ ಪ್ರಕಾಶನದ ಕೆ. ವಿ. ಸುಬ್ಬಣ್ಣ ಪ್ರಕಟಿಸಿದರು. 1989ರಲ್ಲಿ ತರಂಗ ದಲ್ಲಿ ಪರದೇಶಿ ಎಂಬ ಕಥೆ ದಾರಾವಾಹಿಯಾಗಿ ಪ್ರಕಟವಾಯಿತು. ವರ್ತುಲ, ಬಂದಳಿಕೆ, ಸ್ವರ್ಗಕ್ಕೆ ದಾರಿ ಕಾದಂಬರಿಗಳನ್ನು ಬರೆಯುತ್ತ ಹೋದೆ. ನೀನೊಂದು ಮರೆಯಲಾಗದ ನೆನಪು ಕಥಾ ಸಂಕಲನ ಸರ್ವ ಋತುಗಳೂ ನಿನಗಾಗಿ ಕವನ ಸಂಕಲನ ಪ್ರಕಟಗೊಂಡಿದೆ. ಹಾಗೆಯೇ ಇತ್ತೀಚೆಗೆ ಸ್ವಾತಂತ್ರ್ಯದ ಕಹಳೆ ಎಂಬ ಪುಸ್ತಕದಲ್ಲಿ ಇತಿಹಾಸ ಮರೆತ ಉಳ್ಳಾಲದ ಅಬ್ಬಕ್ಕ ರಾಣಿಯ ಬಗ್ಗೆಯೂ ಬರೆದಿದ್ದೇನೆ.

ವಿವಾಹ, ಮೂವರು ಮಕ್ಕಳ ಪಾಲನೆಯ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿದಿರಿ ಅಂತ ಹೇಳಿದಿರಿ?
-ತಬಸ್ಸುಮ್‌ ಮತ್ತು ತಬಾ ಮಗಳಂದಿರು. ಝಹೀರ್‌ ಅಹ್ಮದ್‌ ಮಗ. ವಿದೇಶದಿಂದ ವಾಪಸ್‌ ಬಂದ ಬಳಿಕ, ಮಕ್ಕಳ‌ ಪಾಲನೆಯ ಸಂದರ್ಭದಲ್ಲಿಯೇ ಕಾನೂನಿನ ವಿಚಾರ ತಿಳಿಯುವ ಹಂಬಲ ಮೂಡಿತು. ಹಾಗಾಗಿ, ಪದವಿ ಅಭ್ಯಾಸ ಮಾಡಿದೆ. ಹಾಗೆ ಕಾನೂನು ಕಲಿತುದರಿಂದಲೇ ನಾನು ಕೆಲವು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ಐದು ವರ್ಷ ಸೇವೆ ಸಲ್ಲಿಸುವುದು ಸಾಧ್ಯವಾಯಿತು. ಅದರೊಂದಿಗೆ 2017 ರಿಂದ 2019ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯಳಾಗಿಯೂ ಕಾರ್ಯನಿರ್ವಹಿಸಿದ್ದೇನೆ.

ನಡೆದುಬಂದ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ಸಂತೃಪ್ತಿ ಅನ್ನಿಸಿದೆಯೆ?
ಹೌದು. ಹೋರಾಟದ ಬದುಕು ನನ್ನದು. ಅನ್ಯಾಯವನ್ನು ತಡೆಯುವಲ್ಲಿ “ದಾದಾಗಿರಿ’ಯೂ ಬೇಕು, “ಗಾಂಧಿಗಿರಿ’ಯೂ ಬೇಕು ಎನ್ನುವ ಸಮ್ಮಿಳಿತ ಸ್ವಭಾವ ನನ್ನದು. ಈ ಜಗತ್ತಿನಲ್ಲಿ ದೇವರ ಸೃಷ್ಟಿಯನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ನಾನು ಕಲಿಯುವಿಕೆಗೆ ಹೆಚ್ಚು ಮಹತ್ವ ಕೊಟ್ಟಿದ್ದೇನೆ. ಓದುವ ಹವ್ಯಾಸ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಕಲಿಯುವುದಕ್ಕೆ ಲಭ್ಯವಾದ ಅವಕಾಶಗಳು ನನ್ನ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿವೆ. ಈಗಲೂ ಖದರ್ರತುಲ್‌ ಅಯನ್‌ ಹೈದರ್‌ ಅವರ ಆಗ್‌ ಖದರಿಯಾ ಎಂಬ ಕೃತಿಯನ್ನು ಓದುತ್ತ, ಇದನ್ನು ಕನ್ನಡಕ್ಕೆ ಅನುವಾದಿಸಿದರೆ ಹೇಗೆ ಎಂದು ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ. ಅಗ್ನಿ ಸಾಗರ ಎಂಬುದಾಗಿ ಶೀರ್ಷಿಕೆ ಕೊಟ್ಟು ಕೆಲವು ಅಧ್ಯಾಯ ಅನುವಾದಿಸಿದ್ದೇನೆ.

ಸಾಕುಪ್ರಾಣಿಗಳೆಂದರೆ ನನಗೆ ಬಹಳ ಇಷ್ಟ. ಬೆಕ್ಕು, ಆಡು, ಕೋಳಿ, ಹಂಸಗಳನ್ನು ಸಾಕುತ್ತ ನೆಮ್ಮದಿಯಾಗಿದ್ದೇನೆ. ದೇವರು ಇಷ್ಟು ಕೊಟ್ಟಿದ್ದಾರಲ್ಲ ಎಂಬ ಸಂತೃಪ್ತಭಾವವಂತೂ ಇದೆ.
.
ಬದುಕಿಗಿಂತ ದೊಡ್ಡ ಹೋರಾಟ ಯಾವುದಿದೆ ಎಂದು ಪ್ರಶ್ನಿಸುವ ಮುಮ್ತಾಜ್‌ ಅವರು ಆತ್ಮಕತೆ ಬರೆಯಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ. ಕಾಲನ ಕೈಯ ನಕ್ಷೆ ಕವನ ಸಂಕಲನ ಮತ್ತು ಸೂರ್ಯಾಸ್ತ ಮತ್ತು ಅಳಿದುಳಿದ ಕತೆಗಳು ಎಂಬ ಕಥಾ ಸಂಕಲನ ಸದ್ಯವೇ ಪ್ರಕಟವಾಗಲಿದೆ.

ಹೊಸವಿಚಾರಗಳನ್ನು ತಿಳಿದುಕೊಳ್ಳುವ ಬಗ್ಗೆ ತಮ್ಮ ಮನಸ್ಸನ್ನು ಸದಾ ಮುಕ್ತವಾಗಿ ಇರಿಸಿಕೊಂಡಿರುವ ಲೇಖಕಿ ಮುಮ್ತಾಜ್‌ ಬೇಗಂ ಅವರಿಗೆ ಸಾಹಿತ್ಯ ಎಂಬುದು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಇರುವ ಮಾರ್ಗ. ಆ ದಾರಿಯಲ್ಲಿ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರಿಗೀಗ 73ರ ಹರೆಯ. ಅವರ ಕೃತಿಗಳನ್ನು ಓದಲು, ವಿಚಾರಗಳನ್ನು ಹಂಚಿಕೊಳ್ಳಲು ಅವರ ದೂರವಾಣಿ ಸಂಖ್ಯೆ 9008264218 ಗೆ ಕರೆ ಮಾಡಬಹುದು.

ವಾಸಂತಿ ಅಂಬಲಪಾಡಿ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.