Udayavni Special

ಬಾಲ್ಯವೇ ಮರಳಿ ಬಾ


Team Udayavani, Mar 20, 2020, 4:00 AM IST

ಬಾಲ್ಯವೇ ಮರಳಿ ಬಾ

ಸಮಯ ಕಾಲಿಗೆ ಚಕ್ರ ಕಟ್ಟಿಕೊಂಡಿದೆಯೇನೋ ಎಂಬತೆ ಓಡುತ್ತಿದೆ. ಅಯ್ಯೋ ಆ ಕಾಲವನ್ನೋ, ಸಮಯವನ್ನೋ ಒಮ್ಮೆ ತಡೆದು ನಿಲ್ಲಿಸುವಂತಿದ್ದರೆ ಎಷ್ಟು ಚೆನ್ನಾಗಿರುತಿತ್ತು!

ಬಾಲ್ಯ ಮುಗಿದು ಹೋಗಿದೆ. ಆದರೆ, ನೆನಪುಗಳು ಮುಗಿಯುವುದುಂಟೇ. ಉರುಳುತ್ತಿರುವ ಕಾಲಚಕ್ರವನ್ನು ಹಿಡಿದು ನಿಲ್ಲಿಸಿ ಹಿಂತಿರುಗಿ ನೋಡಿದರೆ ಕಳೆದಿರುವ ದಿನಗಳು ಅಲ್ಪ ಎನಿಸಿದರೂ, ಅಮೂಲ್ಯವಾದುದ್ದನ್ನೇ ಕಳೆದುಕೊಳ್ಳುತ್ತಿದ್ದೇವೇನೋ ಅನಿಸುತ್ತಿದೆ. ಹಿರಿಯರಿಗೆ, ಸಾಧಕರಿಗೆ, ಅತ್ಯುನ್ನತ ಹುದ್ದೆಗೇರಿದವರಿಗೆ ಬಾಲ್ಯವೆಂಬ ನೆನಪು ಇದ್ದೇ ಇರುತ್ತದೆ. ಅಮ್ಮನ ಜೋಗುಳ, ಕೈ ತುತ್ತಿನ ಜೊತೆಗೆ ಸಿಹಿಮುತ್ತು, ಅಪ್ಪನ ಬೆನ್ನ ಮೇಲಿನ ಕೂಸುಮರಿ, ಅಜ್ಜಿಯ ಕಟ್ಟು ಕಥೆಗಳು, ಸ್ವಲ್ಪ ಬುದ್ಧಿ ಬೆಳೆಯುತ್ತಿದ್ದಂತೆ ಸ್ನೇಹಿತರು- ಒಡಹುಟ್ಟಿದವರ ಜತೆಗೂಡಿ ಆಡಿದ ಮನೆಯಾಟ, ಮುಟ್ಟಾಟ, ಮರಕೋತಿ, ಕಣ್ಣಮುಚ್ಚಾಲೆ, ಕುಂಟೆಬಿಲ್ಲೆಯಂತಹ ಅಸಂಖ್ಯ ಬಾಲ್ಯದಾಟಗಳು ಬದುಕಿನ ಅಂತರ್ಜಲದಂತೆ ನೆನಪಿನ ಕೋಶದಲ್ಲಿ ಉಳಿದುಬಿಡುತ್ತವೆ.

ಒಂದಿಷ್ಟು ಜಗಳ, ಅಗಣಿತ ಪ್ರಶ್ನೆಗಳೊಂದಿಗೆ ಪ್ರಪಂಚವನ್ನೇ ಪರಿಶೋಧಿಸಲು ಹೊರಟು ಜೊತೆಯಲ್ಲಿರುವವರನ್ನು ಪೇಚಾಟಕ್ಕೆ ಸಿಲುಕಿಸಿ, ಅದೂ ತಿಳಿವಿಗೆ ಬಾರದೆ ತೋರುತ್ತಿದ್ದ ಮೊದ್ದುತನದ ಪ್ರಸಂಗಗಳು- ಹೀಗೆ ಪ್ರತಿಯೊಬ್ಬರ ಬಳಿಯೂ ಬಾಲ್ಯದ ನೆನಪುಗಳ ಸಂಪತ್ತು ಇದ್ದೇ ಇರುತ್ತವೆ. ನಿರಾಯಾಸವಾಗಿ ಅಪ್ಪಅಮ್ಮನ ಬೆಚ್ಚಗಿನ ಅಪ್ಪುಗೆಯಲ್ಲೋ, ಅಕ್ಕ-ಅಣ್ಣ, ತಮ್ಮ-ತಂಗಿ ಅಥವಾ ಸ್ನೇಹಿತರ ಗೊಡವೆಯಲ್ಲೋ ಕಳೆದ ಬದುಕಿನ ಅಮೂಲ್ಯ ಕ್ಷಣಗಳವು! ಇಂದಿನ ಸ್ಪರ್ಧಾತ್ಮಕ ಜಗತ್ತು, ಭೇದ-ಭಾವ, ತಾರತಮ್ಯ, ಗೊಂದಲಮಯ ಪ್ರಪಂಚದ ಪರಿವೇ ಇಲ್ಲದೆ, ಜೀವನದಲ್ಲಿ ಮತ್ತೆ ಬೇಕೆಂದರೂ ಬಾರದ ಕಳೆದುಹೋದ ದಿನಗಳವು. ಆದ್ದರಿಂದಲೇ ಮತ್ತೂಮ್ಮೆ ಬಾಲ್ಯದ ಲೋಕಕ್ಕೆ ಪಯಣಿಸಿ ಅಪ್ಪಅಮ್ಮನ ತೋಳುಗಳಲ್ಲಿ ಬೆಚ್ಚಗಿರಬೇಕು ಎನಿಸುತ್ತದೆ.

ಅಶ್ವಿ‌ನಿ ಶಾಸ್ತ್ರಿ
ಪ್ರಥಮ ಬಿ.ಎಡ್‌. ಡಾ. ಟಿ.ಎಂ.ಪೈ. ಶಿಕ್ಷಣ ಮಹಾವಿದ್ಯಾಲಯ, ಉಡುಪಿ

ಟಾಪ್ ನ್ಯೂಸ್

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

Untitled-1

ಜುಲೈ 31ವರೆಗೂ ವ್ಯಾಪಕ ಮಳೆ

ಗಂಗಾವಳಿ ಪ್ರವಾಹ: ಕೊಚ್ಚಿಹೋದ ನೆರೆ ಪೀಡಿತ ಜನರ ಬದುಕು

ಗಂಗಾವಳಿ ಪ್ರವಾಹ: ಕೊಚ್ಚಿ ಹೋದ ನೆರೆ ಪೀಡಿತ ಜನರ ಬದುಕು

ghtryrtyr

ಬೊಮ್ಮಾಯಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳು ; ಯಾರಿಗೆ ಒಲಿದಿದೆ ಡಿಸಿಎಂ ಪಟ್ಟ ?

hrtyrtyrtr

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೊಮ್ಮಾಯಿ : ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ

fgdfgretgre

ಬಸವರಾಜ್ ಬೊಮ್ಮಾಯಿ ನೂತನ ಸಿಎಂ: ಶಾಸಕ ಯತ್ನಾಳ ಪ್ರತಿಕ್ರಿಯೆ ಏನು ?

htytrytr

‘ಬಡವರ ಏಳಿಗೆ ನನ್ನ ಮೊದಲ ಪ್ರಾಶಸ್ತ್ಯ’ : ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮೊದಲ ಮಾತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

ಧರಿಸುವ ದಿರಿಸಿನಲ್ಲಿ ಸಂಯಮ

ಧರಿಸುವ ದಿರಿಸಿನಲ್ಲಿ ಸಂಯಮ

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

Untitled-1

ರ್ಯಾಗಿಂಗ್‌ ಪಿಡುಗು: 7 ತಿಂಗಳುಗಳಲ್ಲಿ 40 ಮಂದಿ ವಿದ್ಯಾರ್ಥಿಗಳ ಬಂಧನ

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ

ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.