ಧರಿಸುವ ದಿರಿಸಿನಲ್ಲಿ ಸಂಯಮ


Team Udayavani, Mar 13, 2020, 4:38 AM IST

ಧರಿಸುವ ದಿರಿಸಿನಲ್ಲಿ ಸಂಯಮ

ತಿರುಪತಿ ದೇವಸ್ಥಾನದಲ್ಲಿ, ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಹಾಗೂ ಇತರ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ತೆರಳುವಾಗ ಅಲ್ಲಿಯ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೆಕಾಗಿದೆ. ಇದೇ ವಸ್ತ್ರ ಸಂಹಿತೆಯನ್ನು ಕರ್ನಾಟಕದ ಕೆಲವು ದೇವಾಲಯಗಳಲ್ಲೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ದೇವಾಲಯಗಳಲ್ಲಿ ವಸ್ತ್ರಸಂಹಿತೆ ಪಾಲಿಸುವುದು ಒಳ್ಳೆಯ ವಿಚಾರವೆ. ಆದರೆ, ಅದನ್ನು ನಿಯಮವಾಗಿ ಜಾರಿಗೊಳಿಸಬೇಕಾಗಿ ಬಂದ ಅನಿವಾರ್ಯತೆ ಸೃಷ್ಟಿಯಾಗಿರುವ ಬಗ್ಗೆ ಬೇಸರವಾಗುತ್ತದೆ.

ಹಿಂದೆಲ್ಲ ಶಾಲೆಗಳಲ್ಲಿ ವಾರಕ್ಕೆರಡು ದಿನ ಮಾತ್ರ ಸಮವಸ್ತ್ರ ಧರಿಸಬೇಕಾಗಿತ್ತು. ಕೆಲವು ಖಾಸಗಿ ಶಾಲೆಗಳಲ್ಲಿ ವಾರದ ಐದು ದಿನ ಸಮವಸ್ತ್ರ , ಶನಿವಾರ ಬಣ್ಣದ ಬಟ್ಟೆ ಧರಿಸಬಹುದಿತ್ತು. ಉಳ್ಳವರ ಮಕ್ಕಳು ತರಹೇವಾರಿ ಬಟ್ಟೆ ಧರಿಸಿ ಶಾಲೆಗೆ ಬಂದರೆ ಇತರ ಮಕ್ಕಳು ಕೀಳರಿಮೆಯಿಂದ ಬಳಲಬಾರದು. ಹಾಗಾಗಿ, ಎಲ್ಲ ಮಕ್ಕಳು ಸಮಾನರೆಂದು ಪರಿಗಣಿಸುವ ಉದ್ದೇಶದಿಂದ ವಸ್ತ್ರಸಂಹಿತೆಯನ್ನು ಜಾರಿಮಾಡಲಾಗುತ್ತದೆ.

ಹಿಂದೆಲ್ಲ ಕಾಲೇಜಿಗೆ ಹೋಗುವಾಗ ಸಮವಸ್ತ್ರ ಧರಿಸಬೇಕೆಂಬ ನಿಯಮವೇ ಇರಲಿಲ್ಲ. ಯಾವುದೇ ನಿಯಮವಿಲ್ಲದಿದ್ದರೂ ಯಾರಿಂದಲೂ ವಿರೋಧ ಬಾರದಂತೆ ಮೈತುಂಬ ಬಟ್ಟೆ ಧರಿಸಿಯೇ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದರು.
ನಂತರ ಸಮಾಜವು ಆಧುನೀಕರಣಕ್ಕೆ ತೆರೆದುಕೊಂಡು ಅನೇಕ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದವು. ಜನರ ವಸ್ತ್ರ ವಿನ್ಯಾಸದ ಅಭಿರುಚಿಯೂ ಬದಲಾಯಿತು. ಯುವ ಸಮುದಾಯವು ಇದರತ್ತ ಹೆಚ್ಚು ಆಕರ್ಷಿತಗೊಂಡಿತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಈ ತರಹೇವಾರಿ ವೇಷಭೂಷಣಗಳನ್ನು ನೋಡಿ, ತರಗತಿಗಳಿಗೆ ನೊಟೀಸು ಬರಲಾರಂಭಿಸಿದವು. ಆದರೆ, ಈ ಎಲ್ಲ ನೊಟೀಸ್‌ಗಳಿಂದ ನಿಯಂತ್ರಣ ಸಾಧ್ಯವಾಗದೇ ಇದ್ದಾಗ ಕಾಲೇಜುಗಳಲ್ಲೂ ಸಮವಸ್ತ್ರ ಜಾರಿಯಾಯಿತು. ಸಮವಸ್ತ್ರಗಳನ್ನೂ ತರತರದ ವಿನ್ಯಾಸಗಳಲ್ಲಿ ಹೊಲಿಸಿ ಧರಿಸಲಾರಂಭಿಸಿದರು. ಇದರ ಮುಂದುವರಿದ ಭಾಗವಾಗಿ ಸಮವಸ್ತ್ರವನ್ನು ಇಂತಹುದೇ ಮಾದರಿಯಲ್ಲಿ ಹೊಲಿಯಬೇಕು ಎಂದು ನಿಯಮ ತರಬೇಕಾಯಿತು.

ವಿದ್ಯಾರ್ಜನೆಗೆ ಹೋಗುವಾಗ ತಾವು ಧರಿಸುವ ಬಟ್ಟೆ ಹೇಗಿರಬೇಕು ಎಂದು ತಿಳಿಯದ ಈ ಯುವಜನಾಂಗವು ಶಿಕ್ಷಣವನ್ನು ಪಡೆಯುವ ಉದ್ದೇಶವಾದರೂ ಏನಿರಬಹುದು ಎಂಬ ಪ್ರಶ್ನೆ ಕಾಡುತ್ತದೆ. ಈಗಲೂ ಸಮವಸ್ತ್ರ ಧರಿಸಿ, ಸಿಂಗರಿಸಿಕೊಂಡು ಹೋಗುವ ಕಾಲೇಜು ಹುಡುಗ-ಹುಡುಗಿಯರು, ಚಿತ್ರವಿಚಿತ್ರವಾಗಿ ಕೂದಲು ಕತ್ತರಿಸಿ, ಕೈಗೆ-ಕುತ್ತಿಗೆಗೆ ದಾರಗಳನ್ನು ಬಿಗಿದುಕೊಂಡು ಹುಡುಗರು ಕಾಣಸಿಗುತ್ತಾರೆ. ಕಾಲೇಜು ಜೀವನದ ಉದ್ದೇಶ ಕಲಿಕೆ ಮಾತ್ರವಿದ್ದಾಗ, ಇಂತಹ ಆಕರ್ಷಣೆಗಳು ಖಂಡಿತಾ ಎದುರಾಗುವುದಿಲ್ಲ. ಸೌಜನ್ಯತೆಯ ಎಲ್ಲೆ ಮೀರದಂತೆ ನಮ್ಮ ವಸ್ತ್ರವಿನ್ಯಾಸ ಇದ್ದರೆ ಚೆನ್ನ. ಮಾತೇ ಇದೆಯಲ್ಲ, “Be Roman when you are in Rome’ ಅಂತ.

ಮದುವೆ ಮುಂತಾದ ಸಮಾರಂಭಗಳಿಗೆ ಹೋಗುವಾಗ, ಸಾಮಾನ್ಯವಾಗಿ ಸಾಂಪ್ರದಾಯಿಕವಾದ ವಸ್ತ್ರ ಧರಿಸುವುದು ವಾಡಿಕೆ. ಸಂಜೆ ವೇಳೆ ಬೀಚ್‌ನಲ್ಲಿ ಅಡ್ಡಾಡಲು ಹೋಗುವಾಗ ಸಡಿಲವಾದ, ಉಡುಪು ಧರಿಸುವುದು ಸಾಮಾನ್ಯ. ಮನೆಯಲ್ಲಿರುವಾಗ, ಹೆಚ್ಚು ಜರತಾರಿ ಅಂಚುಗಳಿಲ್ಲದ, ಕೆಲಸ ಮಾಡಲು ಅನುಕೂಲವಾಗುವ ಹಾಗೆ ಹತ್ತಿಯ ಬಟ್ಟೆಗಳನ್ನು ಧರಿಸುವುದು ಸರಿ ತಾನೆ? ಕಚೇರಿ ಕೆಲಸಗಳಿಗೆ ಹೋಗುವಾಗ “ಫಾರ್ಮಲ್ಸ್‌’ ಧರಿಸಿಯೇ ಬರಬೇಕು ಎಂಬ ನಿರೀಕ್ಷೆ ಇರುತ್ತದೆ. ಹಾಗಿದ್ದರೆ, ದೇವಸ್ಥಾನಗಳಿಗೆ ಹೋಗುವಾಗ, ನಿರ್ದಿಷ್ಟ ಉಡುಪು ಧರಿಸುವುದು ಅಪೇಕ್ಷಿತ ಅಲ್ಲವೆ.

ದೇವಸ್ಥಾನಗಳೆಂದರೆ ಪವಿತ್ರ ಪೂಜಾಸ್ಥಳಗಳು. ಅಲ್ಲಿಯ ವಾತಾವರಣ, ಇತರ ಪ್ರದೇಶಗಳ ವಾತಾವರಣಕ್ಕಿಂತ ಭಿನ್ನವಾಗಿರುತ್ತದೆ. ಭಕ್ತಿಯಿಂದ ದೇವಸ್ಥಾನಕ್ಕೆ ಬರುವವರಿಗೆ ಸಾಂಪ್ರದಾಯಿಕ ಉಡುಪುಗಳೇ ಸುಂದರವಾಗಿ ಕಾಣಿಸುತ್ತವೆ. ಈ ಇಂಗಿತಜ್ಞತೆ ಇಲ್ಲದೇ ಭಕ್ತರು ದೇವಸ್ಥಾನಕ್ಕೆ ಬಂದಾಗ, ಸಮಸ್ಯೆಗಳು ಸೃಷ್ಟಿಯಾಗುತ್ತವೆ. ವಸ್ತ್ರ ಸಂಹಿತೆ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ.

ಮೊನ್ನೆ ಶಾಲೆಯೊಂದರಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಆರೋಗ್ಯಕರ ಜೀವನ ಪದ್ಧತಿಯ ಬಗ್ಗೆ ವಿಚಾರಧಾರೆಯನ್ನು ಏರ್ಪಡಿಸಿದ್ದರು. ಅಲ್ಲಿ ಆ ವ್ಯಕ್ತಿ ಮಕ್ಕಳಿಗೆ ಪ್ರತಿದಿನ ಮೇಕಪ್‌, ಲಿಪ್‌ಸ್ಟಿಕ್‌ ಬಳಸುವುದರಿಂದ ಚರ್ಮಕ್ಕಾಗುವ ಹಾನಿಯ ಬಗ್ಗೆ ವಿವರಿಸುತ್ತಿದ್ದರು. ಈ ರೀತಿಯ ಕಾಳಜಿಯ ಅರಿವು ಶಿಕ್ಷಕ ವರ್ಗಕ್ಕೂ ಇದ್ದಾಗ, ಮಕ್ಕಳಿಗೆ ಅದನ್ನು ತಿಳಿ ಹೇಳುವುದು ಸುಲಭವಾಗುತ್ತದೆ. ಇತ್ತೀಚೆಗೆ ಪ್ರತಿಯೊಂದು ನಿಯಮಗಳನ್ನು ಜಾರಿ ಮಾಡುವಾಗಲೂ, ಜನರು “ನಮ್ಮಿಷ್ಟ, ಹೇಳುವುದಕ್ಕೆ ನೀವು ಯಾರು’ ಎಂಬ ಪ್ರಶ್ನೆಯ ಬಾಣವನ್ನು ಎಸೆದುಬಿಡುತ್ತಾರೆ. ಆದರೆ, ವೈಯಕ್ತಿಕ ಜೀವನವು ಸಾಮಾಜಿಕ ಜೀವನದ ಆಧಾರದಲ್ಲಿಯೇ ಸಾಗುತ್ತದೆ. “ನನ್ನ ಮಗು, ನನ್ನ ಇಷ್ಟ’ ಎಂಬ ಕಾರಣಕ್ಕೆ , ಮಕ್ಕಳು ಕಳ್ಳತನ ಮಾಡಿದಾಗ ತಿದ್ದದೇ ಇರುವುದು ಸಾಧ್ಯವೇ? ಹಾಗಾಗಿ, ವೈಯಕ್ತಿಕ ವಿಚಾರಗಳು ಒಟ್ಟು ಸಾಮಾಜಿಕ ಏಳಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಅವುಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗಿರುತ್ತವೆ.

ಆದ್ದರಿಂದ ವಿರೋಧಕ್ಕಾಗಿಯೇ ವಿರೋಧ ಮಾಡುವುದರಿಂದ ಯಾರಿಗೂ ಏನೂ ಪ್ರಯೋಜನ ಆಗದು. ಎಲ್ಲದರಿಂದಲೂ ಒಳ್ಳೆಯ ಅಂಶಗಳನ್ನು ಸ್ವೀಕರಿಸುವ ಸಕಾರಾತ್ಮಕ ಮನೋಭಾವ ಇರಲಿ.

ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ
ಹಿತವಿರಲಿ ವಚನದಲಿ ಋತವ ಬಿಡದಿರಲಿ
ಮಿತವಿರಲಿ ಮನಸೀನುದ್ವೇಗದಲಿ ಭೋಗದಲಿ
ಅತಿಬೇಡವೆಲ್ಲಿಯೂ -ಮಂಕುತಿಮ್ಮ
ಎಂಬ ಡಿ.ವಿ.ಜಿ.ಯವರ ಕಗ್ಗದ ಸಾಲುಗಳು ಜೀವನದ ದಾರಿದೀಪವಾಗಲಿ.

ಶಾಂತಲಾ ಎನ್‌. ಹೆಗ್ಡೆ

ಟಾಪ್ ನ್ಯೂಸ್

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

10PSI

ಪಿಎಸ್‌ಐ ನೇಮಕಾತಿ: ದೈಹಿಕ ಪರೀಕ್ಷೆಯಲ್ಲೂ ಅಕ್ರಮ?

cancer

ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

parameshwar

ದಲಿತ ಸಿಎಂ ವಿಚಾರ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದ ಪರಮೇಶ್ವರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

ನರಚನಹಳ್ಳಿಯಲ್ಲಿ ಭಾರೀ ಮಳೆ: ಬ್ಯಾರನ್‌ ಗೋಡೆ ಕುಸಿತ

ನರಚನಹಳ್ಳಿಯಲ್ಲಿ ಭಾರೀ ಮಳೆ: ಬ್ಯಾರನ್‌ ಗೋಡೆ ಕುಸಿತ

11checkdam

ಚೆಕ್‌ ಡ್ಯಾಂ ನಿರ್ಮಾಣ ಹಂತದಲ್ಲೇ ಕಳಪೆ!

16

ಕಾರ್ಮಿಕರು ಆಯುಷ್ಮಾನ್ ಕಾರ್ಡ್‌ ಪಡೆಯಿರಿ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.