ನಿಮ್ಮ ಮೊಬೈಲ್ ನ ಕೋವಿಡ್ ಕಾಲರ್ ಟೋನ್ ಕಿರಿ, ಕಿರಿ ತಪ್ಪಿಸಬೇಕೇ… ಇಲ್ಲಿದೆ ಮಾಹಿತಿ.
ಕಾಲರ್ ಟೋನ್ ಕಿರಿ, ಕಿರಿ ತಪ್ಪಿಸುವ ಅವಕಾಶ ಲಭ್ಯವಿದೆ.
Team Udayavani, Dec 2, 2020, 6:43 PM IST
ನವದೆಹಲಿ: ಕೋವಿಡ್ ಆರಂಭವಾದ ಬಳಿಕ ಕಳೆದ 7-8 ತಿಂಗಳಿನಿಂದ ಎಲ್ಲಾ ಕರೆಗಳಲ್ಲೂ ಕೋವಿಡ್ ಜಾಗೃತಿ ಕಾಲರ್ ಟೋನ್ ಅನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಪ್ರತೀ ಕರೆಯಲ್ಲೂ ಈ ಸಾಲುಗಳನ್ನು ಕೇಳಿದ ಕೆಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಗ್ರಾಹಕರು ಬಯಸಿದರೆ ತಮ್ಮ ಕಾಲರ್ ಟೋನ್ ಕಿರಿ, ಕಿರಿ ತಪ್ಪಿಸುವ ಅವಕಾಶ ಲಭ್ಯವಿದೆ.
ವಿಶ್ವದಾದ್ಯಂತ ಕೋವಿಡ್ ಮಹಾಮಾರಿ ಆರಂಭಗೊಂಡ ನಂತರ ಎಲ್ಲಾ ಪೋನ್ ಕಾಲ್ ನಲ್ಲೂ ಕೊವಿಡ್ ಹರಡುವುದನ್ನು ತಡೆಯಬಹುದು. ಸದಾ ಮುಖಗವಸು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂಬಿತ್ಯಾದಿ ಸಾಲುಗಳು ಕೇಳಿ ಬರುತ್ತಿದ್ದವು.
ಇದನ್ನೂ ಓದಿ:ಫ್ಲಿಪ್ ಕಾರ್ಟ್ ಫ್ಲಿಪ್ ಸ್ಟಾರ್ಟ್ ಡೇಸ್ ಸೇಲ್ : ಗ್ರಾಹಕರಿಗೆ ಭರ್ಜರಿ ಆಫರ್
ಆರಂಭದಲ್ಲಿ ಬಿ ಎಸ್ ಎನ್ ಎಲ್, ಏರ್ ಟೇಲ್ , ಜಿಯೋ, ವೋಡಾಪೋನ್ ತನ್ನ ಕಾಲರ್ ಟೋನ್ ಗಳಲ್ಲಿ ಕೆಮ್ಮುವಿಕೆಯ ಧ್ವನಿ ಮುದ್ರಣವು ಕೇಳುತ್ತಿತ್ತು. ನಂತರ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಮಾತುಗಳು ಕೇಳಿ ಬರುತ್ತಿತ್ತು.
ಏರ್ ಟೇಲ್ ಗ್ರಾಹಕರು ಕೋವಿಡ್ ಕಾಲರ್ ಟೋನ್ ಅನ್ನು ತಡೆಯುವುದು ಹೇಗೆ?
ಏರ್ ಟೇಲ್ ಗ್ರಾಹಕರು ತಮ್ಮ ನಂಬರ್ ನಿಂದ *642*224# ಮತ್ತು 1 ನ್ನು ಒತ್ತಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.
ವೋಡಾಪೋನ್ ಗ್ರಾಹಕರು ಕೋವಿಡ್ ಕಾಲರ್ ಟೋನ್ ಅನ್ನು ತಡೆಯುವುದು ಹೇಗೆ?
ನಿಮ್ಮ ಸಂಖ್ಯೆ ಯಿಂದ “CANCT” ಎಂದು ನಮೂದಿಸಿ 144 ಸಂಖ್ಯೆಗೆ ಕಳುಹಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.
ಜಿಯೋ ಗ್ರಾಹಕರು ಕೋವಿಡ್ ಕಾಲರ್ ಟೋನ್ ಅನ್ನು ತಡೆಯುವುದು ಹೇಗೆ?
ನಿಮ್ಮ ಜಿಯೋ ಸಂಖ್ಯೆಯಿಂದ “STOP”ಎಂಬುದಾಗಿ ನಮೂದಿಸಿ 155223 ಗೆ ಸಂದೇಶ ಕಳುಹಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.
ಬಿ ಎಸ್ ಎನ್ ಎಲ್ ಗ್ರಾಹಕರು ಕೋವಿಡ್ ಕಾಲರ್ ಟೋನ್ ಅನ್ನು ತಡೆಯುವುದು ಹೇಗೆ?
ನೀವು ನಿಮ್ಮ ಬಿ ಎಸ್ ಎನ್ ಎಲ್ ಸಂಖ್ಯೆಯಿಂದ “UNSUB” ಎಂದು ನಮೂದಿಸಿ 56700 ಅಥವಾ 56799 ಗೆ ಕಳುಹಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.
ಈ ಕಾಲರ್ ಟೋನ್ ಗಳಿಗೆ ಸಂಬಂಧಿಸಿದಂತೆ ಹಲವು ಗ್ರಾಹಕರು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದರು. ಮತ್ತು ಇದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂದು ವರದಿಯಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444