Udayavni Special

Flipkart, Amazon Diwali Sale: ಯಾವೆಲ್ಲ ಫೋನ್ ಗಳಿಗಿವೆ ಡಿಸ್ಕೌಂಟ್? ಇಲ್ಲಿದೆ ಮಾಹಿತಿ


Team Udayavani, Oct 31, 2020, 7:58 PM IST

IPHONE

ನವದೆಹಲಿ: ಫ್ಲಿಫ್ ಕಾರ್ಟ್ ಬಿಗ್ ದಿವಾಲಿ ಸೇಲ್ ಹಾಗೂ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗ್ರಾಹಕರಿಗೆ ಈಗಾಗಲೇ ಅತೀ ದೊಡ್ಡ ಪ್ರಮಾಣದಲ್ಲಿ ಡಿಸ್ಕೌಂಟ್ ಮತ್ತು ಆಫರ್ ಗಳನ್ನು ಒದಗಿಸಿಕೊಟ್ಟಿದೆ. ಸ್ಮಾರ್ಟ್ ಫೋನ್ ಗಳು ಕೂಡ ಎಂದಿನ ದರಕ್ಕಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತಿದೆ.

ನೀವು ಫ್ಲಿಫ್ ಕಾರ್ಟ್ ಮತ್ತು ಅಮೆಜಾನ್ ಏರ್ಪಡಿಸಿದ ‘ಬಿಗ್ ಸೇಲ್’ ಗಳನ್ನು ಮಿಸ್ ಮಾಡಿಕೊಂಡಿದ್ದರೇ, ಈಗಲೂ ಕೂಡ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ಪಡೆಯುವ ಅವಕಾಶ ನಿಮಗಿದೆ. ಹೀಗಾಗಿ ಅಮೆಜಾನ್ ಹಾಗೂ ಫ್ಲಿಫ್ ಕಾರ್ಟ್ ನ ‘ದಿವಾಲಿ ಸೇಲ್’ ನಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನ್ ಗಳು ಕಡಿಮೆ ದರದಲ್ಲಿ ಮಾರಟಕ್ಕಿವೆ ಎಂಬ ಮಾಹಿತಿ ಇಲ್ಲಿದೆ.

ಈ ಕೆಳಗೆ ನೀಡಿರುವ ಎಲ್ಲಾ ಸ್ಮಾರ್ಟ್ ಫೋನ್ ಗಳಿಗೂ ಕೂಡ ಡಿಸ್ಕೌಂಟ್ ಲಭ್ಯವಿದೆ. ಮಾತ್ರವಲ್ಲದೆ ಎಕ್ಸ್ ಚೇಂಜ್ ಆಫರ್, ನೋ ಕಾಸ್ಟ್ ಇಎಂಐ, ಮತ್ತು ಇತರ ಸೇವೆಗಳು ಕೂಡ ಸಿಗಲಿವೆ.

ಐಫೋನ್ 11 ಪ್ರೋ: ಈ ಸ್ಮಾರ್ಟ್ ಫೋನ್ 79,999 ರೂ. ಗಳಿಗೆ ದೊರಕುತ್ತಿದ್ದು, ಇದರ ಮೂಲ ಬೆಲೆ 1,06,600 ರೂ.

ಐಫೋನ್-XR:  6.1 ಇಂಚಿನ ರೆಟಿನಾ ಡಿಸ್ ಪ್ಲೇ ಹೊಂದಿರುವ ಈ ಪೋನ್ ನ ಮೂಲ ಬೆಲೆ 52,500 ರೂ.  ಇದೀಗ ಬಿಗ್ ದಿವಾಲಿ ಸೇಲ್ ನಲ್ಲಿ 39,999 ರೂ ಗಳಿಗೆ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಷಿ ನೊಟ್ 10 ಪ್ಲಸ್: 85,000 ಮೂಲ ಬೆಲೆ ಹೊಂದಿರುವ ಈ ಸ್ಮಾರ್ಟ್ ಪೋನ್ 59,999ಕ್ಕೆ ದೊರಕುತ್ತಿದೆ. ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು ಇದರೊಂದಿಗೆ Nest Mini & MI smart Speaker ಕೂಡ ಡಿಸ್ಕೌಂಟ್ ಬೆಲೆಯಲ್ಲಿ ದೊರಕುತ್ತಿದೆ.

ಸ್ಯಾಮ್ ಸಂಗ್ ಗ್ಯಾಲಕ್ಷಿ ಎಸ್20 ಪ್ಲಸ್: 83 ಸಾವಿರ ಮೂಲ ಬೆಲೆ ಹೊಂದಿರುವ ಈ ಸ್ಮಾರ್ಟ್ ಫೋನ್, ಡಿಸ್ಕೌಂಟ್ ರೂಪದಲ್ಲಿ 49,999ರೂ ಗಳಿಗೆ ಮಾರಟಕ್ಕಿದೆ. ಸ್ಯಾಮ್ ಸಂಗ್ ನ ಇತ್ತೀಚಿನ ಫ್ಲ್ಯಾಗ್ ಶಿಫ್ ಸ್ಮಾರ್ಟ್ ಫೋನ್ ಗಳಲ್ಲಿ  ಅತ್ಯಂತ ಕಡಿಮೆ ದರವನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ.

ಪೋಕೋ ಎಂ2 ಪ್ರೋ: 6.67 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಡಿಸ್ ಪ್ಲೇ ಹಾಗೂ 48 ಎಂಪಿ ಕ್ಯಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಪೋಕೋ ಎಂ2 ಪ್ರೋ 12,999 ರೂಗಳಿಗೆ ದೊರೆಯಲಿದೆ. ಇದರ ಮೂಲ ಬೆಲೆ 16,999 ರೂ. ಗಳು.

ರೆಡ್ಮಿ ನೋಟ್ 8: ಇದು ಕೂಡ ಅತ್ಯುತ್ತಮ ಸ್ಮಾರ್ಟ್ ಫೋನ್ ಆಗಿದ್ದು ದಿವಾಲಿ ಸೇಲ್ ನಲ್ಲಿ 11,499ಕ್ಕೆ ಲಭ್ಯವಿದೆ. ಇದರ ಮೂಲ ಬೆಲೆ 12,999 ರೂ. 48 ಎಂಪಿ ಕ್ಯಾಮೆರಾ, 4000 mAh ಬ್ಯಾಟರಿ ಸಾಮರ್ಥ್ಯ ಹಾಗೂ 512 ಜಿಬಿ ವರೆಗೂ ವಿಸ್ತರಿಸಬಹುದಾದ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.

ಇನ್ನು Moto G9 ಸ್ಮಾರ್ಟ್ ಫೋನ್ 9999 (ಮೂಲ ಬೆಲೆ 14,999) ರೂ. ಗಳಿಗೆ ದೊರಕುತ್ತಿದೆ. ರಿಯಲ್ ಮಿ C11 ಬೆಲೆ 6,499 ರೂ. ಗಳು (ಮೂಲ ಬೆಲೆ 8,999), ರಿಯಲ್ ಮಿ X3 Super Zoom 24,999ಕ್ಕೆ (29,999 ರೂ.) ಮಾರಟಕ್ಕಿಡಲಾಗಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಐಫೋನ್-11 49,999 ರೂ.ಗಳಿಗೆ( ಮೂಲ ಬೆಲೆ 64,900 ರೂ.)ಲಭ್ಯವಿದೆ.  ಒನ್ ಪ್ಲಸ್ 8 ಸ್ಮಾರ್ಟ್ ಪೋನ್ 39,999 ರೂಗಳಿಗೆ ದೊರಕಿದರೇ, ರೆಡ್ಮಿ ನೋಟ್ 8 ಪ್ರೋ ಕೇವಲ 12,999ಕ್ಕೆ ಲಭ್ಯವಿದೆ.  ಸ್ಯಾಮ್ ಸಂಗ್ ಗ್ಯಾಲಕ್ಷಿ ಎಂ51 ಕೂಡ ಡಿಸ್ಕೌಂಟ್ ಬೆಲೆಯಲ್ಲಿ ದೊರಕುತ್ತಿದ್ದು 22,499 ರೂಗಳನ್ನು ನಿಗದಿಪಡಿಸಲಾಗಿದೆ. ಇನ್ನು 20,990 ಮೂಲ ಬೆಲೆ ಹೊಂದಿರುವ  ಒಪ್ಪೋ A52 ಸ್ಮಾರ್ಟ್ ಫೋನ್ 15,999 ರೂ. ಗಳಿಗೆ ದೊರಕುತ್ತಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್

ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್

ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ ಸ್ಥಳೀಯ ಸಮರ

ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಮರ

fever.jpg

ಮುಖದ ತೇವ ಕಾಪಾಡಿ…ಫೀವರ್‌ ಆ್ಯಂಡ್‌ ಲವ್ಲಿ

ರಾಜಕೀಯ ಒತ್ತಡದಿಂದ ಬಿಎಸ್ ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ

ರಾಜಕೀಯ ಒತ್ತಡದಿಂದ ಬಿಎಸ್ ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ!

sd-31

ಉತ್ತಮ ಆರೋಗ್ಯಕ್ಕೆ ಮೆಂತೆ ಸೇವನೆ

ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಗೆ ರಾಜ್ಯಸಭಾ ಟಿಕೆಟ್

ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಗೆ ರಾಜ್ಯಸಭಾ ಟಿಕೆಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

redmi note 9

Redmi Note-9 ಸರಣಿಯ 3 ಹೊಸ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

whatsapp

ವಾಟ್ಸಾಪ್ OTP Scam 2020: ಮೈಮರೆತರೇ ನಿಮ್ಮ ಪ್ರತಿಯೊಂದು ಮಾಹಿತಿ ಹ್ಯಾಕರ್ ಗಳ ಪಾಲು !

E-SIM-CARD

ಇ-ಸಿಮ್ ಕಾರ್ಡ್: ಏನಿದು ? ಇದರ ಬಳಕೆ ಮತ್ತು ವಿಶೇಷತೆಗಳ ಮಾಹಿತಿ ಇಲ್ಲಿದೆ

micromax

ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮೈಕ್ರೋಮ್ಯಾಕ್ಸ್: ನೋಟ್-1 Sold Out, 1B ಇಂದು ಬಿಡುಗಡೆ

G pay

Google Pay ಪಿ-ಟು-ಪಿ ಸೇವೆಗೆ ಶುಲ್ಕ! ಗೂಗಲ್‌ ಪೇ ಹೇಳಿದ್ದೇನು? ಯಾರಿಗೆ ಶುಲ್ಕ ಅನ್ವಯ?

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್

ಕಿವೀಸ್ ಪ್ರವಾಸದಲ್ಲಿರುವ ಪಾಕ್ ತಂಡದ ಏಳು ಸದಸ್ಯರಿಗೆ ಕೋವಿಡ್ ಸೋಂಕು: ಛೀಮಾರಿ ಹಾಕಿದ ಕಿವೀಸ್

ಗ್ರಾಮೀಣ ಜನರಿಗೆ ಪಿಕಾರ್ಡ್‌ ಬ್ಯಾಂಕ್‌ನಿಂದ ಸಾಲ

ಗ್ರಾಮೀಣ ಜನರಿಗೆ ಪಿಕಾರ್ಡ್‌ ಬ್ಯಾಂಕ್‌ನಿಂದ ಸಾಲ

ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಸವಾಲು

ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಸವಾಲು

ಮೆಟ್ರೋ: ಪರೀಕ್ಷೆ ಮುಗೀತು..ಸವಾಲು ಬಂತು?

ಮೆಟ್ರೋ: ಪರೀಕ್ಷೆ ಮುಗೀತು..ಸವಾಲು ಬಂತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.