ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ We Transfer ನಿಷೇಧಿಸಿದ ಭಾರತ ಸರ್ಕಾರ

Team Udayavani, May 31, 2020, 8:51 AM IST

wetransfer

ನವದೆಹಲಿ: ಜನಪ್ರಿಯ ಫೈಲ್ ಶೇರಿಂಗ್ ವೆಬ್ ಸೈಟ್ ವಿ-ಟ್ರಾನ್ಸ್ ಫರ್ ಅನ್ನು  ಭಾರತೀಯ ದೂರ ಸಂಪರ್ಕ ಇಲಾಖೆ (ಡಿಓಟಿ) ನಿಷೇಧಿಸಿದೆ.  ರಾಷ್ಟ್ರೀಯ ಭದ್ರತೆ  ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ನೀಡಿ ನಿರ್ಬಂಧ ಹೇರಲಾಗಿದೆ ಇಂಡಿಯಾ ಟುಡೇ ವರದಿ ತಿಳಿಸಿದೆ.

ದೇಶಾದ್ಯಂತ 3 ಯುಆರ್ ಎಲ್ ಗಳನ್ನು ನಿಷೇಧಿಸುವಂತೆ ಡಿಒಟಿ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.  2 ಯುಆರ್ ಎಲ್ ಗಳಿಗೆ ಕೊಂಚ ವಿನಾಯಿತಿ ಇದ್ದು ವಿ-ಟ್ರಾನ್ಸ್ ಫರ್ ಯುಆರ್ ಎಲ್ ಅನ್ನು ಸಂಪೂರ್ಣ ನಿಷೇಧಿಸಿ ಎಂದು ಈ ನೋಟಿಸ್ ನಲ್ಲಿ ಆದೇಶ ನೀಡಲಾಗಿದೆ.

WeTransfer ಎಂಬುದು ಜನಪ್ರಿಯ ಫೈಲ್ ಹಂಚಿಕೆ ವೆಬ್‌ಸೈಟ್ ಆಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ.  ಕೋವಿಡ್- 19 ಲಾಕ್‌ಡೌನ್‌ ನಿಂದಾಗಿ ದೇಶದಲ್ಲಿ ಸಾವಿರಾರು ಮಂದಿ ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ಫೈಲ್ ಶೇರಿಂಗ್ ಮಾಡಲು ವಿಟ್ರಾನ್ಸ್‌ಫರ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲಸಕ್ಕೆ ಅಗತ್ಯವಾಗಿ ಕಚೇರಿ ಫೈಲು ಕಳುಹಿಸಲು ಮತ್ತು ಇತರ ಅಗತ್ಯಕ್ಕೆ ಕೂಡ ಲಾಕ್‌ಡೌನ್ ಅವಧಿಯಲ್ಲಿ ವಿಟ್ರಾನ್ಸ್‌ಫರ್ ಸೇವೆಯನ್ನು ಉಪಯೋಗಿಸುತ್ತಿದ್ದರು. ಈ ಕಾರಣದಿಂದ ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತ್ತು.

We Transfer ನಲ್ಲಿ ಪ್ರತ್ಯೇಕ ಖಾತೆಯನ್ನು ರಚಿಸುವ ಅಗತ್ಯವಿರಲಿಲ್ಲ.  ನೇರವಾಗಿ ಸ್ವೀಕರಿಸುವವರ ಇಮೇಲ್‌ಗೆ 2GB ವರೆಗೆ ಫೈಲ್‌ಗಳನ್ನು ಕಳುಹಿಸಲು ಅವಕಾಶವಿತ್ತು.  ಆದರೆ ವಿ-ಟ್ರಾನ್ಸ್‌ಫರ್ ಫೈಲ್ ಶೇರಿಂಗ್ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅದರಲ್ಲಿ ಸೂಕ್ಷ್ಮ ಮಾಹಿತಿಯನ್ನು ಕಳುಹಿಸಿದರೆ ಸಮಸ್ಯೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವಾಲಯ ಅದರ ಸೇವೆ ಉಪಯೋಗಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಆದರೂ ಏಕೆ ನಿಷೇಧಿಸಲಾಗಿದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

WeTransfer ನೆದರ್ಲೆಂಡ್‌ನ ಅಮ್‌ಸ್ಟರ್‌ ಡಾಂನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರಲ್ಲಿ ಸಾಮಾನ್ಯ ಸೇವೆ ಉಚಿತವಾಗಿದ್ದು, ಹೆಚ್ಚಿನ ಗಾತ್ರದ ಫೈಲ್ ಕಳುಹಿಸುವ ಪ್ರೀಮಿಯಂ ಸೇವೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಉಚಿತ ಸೇವೆಗಾದರೆ 2 ಜಿಬಿ ಮಿತಿ, ಅದಕ್ಕಿಂತ ಹೆಚ್ಚಿನ ಫೈಲ್ ಗಾತ್ರವಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ, 20 ಜಿಬಿ ವರೆಗಿನ ಫೈಲ್ ಅನ್ನು ವಿ-ಟ್ರಾನ್ಸ್‌ಫರ್ ಬಳಸಿ ಕಳುಹಿಸಲು ಅವಕಾಶವಿತ್ತು.

ಭಾರತದಲ್ಲಿ URL ನಿಷೇಧಗಳು ಹೊಸತಲ್ಲ. ಭಾರತದಲ್ಲಿ ಅನೇಕ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ವಾಸ್ತವವಾಗಿ, 2019ರ ಲೋಕಸಭಾ ಅಧಿವೇಶನವೊಂದರಲ್ಲಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಭಾರತದಲ್ಲಿ ನಿರ್ಬಂಧಿಸಲಾದ ಯುಆರ್‌ ಎಲ್‌ ಗಳ ಸಂಖ್ಯೆಯಲ್ಲಿ ಶೇಕಡಾ 442 ರಷ್ಟು ಏರಿಕೆಯಾಗಿದೆ ಎಂದು ತೋರಿಸಿದೆ. ಈ URL ಗಳು ಮಾಲ್ವೇರ್ ಅಥವಾ ಯಾವುದೇ ರೀತಿಯ ಅಶ್ಲೀಲತೆಯನ್ನು ಪ್ರೋತ್ಸಾಹಿಸುವುದು ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವವುಗಳಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಟಾಪ್ ನ್ಯೂಸ್

ಪಂಜಾಬ್ ಸಿಎಂ ಭಗವಂತ್ ಮಾನ್ ಪುತ್ರಿಗೆ ಕೊಲೆ ಬೆದರಿಕೆ

ಪಂಜಾಬ್ ಸಿಎಂ ಭಗವಂತ್ ಮಾನ್ ಪುತ್ರಿಗೆ ಕೊಲೆ ಬೆದರಿಕೆ

ರಷ್ಯಾ ವಜ್ರ ವ್ಯಾಪಾರಕ್ಕೆ ಜಿ7 ರಾಷ್ಟ್ರಗಳ ಪ್ರಹಾರ?

ರಷ್ಯಾ ವಜ್ರ ವ್ಯಾಪಾರಕ್ಕೆ ಜಿ7 ರಾಷ್ಟ್ರಗಳ ಪ್ರಹಾರ?

ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!

ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

vote

ಉಡುಪಿ ಜಿಲ್ಲೆಯಲ್ಲಿ 206 ಶತಾಯುಷಿ ಮತದಾರರು

hazelwood

ಏಳು ಪಂದ್ಯಗಳಿಗೆ ಹೇಝಲ್‌ವುಡ್‌ ಇಲ್ಲ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

MOONಚಂದ್ರನಲ್ಲೂ ನೋಕಿಯಾ 4ಜಿ ನೆಟ್ ವರ್ಕ್ !

ಚಂದ್ರನಲ್ಲೂ ನೋಕಿಯಾ 4ಜಿ ನೆಟ್ ವರ್ಕ್ !

ಸ್ಕೋಡಾ ಕುಶಕ್‌ ಒನೆಕ್ಸ್‌; ಇದು ಲಿಮಿಟೆಡ್‌ ಎಡಿಷನ್‌ನ ಕಾರು

ಸ್ಕೋಡಾ ಕುಶಕ್‌ ಒನೆಕ್ಸ್‌; ಇದು ಲಿಮಿಟೆಡ್‌ ಎಡಿಷನ್‌ನ ಕಾರು

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

Accenture: ಐಟಿ ವಲಯದ ಬೃಹತ್ ಅಕ್ಸೆಂಜರ್ ಕಂಪನಿಯ 19,000 ಉದ್ಯೋಗಿಗಳ ವಜಾ

Accenture: ಐಟಿ ವಲಯದ ಬೃಹತ್ ಅಕ್ಸೆಂಜರ್ ಕಂಪನಿಯ 19,000 ಉದ್ಯೋಗಿಗಳ ವಜಾ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ