ಎಚ್‍ಪಿಯಿಂದ ಪ್ರೊಬುಕ್‍ 635 ಏರೋ ಜಿ7 ಲ್ಯಾಪ್‍ಟಾಪ್‍ ಬಿಡುಗಡೆ


Team Udayavani, Jan 1, 2021, 8:00 PM IST

HP launches ProBook 635 Aero G7 laptop

ಬೆಂಗಳೂರು: ಲ್ಯಾಪ್‍ ಟಾಪ್‍ ಬಳಕೆದಾರರ ವಿಶ್ವಾಸಾರ್ಹ ಬ್ರಾಂಡ್‍ ಆದ ಎಚ್ ಪಿ ಭಾರತದಲ್ಲಿ ಹೊಸ ಶ್ರೇಣಿಯ ಪ್ರೋಬುಕ್ ಲ್ಯಾಪ್‍ಟಾಪ್‍ ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಲ್ಯಾಪ್‍ಟಾಪ್‍ ಅನ್ನು ಬ್ಯುಸಿನೆಸ್‍ದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಈ ಹೊಸ ಮಾಡೆಲ್‍ನ ಹೆಸರು, ಎಚ್ ಪಿ ಪ್ರೋಬುಕ್ 635 ಏರೋ ಜಿ7. ಎಎಂಡಿ ಪ್ರೊಸೆಸರ್‍ ಆಧಾರಿತ ಅತ್ಯಂತ ಹಗುರವಾದ ಬ್ಯುಸಿನೆಸ್ ನೋಟ್ ಬುಕ್ ಇದಾಗಿದೆ. ಇದರ ತೂಕ 1 kg ಗಿಂತ ಕಡಿಮೆಯಿದೆ. AMD Ryzen 4000 Series Mobile Processors ಅನ್ನು ಇದಕ್ಕೆ ಬಳಸಲಾಗಿದೆ.

ವಿಂಡೋಸ್‍ 10 ಪ್ರೊಫೆಷನಲ್‍ ಆವೃತ್ತಿ ಹೊಂದಿದೆ. ಎಚ್ ಪಿ ಏಷ್ಯಾ, ಎಸ್ಎಂಬಿ ಔಟ್ ಲುಕ್ ವರದಿ 2020 ರ ಪ್ರಕಾರ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (ಎಸ್ಎಂಬಿಗಳು) ಕೋವಿಡ್ ಪರಿಣಾಮದಿಂದ ತಮ್ಮ ಬಹುತೇಕ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ಡಿಜಿಟಲ್ ಗೆ ಪರಿವರ್ತನೆ ಮಾಡಿಕೊಂಡಿವೆ ಮತ್ತು ಕೋವಿಡ್ ನಂತರ ವ್ಯವಹಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತಿವೆ. ಸಮೀಕ್ಷೆ ನಡೆಸಿದ ನಾಲ್ಕನೇ ಮೂರರಷ್ಟು ಅಂದರೆ ಶೇ.75 ರಷ್ಟು ವ್ಯವಹಾರಸ್ಥರು ತಮ್ಮ ವ್ಯಾಪಾರ ಪ್ರಗತಿಗೆ ಡಿಜಿಟಲೀಕರಣ ಅತ್ಯಂತ ಅಗತ್ಯ ಅಥವಾ ಪ್ರಮುಖವಾಗಿದೆ ಎಂದು ಅರಿತಿದ್ದಾರೆ. ದೇಶದ ಆರ್ಥಿಕತೆಯ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಎಸ್ಎಂಬಿಗಳು, ಉದ್ಯಮಿಗಳು ಮತ್ತು ಮೊಬೈಲ್ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ಎಚ್ ಪಿ ಪ್ರೋ ಬುಕ್ 635 ಏರೋ ಜಿ7 ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಎಲ್ಲಿ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯ
ಇದು 13.3 ಇಂಚಿನ ಫುಲ್‍ ಎಚ್‍ಡಿ ಡಿಸ್‍ಪ್ಲೇ ಹೊಂದಿದೆ. ಪ್ರೋಬುಕ್ 635 ಏರೋ ಮೆಗ್ನೀಶಿಯಂ ಮಿಶ್ರಲೋಹದಿಂದ ತಯಾರಿಸಲಾದ ಮೊದಲ ಪ್ರೋಬುಕ್ ಆಗಿದ್ದು, ಇದು ಮೆಗ್ನೀಶಿಯಂನ ಹಗುರ ಮತ್ತು ಅಲ್ಯೂಮೀನಿಯಂನ ಶಕ್ತಿ ಹೊಂದಿದೆ.
ಎಚ್ ಪಿ ಪ್ರೋಬುಕ್ 635 ಏರೋ ಜಿ7 ವೈಶಿಷ್ಟ್ಯತೆಗಳು:

· ಸಂಪರ್ಕ: ಬಳಕೆದಾರರು ವೈಫೈ 6 ಮತ್ತು ಕ್ಯಾಟ್ 9 4ಜಿ ಎಲ್ ಟಿಇ ವೈರ್ ಲೆಸ್ ವಾತಾವರಣದಲ್ಲಿಯೂ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಗಿಗಾಬೈಟ್ ವೇಗದಲ್ಲಿ ಸಂಪರ್ಕವನ್ನು ಸುಲಭವಾಗಿ ಸಾಧಿಸಬಹುದು.

ಇದನ್ನೂ ಓದಿ:ನನಸಾದ ಇಂಡಸ್ಟ್ರಿಯಲ್‌ ನೋಡ್‌ ಕನಸು

ಭದ್ರತೆ: ಎಚ್ ಪಿ ಶ್ಯೂರ್ ವ್ಯೂ ರಿಫ್ಲೆಕ್ಟ್ ಬಳಕೆದಾರರಿಗೆ ವಿವೇಚನೆಯಿಂದ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲಿನ ಕಾಪರ್ ಬಣ್ಣದ ಪ್ರತಿಫಲಿತ ಗೌಪ್ಯತೆಯ ಪರದೆಯು ವಿಶ್ವದ ಅತ್ಯಾಧುನಿಕ ಗೌಪ್ಯತೆಯಾಗಿದೆ. ಇದು ಪ್ರಕಾಶಮಾನವಾದ ಮತ್ತು ಮಂದ ಬೆಳಕಿನ ಪರಿಸರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

·ದೀರ್ಘ ಬಾಳಿಕೆಯ ಬ್ಯಾಟರಿ: ಇದು ದೀರ್ಘ ಬಾಳಿಕೆಯ ಬ್ಯಾಟರಿ ಹೊಂದಿದ್ದು 18 ರಿಂದ 23 ಗಂಟೆಗಳ ಕಾಲ ಕೆಲಸ ಮಾಡಬಹು ಎಂದು ಕಂಪೆನಿ ತಿಳಿಸಿದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.
ಇದರಲ್ಲಿರುವ ಎಎಂಡಿ ರೈಝೆನ್ 4000 ಸೀರೀಸ್ ಮೊಬೈಲ್ ಪ್ರೊಸೆಸರ್ ಗೆ , ಎಎಂಡಿ ರೇಡಿಯನ್ ವೆಗಾ ಗ್ರಾಫಿಕ್ಸ್ ಸೌಲಭ್ಯವಿದೆ. 8 ಕೋರ್‍ ನ ಪ್ರೊಸೆಸರ್‍ ಹೊಂದಿದೆ. 512 ಜಿಬಿ ಎಸ್‍ಎಸ್‍ಡಿ ಸ್ಟೋರೇಜ್‍ ಇದ್ದು, ಅದನ್ನು 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದು. 8 ಜಿಬಿ ರ್ಯಾಮ್‍ ಇದ್ದು, 32 ಜಿಬಿವರೆಗೂ ವಿಸ್ತರಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಇದರ ದರ 74,999/- ರೂಪಾಯಿಗಳಿಂದ ಆರಂಭಗೊಳ್ಳುತ್ತದೆ.
ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾ ಮಾರ್ಕೆಟ್ ನ (ಪರ್ಸನಲ್ ಸಿಸ್ಟಮ್ಸ್) ಹಿರಿಯ ನಿರ್ದೇಶಕ ವಿಕ್ರಂ ಬೇಡಿ , “ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಮ್ಮ ಜಿಡಿಪಿಗೆ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿವೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿವೆ. ಮತ್ತು ಜನರು ಮನೆಯಿಂದಲೇ ಕೆಲಸ ಮಾಡುವುದು ಮುಂದುವರೆದಿದೆ .ಇಂತವರಿಗಾಗಿ ಎಚ್ ಪಿ ಪ್ರೋಬುಕ್ 635 ಏರೋ ಜಿ7 ಒಂದು ಮೊಬೈಲ್ ಪವರ್ ಹೌಸ್ ಆಗಿ ವಿನ್ಯಾಸಗೊಂಡಿದ್ದು, ಇದು ಹೆಚ್ಚು ಶ್ರಮವಿಲ್ಲದೇ ಸಂಪರ್ಕವನ್ನು ಸಾಧಿಸುವ ಮೂಲಕ ಬಹುಕಾರ್ಯ, ಬಹುಸ್ಥಳಗಳ ಅಗತ್ಯತೆಗಳನ್ನು ಪೂರೈಸಲಿದೆ ಎಂದು ತಿಳಿಸಿದರು.


ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

cm-b-bommai

ಯವುದೇ ಒತ್ತಡದಿಂದ ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

accident

ಶಿವಮೊಗ್ಗ: ಅಪರಿಚಿತ ವಾಹನ ಹರಿದು ವೃದ್ಧೆಯ ದೇಹ ಛಿದ್ರ ಛಿದ್ರ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kia Carens

ಬಹುನೀರಿಕ್ಷಿತ ಕಿಯಾ ಕೆರೆನ್ಸ್ ಎಂಪಿವಿ ಕಾರಿನ ವಿನ್ಯಾಸ ಬಿಡುಗಡೆ

hp india future of learning study 2022

ಆನ್‍ ಲೈನ್‍ ಶಿಕ್ಷಣ ಸಾಂಪ್ರದಾಯಿಕ ತರಗತಿ ಕಲಿಕೆಗೆ ಪೂರಕ: ಎಚ್‍ಪಿ ಸಮೀಕ್ಷೆ

ಕ್ಸಿಯೋಮಿ 11ಐ ಹೈಪರ್‌ ಚಾರ್ಜ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

ಕ್ಸಿಯೋಮಿ 11ಐ ಹೈಪರ್‌ ಚಾರ್ಜ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

ರಿಯಲ್‌ಮಿ 9ಐ ಬಿಡುಗಡೆ : ಎರಡು ಬಣ್ಣಗಳಲ್ಲಿ ಲಭ್ಯ, ಜ.25ರಿಂದ ಮಾರುಕಟ್ಟೆಗೆ

ರಿಯಲ್‌ಮಿ 9ಐ ಬಿಡುಗಡೆ : ಎರಡು ಬಣ್ಣಗಳಲ್ಲಿ ಲಭ್ಯ, ಜ.25ರಿಂದ ಮಾರುಕಟ್ಟೆಗೆ

Surface Pro X Wi-Fi SQ1/8/128 Platinum

ಮೈಕ್ರೋಸಾಫ್ಟ್ ನಿಂದ ಸರ್ಫೇಸ್‍ ಪ್ರೊ ಎಕ್ಸ್ ಲ್ಯಾಪ್ ಟಾಪ್ ಬಿಡುಗಡೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

cm-b-bommai

ಯವುದೇ ಒತ್ತಡದಿಂದ ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

accident

ಶಿವಮೊಗ್ಗ: ಅಪರಿಚಿತ ವಾಹನ ಹರಿದು ವೃದ್ಧೆಯ ದೇಹ ಛಿದ್ರ ಛಿದ್ರ

7maski

ಮಸ್ಕಿ ಪುರಸಭೆಗೆ 10 ಕೋಟಿ ಅನುದಾನ: ಪ್ರತಾಪಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.